ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಅಯ್ಯೋ.. ಇದೆಂಥಾ ಅವ್ಯವಸ್ಥೆ! ಧೋ ಅಂತಾ ಸುರಿವ ಮಳೆಯಲ್ಲೇ ಪ್ಲಾಸ್ಟಿಕ್‌ ಶೀಟ್‌ ಹಿಡಿದು ಅಂತ್ಯಕ್ರಿಯೆ- ವಿಡಿಯೊ ನೋಡಿ

Funeral held under plastic sheet: ಸರಿಯಾದ ಸ್ಮಶಾನ ಸ್ಥಳವಿಲ್ಲದ ಕಾರಣ ಮಹಿಳೆಯೊಬ್ಬರ ಅಂತ್ಯಕ್ರಿಯೆಯನ್ನು ಪ್ಲಾಸ್ಟಿಕ್ ಹಾಳೆಯ ಅಡಿಯಲ್ಲಿ ನಡೆಸಲಾಗಿದೆ. ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಹೆಣ ಸುಡೋಕೆ ಸ್ಮಶಾನ ಇಲ್ಲ... ಈ ಜನ ಮಾಡಿದ್ದೇನು ಗೊತ್ತಾ?

Priyanka P Priyanka P Jul 28, 2025 4:41 PM

ಛತ್ತರ್‌ಪುರ: ಈ ಊರಿನಲ್ಲಿ ಸತ್ತರೆ ಅಂತ್ಯಕ್ರಿಯೆಗೆ ಸರಿಯಾದ ಸ್ಮಶಾನ ಇಲ್ಲ... ಹೀಗಾಗಿ ಈ ಊರಿನ ಜನ ಪಾಡು ಹೇಳತೀರದು. ಭಾರೀ ಮಳೆಗೆ ಪ್ಲಾಸ್ಟಿಕ್‌ ಕವರ್‌ ಒಂದನ್ನು ಹಿಡಿದು ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿರುವ ಹೃದಯವಿದ್ರಾವಕ ಘಟನೆಯೊಂದು ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಲವಕುಶನಗರ ಜನಪದ್ ಪಂಚಾಯತ್ ವ್ಯಾಪ್ತಿಯ ಮದ್ವಾ ಗ್ರಾಮದಲ್ಲಿ, ಸರಿಯಾದ ಸ್ಮಶಾನ ಸ್ಥಳವಿಲ್ಲದ ಕಾರಣ ಮಹಿಳೆಯೊಬ್ಬರ ಅಂತ್ಯಕ್ರಿಯೆಯನ್ನು ಪ್ಲಾಸ್ಟಿಕ್ ಶೀಟ್‌ ಅಡಿಯಲ್ಲಿ ನಡೆಸಲಾಗಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್(Viral Video) ಆಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿನ ಮೂಲಸೌಕರ್ಯಗಳ ಕಳಪೆ ಸ್ಥಿತಿಯ ಬಗ್ಗೆ ಕಳವಳ ಉಂಟುಮಾಡಿದೆ.

ವಿಡಿಯೊ ವೀಕ್ಷಿಸಿ:



ವರ್ಷಗಳ ಭರವಸೆಗಳ ಹೊರತಾಗಿಯೂ, ಗ್ರಾಮವು ಇನ್ನೂ ಸರಿಯಾದ ದಹನ ಸ್ಥಳದಂತಹ ಮೂಲಭೂತ ಸೌಲಭ್ಯಗಳ ಕೊರತೆಯನ್ನು ಹೊಂದಿದೆ. ಇದು ಗ್ರಾಮಸ್ಥರ ಬೇಸರಕ್ಕೆ ಕಾರಣವಾಗಿದೆ.

ಮೊದಲ ಪ್ರಕರಣವಲ್ಲ

ಇಂತಹ ಆತಂಕಕಾರಿ ಘಟನೆ ವರದಿಯಾಗುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು, ಜುಲೈ 5 ರಂದು, ಸೈಲಾನಾ ಜಿಲ್ಲೆಯ ನಿವಾಸಿಗಳು ಮಳೆಯ ನಡುವೆಯೂ ಹಳೆಯ ಟೈರ್‌ಗಳು, ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಪೆಟ್ರೋಲ್ ಬಳಸಿ ಶವವನ್ನು ತೆರೆದ ಸ್ಥಳದಲ್ಲಿ ಅಂತ್ಯಕ್ರಿಯೆ ಮಾಡಿದ್ದರು.

ಈ ಸುದ್ದಿಯನ್ನೂ ಓದಿ: Viral Video: ಪಾರಿವಾಳದ ಜೀವ ಉಳಿಸಲು ಈ ಬಾಲಕ ಮಾಡಿದ್ದೇನು ಗೊತ್ತಾ? ಹೃದಯವಿದ್ರಾವಕ ವಿಡಿಯೊ ವೈರಲ್

ಜುಲೈ 21 ರಂದು, ನೀಮಚ್ ಗ್ರಾಮಸ್ಥರು ಶವವನ್ನು ಸಾಗಿಸಲು ಬಹಳ ಕಷ್ಟಪಟ್ಟಿದ್ದಾರೆ. ಕೆಸರು ಮತ್ತು ನೀರು ತುಂಬಿದ ಹಾದಿಯಲ್ಲಿ ಶವವನ್ನು ಸಾಗಿಸಿದ್ದಾರೆ. ಇಂತಹ ಘಟನೆಗಳು ಮತ್ತೆ ಸಂಭವಿಸದಂತೆ ಅಧಿಕಾರಿಗಳು ತಕ್ಷಣ ಗಮನಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.