ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tirupati Temple: ತಿರುಪತಿ ತಿರುಮಲ ದೇಗುಲಕ್ಕೆ ಬರೋಬ್ಬರಿ 121 ಕೆಜಿ ಚಿನ್ನ ದಾನ ಮಾಡಿದ ಉದ್ಯಮಿ

ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಗೆ ಒಬ್ಬ ಪ್ರಮುಖ ಕೈಗಾರಿಕೋದ್ಯಮಿ 121 ಕಿಲೋಗ್ರಾಂ ಚಿನ್ನ ದಾನ ಮಾಡಿದ್ದಾರೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಘೋಷಿಸಿದ್ದಾರೆ. ಈ ದಾನವು ತಿರುಮಲ ತಿರುಪತಿ ದೇವಸ್ಥಾನ ಶಿಕ್ಷಣ, ಆರೋಗ್ಯ ಮತ್ತು ಇತರ ಕಲ್ಯಾಣ ಕಾರ್ಯಕ್ರಮಗಳನ್ನು ನಡೆಸಲು ದೊಡ್ಡ ನೆರವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ತಿಮ್ಮಪ್ಪನಿಗೆ 121 ಕೆಜಿ ಚಿನ್ನ ದೇಣಿಗೆ ನೀಡಿದ ಉದ್ಯಮಿ

ತಿರುಮಲ

Profile Sushmitha Jain Aug 22, 2025 8:14 PM

ತಿರುಪತಿ: ತಿರುಮಲದ (Tirumala) ಶ್ರೀ ವೆಂಕಟೇಶ್ವರ ಸ್ವಾಮಿಗೆ (Lord Venkateswara) ಒಬ್ಬ ಪ್ರಮುಖ ಕೈಗಾರಿಕೋದ್ಯಮಿ 121 ಕಿಲೋಗ್ರಾಂ ಚಿನ್ನ ದಾನ ಮಾಡಿದ್ದಾರೆ ಎಂದು ಆಂಧ್ರಪ್ರದೇಶದ (Andhra Pradesh) ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ಘೋಷಿಸಿದ್ದಾರೆ. ಈ ದಾನವು ತಿರುಮಲ ತಿರುಪತಿ ದೇವಸ್ಥಾನ (Tirumala Tirupati Devasthanam) ಶಿಕ್ಷಣ, ಆರೋಗ್ಯ ಮತ್ತು ಇತರ ಕಲ್ಯಾಣ ಕಾರ್ಯಕ್ರಮಗಳನ್ನು ನಡೆಸಲು ದೊಡ್ಡ ನೆರವಾಗಲಿದೆ ಎಂದು ಅವರು ತಿಳಿಸಿದ್ದಾರೆ.

‘ಎಕ್ಸ್’ ಪೋಸ್ಟ್‌ನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ಸಿಎಂ ಚಂದ್ರಬಾಬು ನಾಯ್ಡು, ಪಿಫೋರ್ (P4) ಕಾರ್ಯಕ್ರಮಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾದದ್ದಕ್ಕೆ ತೃಪ್ತಿ ವ್ಯಕ್ತಪಡಿಸಿದರು. ಭಾರತೀಯ ಸಂಸ್ಕೃತಿಯು “ಪರೋಪಕಾರಂ ಪರಮಂ ಧರ್ಮಃ” ಎಂಬ ತತ್ವವನ್ನು ಒತ್ತಿಹೇಳುತ್ತದೆ, ಅಂದರೆ ಇತರರಿಗೆ ಸೇವೆ ಸಲ್ಲಿಸುವುದೇ ಉನ್ನತ ಧರ್ಮ ಎಂದು ಅವರು ಹೇಳಿದರು. ಶ್ರೀಮಂತಿಕೆಯಿಂದ ನಿಜವಾದ ಸಂತೋಷವು ಸಂಪಾದನೆಯಿಂದ ಬರುವುದಿಲ್ಲ, ಬದಲಿಗೆ ಸಮಾಜಕ್ಕೆ ದಾನ ಮಾಡುವುದರಿಂದ ಬರುತ್ತದೆ ಎಂದು ಅವರು ಒತ್ತಿ ಹೇಳಿದರು. ತಮ್ಮ ಹಿಂದಿನ ಜನ್ಮಭೂಮಿ ಕಾರ್ಯಕ್ರಮವನ್ನು ಸ್ಮರಿಸಿದ ಅವರು, ಎಲ್ಲರ ಒಳಿತಿಗಾಗಿ ಬದಲಾವಣೆ ತರುವ ದೃಷ್ಟಿಯಿಂದ ಅದನ್ನು ಆರಂಭಿಸಲಾಗಿತ್ತು ಎಂದರು.

ಈ ಸುದ್ದಿಯನ್ನು ಓದಿ: Viral Video: ದೆಹಲಿ ರಸ್ತೆಯಲ್ಲಿ ಹೃದಯ ಬಿದ್ದಿದೆ, ವೈರಲ್‌ ಆಯ್ತು ಪೋಸ್ಟ್‌; ಏನಿದರ ಅಸಲಿಯತ್ತು?

“ಶ್ರೀ ವೆಂಕಟೇಶ್ವರನ ಭಕ್ತರೊಬ್ಬರು, ತನ್ನ ಕಂಪನಿಯನ್ನು ಸ್ಥಾಪಿಸಿ ದೊಡ್ಡ ಯಶಸ್ಸು ಗಳಿಸಿದ್ದು, ಇತ್ತೀಚೆಗೆ ತನ್ನ ಕಂಪನಿಯ ಶೇ.60ರ ಷೇರುಗಳನ್ನು ಮಾರಾಟ ಮಾಡಿ ಸುಮಾರು 6,000–7,000 ಕೋಟಿ ರೂ. ಗಳಿಸಿದ್ದಾರೆ ತನ್ನ ಎಲ್ಲ ಸಂಪತ್ತನ್ನು ದೇವರ ಕೃಪೆಯಿಂದಲೇ ಪಡೆದಿದ್ದೇನೆ ಎಂದು ನಂಬಿದ ಆ ಭಕ್ತ, ಕೃತಜ್ಞತೆಯ ಸಂಕೇತವಾಗಿ 121 ಕಿಲೋಗ್ರಾಂ ಚಿನ್ನವನ್ನು ದಾನ ಮಾಡಲು ನಿರ್ಧರಿಸಿದ್ದಾರೆ” ಎಂದರು. ಆದರೆ, ದಾನಿಯ ಗುರುತನ್ನು ಅವರು ಬಹಿರಂಗಪಡಿಸಲಿಲ್ಲ.

ತಿರುಮಲದಲ್ಲಿ ದಾಖಲೆಯ ಲಡ್ಡು ಪ್ರಸಾದ ಮಾರಾಟ

ಇದೇ ವೇಳೆ, ತಿರುಮಲದಲ್ಲಿ ಜುಲೈ 12 ರಂದು ಒಂದೇ ದಿನದಲ್ಲಿ 4,86,134 ಲಡ್ಡುಗಳು ಮಾರಾಟವಾಗಿ ದಾಖಲೆ ಸೃಷ್ಟಿಯಾಗಿದ್ದು, ಇದು ಕಳೆದ ವರ್ಷದ ಇದೇ ದಿನದ 3.24 ಲಕ್ಷ ಲಡ್ಡುಗಳಿಗಿಂತ ಶೇ.35ರಷ್ಟು ಹೆಚ್ಚಾಗಿದೆ. ಈ ಒಂದು ದಿನದ ಮಾರಾಟದಿಂದ 2.43 ಕೋಟಿ ರೂ. ಆದಾಯ ದೊರೆಯಿತು. ಜುಲೈ 2024 ರಲ್ಲಿ ಟಿಟಿಡಿ 1.04 ಕೋಟಿ ಲಡ್ಡುಗಳನ್ನು ತಯಾರಿಸಿತ್ತು, ಆದರೆ ಈ ವರ್ಷ 1.25 ಕೋಟಿ ಲಡ್ಡುಗಳನ್ನು ಉತ್ಪಾದಿಸಿ, 1.24 ಕೋಟಿ ಮಾರಾಟ ಮಾಡಿತು. ಭಕ್ತರ ದಟ್ಟಣೆಗೆ ತಕ್ಕಂತೆ, ಟಿಟಿಡಿ 4 ಲಕ್ಷ ಲಡ್ಡುಗಳ ಬಫರ್ ಸ್ಟಾಕ್ ಅನ್ನು ಕಾಯ್ದಿರಿಸಿತ್ತು.