Viral Video: ಗಂಡು ನಾಗರಹಾವಿನ ಸಾವಿಗೆ ಸೇಡು ತೀರಿಸಿಕೊಳ್ಳಲು ಬಂತಾ ನಾಗಿನಿ? ಭಯದಲ್ಲಿ ರಾತ್ರಿ ಕಳೆದ ಗ್ರಾಮಸ್ಥರು
female snake entered a house: ನಾಗರ ಪಂಚಮಿದಿನ ಹೆಣ್ಣು ಹಾವೊಂದು ಮನೆಯೊಂದರೊಳಗೆ ನುಗ್ಗಿದ್ದರಿಂದ, ಭಯದ ವಾತಾವರಣ ಉಂಟಾದ ಘಟನೆ ಉತ್ತರ ಪ್ರದೇಶದ ಅಲಿಗಂಜ್ ಜಿಲ್ಲೆಯಲ್ಲಿ ನಡೆದಿದೆ. ಸುಮಾರು ಎರಡು ವಾರಗಳ ಹಿಂದೆ ಅದೇ ಗ್ರಾಮದಲ್ಲಿ ಸತ್ತ ಗಂಡು ಹಾವಿನ ಸಾವಿಗೆ ಸೇಡು ತೀರಿಸಿಕೊಳ್ಳಲು ಬಂದಿದೆ ಎಂದು ಗ್ರಾಮಸ್ಥರು ಭೀತಿಗೊಂಡಿದ್ದಾರೆ.


ಲಖನೌ: ಹಾವಿನ ದ್ವೇಷ 12 ವರುಷ ಎಂಬ ಮಾತನ್ನು ಕೇಳಿರಬಹುದು. ಇದೀಗ ನಾಗರ ಪಂಚಮಿ ದಿನ ಹೆಣ್ಣು ಹಾವೊಂದು ಮನೆಯೊಂದರೊಳಗೆ ನುಗ್ಗಿದ್ದರಿಂದ, ಭಯದ ವಾತಾವರಣ ಉಂಟಾದ ಘಟನೆ ಉತ್ತರ ಪ್ರದೇಶದ ಅಲಿಗಂಜ್ ಜಿಲ್ಲೆಯಲ್ಲಿ ನಡೆದಿದೆ. ಸುಮಾರು ಎರಡು ವಾರಗಳ ಹಿಂದೆ ಅದೇ ಗ್ರಾಮದಲ್ಲಿ ಸತ್ತ ಗಂಡು ಹಾವಿನ ಸಾವಿಗೆ ಸೇಡು ತೀರಿಸಿಕೊಳ್ಳಲು ಅದು ಬಂದಿದೆ ಎಂಬ ಸುದ್ದಿ ಗಾಳಿಸುದ್ದಿಯಂತೆ ಹರಡಿ, ಸ್ಥಳೀಯರಲ್ಲಿ ಭಾರೀ ಭಯ ಉಂಟಾಗಲು ಕಾರಣವಾಯಿತು.
ಈ ಘಟನೆ ಎಟಾ ಜಿಲ್ಲೆಯ ಅಲಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಸರೋಟಿಯಾ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಹೆಣ್ಣು ಹಾವು ಪ್ರವೇಶ್ ದೀಕ್ಷಿತ್ ಎಂಬ ವ್ಯಕ್ತಿಯ ಮನೆಯೊಳಗೆ ನುಗ್ಗಿದ್ದು, ರಾತ್ರಿಯಿಡೀ ನಿರಂತರವಾಗಿ ಬುಸುಗುಡುತ್ತಿತ್ತು ಎಂದು ಹೇಳಲಾಗಿದೆ. ಇದರಿಂದ ಗಾಬರಿಗೊಂಡ ಗ್ರಾಮಸ್ಥರು ಹಾವು ಬಂದಿರುವುದು ಕಾಕತಾಳೀಯವಲ್ಲ ಎಂದು ಹೇಳಿದರು.
ಗ್ರಾಮಸ್ಥರ ಪ್ರಕಾರ, ಸುಮಾರು 15 ದಿನಗಳ ಹಿಂದೆ ದೀಕ್ಷಿತ್ ಅವರ ಮನೆಯಲ್ಲಿ ಅಚಾನಕ್ಕಾಗಿ ಗಂಡು ಹಾವನ್ನು ಕೊಲ್ಲಲಾಗಿತ್ತು. ಹೀಗಾಗಿ ನಾಗರ ಪಂಚಮಿಯ ಸಂದರ್ಭದಲ್ಲಿ, ಹೆಣ್ಣು ಹಾವು ಸೇಡು ತೀರಿಸಿಕೊಳ್ಳಲು ಬಂದಿರಬಹುದು ಎಂಬುದು ಅವರ ನಂಬಿಕೆಯಾಗಿದೆ.
ಈ ನಂಬಿಕೆ ಭಾರತದ ಹಲವಾರು ಭಾಗಗಳಲ್ಲಿ ಬೇರೂರಿದೆ. ಶ್ರಾವಣ ತಿಂಗಳಲ್ಲಿ ಬರುವ ಮೊದಲ ಹಬ್ಬವೇ ನಾಗರಪಂಚಮಿ. ಹಾವುಗಳನ್ನು ಪವಿತ್ರವೆಂದು ಪರಿಗಣಿಸಿ ಪೂಜಿಸಲಾಗುತ್ತದೆ. ಒಂದು ಹಾವನ್ನು ಕೊಂದರೆ, ಅದರ ಸಂಗಾತಿ ತನ್ನ ಸಾವಿಗೆ ಸೇಡು ತೀರಿಸಿಕೊಳ್ಳಲು ಹಿಂತಿರುಗಬಹುದು ಎಂದು ಜಾನಪದದಲ್ಲಿ ಹೇಳಲಾಗುತ್ತದೆ. ಈ ನಂಬಿಕೆಯಿಂದಾಗಿ, ಹಾವು ಬಂದಿರುವುದು ಗ್ರಾಮದಲ್ಲಿ ವ್ಯಾಪಕ ಭಯಕ್ಕೆ ಕಾರಣವಾಯಿತು. ಮನೆಯಲ್ಲಿ ವಾಸಿಸುತ್ತಿದ್ದ ಇಡೀ ಕುಟುಂಬ ಮತ್ತು ನೆರೆಹೊರೆಯವರು ಆತಂಕದಲ್ಲಿ ರಾತ್ರಿ ಕಳೆದರು.
ಈ ಸುದ್ದಿಯನ್ನೂ ಓದಿ: Rajinikanth: ಕಾಲು ಜಾರಿ ಬಿದ್ರಾ ನಟ ರಜನಿಕಾಂತ್? ವೈರಲ್ ವಿಡಿಯೊದ ಅಸಲಿಯತ್ತೇನು?
ಅರಣ್ಯ ಇಲಾಖೆಯಿಂದ ಹಾವಿನ ರಕ್ಷಣೆ
ಭಯ ಮುಂದುವರಿದಂತೆ, ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಸಂಪರ್ಕಿಸಿದರು. ರಕ್ಷಣಾ ತಂಡವು ಶೀಘ್ರದಲ್ಲೇ ಸ್ಥಳಕ್ಕೆ ಆಗಮಿಸಿ ಹಾವನ್ನು ಸುರಕ್ಷಿತವಾಗಿ ಹಿಡಿಯಲು ಪ್ರಯತ್ನಿಸಿತು. ಹಾವು ಆಕ್ರಮಣಕಾರಿಯಾಗಿತ್ತು ಮತ್ತು ಅದರ ಹೆಡೆಯನ್ನೆತ್ತುವಾಗಲೂ ಬುಸುಗುಡುತ್ತಲೇ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
यूपी इस जिला में सावन में घट गई ऐसी 'अनहोनी'...नाग पंचमी पर नागिन लेने आई नाग की मौत का बदला !!
— MANOJ SHARMA LUCKNOW UP🇮🇳🇮🇳🇮🇳 (@ManojSh28986262) July 30, 2025
सावन के महीने में गांव के लोगों की गलती की वजह से नाग की मौत हो गई। ग्रामीणों ने बताया कि इसी परिवार के घर नाग पंचमी के दिन नागिन निकल आई। ग्रामीणों का दावा है कि नागिन नाग की मौत का… pic.twitter.com/uftPsoPnad
ಅರಣ್ಯ ಅಧಿಕಾರಿಗಳು ಹಾವನ್ನು ಹಿಡಿಯಲು ಪ್ರಯತ್ನಿಸುತ್ತಿರುವ ವಿಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಹಾವು ಪದೇ ಪದೇ ತನ್ನ ಹೆಡೆಯನ್ನೆತ್ತೆ ಪ್ರತಿರೋಧಿಸುವುದನ್ನು ಇದು ತೋರಿಸುತ್ತದೆ. ಕೊನೆಗೂ ತಂಡವು ಯಾವುದೇ ಗಾಯಗಳಾಗದಂತೆ ಹಾವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಯಿತು. ನಂತರ ಅಧಿಕಾರಿಗಳು ಹಾವನ್ನು ಆ ಪ್ರದೇಶದಿಂದ ದೂರ ಕರೆದೊಯ್ದರು. ಇದರಿಂದ ಗ್ರಾಮಸ್ಥರು ನಿಟ್ಟುಸಿರುಬಿಟ್ಟಿದ್ದಾರೆ.
ಮಳೆಗಾಲವಾದ್ದರಿಂದ, ಇಲಿ ಬೇಟೆಯನ್ನು ಹುಡುಕುತ್ತಾ ಹಾವುಗಳು ಮನೆಗಳಿಗೆ ನುಗ್ಗುತ್ತವೆ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ, ಹಾವು ಹಸಿದಿರಬಹುದು ಮತ್ತು ಸ್ವಲ್ಪ ಸಮಯದವರೆಗೆ ಬೇಟೆಯಾಡದೇ ಇರಬಹುದು, ಅದಕ್ಕಾಗಿಯೇ ಅದು ಒಂದೇ ಸ್ಥಳದಲ್ಲಿ ಉಳಿದುಕೊಂಡಿರಬಹುದು ಎಂದು ಹೇಳಿದ್ದಾರೆ.