ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಸ್ಪೈಸ್‌ಜೆಟ್‌ ಸಿಬ್ಬಂದಿಗೆ ಮೂಳೆ ಮುರಿಯುವ ರೀತಿಯಲ್ಲಿ ಹಲ್ಲೆ ಮಾಡಿದ ಸೇನಾಧಿಕಾರಿ; ವಿಡಿಯೋ ವೈರಲ್‌

ಶೇಖ್ ಉಲ್-ಆಲಮ್ ಇಂಟರ್‌ನ್ಯಾಷನಲ್ ವಿಮಾನ ನಿಲ್ದಾಣದಲ್ಲಿ ಹಿಂಸಾತ್ಮಕ ಘಟನೆಯೊಂದು ನಡೆದಿದ್ದು, ಹಿರಿಯ ಸೇನಾ ಅಧಿಕಾರಿಯೊಬ್ಬರು (Army Officer) ಸ್ಪೈಸ್‌ಜೆಟ್ ಏರ್‌ಲೈನ್ಸ್‌ನ ನಾಲ್ವರು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ನಾಲ್ವರು ಸ್ಪೈಸ್‌ಜೆಟ್ ಉದ್ಯೋಗಿಗಳಿಗೆ ಬೆನ್ನುಮೂಳೆ ಮುರಿತ ಸೇರಿದಂತೆ "ಗಂಭೀರ ಗಾಯಗಳು" ಉಂಟಾಗಿವೆ ಎಂದು ವಿಮಾನಯಾನ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಸ್ಪೈಸ್‌ಜೆಟ್‌ ಸಿಬ್ಬಂದಿ ಮೇಲೆ ಹಲ್ಲೆ; ವಿಡಿಯೋ ವೈರಲ್‌

Vishakha Bhat Vishakha Bhat Aug 3, 2025 3:42 PM

ಶ್ರೀನಗರ: ಶೇಖ್ ಉಲ್-ಆಲಮ್ ಇಂಟರ್‌ನ್ಯಾಷನಲ್ ವಿಮಾನ ನಿಲ್ದಾಣದಲ್ಲಿ ಹಿಂಸಾತ್ಮಕ ಘಟನೆಯೊಂದು ನಡೆದಿದ್ದು, ಹಿರಿಯ ಸೇನಾ ಅಧಿಕಾರಿಯೊಬ್ಬರು (Army Officer) ಸ್ಪೈಸ್‌ಜೆಟ್ ಏರ್‌ಲೈನ್ಸ್‌ನ ನಾಲ್ವರು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ನಾಲ್ವರು ಸ್ಪೈಸ್‌ಜೆಟ್ ಉದ್ಯೋಗಿಗಳಿಗೆ ಬೆನ್ನುಮೂಳೆ ಮುರಿತ ಸೇರಿದಂತೆ ಗಂಭೀರ ಗಾಯ ಉಂಟಾಗಿವೆ ಎಂದು ವಿಮಾನಯಾನ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ದೆಹಲಿಗೆ ತೆರಳುವ ಸ್ಪೈಸ್‌ಜೆಟ್ ವಿಮಾನ SG-386ರ ಬೋರ್ಡಿಂಗ್ ಸಂದರ್ಭದಲ್ಲಿ, ಹೆಚ್ಚುವರಿ ಕ್ಯಾಬಿನ್ ಸಾಮಾನು ಶುಲ್ಕಕ್ಕೆ (Viral Video) ಸಂಬಂಧಿಸಿದಂತೆ ಈ ಜಗಳ ಆರಂಭವಾಗಿತ್ತು.

ಸ್ಪೈಸ್‌ಜೆಟ್‌ನ ಪ್ರಕಾರ, ಗುಲ್ಮಾರ್ಗ್‌ನ ಹೈ ಆಲ್ಟಿಟ್ಯೂಡ್ ವಾರ್ಫೇರ್ ಶಾಲೆಯಲ್ಲಿ ನಿಯೋಜಿತರಾಗಿರುವ ಲೆಫ್ಟಿನೆಂಟ್ ಕರ್ನಲ್ ಎಂದು ಗುರುತಿಸಲಾದ ಆರೋಪಿಯು 16 ಕೆಜಿ ಕ್ಯಾಬಿನ್ ಲಗೇಜ್​​ ಹೊಂದಿದ್ದರು, ಇದು ಅನುಮತಿಸಲಾದ 7 ಕೆಜಿ ಮಿತಿಗಿಂತ ಹೆಚ್ಚಿತ್ತು. ಅದಕ್ಕಾಗಿ ಸಿಬ್ಬಂದಿ ಹೆಚ್ಚಿನ ಶುಲ್ಕವನ್ನು ಕೇಳಿದ್ದರು. ಆರೋಪಿಯು ಒಪ್ಪದೆ ಏರೋಬ್ರಿಡ್ಜ್‌ಗೆ ಬಲವಂತವಾಗಿ ಪ್ರವೇಶಿಸಿದ್ದಾರೆ, ಇದು ವಿಮಾನಯಾನ ಭದ್ರತೆಯ ನಿಯಮಗಳ ಉಲ್ಲಂಘನೆಯಾಗಿದೆ.



ಸೇನಾಧಿಕಾರಿ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದ್ದಾರೆ. ಅವರು ವಿಮಾನಯಾನ ಸಿಬ್ಬಂದಿಗೆ ಪದೇ ಪದೇ ಗುದ್ದಿದರು ಮತ್ತು ಒದ್ದರು ಮತ್ತು ಒಬ್ಬ ಸಿಬ್ಬಂದಿಯ ಮೇಲೆ ಕ್ಯೂ ಸ್ಟ್ಯಾಂಡ್‌ನಿಂದ ಹಲ್ಲೆ ನಡೆಸಿದರು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಒಬ್ಬ ಉದ್ಯೋಗಿ ನೆಲದ ಮೇಲೆ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ವಿಮಾನ ನಿಲ್ದಾಣದ ಭದ್ರತೆಯನ್ನು ನಿರ್ವಹಿಸುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿ ತಕ್ಷಣ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಭಾಯಿಸಿದರು. ಘಟನೆಯ ಬಗ್ಗೆ ಸೇನೆಯು ಗಮನ ಹರಿಸಿದೆ. ಈ ವಿಷಯವನ್ನು ಪರಿಶೀಲಿಸುತ್ತಿದ್ದು, ನಾಗರಿಕ ತನಿಖೆಗೆ ಬೆಂಬಲ ನೀಡುತ್ತಿರುವುದಾಗಿ ಅದು ಹೇಳಿದೆ.

ಈ ಸುದ್ದಿಯನ್ನೂ ಓದಿ:ಲವ್ ಜಿಹಾದ್ ಬಗ್ಗೆ ದೂರು ಕೊಟ್ಟವರ ಮೇಲೆ ಹಲ್ಲೆ: ವಿವಸ್ತ್ರಗೊಳಿಸಿ, ಬಲವಂತವಾಗಿ ಮೂತ್ರ ಕುಡಿಸಿ ಥಳಿತ

ಸ್ಪೈಸ್‌ಜೆಟ್ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಆರೋಪಿಯ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ವಿಮಾನ ನಿಲ್ದಾಣದಿಂದ ಪಡೆದು ಪೊಲೀಸರಿಗೆ ಒಪ್ಪಿಸಲಾಗಿದೆ. ಸ್ಥಳೀಯ ಪೊಲೀಸರಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿಯನ್ನು ನೋ-ಫ್ಲೈ ಲಿಸ್ಟ್‌ಗೆ ಸೇರಿಸುವ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ವಿಮಾನಯಾನ ಸಚಿವಾಲಯಕ್ಕೆ ಈ ಘಟನೆಯ ಬಗ್ಗೆ ಮಾಹಿತಿ ನೀಡಿ, ಕಠಿಣ ಕ್ರಮಕ್ಕೆ ಮನವಿ ಮಾಡಲಾಗಿದೆ.