ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ICC T20 Rankings: ಐಸಿಸಿ ಮಹಿಳಾ ಟಿ20ಐ ಶ್ರೇಯಾಂಕದಲ್ಲಿ ಏರಿಕೆ ಕಂಡ ದೀಪ್ತಿ ಶರ್ಮಾ!

ಐಸಿಸಿ ಮಹಿಳಾ ಟಿ20ಐ ಶ್ರೇಯಾಂಕದಲ್ಲಿ ಭಾರತ ಮಹಿಳಾ ತಂಡದ ಆಲ್‌ರೌಂಡರ್‌ ದೀಪ್ತಿ ಶರ್ಮಾ ಬೌಲಿಂಗ್‌ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಇನ್ನು ಅಗ್ರಸ್ಥಾನದಲ್ಲಿದ್ದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನಾ ಎರಡನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.

ಐಸಿಸಿ ಮಹಿಳಾ ಟಿ20ಐ ಶ್ರೇಯಾಂಕದಲ್ಲಿ ಏರಿಕೆ ಕಂಡ ದೀಪ್ತಿ ಶರ್ಮಾ!

ದೀಪ್ತಿ ಶರ್ಮಾ ಮಹಿಳಾ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.

Profile Ramesh Kote Aug 12, 2025 10:38 PM

ದುಬೈ: ಮಹಿಳಾ ಐಸಿಸಿ ಟಿ20ಐ ಆಟಗಾರ್ತಿಯರ ಶ್ರೇಯಾಂಕ (ICC T20 rankings) ಪಟ್ಟಿ ಬಿಡುಗಡೆಯಾಗಿದೆ. ಈ ಪಟ್ಟಿಯಲ್ಲಿ ಭಾರತದ ದೀಪ್ತಿ ಶರ್ಮಾ (Deepti Sharma) ಐಸಿಸಿ ಮಹಿಳಾ ಟಿ20 ಬೌಲಿಂಗ್‌ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದ್ದು, ಸ್ಮೃತಿ ಮಂಧಾನಾ (SMriti Mandhana) ಬ್ಯಾಟಿಂಗ್‌ ಶೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. 732ರ ಅಂಕಗಳೊಂದಿಗೆ ಪಾಕಿಸ್ತಾನದ ಬ್ಯಾಟರ್‌ ಸಾದಿಯಾ ಇಕ್ಬಾಲ್‌ ಅವರೊಂದಿಗೆ 2ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಕಳೆದ ಮಾರ್ಚ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ನಾಲ್ಕು ವಿಕೆಟ್‌ಗಳ ಗೊಂಚಲು ಪಡೆದಿದ್ದ ಆಸ್ಟ್ರೇಲಿಯಾದ ಸುದರ್ಲ್ಯಾಂಡ್‌ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಈ ಹಿಂದೆ ನಂಬರ್‌ ಒನ್‌ ಸ್ಥಾನ ಅಲಂಕರಿಸಿದ್ದ ಇಕ್ಬಾಲ್‌ ಇಳಿಕೆ ಕಂಡಿದ್ದಾರೆ. ಐರ್ಲೆಂಡ್‌ ವಿರುದ್ದದ ಸರಣಿಯನ್ನು ಪಾಕಿಸ್ತಾನ 1-2 ಅಂತರದಲ್ಲಿ ಸೋಲನ್ನು ಕಂಡಿತ್ತು.

ಇನ್ನು ಈ ಸರಣಿ ಸೋಲಿನಲ್ಲಿ ಇಕ್ಬಾಲ್‌ ಕೇವಲ 3 ವಿಕೆಟ್‌ ಅಷ್ಟೇ ಪಡೆದಿದ್ದರು. ಇದರ ಪರಿಣಾಮ ಇಕ್ಬಾಲ್‌ ಒಂದು ಸ್ಥಾನ ಕುಸಿದಿದ್ದಾರೆ ಎನ್ನಬಹುದು. ಇದರೊಂದಿಗೆ ಆಲ್‌ರೌಂಡರ್‌ ವಿಭಾಗದಲ್ಲಿ ದೀಪ್ತಿ ಶರ್ಮಾ 387ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿ ಪಟಿದ್ದಾರೆ. ನಂತರ ವೆಸ್ಟ್‌ ಇಂಡೀಸ್‌ ನಾಯಕಿ ಹೇಲಿ ಮ್ಯಾಥ್ಯೂಸ್‌ (505) ಮತ್ತು ನ್ಯೂಜಿಲೆಂಡ್‌ನ ಅಮೆಲಿಯಾ ಕೆರ್‌ (434) ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತವನ್ನು ಮುನ್ನಡೆಸಬಲ್ಲ ಮೂವರು ಆಟಗಾರರು!

ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ಕುಸಿತ ಕಂಡ ಮಂಧಾನಾ

ಭಾರತ ತಂಡದ ಪ್ರಮುಖ ಆಟಗಾರ್ತಿ ಸ್ಮೃತಿ ಮಂಧಾನಾ ತಮ್ಮ ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ಸ್ವಲ್ಪ ಇಳಿಕೆ ಕಂಡಿದ್ದಾರೆ.‌ ಇಂಗ್ಲೆಂಡ್‌ನ ನ್ಯಾಟ್‌ ಸಿವರ್‌ಬ್ರಂಟ್‌ ಅವರು 731 ಅಂಕಗಳೊಂದಿಗೆ ಅಗ್ರ ಸ್ಥಾನಕ್ಕೇರಿದ್ದಾರೆ. ಈ ಕಾರಣ ಮಂಧಾನಾ ಅವರು 728 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಹಿಂಬಡ್ತಿ ಪಡೆದಿದ್ದಾರೆ. ಇನ್ನು ಪಟ್ಟಿಯಲ್ಲಿ ಗಮನಾರ್ಹ ವಿಷಯಗಳೆಂದರೆ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ 11ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.

ಬೆನ್‌ ಸ್ಟೋಕ್ಸ್‌ ಹಿಂದಿಕ್ಕಿ ನಾಲ್ಕನೇ ಬಾರಿ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ಗೆದ್ದ ಶುಭಮನ್‌ ಗಿಲ್‌!

ಅಗ್ರ10ರೊಳಗೆ ಶಫಾಲಿ ವರ್ಮಾ

ಭಾರತ ಮಹಿಳಾ ತಂಡದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ನೂತನ ಐಸಿಸಿ ಮಹಿಳಾ ಟಿ20 ಶ್ರೇಯಾಂಕದಲ್ಲಿ ಅಗ್ರ 10 ಬ್ಯಾಟರ್‌ಗಳ ಪಟ್ಟಿಯಲ್ಲಿ ಮತ್ತೆ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20ೈ ಸರಣಿಯಲ್ಲಿ ಶಫಾಲಿ 158.56 ಸ್ಟ್ರೈಕ್ ರೇಟ್‌ನಲ್ಲಿ 176 ರನ್ ಕಲೆಹಾಕಿದ್ದರು. ಇದು ಅವರ ಶ್ರೇಯಾಂಕ ವೃದ್ದಿಗೆ ಕಾರಣವಾಗಿದೆ. 655 ಅಂಕಗಳೊಂದಿಗೆ ನಾಲ್ಕು ಸ್ಥಾನಗಳ ಜಿಗಿತ ಕಂಡು ಪ್ರಸ್ತುತ ಒಂಬತ್ತನೇ ಸ್ಥಾನಕ್ಕೆ ತಲುಪಿದ್ದಾರೆ.

ಈ ಪಟ್ಟಿಯೂ ಮಹಿಳಾ ಕ್ರಕೆಟ್‌ನಲ್ಲಿ ಅಗ್ರಸ್ಥಾನದ ತೀವ್ರ ಪೈಪೋಟಿಯನ್ನು ಹುಟ್ಟುಹಾಕಿದೆ ಎನ್ನಬಹುದು. ಏಕೆಂದರೆ ಮೊದಲ ಮೂರೂ ಸ್ಥಾನದಲ್ಲಿರುವ ಆಟಗಾರರ ನಡುವೆ ಸಣ್ಣ ಅಂತರವಿದೆ. ಇನ್ನು ಮುಂದಿನ ಹಲವಾರು ಟೂರ್ನಿಗಳು ಬಾಕಿ ಇರುವುದರಿಂದ ಆಟಗಾರರ ನಡುವೆ ಐಸಿಸಿ ಶ್ರೇಯಾಂಕದಲ್ಲಿ ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಬಹುದು.