ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಅನ್‌ ವಾಂಟೆಡ್‌ ಹೇರ್‌... ವ್ಯಾಕ್ಸಿಂಗ್‌ ಮಾಡಿ ಬೇಸತ್ತಿದ್ದೀರಾ? ಇನ್ಮುಂದೆ ಇಂತಹ ಸಮಸ್ಯೆ ಇರೋದೇ ಇಲ್ವಂತೆ!

Unwanted Body Hairs: ಅನಗತ್ಯ ಕೂದಲನ್ನು ತೆಗೆಯಲು ವ್ಯಾಕ್ಸಿಂಗ್ ಮಾಡುವುದು ಬಹಳ ತ್ರಾಸದಾಯಕ ಕೆಲಸ. ಇದರಿಂದ ಬಹಳ ನೋವಾಗುತ್ತದೆ. ಆದರೂ, ಎಲ್ಲರೂ ವ್ಯಾಕ್ಸಿಂಗ್ ಮೊರೆ ಹೋಗುವುದು ಸಾಮಾನ್ಯ. ಆದರೆ, ಭವಿಷ್ಯದಲ್ಲಿ ದೇಹದ ಅನಗತ್ಯ ಕೂದಲು ಸಂಪೂರ್ಣ ಕಣ್ಮರೆಯಾಗಬಹುದು ಎಂಬ ಬಗ್ಗೆ ಇನ್ಸ್ಟಾಗ್ರಾಂ ರೀಲ್ಸ್‌ವೊಂದು ವೈರಲ್ ಆಗಿದೆ.

ದೇಹದಲ್ಲಿ ಇನ್ಮುಂದೆ ಅನ್‌ ವಾಂಟೆಡ್‌ ಹೇರ್‌ ಇರೋದೇ ಇಲ್ವಂತೆ!

Priyanka P Priyanka P Aug 22, 2025 2:05 PM

ನವದೆಹಲಿ: ದೇಹದಲ್ಲಿರುವ ಅನಗತ್ಯ ಕೂದಲನ್ನು ತೆಗೆಯಲು ಅನೇಕರು ವ್ಯಾಕ್ಸಿಂಗ್ (waxing) ಮೊರೆ ಹೋಗುತ್ತಾರೆ. ಆದರೆ, ಈ ವ್ಯಾಕ್ಸಿಂಗ್ ಮಾಡುವುದು ಬಹಳ ತ್ರಾಸದಾಯಕ, ತುಂಬಾ ನೋವಾಗುತ್ತದೆ. ಆದರೆ, ಭವಿಷ್ಯದ ಪೀಳಿಗೆಗೆ ಒಂದೊಳ್ಳೆ ಸುದ್ದಿ ಇದೆ. ಅದೇನೆಂದರೆ ಅನಗತ್ಯ ಕೂದಲು ಕ್ರಮೇಣ ಕಣ್ಮರೆಯಾಗುತ್ತದೆಯಂತೆಯ ಹೀಗಂತ ಕಂಟೆಂಟ್ ಕ್ರಿಯೇಟರ್ ಸ್ಯಾಮ್ ಬೆರೆಸ್ ಎಂಬುವವರು ಇನ್ಸ್ಟಾಗ್ರಾಂ ರೀಲ್‍ನಲ್ಲಿ (Instagram reel) ತಿಳಿಸಿದ್ದಾರೆ. ಈ ವಿಡಿಯೊ ಇದೀಗ ಭಾರಿ ವೈರಲ್ (Viral Video) ಆಗಿದೆ.

"ದೇಹದ ಕೆಲವು ಭಾಗಗಳು ಕಣ್ಮರೆಯಾಗುತ್ತಿವೆ, ಆದ್ದರಿಂದ ಅವು ಇರುವವರೆಗೂ ಅವುಗಳನ್ನು ಆನಂದಿಸಿ" ಎಂದು ಬೆರೆಸ್ ಹೇಳಿದ್ದಾರೆ. ಕಾಲಾನಂತರದಲ್ಲಿ ನಮ್ಮ ಅಂಗರಚನಾಶಾಸ್ತ್ರ ಎಷ್ಟು ಬದಲಾಗುತ್ತಿದೆ ಎಂಬುದನ್ನು ಅವರು ಎತ್ತಿ ತೋರಿಸುತ್ತಾರೆ. ಈ ಬಗ್ಗೆ ಉದಾಹರಣೆ ಸಹಿತ ವಿವರಿಸಿದ ಅವರು ಬುದ್ಧಿ ಹಲ್ಲುಗಳು ವಿಶ್ವಾದ್ಯಂತ ಹಲವು ಜನರಲ್ಲಿ ಕಣ್ಮರೆಯಾಗುತ್ತಿದೆ. ಇಂದು ಜನಿಸಿದ ಮಕ್ಕಳಲ್ಲಿ ಶೇ. 35ರಷ್ಟು ಮಂದಿಗೆ ಈ ಬುದ್ಧಿ ಹಲ್ಲುಗಳು ಹುಟ್ಟುತ್ತಲೇ ಇಲ್ಲ. ಆಹಾರದಲ್ಲಿನ ಬದಲಾವಣೆಗಳಿಂದಾಗಿ ನಮ್ಮ ದವಡೆಗಳು ಚಿಕ್ಕದಾಗುತ್ತಿರುವುದೇ ಇದಕ್ಕೆ ಕಾರಣ. 10 ರಿಂದ 20,000 ವರ್ಷಗಳಲ್ಲಿ ಪೂರ್ಣ ಕಣ್ಮರೆಯಾಗುತ್ತದೆ” ಎಂದು ಬೆರೆಸ್ ಹೇಳಿದ್ದಾರೆ.

ವಿಡಿಯೊ ವೀಕ್ಷಿಸಿ:

ಕ್ಷೀಣಿಸುತ್ತಿರುವ ದೇಹದ ಮತ್ತೊಂದು ಭಾಗವೆಂದರೆ ಅಪೆಂಡಿಕ್ಸ್. ಒಂದು ಕಾಲದಲ್ಲಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಈಗ ಅದು ಹೆಚ್ಚಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬೆರೆಸ್ ಹೇಳಿದ್ದಾರೆ. ಪ್ರತಿ ವರ್ಷ 10 ಮಿಲಿಯನ್ ಜನರು ಅವುಗಳನ್ನು ತೆಗೆದುಹಾಕುತ್ತಿದ್ದಾರೆ. ಉಷ್ಣತೆ ಮತ್ತು ಮರೆಮಾಚುವಿಕೆಗೆ ಬಹಳ ಕಾಲ ಅಗತ್ಯವೆಂದು ಪರಿಗಣಿಸಲಾದ ದೇಹದ ಕೂದಲು ಕೂಡ ನಿಧಾನವಾಗಿ ಮರೆಯಾಗುತ್ತಿದೆ. ಸುಮಾರು 20,000 ವರ್ಷಗಳಲ್ಲಿ ನಾವು ಅದನ್ನು ಕಳೆದುಕೊಳ್ಳುವ ನಿರೀಕ್ಷೆಯಿದೆ ಎಂದು ಬೆರೆಸ್ ಹೇಳಿದ್ದಾರೆ. ಅಂದರೆ ಭವಿಷ್ಯದಲ್ಲಿ ಮನುಷ್ಯರು ಶಾಶ್ವತವಾಗಿ ನಯವಾದ ಚರ್ಮವನ್ನು ಹೊಂದಬಹುದು. ಪ್ರತಿ ಪೀಳಿಗೆಯೊಂದಿಗೆ ಸಣ್ಣ ಕಾಲ್ಬೆರಳುಗಳು ಕುಗ್ಗುತ್ತಿವೆ ಎಂದು ಹೇಳಿದ್ರು.

ಸುಮಾರು ಶೇ. 10ರಷ್ಟು ಜನರಲ್ಲಿ ಕಂಡುಬರುವ ಕಿವಿಯ ಮೇಲ್ಭಾಗದಲ್ಲಿ ಸ್ವಲ್ಪ ಮಡಿಕೆಯಂತಿರುವ ಭಾಗವು ಸುಮಾರು 100,000 ವರ್ಷಗಳಲ್ಲಿ ಕಣ್ಮರೆಯಾಗುವ ಸಾಧ್ಯತೆಯಿದೆ ಎಂದು ಬೆರೆಸ್ ವಿವರಿಸಿದ್ದಾರೆ. ವಿಕಾಸವು ನಿರಂತರವಾಗಿದೆ. ಈ ಬದಲಾವಣೆಗಳಿಗೆ ನಮ್ಮ ದೇಹವು ಯಾವಾಗಲೂ ಹೊಂದಿಕೊಳ್ಳುತ್ತಿರುತ್ತವೆ ಎಂಬುದನ್ನು ನೆನಪಿಸುತ್ತವೆ. ಆದ್ದರಿಂದ, ಮುಂದಿನ ಬಾರಿ ನೀವು ವ್ಯಾಕ್ಸಿಂಗ್ ಅಥವಾ ಸಣ್ಣ ಕಾಲ್ಬೆರಳುಗಳ ಬಗ್ಗೆ ಚಿಂತೆ ಮಾಡುವಾಗ, ಭವಿಷ್ಯದಲ್ಲಿ ಮನುಷ್ಯರು ಇದರ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಬೆರೆಸ್ ಹೇಳಿದರು.

ಇದನ್ನೂ ಓದಿ: Viral Post: ಈ ವಯಸ್ಸಲ್ಲಿ ಇದೆಲ್ಲಾ ಬೇಕಿತ್ತಾ!? ಮಕ್ಕಳಂತೆ ಆಡಲು ಜಾರುಬಂಡಿ ಆಡಲು ಹೋಗಿ ಪೇಚಿಗೆ ಸಿಲುಕಿದ ಭೂಪ