Viral video: ಇಡೀ ಊರಿಗೆ ಊರೇ ಪ್ರವಾಹಕ್ಕೆ ಮುಳುಗುತ್ತಿದ್ದರೆ ಗಂಗಾರತಿ ಮಾಡಿದ ಪೊಲೀಸ್! ವಿಡಿಯೊ ನೋಡಿ
ಪ್ರಯಾಗ್‌ರಾಜ್‌ನಲ್ಲಿ ನಿರಂತರ ಮಳೆಯಿಂದಾಗಿ ಗಂಗಾ ಮತ್ತು ಯಮುನಾ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಪ್ರವಾಹಕ್ಕೆ ಮನೆಗಳೆಲ್ಲಾ ಕೊಚ್ಚಿ ಹೋಗಿವೆ. ಕೆಲವೊಂದು ಪ್ರದೇಶಗಳು ಅಕ್ಷರಶಃ ಮುಳುಗಡೆಯಾಗಿವೆ. ಜನರೆಲ್ಲಾ ಕಂಗೆಟ್ಟು ಮುಂದೇನು? ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಆದರೆ ಉಕ್ಕಿ ಹರಿಯುತ್ತಿದ್ದ ಗಂಗಾ ನದಿಯಿಂದ ಪ್ರವಾಹದ ನೀರು ಮನೆ ಬಾಗಿಲಿಗೆ ಬಂದಾಗ ಸಬ್ ಇನ್‌ಸ್ಪೆಕ್ಟರ್ ಚಂದ್ರದೀಪ್ ನಿಶಾದ್ ಭಯಭೀತರಾಗಲಿಲ್ಲ. ಬದಲಾಗಿ ನೀರಲ್ಲಿ ಮುಳುಗೆದ್ದು, ಪ್ರಾರ್ಥನೆ ಸಲ್ಲಿಸಿದ್ದಾರೆ.

ಲಖನೌ: ಭಾರೀ ಮಳೆಗೆ ಗಂಗಾ ನದಿ ಉಕ್ಕಿ ಹರಿದು ಪ್ರವಾಹದ ಸ್ಥಿತಿ ನಿರ್ಮಾಣ ನಿರ್ಮಾಣಗೊಂಡಿದ್ದರೆ ಪೊಲೀಸ್‌ವೊಬ್ಬ ಆರತಿ ತಟ್ಟೆ ಹಿಡಿದು ಗಂಗಾರತಿ ಮಾಡಿರುವ ಘಟನೆ ಉತ್ತರಪ್ರದೇಶದಲ್ಲಿ ವರದಿಯಾಗಿದೆ. ಪ್ರಯಾಗ್‌ರಾಜ್‌ನ ಸಬ್ ಇನ್‌ಸ್ಪೆಕ್ಟರ್‌ವೊಬ್ಬರು ತಮ್ಮ ಮನೆಗೆ ನೀರು ನುಗ್ಗಿದಾಗ ಆತಂಕಪಡುವ ಬದಲು ಅದರಲ್ಲಿ ಮೂರು ಬಾರಿ ಮುಳುಗೆದ್ದು, ನಂತರ ಆರತಿ ಮಾಡಿದ್ದಾರೆ, ಈ ಘಟನೆ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗುತ್ತಿದೆ.
ಏನಿದು ಘಟನೆ?
ಪ್ರಯಾಗ್‌ರಾಜ್‌ನಲ್ಲಿ ನಿರಂತರ ಮಳೆಯಿಂದಾಗಿ ಗಂಗಾ ಮತ್ತು ಯಮುನಾ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಪ್ರವಾಹಕ್ಕೆ ಮನೆಗಳೆಲ್ಲಾ ಕೊಚ್ಚಿ ಹೋಗಿವೆ. ಕೆಲವೊಂದು ಪ್ರದೇಶಗಳು ಅಕ್ಷರಶಃ ಮುಳುಗಡೆಯಾಗಿವೆ. ಜನರೆಲ್ಲಾ ಕಂಗೆಟ್ಟು ಮುಂದೇನು? ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಆದರೆ ಉಕ್ಕಿ ಹರಿಯುತ್ತಿದ್ದ ಗಂಗಾ ನದಿಯಿಂದ ಪ್ರವಾಹದ ನೀರು ಮನೆ ಬಾಗಿಲಿಗೆ ಬಂದಾಗ ಸಬ್ ಇನ್‌ಸ್ಪೆಕ್ಟರ್ ಚಂದ್ರದೀಪ್ ನಿಶಾದ್ ಭಯಭೀತರಾಗಲಿಲ್ಲ. ಬದಲಾಗಿ ನೀರಲ್ಲಿ ಮುಳುಗೆದ್ದು, ಪ್ರಾರ್ಥನೆ ಸಲ್ಲಿಸಿದ್ದಾರೆ.
ವೈರಲಾಗುತ್ತಿರುವ ವಿಡಿಯೊ ಇಲ್ಲಿದೆ
ಚಂದ್ರದೀಪ್ ನಿಶಾದ್ ತಮ್ಮ ಪ್ರವಾಹಕ್ಕೆ ಸಿಲುಕಿದ ಮನೆ ಬಾಗಿಲಿಗೆ ಹಾಲು ಮತ್ತು ಹೂವುಗಳಿಂದ ಆರತಿ ಮಾಡುತ್ತಿರುವ ಹಲವಾರು ವೀಡಿಯೊಗಳು ವೈರಲ್ ಆಗಿವೆ. ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರಿಗೆ ಪಿಎಸ್‌ಒ ಆಗಿ ಸೇವೆ ಸಲ್ಲಿಸುತ್ತಿರುವ ನಿಶಾದ್, ಸುಮಾರು ಇನ್‌ಸ್ಟಾಗ್ರಾಂನಲ್ಲಿ 15,000 ಫಾಲೋವರ್ಸ್ ಹೊಂದಿದ್ದಾರೆ. ಇದೀಗ ಈ ವಿಡಿಯೊವನ್ನು ಪೋಸ್ಟ್ ಮಾಡಿರುವ ಅವರು, ಇಂದು ಬೆಳಿಗ್ಗೆ, ನಾನು ಕರ್ತವ್ಯಕ್ಕೆ ಹೊರಡುವಾಗ, ತಾಯಿ ಗಂಗಾ ಮಾತೆ ಮನೆ ಬಾಗಿಲಿಗೆ ಬಂದಳು. ನಾವು ನಮ್ಮ ಮನೆ ಬಾಗಿಲಿಗೆ ಪ್ರಾರ್ಥನೆ ಸಲ್ಲಿಸಿ ಅವಳನ್ನು ಪೂಜಿಸುವ ಮೂಲಕ ಆಶೀರ್ವಾದ ಪಡೆದೆವು. "ಜೈ ಗಂಗಾ ಮೈಯಾ!" ಎಂದು ಅವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ವೀಡಿಯೊದಲ್ಲಿ, "ನಿಶಾದ್ ರಾಜ್ ಭವನ, ಮೋರಿ, ದರಗಂಜ್, ಪ್ರಯಾಗರಾಜ್" ಎಂದು ಬರೆದಿರುವ ಅವರ ಮನೆಯ ನಾಮಫಲಕ ಗೋಚರಿಸುತ್ತದೆ.
ಈ ಸುದ್ದಿಯನ್ನೂ ಓದಿ: Viral News: ಸ್ಪೈಸ್‌ಜೆಟ್ ಸಿಬ್ಬಂದಿಗೆ ಮೂಳೆ ಮುರಿಯುವ ರೀತಿಯಲ್ಲಿ ಹಲ್ಲೆ ಮಾಡಿದ ಸೇನಾಧಿಕಾರಿ; ವಿಡಿಯೋ ವೈರಲ್
ಇನ್ನೊಂದು ವಿಡಿಯೊದಲ್ಲಿ ನಿಶಾದ್ ತನ್ನ ಮನೆಯೊಳಗೆ ಸೊಂಟದ ಆಳದ ಪ್ರವಾಹದ ನೀರಿನ ಮೂಲಕ ನಡೆದು ಗಂಗಾ ಮಾತೆಗೆ ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು ಕಾಣಬಹುದು. "ಇಂದು, ತಾಯಿ ಗಂಗೆ ನನ್ನ ಮನೆಗೆ ಸಂಪೂರ್ಣವಾಗಿ ಪ್ರವೇಶಿಸಿದಳು. ನಾನು ನನ್ನ ಮನೆಯೊಳಗೆ ಪುಣ್ಯ ಸ್ನಾನ ಮಾಡಿದೆ. ಜೈ ಗಂಗಾ ಮೈಯಾ!" ಎಂದು ಬರೆದುಕೊಂಡಿದ್ದಾರೆ.
ಇನ್ನು ನಿಶಾದ್ ಅವರ ವಿಡಿಯೊ ನೋಡಿದ ನೆಟ್ಟಿಗರು ನಾನಾ ರೀತಿಯಯಲ್ಲಿ ಕಮೆಂಟ್ ಮಾಡಿದ್ದಾರೆ. ಕೆಲವು ನೆಟ್ಟಿಗರು ಇಂತಹ ಅಪಾಯದ ನಡುವೆಯೂ ಅವರ ಭಕ್ತಿಯನ್ನು ಹೊಗಳಿದರೆ, ಇತರರು ಉತ್ತರ ಪ್ರದೇಶದ ಪ್ರವಾಹ ಪರಿಸ್ಥಿತಿಯ ಗಂಭೀರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.ಪ್ರಯಾಗ್‌ರಾಜ್ ಮತ್ತು ಹತ್ತಿರದ ಪ್ರದೇಶಗಳಲ್ಲಿ ಪರಿಸ್ಥಿತಿ ಹದಗೆಡುತ್ತಿರುವ ನಡುವೆ, ಜನರನ್ನು ಸ್ಥಳಾಂತರಿಸಲು ಮತ್ತು ಅಗತ್ಯ ಸಾಮಗ್ರಿಗಳನ್ನು ವಿತರಿಸಲು ಸರ್ಕಾರ ರಕ್ಷಣಾ ತಂಡಗಳನ್ನು ನಿಯೋಜಿಸಿದೆ. ಸುಮಾರು 100 ಪ್ರವಾಹ ಪರಿಹಾರ ಶಿಬಿರಗಳನ್ನು ಸಹ ಸ್ಥಾಪಿಸಲಾಗಿದೆ.