ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಇಳಿ ವಯಸ್ಸಿನಲ್ಲಿ ಡೆಲಿವರಿ ಬಾಯ್‌ ಕೆಲಸ! ಒಂದೇ ಒಂದು ಪೋಸ್ಟ್‌ ವೃದ್ಧನ ಬದುಕನ್ನೇ ಬದಲಿಸಿತು

Elderly food delivery man: ಸಾಮಾಜಿಕ ಮಾಧ್ಯಮದಲ್ಲಿ ಡೆಲಿವರಿ ಮ್ಯಾನ್ ಆಗಿರುವ ವೃದ್ಧ ವ್ಯಕ್ತಿಯ ವಿಡಿಯೊ ಪೋಸ್ಟ್ ಆದ ಬಳಿಕ ಅವರ ಜೀವನ ಸಂಪೂರ್ಣ ಬದಲಾಯಿತು. ಬೈಲಿ ಎಂದು ಹೆಸರಿನ ಡೆಲಿವರಿ ಮ್ಯಾನ್, ಫ್ಲೋರಿಡಾದಲ್ಲಿ ವಾಸಿಸುವ ಯುವತಿ ಐರ್ಲೆಂಡ್ ಡ್ಯಾನೆಹೋಲ್ಡ್‌ಗೆ ಆಹಾರವನ್ನು ತಲುಪಿಸಲು ಮೂರು ಮೆಟ್ಟಿಲುಗಳನ್ನು ಹತ್ತಿದ್ದಾರೆ. ಇದು ಅವರ ಜೀವನವನ್ನೇ ಬದಲಾಯಿಸಿದೆ.

ಒಂದೇ ಒಂದು ಪೋಸ್ಟ್‌ ವೃದ್ಧನ ಬದುಕನ್ನೇ ಬದಲಿಸಿತು!

Priyanka P Priyanka P Aug 8, 2025 4:47 PM

ಅನಿವಾರ್ಯತೆ ಮನುಷ್ಯನನ್ನು ಯಾವ ಪರಿಸ್ಥಿತಿಗೂ ತಳ್ಳುತ್ತದೆ ಹಾಗೂ ಅದೃಷ್ಟ ಕೈ ಹಿಡಿದರೆ ಅದೇ ಮನುಷ್ಯನ ಬದುಕನ್ನೇ ಬದಲಿಸಬಹುದು ಎಂಬುದು . ಆದರೆ, ಈ ವಿಡಿಯೊ ನೋಡಿದ್ರೆ ಪ್ರೀತಿ ಮತ್ತು ಸಹಾನುಭೂತಿಯಿಂದ ಮಾನವೀಯತೆ ಇನ್ನೂ ಉಳಿದಿದೆ ಎಂದೆನಿಸುತ್ತದೆ. ಮೊಣಕಾಲುಗಳ ನೋವಿದ್ದರೂ ತನ್ನ ಕಾಯಕವನ್ನು ಮರೆಯದ ವೃದ್ಧ ವ್ಯಕ್ತಿಯೊಬ್ಬರು ತನಗೆ ಆರ್ಡರ್ ಬಂದ ಆಹಾರವನ್ನು ವಿತರಿಸಿದ್ದಾರೆ. ಇದನ್ನು ನೋಡಿದ ಮಹಿಳೆಯೊಬ್ಬರು ಆ ವ್ಯಕ್ತಿಗೆ 22,000 ಡಾಲರ್ ಮೊತ್ತವನ್ನು ನೀಡಿ ಸಹಾನುಭೂತಿ ತೋರಿದ್ದಾರೆ.

ವೃದ್ಧರೊಬ್ಬರು ಆಹಾರ ತಲುಪಿಸಲು ಮೊಣಕಾಲು ನೋವಿದ್ದರೂ ಮೆಟ್ಟಿಲು ಹತ್ತಿ ಬಂದು ಡೋರ್ ಬೆಲ್ ರಿಂಗಣಿಸಿದ್ದಾರೆ. ಮಹಿಳೆ ಆ ವ್ಯಕ್ತಿಯನ್ನು ಗಮನಿಸಿ ಸಹಾನುಭೂತಿ ತೋರಿದ್ದಾರೆ. ಮೂಲತಃ ಟಿಕ್‌ಟಾಕ್‌ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೊ ಇದೀಗ ಇನ್‌ಸ್ಟಾಗ್ರಾಮ್‌ನಲ್ಲೂ ಹರಿದಾಡುತ್ತಿದೆ. ಇನ್ಸ್ಟಾಗ್ರಾಂ ಖಾತೆಯಲ್ಲಿ ಆ ವ್ಯಕ್ತಿಯ ಕಥೆಯನ್ನು ಹಂಚಿಕೊಂಡ ಫ್ಲೋರಿಡಾ ಮಹಿಳೆ ಐರ್ಲೆಂಡ್ ಡ್ಯಾನೆಹೋಲ್ಡ್ ಅವರು ವೃದ್ಧ ವ್ಯಕ್ತಿಗಾಗಿ ಏನಾದರೂ ಮಾಡಬೇಕೆಂದು ನಿರ್ಧರಿಸಿದರು. ಇದಕ್ಕಾಗಿ ಅವರು ದೇಣಿಗೆ ಅಭಿಯಾನವನ್ನು ಪ್ರಾರಂಭಿಸಲು ನಿರ್ಧರಿಸಿದರು. ಹಾಗೆಯೇ ಅವರಿಗಾಗಿ ದೊಡ್ಡ ಮೊತ್ತವನ್ನು ಸಂಗ್ರಹಿಸಿದರು.

ಡೆಲಿವರಿ ಮ್ಯಾನ್ ಕುಂಟುತ್ತಾ ನಡೆಯುತ್ತಿದ್ದ ದೃಶ್ಯ ಕ್ಯಾಮರಾದಲ್ಲಿ ಸೆರೆ

ಸಾಮಾಜಿಕ ಮಾಧ್ಯಮದಲ್ಲಿ ಡೆಲಿವರಿ ಮ್ಯಾನ್ ಆಗಿರುವ ವೃದ್ಧ ವ್ಯಕ್ತಿಯ ವಿಡಿಯೊ ಪೋಸ್ಟ್ ಆದ ಬಳಿಕ ಅವರ ಜೀವನ ಸಂಪೂರ್ಣ ಬದಲಾಯಿತು. ಬೈಲಿ ಎಂದು ಹೆಸರಿಸಲಾದ ಡೆಲಿವರಿ ಮ್ಯಾನ್, ಫ್ಲೋರಿಡಾದಲ್ಲಿ ವಾಸಿಸುವ ಯುವತಿ ಐರ್ಲೆಂಡ್ ಡ್ಯಾನೆಹೋಲ್ಡ್‌ಗೆ ಆಹಾರವನ್ನು ತಲುಪಿಸಲು ಮೂರು ಮೆಟ್ಟಿಲುಗಳನ್ನು ಹತ್ತಿದ್ದಾರೆ. ಮೊಣಕಾಲುಗಳ ನೋವಿದ್ದರೂ ತನ್ನ ಕಾಯಕ ಮರೆಯದಿರುವುದು ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಸಂತಸ ತಂದಿದೆ.



ಈ ವಿಡಿಯೊ ಪೋಸ್ಟ್ ಮಾಡಿದಾಗಿನಿಂದ 3 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಗಳಿಸಿ, ಭಾರಿ ಮೆಚ್ಚುಗೆಗೆ ಪಾತ್ರವಾಯಿತು. ಸಾರ್ವಜನಿಕ ಪ್ರತಿಕ್ರಿಯೆಯಿಂದ ಪ್ರಭಾವಿತರಾದ ಐರ್ಲೆಂಡ್, ಡಾಲರ್ 4,000 ಸಂಗ್ರಹಿಸುವ ಗುರಿಯೊಂದಿಗೆ GoFundMe ಅಭಿಯಾನವನ್ನು ಪ್ರಾರಂಭಿಸಿದರು. ಕೆಲವೇ ದಿನಗಳಲ್ಲಿ, 1,300 ಕ್ಕೂ ಹೆಚ್ಚು ದಾನಿಗಳಿಂದ ಡಾಲರ್ 22,000 ಕ್ಕೂ ಹೆಚ್ಚು ಹಣವನ್ನು ಸಂಗ್ರಹಿಸಲಾಯಿತು.

ಈ ಸುದ್ದಿಯನ್ನೂ ಓದಿ: Bhagya Lakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಗೆ ಲಕ್ಷ್ಮೀ ಎಂಟ್ರಿ: ಮಗು ಹಿಡಿದುಕೊಂಡು ಬಂದ ವೈಷ್ಣವ್ ವೈಫ್

ಬೈಲಿ ಎಂಬ ವೃದ್ಧ ವ್ಯಕ್ತಿಯನ್ನು ಮಹಿಳೆಯ ಮನೆಯ ಡೋರ್‌ಬೆಲ್ ಕ್ಯಾಮೆರಾ ಸೆರೆಹಿಡಿದಿದೆ. ಪನೇರಾದಿಂದ ಪ್ರಯಾಣಿಸಿದ ನಂತರ, ವೃದ್ಧ ಮೂರು ಮೆಟ್ಟಿಲುಗಳನ್ನು ಹತ್ತಿ ಆಹಾರವನ್ನು ವಿತರಿಸಿದ ನಂತರ ಏನೊಂದು ಮಾತನಾಡದೆ ಹೊರಟು ಹೋಗಿದ್ದಾರೆ. ಹೀಗಾಗಿ ಯುವತಿಯು ವೃದ್ಧ ಡೆಲಿವರಿ ಮ್ಯಾನ್‍ಗೆ ತನ್ನಿಂದ ಏನಾದರೂ ಸಹಾಯ ಮಾಡಬೇಕು ಎಂದು ನಿರ್ಧರಿಸಿದರು. ಈ ಮೂಲಕ ಹಣವನ್ನು ಸಂಗ್ರಹಿಸಿ ವೃದ್ಧ ವ್ಯಕ್ತಿಗೆ ನೀಡುವ ಮೂಲಕ ಯುವತಿ ಮಾನವೀಯತೆ ಮೆರೆದಿದ್ದಾರೆ. ಯುವತಿಯ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.