ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತ vs ಸಿಂಗಾಪುರ ಎಎಫ್‌ಸಿ ಏಷ್ಯನ್ ಕಪ್ ಅರ್ಹತಾ ಪಂದ್ಯ ಬೆಂಗಳೂರಿನಿಂದ ಗೋವಾಕ್ಕೆ ಸ್ಥಳಾಂತರ

"ಶ್ರೀ ಕಂಠೀರವ ಕ್ರೀಡಾಂಗಣವನ್ನು ಅಥ್ಲೆಟಿಕ್ಸ್ ಸೇರಿದಂತೆ ಎಲ್ಲಾ ಕ್ರೀಡೆಗಳಿಗೆ ಬಳಸಲಾಗುತ್ತದೆ. ಫುಟ್ಬಾಲ್ ಪಂದ್ಯವನ್ನು ನಿಗದಿಪಡಿಸಿದಾಗ, ಕ್ರೀಡಾಂಗಣವನ್ನು ಉತ್ತಮ ಸ್ಥಿತಿಯಲ್ಲಿಡಲು ನಮಗೆ ಸಮಯ ಬೇಕಾಗುತ್ತದೆ" ಎಂದು ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ​​(ಕೆಎಸ್ಎಫ್ಎ) ಅಧ್ಯಕ್ಷ ಎನ್.ಎ. ಹ್ಯಾರಿಸ್ ಹೇಳಿದ್ದಾರೆ.

ಏಷ್ಯನ್ ಕಪ್ ಅರ್ಹತಾ ಪಂದ್ಯ ಬೆಂಗಳೂರಿನಿಂದ ಗೋವಾಕ್ಕೆ ಸ್ಥಳಾಂತರ

-

Abhilash BC Abhilash BC Sep 4, 2025 4:20 PM

ನವದೆಹಲಿ: ಭಾರತ ಮತ್ತು ಸಿಂಗಾಪುರ(India vs Singapore) ವಿರುದ್ಧ ಅ.14ರಂದು ನಡೆಯಲಿರುವ 2026ರ ಎಎಫ್‌ಸಿ(AFC Asian Cup 2026) ಏಷ್ಯನ್‌ ಕಪ್‌ ಅರ್ಹತಾ(Asian Cup qualifier) ಪಂದ್ಯದ ಗೋವಾದಲ್ಲಿ ನಡೆಯಲಿದೆ ಎಂದು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್‌ಎಫ್) ಗುರುವಾರ ದೃಢಪಡಿಸಿದೆ. ಅಸಲಿಗೆ ಈ ಪಂದ್ಯ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಆದರೆ ವ್ಯವಸ್ಥಾಪನಾ ಸವಾಲುಗಳಿಂದಾಗಿ ಅದನ್ನು ಬದಲಾಯಿಸಲಾಯಿತು.

ಖಾಲಿದ್ ಜಮಿಲ್ ನೇತೃತ್ವದ ತಂಡವು ಅಕ್ಟೋಬರ್‌ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಪಂದ್ಯದಲ್ಲಿ ಸಿಂಗಾಪುರವನ್ನು ಎರಡು ಬಾರಿ ಎದುರಿಸಲಿದ್ದು, ಮೊದಲ ಪಂದ್ಯ ಅಕ್ಟೋಬರ್ 9 ರಂದು ಸಿಂಗಾಪುರದ ಕಲ್ಲಾಂಗ್‌ನಲ್ಲಿರುವ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.

"ಶ್ರೀ ಕಂಠೀರವ ಕ್ರೀಡಾಂಗಣವನ್ನು ಅಥ್ಲೆಟಿಕ್ಸ್ ಸೇರಿದಂತೆ ಎಲ್ಲಾ ಕ್ರೀಡೆಗಳಿಗೆ ಬಳಸಲಾಗುತ್ತದೆ. ಫುಟ್ಬಾಲ್ ಪಂದ್ಯವನ್ನು ನಿಗದಿಪಡಿಸಿದಾಗ, ಕ್ರೀಡಾಂಗಣವನ್ನು ಉತ್ತಮ ಸ್ಥಿತಿಯಲ್ಲಿಡಲು ನಮಗೆ ಸಮಯ ಬೇಕಾಗುತ್ತದೆ" ಎಂದು ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ​​(ಕೆಎಸ್ಎಫ್ಎ) ಅಧ್ಯಕ್ಷ ಎನ್.ಎ. ಹ್ಯಾರಿಸ್ ಹೇಳಿದ್ದಾರೆ.

ಕ್ರೀಡಾಂಗಣ ಅವ್ಯವಸ್ಥೆ ವಿರುದ್ಧ ಫುಟ್ಬಾಲ್‌ ಅಭಿಮಾನಿಗಳೂ ಸಾಮಾಜಿಕ ತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ 2 ವರ್ಷ ಕಳೆದರೂ ಕ್ರೀಡಾಂಗಣ ದುರಸ್ತಿಯಾಗದೇ ಇರುವುದು ದುರಂತ.

ಇದನ್ನೂ ಓದಿ ವಿಶ್ವದ ಫುಟ್ಬಾಲ್‌ ಸ್ಟಾರ್‌ ಲಿಯೊನೆಲ್‌ ಮೆಸ್ಸಿಯ ಭಾರತದ ಪ್ರವಾಸಕ್ಕೆ ಗ್ರೀನ್‌ ಸಿಗ್ನಲ್‌!