BBK 12: ಸದ್ದೇ ಮಾಡದ ಅಸುರಾಧಿಪತಿ: ಡೋರ್ ತೆಗೆದು ಹೊರಹೋಗಿ ಎಂದ ಕಿಚ್ಚ ಸುದೀಪ್
ಮೊದಲ ಫಿನಾಲೆ ಕಂಟೆಂಡರ್ ಆದ ಕಾಕ್ರೋಚ್ ಸುಧಿ ಅವರಿಗೆ ಈ ವಾರ ಅಸುರಾಧಿಪತಿ ಎಂಬ ಪಾತ್ರ ಕೊಡಲಾಗಿತ್ತು. ಆದರೆ ತಮ್ಮ ಪಾತ್ರವನ್ನು ಅವರು ಸರಿಯಾಗಿ ನಿರ್ವಹಿಸಲಿಲ್ಲ. ಅಸುರನಿಗೆ ಏನು ಬೇಕಾದ್ರು ನಿಯಮ ಮಾಡಬಹುದು, ಯಾರನ್ನ ಬೇಕಾದ್ರು ಶಿಕ್ಷಿಸಬಹುದು, ಹೇಗೆ ಬೇಕಾದ್ರು ಬದುಕಬಹುದಾಗಿದ್ದ ಅಧಿಕಾರ ಇತ್ತು.

Varada Kathe Kichchana Jothe -

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಶುರುವಾಗಿ ಎರಡು ವಾರ ಆಗುತ್ತ ಬರುತ್ತಿದೆ. ಇಂದು ಕಿಚ್ಚನ ಎರಡನೇ ವಾರದ ಪಂಚಾಯಿತಿ ನಡೆಯಲಿದೆ. ಇಂದಿನ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ಸಾಕಷ್ಟು ಕುತೂಹಲ ಮೂಡಿಸಿದೆ. ಬಿಗ್ ಬಾಸ್ ಮನೆ ಎರಡನೇ ವಾರ ಕೂಡ ರಣರಂಗವಾಗಿತ್ತು. ಪ್ರತಿ ಎಪಿಸೋಡ್ನಲ್ಲಿ ಜಗಳಗಳೇ ನಡೆದಿತ್ತು. ಎರಡನೇ ವಾರದಲ್ಲಿ ಅನೇಕ ಸಂಗತಿಗಳು ನಡೆದಿದ್ದು, ಈ ಕುರಿತು ವಾರದ ಕತೆಯಲ್ಲಿ ಚರ್ಚೆ ನಡೆಯಲಿದೆ. ಈಗಾಗಲೇ ಕಲರ್ಸ್ ಕನ್ನಡ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ನ ಪ್ರೋಮೋ ಬಿಟ್ಟಿದೆ.
ಮೊದಲ ಫಿನಾಲೆ ಕಂಟೆಂಡರ್ ಆದ ಕಾಕ್ರೋಚ್ ಸುಧಿ ಅವರಿಗೆ ಈ ವಾರ ಅಸುರಾಧಿಪತಿ ಎಂಬ ಪಾತ್ರ ಕೊಡಲಾಗಿತ್ತು. ಆದರೆ ತಮ್ಮ ಪಾತ್ರವನ್ನು ಅವರು ಸರಿಯಾಗಿ ನಿರ್ವಹಿಸಲಿಲ್ಲ. ಅಸುರನಿಗೆ ಏನು ಬೇಕಾದ್ರು ನಿಯಮ ಮಾಡಬಹುದು, ಯಾರನ್ನ ಬೇಕಾದ್ರು ಶಿಕ್ಷಿಸಬಹುದು, ಹೇಗೆ ಬೇಕಾದ್ರು ಬದುಕಬಹುದಾಗಿದ್ದ ಅಧಿಕಾರ ಇತ್ತು. ಆದರೆ, ಇವರು ಅದನ್ನು ಸರಿಯಾಗಿ ಉಪಯೋಗಿಸಿಕೊಂಡಿಲ್ಲ.. ಆ ಖಡಕ್ ಮಾತು- ಸ್ಪರ್ಧಿಗಳ ಕೈಯಿಂದ ಕೆಲಸ ಮಾಡಬೇಕಾಗಿದ್ದಿದ್ದನ್ನು ಮಾಡಿಸಲಿಲ್ಲ.
ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ಪ್ರೋಮೋ:
ಇದೀಗ ವೀಕೆಂಡ್ನಲ್ಲಿ ಈ ಬಗ್ಗೆ ಸುದೀಪ್ ಮಾತನಾಡಿ ಕೋಪಗೊಂಡಿದ್ದಾರೆ. ಕಾಕ್ರೋಚ್ ಅವರಿಗೆ ನೀಡಿದ್ದ ಅಸುರ ಟಾಸ್ಕ್ನಲ್ಲಿ ಅವರ ಪ್ರದರ್ಶನ ಹೇಗಿತ್ತು ಎಂದು ಸುದೀಪ್ ಇತರೆ ಸ್ಪರ್ಧಿಗಳ ಬಳಿ ಕೇಳಿದ್ದಾರೆ. ಇದಕ್ಕೆ ಜಾನ್ವಿ ಅವರು, ಅವರ ಕ್ರೌರ್ಯ, ಅಟ್ಟಹಾಸ ಕೇವಲ ಮೇಕಪ್ಗಷ್ಟೇ ಸೀಮಿತವಾಗಿತ್ತು ಎಂದು ಹೇಳಿದ್ದಾರೆ. ಅವರು ಅಸುರ ಅನ್ನುವುದಕ್ಕಿಂತ ಒಬ್ಬ ಜೋಕರ್ ತರ ಇದ್ರು ಎಂದು ಕಾವ್ಯ ಹೇಳಿದರು.
ಇವರ ಮಾತು ಕೇಳಿ ಬೇಸರಗೊಂಡ ಸುಧಿ, ಅವರ ಕಾಲು ಒಂದು ಬಿದ್ದಿಲ್ಲ ಅಷ್ಟೆ ನಾನು.. ಹೇಳಿದ್ದನ್ನ ಒಂದೂ ಕೇಳಿಲ್ಲ.. ಇನ್ನೇಗೆ ಬದುಕಬೇಕು ನಾನು.. ಆಗಲ್ಲ ಅವುಗಳ ಹತ್ರ ಎಂದು ಹೇಳಿದ್ದಾರೆ. ಈ ಮಾತಿನಿಂದ ಕೆರಳಿದ ಕಿಚ್ಚ, ಶೋದು ಸೀರಿಯಸ್ನೆಸ್ ಅರ್ಥ ಆಗುತ್ತಿಲ್ಲ ಅಂದ್ರೆ.. ಕೆಲವು ಕಂಟ್ರೋಲ್ ಮಾಡೋಕೆ ಆಗ್ತಾ ಇಲ್ಲ ಅಂದ್ರೆ ಈಗಲೇ ಕಳಿಸಿಕೊಡ್ತೀನಿ ಹೋಗಿ.. ಬಾಗಿಲು ಓಪನ್ ಆಗಿದೆ ಎಂದು ಹೇಳಿದ್ದಾರೆ. ಸುದೀಪ್ ಮಾತು ಕೇಳಿ ಸುಧಿಗೆ ಭಯವಾಗಿದೆ. ಇಂದೇನು ಆಗುತ್ತೆ ಎಂಬುದು ಕುತೂಹಲ ಮೂಡಿಸಿದೆ.
RJ Amith: ಬನಿಯನ್ ಮೇಲೆ ರೋಡ್ ಮಧ್ಯೆ ತಿಕ್ಕಲುತಿಕ್ಕಲು ಡ್ಯಾನ್ಸ್ ಬೇಕಿತ್ತಾ ಇವರಿಗೆ?: ಆರ್ಜೆ ಅಮಿತ್