Viral Video: ಅಮ್ಯೂಸ್ಮೆಂಟ್ ಪಾರ್ಕ್‌ನಲ್ಲಿ ರಣ ಭೀಕರ ದುರಂತ! ನೋಡ ನೋಡ್ತಿದ್ದಂತೆ ಕುಸಿದು ಬಿತ್ತು ಸ್ವಿಂಗ್ ಪೆಂಡುಲಮ್- ವಿಡಿಯೊ ನೋಡಿ
Saudi Arabia Ride Accident: ಅಮ್ಯೂಸ್ಮೆಂಟ್ ಪಾರ್ಕ್ ಸವಾರಿ ಕುಸಿದು ಬಿದ್ದ ಪರಿಣಾಮ ಕನಿಷ್ಠ 23 ಜನರು ಗಾಯಗೊಂಡಿದ್ದು, ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಈ ದುರ್ಘಟನೆ ಸೌದಿ ಅರೇಬಿಯಾದ ತೈಫ್‌ನಲ್ಲಿ ಗುರುವಾರ ಸಂಭವಿಸಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ರೈಡ್‌ನ ಮಧ್ಯದ ಕಂಬವು ಎರಡು ಭಾಗಗಳಾಗಿ ಒಡೆದಿದೆ.


ತೈಫ್: ಅಮ್ಯೂಸ್ಮೆಂಟ್ ಪಾರ್ಕ್‌ನಲ್ಲಿ (Amusement Park) ಜನ ಮೋಜು ಮಸ್ತಿ ಮಾಡ್ತಿದ್ದಾಗ ಘನಘೋರ ಘಟನೆಯೊಂದು ನಡೆದಿದೆ. ಸುಮಾರು ಜನರಿದ್ದ ಸ್ವಿಂಗ್ ಪೆಂಡುಲಮ್‌ವೊಂದು ತುಂಡಾಗಿ ಬಿದ್ದಿದೆ. ಈ ಭೀಕರ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪೆಂಡುಲಮ್ ಕುಸಿದು ಬಿದ್ದ ಪರಿಣಾಮ ಕನಿಷ್ಠ 23 ಜನರು ಗಾಯಗೊಂಡಿದ್ದು, ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಈ ದುರ್ಘಟನೆ ಸೌದಿ ಅರೇಬಿಯಾದ ತೈಫ್‌ನಲ್ಲಿ ಗುರುವಾರ ಸಂಭವಿಸಿದೆ.
ಗುರುವಾರ ತೈಫ್‌ನ ಅಲ್ ಹಡಾ ಪ್ರದೇಶದ ಗ್ರೀನ್ ಮೌಂಟೇನ್ ಪಾರ್ಕ್‌ನಲ್ಲಿ ಈ ಘಟನೆ ನಡೆದಿದ್ದು, 360 ಡಿಗ್ರಿ ಎಂದು ಕರೆಯಲ್ಪಡುವ ರೈಡ್‌ನ ಮಧ್ಯದ ಕಂಬವು ಚಲನೆಯಲ್ಲಿರುವಾಗ ಇದ್ದಕ್ಕಿದ್ದಂತೆ ಅಪ್ಪಳಿಸಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ರೈಡ್‌ನ ಮಧ್ಯದ ಕಂಬವು ಎರಡು ಭಾಗಗಳಾಗಿ ಒಡೆಯುವುದನ್ನು ನೋಡಬಹುದು.
ಘಟನೆಯ ಸಮಯದಲ್ಲಿ, ಹಲವಾರು ಯುವಕರು ಮತ್ತು ಮಹಿಳೆಯರು ರೈಡ್‌ನಲ್ಲಿದ್ದರು. ಇದ್ದಕ್ಕಿದ್ದಂತೆ, ಒಂದು ಕ್ರ್ಯಾಕ್ಲಿಂಗ್ ಶಬ್ಧ ಕೇಳಿದೆ. ಈ ವೇಳೆ ಭಾರಿ ಶಬ್ಧದೊಂದಿಗೆ ಕುಸಿದು ಬಿದ್ದ ಪರಿಣಾಮ ಹಲವರು ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ರೈಡ್‌ನ ಕಂಬವು ಅತಿ ವೇಗದಲ್ಲಿ ಹಿಂದಕ್ಕೆ ಉರುಳಿ, ಎದುರು ಭಾಗದಲ್ಲಿ ನಿಂತಿದ್ದ ಕೆಲವು ವ್ಯಕ್ತಿಗಳಿಗೆ ಡಿಕ್ಕಿ ಹೊಡೆದಿದೆ ಎಂದು ಹಲವಾರು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ರೈಡ್‌ನಲ್ಲಿ ಕುಳಿತಿದ್ದವರು ಗಾಯಗೊಂಡಿದ್ದಾರೆ.
ವಿಡಿಯೊ ವೀಕ್ಷಿಸಿ:
An amusement park ride in Saudi Arabia came apart mid-ride, injuring at least 23 people, with three in critical condition. The incident occurred at the Green Mountain Park in Taif, east of Mecca. Saudi authorities launched an investigation into the incident. pic.twitter.com/thQLA6nzpD
— Ariel Oseran أريئل أوسيران (@ariel_oseran) July 31, 2025
ಕೂಡಲೇ ರಕ್ಷಣಾ ಸಿಬ್ಬಂದಿ ಸನ್ನದ್ಧರಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ಸಾಗಿಸಲಾಯಿತು. ಇನ್ನು ಅಮ್ಯೂಸ್ಮೆಂಟ್ ಪಾರ್ಕ್ ಸವಾರಿಯಲ್ಲಿ ಕುಸಿತಕ್ಕೆ ಕಾರಣವನ್ನು ಕಂಡುಹಿಡಿಯಲು ತನಿಖೆಯನ್ನು ಪ್ರಾರಂಭಿಸಲಾಗಿದೆ. ಈ ವರ್ಷದ ಏಪ್ರಿಲ್‌ನಲ್ಲಿ ದೆಹಲಿಯಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ನೈಋತ್ಯ ದೆಹಲಿಯ ಕಪಶೇರಾ ಬಳಿಯ ಫನ್ ಎನ್ ಫುಡ್ ವಾಟರ್ ಪಾರ್ಕ್‌ನಲ್ಲಿ ರೋಲರ್ ಕೋಸ್ಟರ್ ಅಪಘಾತ ಸಂಭವಿಸಿ 24 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದರು.