Viral News: ನಡುರಸ್ತೆಯಲ್ಲಿ ಹೈಡ್ರಾಮಾ! 2 ಗಂಟೆಗಳಿಗೂ ಹೆಚ್ಚು ಕಾಲ ಬೆತ್ತಲೆಯಾಗಿ ಓಡಾಡಿದ ತೃತೀಯ ಲಿಂಗಿ
Drama On Streets: ತೃತೀಯ ಲಿಂಗಿ ವ್ಯಕ್ತಿಯೊಬ್ಬರು ಜನನಿಬಿಡ ಪ್ರದೇಶದಲ್ಲಿ ಬೆತ್ತಲೆಯಾಗಿ ಓಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಪುರುಷರ ಗುಂಪೊಂದು ಕಿರುಕುಳ ನೀಡಿದ್ದಲ್ಲದೇ, ಹಲ್ಲೆ ನಡೆಸಿದೆ ಎಂದು ಸಿಟ್ಟಿಗೆದ್ದ ಈಕೆ ಬಟ್ಟೆಗಳನ್ನು ಧರಿಸದ, ಜೋರಾಗಿ ಕೂಗುತ್ತಾ ಓಡಿದ್ದಾರೆ.

-

ಇಂದೋರ್: ಪುರುಷರ ಗುಂಪೊಂದು ಕಿರುಕುಳ ನೀಡಿದೆ ಹಾಗೂ ಹಲ್ಲೆ ನಡೆಸಿದೆ ಎಂದು ಸಿಟ್ಟಿಗೆದ್ದ ತೃತೀಯ ಲಿಂಗಿಯೊಬ್ಬರು (Transgender) ಜನನಿಬಿಡ ಪ್ರದೇಶಗಳಲ್ಲಿ ಬೆತ್ತಲೆಯಾಗಿ ಓಡಿದ ಘಟನೆ ನಡೆದಿದೆ. ಸೋಮವಾರ ತಡರಾತ್ರಿ ಮಧ್ಯಪ್ರದೇಶ (Madhya Pradesh) ದ ಟಿಕಮ್‌ಗಢ ನಗರದಲ್ಲಿ ಈ ಘಟನೆ ನಡೆದಿದ್ದು, ನಿವಾಸಿಗಳು ದಿಗ್ಭ್ರಮೆಗೊಂಡಿದ್ದಾರೆ. ಗಾಂಧಿ ಚೌಕ್ ಮತ್ತು ಘಂಟಾಘರ್ ನಡುವೆ ತೃತೀಯ ಲಿಂಗಿ ಓಡಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ಈ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ರಾತ್ರಿ 10:00 ಗಂಟೆ ಸುಮಾರಿಗೆ ಕುಡಿದ ಅಮಲಿನಲ್ಲಿದ್ದ ಪುರುಷರ ಗುಂಪೊಂದು ತೃತೀಯ ಲಿಂಗಿಯೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಯತ್ನಿಸಿತು ಎಂದು ದೂರಿದ್ದಾರೆ. ಆಕೆ ಅದನ್ನು ವಿರೋಧಿಸಿದ್ದಕ್ಕೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಆಘಾತ ಮತ್ತು ಕೋಪಗೊಂಡ ತೃತೀಯ ಲಿಂಗಿ ಬೆತ್ತಲೆಯಾಗಿ ಗಾಂಧಿ ಚೌಕ್ ಮತ್ತು ಘಂಟಾಘರ್‌ನ ಜನದಟ್ಟಣೆಯ ಬೀದಿಗಳಲ್ಲಿ ಓಡಿದ್ದಾಳೆ. ಗುಂಪೊಂದು ತನಗೆ ಹಾನಿ ಮಾಡಲು ಪ್ರಯತ್ನಿಸಿದ್ದಾರೆ ಎಂದು ಪದೇ ಪದೇ ಕೂಗುತ್ತಿದ್ದಳು.
ಬೆತ್ತಲೆಯಾಗಿ ಓಡುವಾಗ ಕೆಲವರು ತನಗೆ ಕೆಟ್ಟದ್ದನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆಂದು ಅವಳು ಹೇಳುತ್ತಲೇ ಇದ್ದಳು. ಅವಳು ಪ್ರತಿಭಟಿಸಿದಾಗ, ಗುಂಪು ತನ್ನ ಮೇಲೆ ಹಲ್ಲೆ ಮಾಡಿತು. ಹೀಗಾಗಿ ಸಹಾಯಕ್ಕಾಗಿ ಜೋರಾಗಿ ಕೂಗಾಡುತ್ತಾ ಓಡಿದ್ದಾಳೆ. ಆದರೆ, ಯಾರಿಗೂ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದು ಈ ದೃಶ್ಯವನ್ನು ಕಣ್ಣಾರೆ ನೋಡಿದ ಸ್ಥಳೀಯ ನಿವಾಸಿ ರಾಜೇಶ್ ಹೇಳಿದರು. ಈ ವಿಡಿಯೊವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಾಯಕರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Viral News: ಆಸ್ತಿಯನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಈ ಕುಟುಂಬ ಮಾಡಿದ ಮಾಸ್ಟರ್ ಪ್ಲ್ಯಾನ್ ಏನ್ ಗೊತ್ತಾ?
ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ಹರಸಾಹಸ
ಟಿಕಮ್‌ಗಢ ಪೊಲೀಸರಿಗೆ ಮಾಹಿತಿ ಸಿಕ್ಕ ತಕ್ಷಣ, ಒಂದು ತಂಡ ಸ್ಥಳಕ್ಕೆ ತಲುಪಿ ಆಕೆಯನ್ನು ಶಾಂತಗೊಳಿಸಲು ಪ್ರಯತ್ನಿಸಿತು. ಆದರೆ, ಆಕೆ ಸಹಕರಿಸಲು ನಿರಾಕರಿಸಿದಳು. ಬೀದಿಗಳಲ್ಲಿ ಓಡುತ್ತಲೇ ಇದ್ದಳು ಮತ್ತು ಪದೇ ಪದೆ ವಿನಂತಿಸಿದರೂ ಬಟ್ಟೆ ಧರಿಸಲು ಒಪ್ಪಲೇ ಇಲ್ಲ. ಕೊನೆಗೂ ಪೊಲೀಸರು ಆಕೆಯನ್ನು ಠಾಣೆಗೆ ಕರೆದೊಯ್ಯುವಲ್ಲಿ ಯಶಸ್ವಿಯಾದರು. ಅಲ್ಲಿಯೂ ಸಹ, ಆಕೆ ಪೊಲೀಸ್ ವಾಹನದೊಳಗೆ ಬೆತ್ತಲೆಯಾಗಿ ಕುಳಿತು ನಂತರ ಸುಮಾರು ಒಂದು ಗಂಟೆಗಳ ಕಾಲ ಠಾಣೆಯಲ್ಲಿ ತನ್ನ ಕೋಪವನ್ನು ವ್ಯಕ್ತಪಡಿಸುತ್ತಲೇ ಇದ್ದಳು ಎಂದು ವರದಿಯಾಗಿದೆ.
ಅಂದಹಾಗೆ ತೃತೀಯ ಲಿಂಗಿ ವ್ಯಕ್ತಿ ಸಾಗರ್ ಮೂಲದವರಾಗಿದ್ದು, ಕೆಲವು ಸಮಯದಿಂದ ಟಿಕಮ್‌ಗಢದಲ್ಲಿ ವಾಸಿಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ದೃಢಪಡಿಸಿವೆ. ಕೆಲವು ಕುಡುಕ ಪುರುಷರು ಆಕೆಗೆ ಕಿರುಕುಳ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದು, ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ನಾವು ಆರೋಪಿಗಳನ್ನು ಗುರುತಿಸುತ್ತಿದ್ದೇವೆ ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಘಟನೆಯು ಟಿಕಮ್‌ಗಢದಲ್ಲಿ ತೃತೀಯ ಲಿಂಗಿ ಸಮುದಾಯದ ಸುರಕ್ಷತೆ ಮತ್ತು ಘನತೆಯ ಕುರಿತು ಚರ್ಚೆಗಳನ್ನು ಹುಟ್ಟುಹಾಕಿದ್ದು, ಉತ್ತಮ ರಕ್ಷಣೆ ಮತ್ತು ಜಾಗೃತಿಯ ಅಗತ್ಯವನ್ನು ಎತ್ತಿ ತೋರಿಸಿದೆ.
ಇದನ್ನೂ ಓದಿ: Shehbaz Sharif: ಬೀಜಿಂಗ್‌ನಲ್ಲಿ ಶೆಹಬಾಜ್ ಶರೀಫ್‌ಗೆ ಮತ್ತೆ ಮುಜುಗರ: ಇಯರ್‌ಫೋನ್ ಧರಿಸಲು ಪರದಾಡಿದ ಪಾಕ್ ಪ್ರಧಾನಿ