Viral Video: ರೈಲು ಪಕ್ಕದಲ್ಲೇ ಹಾದು ಹೋಗ್ತಿದ್ರೂ ರೀಲ್ಸ್ ಮಾಡಿದ ದಂಪತಿ; ಇವ್ರ ಹುಚ್ಚಾಟದ ವಿಡಿಯೊ ಫುಲ್ ವೈರಲ್
Couple Putting Lives At Risk: ರೈಲ್ವೆ ಹಳಿಗಳಲ್ಲಿ ರೀಲ್‌ಗಳನ್ನು ಮಾಡುವುದು ಯುವಕರಲ್ಲಿ ಅಪಾಯಕಾರಿ ಪ್ರವೃತ್ತಿಯಾಗುತ್ತಿದೆ. ಎಷ್ಟೋ ಮಂದಿ ಅಪಾಯಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಕೂಡ ಯುವಜನತೆ ರೀಲ್ಸ್ ಮಾಡುವುದನ್ನು ಮಾತ್ರ ಕಡಿಮೆ ಮಾಡಿಲ್ಲ. ಇದೀಗ ಇಂಥದ್ದೇ ವಿಡಿಯೊವೊಂದು ವೈರಲ್ ಆಗಿದೆ.

-

ನವದೆಹಲಿ: ಸಾಮಾಜಿಕ ಮಾಧ್ಯಮದಲ್ಲಿ ಖ್ಯಾತಿಯಾಗಬೇಕೆಂದು ಅನೇಕರು ಅಪಾಯಕಾರಿ ರೀಲ್ಸ್ (Reels) ಮಾಡುತ್ತಾರೆ. ಇದರಿಂದ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಕೂಡ ಇಂತಹ ಪ್ರವೃತ್ತಿ ಮಾತ್ರ ಕಡಿಮೆಯಾಗೋದಿಲ್ಲ. ರೈಲ್ವೆ ಹಳಿಗಳಲ್ಲಿ ರೀಲ್‌ಗಳನ್ನು ಮಾಡುವುದು ಯುವಕರಲ್ಲಿ ಇತ್ತೀಚೆಗೆ ಅಪಾಯಕಾರಿ ಪ್ರವೃತ್ತಿಯಾಗುತ್ತಿದೆ. ರೋಮಾಂಚಕ ವಿಡಿಯೊಗಳನ್ನು ಸೆರೆಹಿಡಿಯುವ ಪ್ರಯತ್ನದಲ್ಲಿ, ತಮ್ಮ ಅಮೂಲ್ಯ ಜೀವನವನ್ನು ಅಪಾಯಕ್ಕೆ ಸಿಲುಕಿಸಿಕೊಂಡಿದ್ದಾರೆ. ಇದೀಗ ಇಂಥದ್ದೇ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ಹೌದು, ಇತ್ತೀಚಿಗೆ ವೈರಲ್ ಆದ ರೀಲ್‌ನಲ್ಲಿ ದಂಪತಿಗಳು ಭೋಜ್‌ಪುರಿ ಹಾಡು ಫೆಫ್ಡಾ ಖತಮ್‍ಗೆ ನೃತ್ಯ ಮಾಡುವುದನ್ನು ತೋರಿಸಲಾಗಿದೆ. ವಿಡಿಯೊ ಮೋಜಿನ ಮತ್ತು ಮನರಂಜನೆಯಂತೆ ಕಂಡುಬಂದರೂ, ಅವರು ಆಯ್ಕೆ ಮಾಡಿದ ಸ್ಥಳ ಮಾತ್ರ ಅತ್ಯಂತ ಅಸುರಕ್ಷಿತವಾಗಿದೆ. ವಿಡಿಯೊದಲ್ಲಿ, ದಂಪತಿಗಳು ರೈಲ್ವೆ ಹಳಿಯ ಬಳಿ ನಿಂತಿರುವುದನ್ನು ತೋರಿಸಲಾಗಿದೆ. ಆದರೆ, ವಂದೇ ಭಾರತ್ ರೈಲು ಅವರ ಹಿಂದೆ ಹಾದುಹೋಗುತ್ತಿದೆ. ಚಲಿಸುವ ರೈಲಿಗೆ ಇಷ್ಟೊಂದು ಹತ್ತಿರವಾಗುವುದು ಅತ್ಯಂತ ಅಪಾಯಕಾರಿ. ಆದರೂ ಅವರು ತಮ್ಮ ಸುರಕ್ಷತೆಯ ಬಗ್ಗೆ ಯಾವುದೇ ಕಾಳಜಿಯನ್ನು ತೋರಿಸದೆ ಚಿತ್ರೀಕರಣ ಮುಂದುವರಿಸಿದ್ದಾರೆ.
ಕೆಲವು ಸೆಕೆಂಡುಗಳ ಸಾಮಾಜಿಕ ಮಾಧ್ಯಮ ಖ್ಯಾತಿಗಾಗಿ, ಜನರು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ. ರೈಲ್ವೆ ಸೇತುವೆಗಳ ಮೇಲೆ ನೃತ್ಯ ಮಾಡುತ್ತಾ, ಅವುಗಳ ಹಿಂದೆಯೇ ರೈಲುಗಳು ವೇಗವಾಗಿ ಬರುತ್ತಿವೆ. ಜಾರುವುದರಿಂದ ಅಥವಾ ಗಾಳಿಯಿಂದ ಜೀವನವೇ ಮುಗಿಯುತ್ತದೆ ಎಂಬ ಶೀರ್ಷಿಕೆಯೊಂದಿಗೆ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ವಿಡಿಯೊವನ್ನು ಪೋಸ್ಟ್ ಮಾಡಲಾಗಿದೆ.
ವಿಡಿಯೊ ವೀಕ್ಷಿಸಿ:
🚨 For a few seconds of social media fame, people are now risking their lives. Dancing on active Railway Bridges with trains speeding right behind them.
— Gems (@gemsofbabus_) October 10, 2025
One Slip, One gust of Wind… and it’s Over. 🤦♂️ pic.twitter.com/uyifgZBw6Q
ಒಂದು ತಪ್ಪು ಹೆಜ್ಜೆ ಇಟ್ಟರೆ ಅದು ಅದು ದುರಂತವಾಗಿ ಮಾರ್ಪಾಡಾಗುತ್ತದೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ನಿಮ್ಮ ನಿಜವಾದ ಸುರಕ್ಷತೆ ಮತ್ತು ಲೈಕ್‌ಗಳು ಅಥವಾ ವೀಕ್ಷಣೆಗಳಿಗೆ ಆದ್ಯತೆ ನೀಡುವುದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲು ಸಾಧ್ಯವಿಲ್ಲ. ಡಿಜಿಟಲ್ ಕ್ಷಣವು ತುಂಬಾ ವೇಗವಾಗಿ ಮರೆಯಾಗುತ್ತದೆ. ಆದರೆ ಆ ಅಪಾಯಕಾರಿ ಸಾಹಸಗಳ ಪರಿಣಾಮಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Viral Video: ಚಲಿಸುವ ರೈಲಿನಲ್ಲಿ ಮೋಜು ಮಾಡಲು ಹೋಗಿ ಕೆಳಗೆ ಬಿದ್ದ ಯುವತಿ; ಈ ವಿಡಿಯೊ ನಿಜವೋ, ನಕಲಿಯೊ?
ರೈಲ್ವೆ ಮಾರ್ಗಗಳಲ್ಲಿ ಅಥವಾ ಅಪಾಯಕಾರಿ ಸ್ಥಳಗಳಲ್ಲಿ ಯಾರಾದರೂ ರೀಲ್‌ಗಳನ್ನು ಮಾಡುತ್ತಿದ್ದರೆ, ಸರ್ಕಾರವು ಕನಿಷ್ಠ 5 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ದಂಡವನ್ನು ವಿಧಿಸಬೇಕು ಎಂದು ಮತ್ತೊಬ್ಬ ಬಳಕೆದಾರರು ಹಂಚಿಕೊಂಡಿದ್ದಾರೆ. ದಂಪತಿಗಳು ವಿಡಿಯೊವನ್ನು ಎಲ್ಲಿ ಚಿತ್ರೀಕರಿಸಿದ್ದಾರೆ ಎಂಬುದು ನಿಖರವಾಗಿ ಸ್ಪಷ್ಟವಾಗಿಲ್ಲ. ಆದರೆ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಈ ವಿಡಿಯೊಗೆ ರೈಲ್ವೆ ಅಧಿಕಾರಿಗಳನ್ನು ಟ್ಯಾಗ್ ಮಾಡಿದ್ದಾರೆ. ಖರಗ್‌ಪುರದ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಪ್ರತಿಕ್ರಿಯಿಸಿ, ದೂರನ್ನು ಗಮನಿಸಿದ್ದೇವೆ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಚಲಿಸುವ ರೈಲಿನಲ್ಲಿ ಯುವತಿಯೊಬ್ಬಳು ಅಪಾಯಕಾರಿ ಕೃತ್ಯ ಎಸಗುತ್ತಿರುವ ವಿಡಿಯೊವೊಂದು ವೈರಲ್ ಆಗಿತ್ತು. ಚಲಿಸುತ್ತಿರುವ ರೈಲಿನ ತೆರೆದ ಬಾಗಿಲಲ್ಲಿ ಯುವತಿಯೊಬ್ಬಳು ನಿಂತಿದ್ದು, ಮೋಜು ಮಾಡಿದ್ದಾಳೆ. ಈ ವೇಳೆ ಕಂಬಕ್ಕೆ ಡಿಕ್ಕಿ ಹೊಡೆದು ಕೆಳಕ್ಕೆ ಬಿದ್ದಿರುವ ಆಘಾತಕಾರಿ ದೃಶ್ಯವಿದು. ಇದು ನಿಜವೋ, ನಕಲಿಯೋ ಎಂಬುದು ತಿಳಿದುಬಂದಿಲ್ಲ.