ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

US Open: ಯುಎಸ್ ಓಪನ್ ಪ್ರಶಸ್ತಿ ಉಳಿಸಿಕೊಂಡ ಸಬಲೆಂಕಾ

ಈ ಗೆಲುವಿನೊಂದಿಗೆ ಸೆರೆನಾ ವಿಲಿಯಮ್ಸ್‌ ಅವರ ನಂತರ ನ್ಯೂಯಾರ್ಕ್‌ನಲ್ಲಿ ಪ್ರಶಸ್ತಿ ಉಳಿಸಿಕೊಂಡ ಮೊದಲ ಆಟಗಾರ್ತಿ ಎಂಬ ಹಿರಿಮೆಗೆ ಅರಿನಾ ಸಬಲೆಂಕಾ ಪಾತ್ರರಾಗಿದ್ದಾರೆ. ವಿಲಿಯಮ್ಸ್‌ 2014ರಲ್ಲಿ ಈ ಸಾಧನೆಗೈದಿದ್ದರು. ಈ ವರ್ಷ ಆಸ್ಟ್ರೇಲಿಯನ್ ಓಪನ್‌ ಮತ್ತು ಫ್ರೆಂಚ್ ಓಪನ್‌ನಲ್ಲಿ ಸಬಲೆಂಕಾ ರನ್ನರ್ ಅಪ್ ಆಗಿದ್ದರು.

ಯುಎಸ್ ಓಪನ್ ಪ್ರಶಸ್ತಿ ಉಳಿಸಿಕೊಂಡ ಸಬಲೆಂಕಾ

-

Abhilash BC Abhilash BC Sep 7, 2025 1:56 PM

ನ್ಯೂಯಾರ್ಕ್‌: ಭಾನುವಾರ ನಡೆದ ಯುಎಸ್ ಓಪನ್(US Open) ಮಹಿಳಾ ಫೈನಲ್‌ನಲ್ಲಿ ಅಮೆರಿಕದ ಎಂಟನೇ ಶ್ರೇಯಾಂಕದ ಅಮಂಡಾ ಅನಿಸಿಮೋವಾ(Amanda Anisimova) ಅವರನ್ನು 6-3, 7-6(3) ನೇರ ಸೆಟ್‌ಗಳಿಂದ ಸೋಲಿಸುವ ಮೂಲಕ ವಿಶ್ವದ ಅಗ್ರ ಕ್ರಮಾಂಕದ ಆಟಗಾರ್ತಿ ಅರಿನಾ ಸಬಲೆಂಕಾ(Sabalenka) ತಮ್ಮ ಯುಎಸ್ ಓಪನ್ ಕಿರೀಟವನ್ನು ಉಳಿಸಿಕೊಂಡರು. ಇದು ಬೆಲರೂಸ್‌ನ ಆಟಗಾರ್ತಿ, ಸಬಲೆಂಕಾಗೆ ಒಲಿದ ನಾಲ್ಕನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ.

ಈ ಗೆಲುವಿನೊಂದಿಗೆ ಸೆರೆನಾ ವಿಲಿಯಮ್ಸ್‌ ಅವರ ನಂತರ ನ್ಯೂಯಾರ್ಕ್‌ನಲ್ಲಿ ಪ್ರಶಸ್ತಿ ಉಳಿಸಿಕೊಂಡ ಮೊದಲ ಆಟಗಾರ್ತಿ ಎಂಬ ಹಿರಿಮೆಗೆ ಅರಿನಾ ಸಬಲೆಂಕಾ ಪಾತ್ರರಾಗಿದ್ದಾರೆ. ವಿಲಿಯಮ್ಸ್‌ 2014ರಲ್ಲಿ ಈ ಸಾಧನೆಗೈದಿದ್ದರು. ಈ ವರ್ಷ ಆಸ್ಟ್ರೇಲಿಯನ್ ಓಪನ್‌ ಮತ್ತು ಫ್ರೆಂಚ್ ಓಪನ್‌ನಲ್ಲಿ ಸಬಲೆಂಕಾ ರನ್ನರ್ ಅಪ್ ಆಗಿದ್ದರು. ಸೆರೆನಾ ವಿಲಿಯಮ್ಸ್ 2012 ರಿಂದ 2014 ರವರೆಗೆ ಸತತ ಮೂರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

"ಇಲ್ಲಿಗೆ ಬಂದ ಎಲ್ಲರಿಗೂ, ನಾನು ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ಸಬಲೆಂಕಾ ಗೆಲುವಿನ ಬಳಿಕ ಪಂದ್ಯದ ವೇಳೆ ಬೆಂಬಲಿಸಿದ ಎಲ್ಲ ಪ್ರೇಕ್ಷಕರಿಗೆ ಮತ್ತು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು.

"ಇಂದು ನನ್ನ ಕನಸುಗಳಿಗಾಗಿ ನಾನು ಸಾಕಷ್ಟು ಹೋರಾಡಲಿಲ್ಲ. ಸತತ ಎರಡು ಫೈನಲ್‌ಗಳಲ್ಲಿ ಸೋಲುವುದು ತುಂಬಾ ಕಠಿಣವೂ ಆಗಿದೆ" ಎಂದು ಎರಡು ತಿಂಗಳ ಹಿಂದೆ ವಿಂಬಲ್ಡನ್ ಫೈನಲ್‌ನಲ್ಲಿ 6-0, 6-0 ಅಂತರದಲ್ಲಿ ಸೋತ ನಂತರ ಮತ್ತೊಮ್ಮೆ ಕಣ್ಣೀರು ಹಾಕಿದ 24 ವರ್ಷದ ಅನಿಸಿಮೋವಾ ಹೇಳಿದರು.

ಇದನ್ನೂ ಓದಿ US Open 2025: ಜೋಕೋ 25ನೇ ಗ್ರ್ಯಾನ್‌ಸ್ಲಾಂ ಪ್ರಯತ್ನ ವಿಫಲ; ಸೆಮಿಯಲ್ಲಿ ಸೋಲು