World Athletics 2025: ನೀರಜ್ ಚೋಪ್ರಾ ನೇತೃತ್ವದ ಭಾರತ ತಂಡದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಸಂಗತಿ ಇಲ್ಲಿದೆ
ಭಾರತದ ಅತ್ಯಂತ ವೇಗದ ಓಟಗಾರರಾದ ಅನಿಮೇಶ್ ಕುಜುರ್ ಮತ್ತು ತೇಜಸ್ ಶಿರ್ಸೆ ಕ್ರಮವಾಗಿ 200 ಮೀ ಮತ್ತು 110 ಮೀ ಹರ್ಡಲ್ಸ್‌ನಲ್ಲಿ ಅರ್ಹತೆ ಪಡೆಯುವ ಮೂಲಕ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಿದ್ದಾರೆ. ಮಹಿಳೆಯರ ವಿಭಾಗದಲ್ಲಿ, ಏಷ್ಯನ್ ಗೇಮ್ಸ್ ಚಾಂಪಿಯನ್ ಅನ್ನು ರಾಣಿ ಪ್ರಮುಖ ಸ್ಪರ್ಧಿಯಾಗಿದ್ದಾರೆ.

-

ಟೋಕಿಯೊ: ಭಾರತವು ಟೋಕಿಯೊದಲ್ಲಿ ನಡೆಯಲಿರುವ ಬಹುನಿರೀಕ್ಷಿತ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್(World Athletics 2025)ಗೆ 19 ಸದಸ್ಯರ ತಂಡದೊಂದಿಗೆ ತೆರಳಲಿದ್ದು, ಹಾಲಿ ಪುರುಷರ ಜಾವೆಲಿನ್ ಚಾಂಪಿಯನ್ ನೀರಜ್ ಚೋಪ್ರಾ(Neeraj Chopra) ನೇತೃತ್ವದಲ್ಲಿ ಭಾರತ ಕಣಕ್ಕಿಳಿಯಲಿದೆ. ಒಂಬತ್ತು ದಿನಗಳ ಈ ಕ್ರೀಡಾಕೂಟ ಸೆಪ್ಟೆಂಬರ್ 13 ರಿಂದ 21 ರವರೆಗೆ ನಡೆಯಲಿದೆ.
2023 ರಲ್ಲಿ ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ಗೆ ಭಾರತ 28 ಕ್ರೀಡಾಪಟುಗಳನ್ನು ಕಳುಹಿಸಿತ್ತು. ಆದರೆ ಈ ಬಾರಿ ಯಾವುದೇ ರಿಲೇ ತಂಡಗಳು ಭಾಗವಹಿಸದ ಕಾರಣ, ತಂಡವು ಜಾವೆಲಿನ್ ತಾರೆಗಳಿಂದ ಪ್ರಾಬಲ್ಯ ಹೊಂದಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ, ಭಾರತವು ಐದು ಜಾವೆಲಿನ್ ಎಸೆತಗಾರರನ್ನು (ಪುರುಷರ ವಿಭಾಗದಲ್ಲಿ ನಾಲ್ವರು) ಕಣಕ್ಕಿಳಿಸುತ್ತಿದೆ.
ನೀರಜ್ ಚೋಪ್ರಾ ಅವರು ಜೂಲಿಯನ್ ವೆಬರ್ (ಜರ್ಮನಿ) ಮತ್ತು ಒಲಿಂಪಿಕ್ ಚಾಂಪಿಯನ್ ಅರ್ಷದ್ ನದೀಮ್ (ಪಾಕಿಸ್ತಾನ) ವಿರುದ್ಧ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ನಾಲ್ಕು ವರ್ಷಗಳ ಹಿಂದೆ ನೀರಜ್ ಟೋಕಿಯೊದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಜಯಿಸಿದ್ದರು. ಹೀಗಾಗಿ ಅವರಿಗೆ ಟೋಕಿಯೊ ಮತ್ತೊಮ್ಮೆ ಸ್ಮರಣೀಯವಾಗಲಿ ಎನ್ನುವುದು ಭಾರತೀಯರ ಹಾರೈಕೆ.
ಭಾರತದ ಅತ್ಯಂತ ವೇಗದ ಓಟಗಾರರಾದ ಅನಿಮೇಶ್ ಕುಜುರ್ ಮತ್ತು ತೇಜಸ್ ಶಿರ್ಸೆ ಕ್ರಮವಾಗಿ 200 ಮೀ ಮತ್ತು 110 ಮೀ ಹರ್ಡಲ್ಸ್‌ನಲ್ಲಿ ಅರ್ಹತೆ ಪಡೆಯುವ ಮೂಲಕ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಿದ್ದಾರೆ. ಮಹಿಳೆಯರ ವಿಭಾಗದಲ್ಲಿ, ಏಷ್ಯನ್ ಗೇಮ್ಸ್ ಚಾಂಪಿಯನ್ ಅನ್ನು ರಾಣಿ ಪ್ರಮುಖ ಸ್ಪರ್ಧಿಯಾಗಿದ್ದಾರೆ.
ಭಾರತೀಯ ತಂಡ - ವಿಶ್ವ ಅಥ್ಲೆಟಿಕ್ಸ್ 2025
ಪುರುಷರು
ನೀರಜ್ ಚೋಪ್ರಾ, ಸಚಿನ್ ಯಾದವ್, ಯಶವೀರ್ ಸಿಂಗ್, ರೋಹಿತ್ ಯಾದವ್ (ಜಾವೆಲಿನ್)
ಮುರಳಿ ಶ್ರೀಶಂಕರ್ (ಲಾಂಗ್ ಜಂಪ್)
ಗುಲ್ವೀರ್ ಸಿಂಗ್ (5000 ಮೀ & 10,000 ಮೀ)
ಪ್ರವೀಣ್ ಚಿತ್ರವೇಲ್, ಅಬ್ದುಲ್ಲಾ ಅಬೂಬಕರ್ (ಟ್ರಿಪಲ್ ಜಂಪ್)
ಸರ್ವೇಶ್ ಅನಿಲ್ ಕುಶಾರೆ (ಹೈ ಜಂಪ್)
ಅನಿಮೇಶ್ ಕುಜುರ್ (200 ಮೀ)
ತೇಜಸ್ ಶಿರ್ಸೆ (110 ಮೀ ಹರ್ಡಲ್ಸ್)
ಸರ್ವಿನ್ ಸೆಬಾಸ್ಟಿಯನ್ (20 ಕಿಮೀ ಓಟದ ನಡಿಗೆ)
ರಾಮ್ ಬಾಬೂ, ಸಂದೀಪ್ ಕುಮಾರ್ (35 ಕಿ.ಮೀ ರೇಸ್ ವಾಕ್)
ಮಹಿಳೆಯರು
ಪಾರುಲ್ ಚೌಧರಿ, ಅಂಕಿತಾ ಧ್ಯಾನಿ (3000ಮೀ ಸ್ಟೀಪಲ್‌ಚೇಸ್)
ಅನ್ನು ರಾಣಿ (ಜಾವೆಲಿನ್)
ಪ್ರಿಯಾಂಕಾ ಗೋಸ್ವಾಮಿ (35 ಕಿ.ಮೀ ರೇಸ್ ವಾಕ್)
ಪೂಜಾ (800 ಮೀ & 1500 ಮೀ)
ಇದನ್ನೂ ಓದಿ Shivam Lohakare: ನೀರಜ್ ಚೋಪ್ರಾ ದಾಖಲೆ ಮುರಿದ 20 ವರ್ಷದ ಶಿವಂ ಲೋಹಕರೆ