Viral Video: ಹಾಂಗ್‍ಕಾಂಗ್ ನಗರದ ಸ್ವಚ್ಛತೆಯ ಬಗ್ಗೆ ಭಾರತೀಯನ ಪ್ರಾಮಾಣಿಕ ನಿಲುವು; ವಿಡಿಯೊ ಇಲ್ಲಿದೆ
Cleanliness of Hong Kong: ಹಾಂಗ್‌ಕಾಂಗ್‌ನಂತಹ ಸ್ವಚ್ಛ, ಸುಂದರ ನಗರದ ಬಗ್ಗೆ ವ್ಯಕ್ತಿಯೊಬ್ಬರು ತಮ್ಮ ಪ್ರಾಮಾಣಿಕ ಅಭಿಪ್ರಾಯವನ್ನು ಹಂಚಿಕೊಂಡ ನಂತರ ಈ ವಿಡಿಯೊ ವೈರಲ್ ಆಗಿದೆ. ಇದು ನಾಗರಿಕ ಪ್ರಜ್ಞೆಯ ಕುರಿತು ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ. ಹಾಂಗ್‍ಕಾಂಗ್ ನಗರದ ಬಗ್ಗೆ ಈ ವ್ಯಕ್ತಿ ಹಂಚಿಕೊಂಡಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.


ಹಾಂಗ್‍ಕಾಂಗ್: ಸಾಮಾಜಿಕ ಮಾಧ್ಯಮದಲ್ಲಿ ಅನೇಕ ವಿಚಾರಗಳು ವೈರಲ್ ಆಗುತ್ತಿರುತ್ತವೆ. ಹಾಸ್ಯ, ಚರ್ಚೆ, ಸಾರ್ವಜನಿಕ ನಡವಳಿಕೆ ಕುರಿತಾದ ಚರ್ಚೆ ಮುಂತಾದವುಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ (Viral Video). ಇಂಥದ್ದೇ ವಿಚಾರಕ್ಕೆ ಸಂಬಂಧಪಟ್ಟಂತೆ ಭಾರತೀಯ ಸಾಮಾಜಿಕ ಮಾಧ್ಯಮ ಬಳಕೆದಾರರು ಸಕ್ರಿಯವಾಗಿ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ವ್ಯಕ್ತಿಯೊಬ್ಬರು ಹಾಂಗ್‍ಕಾಂಗ್ ನಗರದ ಬಗ್ಗೆ ಹಂಚಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಭಾರತದ ಸಾರ್ವಜನಿಕ ಸ್ಥಳಗಳನ್ನು ಇತರ ದೇಶಗಳೊಂದಿಗೆ ಅನೇಕರು ಹೋಲಿಸುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಕಸ ಹಾಕುವುದು, ಶಬ್ಧ ಮಾಲಿನ್ಯ ಮತ್ತು ಇತರ ಸಮಸ್ಯೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಎತ್ತಿ ತೋರಿಸುತ್ತಿದ್ದಾರೆ. ಇದರ ನಡುವೆ ಹಾಂಗ್‌ಕಾಂಗ್‌ನಂತಹ ಸ್ವಚ್ಛ, ಸುಂದರ ನಗರದ ಈ ವ್ಯಕ್ತಿ ತಮ್ಮ ಪ್ರಾಮಾಣಿಕ ಅಭಿಪ್ರಾಯವನ್ನು ಹಂಚಿಕೊಂಡ ನಂತರ ಈ ವಿಡಿಯೊ ವೈರಲ್ ಆಗಿದೆ. ಇದು ನಾಗರಿಕ ಪ್ರಜ್ಞೆಯ ಕುರಿತು ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ.
ಆ ವ್ಯಕ್ತಿಯ ಪ್ರಕಾರ, ವ್ಯತ್ಯಾಸವು ಮೂಲಸೌಕರ್ಯ ಅಥವಾ ಸಂಪನ್ಮೂಲಗಳಲ್ಲಿ ಅಲ್ಲ, ಬದಲಾಗಿ ಜನರ ನಡವಳಿಕೆಯಲ್ಲಿದೆ. ಒಂದೇ ವ್ಯತ್ಯಾಸವೆಂದರೆ ಸ್ವಚ್ಛತೆ ಮತ್ತು ನಾಗರಿಕ ಪ್ರಜ್ಞೆ ಎಂದು ಅವರು, ಹಾಂಗ್‌ಕಾಂಗ್‌ನ ಸುಂದರವಾದ ನದಿದಂಡೆಯ ಉದ್ದಕ್ಕೂ ಇರುವ ಪಾದಚಾರಿ ಮಾರ್ಗಗಳು ಮತ್ತು ಹೂವಿನ ಗಿಡಗಳನ್ನು ತೋರಿಸುತ್ತಾ ಈ ಮಾತು ಹೇಳಿದರು.
ವಿದೇಶಿ ಎಂದರೇನು? ವಿದೇಶದಲ್ಲಿ ಏನೂ ಇಲ್ಲ, ಎಂದು ಆ ವ್ಯಕ್ತಿ ವಿಡಿಯೊದಲ್ಲಿ ಹೇಳುತ್ತಾ ದೂರದ ದೇಶಗಳ ಮೇಲಿನ ಆಕರ್ಷಣೆಯನ್ನು ತಿಳಿಸಿದ್ದಾನೆ. ಮುಂದೆ ಸಾಗುತ್ತಾ, ಅವರು ಹಾಂಗ್‌ಕಾಂಗ್‌ನ ಮೂಲಸೌಕರ್ಯವನ್ನು ಭಾರತದ ಮೂಲಸೌಕರ್ಯಕ್ಕೆ ಹೋಲಿಸಿದರು. ನಮ್ಮ ದೇಶವೂ ಎತ್ತರದ ಕಟ್ಟಡಗಳು, ನದಿಗಳು ಮತ್ತು ಹಸಿರನ್ನು ಹೊಂದಿದೆ. ಆದರೆ ಕೊರತೆಯಿರುವುದು ಸಾಮೂಹಿಕ ಜವಾಬ್ದಾರಿಯ ಪ್ರಜ್ಞೆ. ಇಲ್ಲಿ, ಬಿಸಾಡಿರುವ ಗುಟ್ಕಾ ಪ್ಯಾಕೆಟ್‍ಗಳಿಲ್ಲ. ಬದಲಾಗಿ ಹೂವಿನ ಗಿಡಗಳಲ್ಲಿ ಸುಂದರವಾದ ಬಗೆಬಗೆಯ ಹೂವುಗಳು ಅರಳಿವೆ. ಯಾರೂ ಅವುಗಳ ಮೇಲೆ ಪಾನ್ ಜಗಿದು ಉಗಿದಿಲ್ಲ ಎಂದು ತಿಳಿಸಿದರು.
ವಿಡಿಯೊ ಇಲ್ಲಿದೆ:
ಇತರ ದೇಶಗಳಿಂದ ಕಲಿಯುವ ಮೂಲಕ ನಾವು ಇದನ್ನು ಮನೆಗಳಲ್ಲಿ ಅಳವಡಿಸಬಹುದು. ಇವು ಪ್ರಮುಖ ಸಮಸ್ಯೆಗಳಾಗಿ ಕಂಡುಬರದಿರಬಹುದು. ಆದರೆ ಇಂತಹ ಸಣ್ಣ ಕ್ರಮಗಳು ಭಾರತವನ್ನು ಹಿಂದುಳಿಯಲು ಕಾರಣವಾಗುತ್ತಿವೆ ಎಂದು ಹೇಳಿದರು. ಈ ವಿಡಿಯೊ ಕೂಡಲೇ ಬಳಕೆದಾರರ ಗಮನಸೆಳೆದಿದ್ದು, ಹಲವಾರು ಪ್ರತಿಕ್ರಿಯೆಗಳು ಬಂದಿವೆ. ಇನ್‌ಸ್ಟಾಗ್ರಾಮ್ ಬಳಕೆದಾರರು ಮೂಲ ನಾಗರಿಕ ಪ್ರಜ್ಞೆ ಅಗತ್ಯವಿದೆ ಎಂದು ಬರೆದಿದ್ದಾರೆ. ನಮ್ಮಲ್ಲಿ ಇದು ಬದಲಾಗಲು ಸಾಕಷ್ಟು ಸಮಯ ತೆಗೆದುಕೊಳ್ಳಬಹುದು ಎಂದು ಕೆಲವು ಬಳಕೆದಾರರು ಕಾಮೆಂಟ್ ಮಾಡಿದದಾರೆ.
ನಾಗರಿಕ ಪ್ರಜ್ಞೆಯ ಬಗ್ಗೆ ಹೇಳುವುದಾದರೆ, ಇತ್ತೀಚೆಗೆ ಕೆನಡಾದಲ್ಲಿ ದಂಪತಿಗಳು ರಸ್ತೆಬದಿಯಲ್ಲಿ ಕಸ ಎಸೆಯುತ್ತಿರುವ ವಿಡಿಯೊ ಅಂತರ್ಜಾಲದಲ್ಲಿ ವೈರಲ್ ಆದ ನಂತರ ಭಾರತೀಯರು ಟೀಕೆಗೆ ಗುರಿಯಾಗಿದ್ದರು.