ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಆಡುತ್ತಿರುವಾಗಲೇ ಪ್ರಾಣ ಕಸಿದ ಜವರಾಯ! ಏಕಾಏಕಿ ಕುಸಿದು ಬಿದ್ದು ಯುವಕ ಸಾವು- ವಿಡಿಯೊ ಇದೆ

Heart Attack: ಬ್ಯಾಡ್ಮಿಂಟನ್ ಆಡುತ್ತಿದ್ದ 25 ವರ್ಷದ ಯುವಕನೊಬ್ಬ ಹೃದಯಾಘಾತದಿಂದ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಸ್ನೇಹಿತರ ಜೊತೆ ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಯುವಕ ಕುಸಿದುಬಿದ್ದಿದ್ದಾನೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಯುವಕನನ್ನು 25 ವರ್ಷದ ಗುಂಡ್ಲಾ ರಾಕೇಶ್ ಎಂದು ಗುರುತಿಸಲಾಗಿದೆ.

ಆಡುತ್ತಿರುವಾಗಲೇ ಏಕಾಏಕಿ ಕುಸಿದು ಬಿದ್ದು ಯುವಕ ಸಾವು- ವಿಡಿಯೊ ನೋಡಿ

Priyanka P Priyanka P Jul 28, 2025 4:58 PM

ಹೈದರಾಬಾದ್: ಆಡುತ್ತಿರುವಾಗ, ಜಿಮ್‌ ಮಾಡುತ್ತಿರುವಾಗ ಹಠಾತ್ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದ. ಇದೀಗ ಮತ್ತೊಂದು ಇದೇ ರೀತಿಯ ದುರ್ಘಟನೆ ಸಂಭವಿಸಿದ್ದು, ಬ್ಯಾಡ್ಮಿಂಟನ್ ಆಡುತ್ತಿದ್ದ 25 ವರ್ಷದ ಯುವಕನೊಬ್ಬ ಹೃದಯಾಘಾತದಿಂದ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಹೈದರಾಬಾದ್‌ನ ಉಪ್ಪಲ್ ಕ್ರೀಡಾಂಗಣದಲ್ಲಿ ಯುವಕ ಮೃತಪಟ್ಟಿದ್ದಾನೆ. ಮೃತ ಯುವಕನನ್ನು 25 ವರ್ಷದ ಗುಂಡ್ಲಾ ರಾಕೇಶ್ ಎಂದು ಗುರುತಿಸಲಾಗಿದೆ. ಒಳಾಂಗಣ ಕೋರ್ಟ್‌ಗಳಲ್ಲಿ ಒಂದರಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಯುವಕ ಕುಸಿದುಬಿದ್ದಿದ್ದಾನೆ. ಈ ದೃಶ್ಯ ಕ್ಯಾಮರಾದಲ್ಲಿ(Viral Video) ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿದೆ.

ವಿಡಿಯೊ ಇಲ್ಲಿದೆ:



ಯುವಕ ರಾಕೇಶ್ ಕುಸಿದುಬಿದ್ದ ಕೂಡಲೇ ಆತನ ಸಹ ಆಟಗಾರರು ಮತ್ತು ಸ್ನೇಹಿತರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಆತ ಮೃತಪಟ್ಟಿರುವ ಬಗ್ಗೆ ವೈದ್ಯರು ಘೋಷಿಸಿದ್ದಾರೆ. ಮೃತ ವ್ಯಕ್ತಿ, ಖಮ್ಮಂ ಜಿಲ್ಲೆಯ ತಲ್ಲಡದ ಮಾಜಿ ಉಪ ಸರಪಂಚ್ ಗುಂಡ್ಲಾ ವೆಂಕಟೇಶ್ವರಲು ಅವರ ಪುತ್ರ ಎನ್ನಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಈ ಸುದ್ದಿಯನ್ನೂ ಓದಿ: Actor Pratham: ತಮ್ಮ ಮೇಲೆ ಹಲ್ಲೆ ನಡೆದಿದ್ದು ನಿಜ ಎಂದ ನಟ ಪ್ರಥಮ್‌; ಆಡಿಯೋ ವೈರಲ್‌, ಲಾಯರ್‌ ಜಗದೀಶ್‌ ವಿರುದ್ಧ ಕಿಡಿ

ರಾಕೇಶ್, ಹೈದರಾಬಾದ್‌ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಪ್ರತಿದಿನ ಶಟಲ್ ಕ್ವಾಕ್ ಆಡುವ ಅಭ್ಯಾಸವಿತ್ತು. ಎಂದಿನಂತೆ ಭಾನುವಾರ ರಾತ್ರಿ ಸ್ನೇಹಿತರ ಜೊತೆ ಆಟವಾಡುತ್ತಿದ್ದಾಗ ಅವರಿಗೆ ಹೃದಯಾಘಾತವಾಗಿ ಕುಸಿದುಬಿದ್ದಿದ್ದಾರೆ. ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಇತ್ತೀಚೆಗೆ ಹೃದಯಾಘಾತದಿಂದ ಯುವಜನತೆ ಹೆಚ್ಚು ಮೃತಪಡುತ್ತಿರುವುದು ತೀವ್ರ ಕಳವಳ ಮೂಡಸಿದೆ. ಕರ್ನಾಟಕದಲ್ಲಿ ಅದರಲ್ಲೂ ಹಾಸನ ಜಿಲ್ಲೆಯಲ್ಲಿ 40 ವರ್ಷದೊಳಗಿನ ಹಲವು ಯುವಕರು ಹೃದಯಾಘಾತದಿಂದ ಮೃತಪಟ್ಟ ಘಟನೆ ತೀವ್ರ ಆತಂಕಕ್ಕೆ ಕಾರಣವಾಗಿತ್ತು.