ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಛತ್ತೀಸ್‍ಗಢದಲ್ಲಿ ನಡೆಯಿತು ಪವಾಡ; ಭಕ್ತರಿಗೆ ಕೈಯಾರೆ ಲಡ್ಡು ನೀಡಿ ಆಶೀರ್ವದಿಸಿದ ಗಣೇಶ; ಇಲ್ಲಿದೆ ವಿಡಿಯೊ

Ganesh Idol Gives Laddu: ಗಣೇಶ ವಿಗ್ರಹವು ಭಕ್ತರಿಗೆ ತನ್ನ ಕೈಯಾರೆ ಲಡ್ಡುಗಳನ್ನು ನೀಡಿರುವ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಭಕ್ತರು ಗಣಪತಿಯ ಪವಿತ್ರ ವಾಹನ ಮೂಷಿಕನಿಗೆ ಏಲಕ್ಕಿಯನ್ನು ತಿನ್ನಿಸಿದ್ದಾರೆ. ಕೆಲವೇ ಸೆಕೆಂಡುಗಳಲ್ಲಿ, ಗಣಪತಿ ವಿಗ್ರಹದ ಕೈಯಿಂದ ಲಡ್ಡುಗಳು ಹೊರಬಂದಿವೆ.

ಭಕ್ತರಿಗೆ ಕೈಯಾರೆ ಲಡ್ಡು ನೀಡಿ ಆಶೀರ್ವದಿಸಿದ ಗಣೇಶ

-

Priyanka P Priyanka P Aug 30, 2025 8:54 PM

ರಾಯ್‌ಪುರ: ಗಣೇಶ ಹಬ್ಬವನ್ನು (Ganesh festival) ದೇಶದೆಲ್ಲೆಡೆ ವಿಜೃಂಭಣೆಯಿಂದ ಆಚರಿಸಲಾಯಿತು. ಇದೀಗ ಗಣಪತಿ ವಿಗ್ರಹವೊಂದು ಒಂದು ವಿಶಿಷ್ಟ ಕಾರಣಕ್ಕಾಗಿ ವೈರಲ್ ಆಗಿದೆ. ಛತ್ತೀಸ್‍ಗಢದ ರಾಯ್‌ಪುರದಲ್ಲಿರುವ ಫೂಲ್ ಚೌಕ್ ಬಧೈ ಪಾರಾ ರಸ್ತೆಯಲ್ಲಿ ಈ ವಿಶೇಷ ಘಟನೆ ನಡೆದಿದೆ. ಗಣೇಶ ತನ್ನ ಭಕ್ತರಿಗೆ ಲಡ್ಡು (Laddu)ಗಳನ್ನು ಕೊಟ್ಟಿದ್ದಾನೆ. ಸಾಮಾಜಿಕ ಮಾಧ್ಯಮದಲ್ಲಿ ಇದರ ವಿಡಿಯೊ ಭಾರಿ ವೈರಲ್ (Viral Video) ಆಗಿದೆ.

ಭಕ್ತರು ಗಣಪತಿಯ ಪವಿತ್ರ ವಾಹನ ಮೂಷಿಕನಿಗೆ ಏಲಕ್ಕಿಯನ್ನು ತಿನ್ನಿಸಿದ್ದಾರೆ. ಕೆಲವೇ ಸೆಕೆಂಡುಗಳಲ್ಲಿ, ಗಣಪತಿ ವಿಗ್ರಹದ ಕೈಯಿಂದ ಲಡ್ಡುಗಳು ಹೊರಬಂದಿವೆ. ಈ ದೃಶ್ಯವು ಮಕ್ಕಳು ಮತ್ತು ವಯಸ್ಕರನ್ನು ಬೆರಗುಗೊಳಿಸಿದೆ. ಗಣೇಶ ಸ್ವತಃ ಪ್ರಸಾದವನ್ನು ಕೊಟ್ಟಿದ್ದಾನೆ ಎಂದು ಹಲವರು ಖುಷಿಪಟ್ಟಿದ್ದಾರೆ. ಇನ್ನು ಮಕ್ಕಳ ಸಂತೋಷಕ್ಕಂತೂ ಪಾರವೇ ಇರಲಿಲ್ಲ. ಮಕ್ಕಳಿಗೆ ಗಣಪತಿ ಬಪ್ಪಾ ಎಂದರೆ ಬಹಳ ಇಷ್ಟ. ಹಲವೆಡೆಗಳಲ್ಲಿ ಮಕ್ಕಳು ಅವನನ್ನು ಪೂಜಿಸುತ್ತಾರೆ. ಇನ್ನು ಗಣಪ ಲಡ್ಡು ಪ್ರಸಾದ ಕೊಡುತ್ತಾನೆಂದರೆ ಕೇಳಬೇಕಾ? ಅವರ ಸಂಭ್ರಮ ಹೆಚ್ಚಿತ್ತು.

ಒಂದು ವೈರಲ್ ವಿಡಿಯೊದಲ್ಲಿ, ಗಣಪತಿಯ ಕೈಯಿಂದ ನೇರವಾಗಿ ಲಡ್ಡುವನ್ನು ಪಡೆಯುವಾಗ ಒಬ್ಬ ಪುಟ್ಟ ಹುಡುಗ ಸಂತೋಷದಿಂದ ಜಿಗಿಯುವುದನ್ನು ಕಾಣಬಹುದು. ಅವನ ಖುಷಿಯ ಕ್ಷಣವು, ಹಬ್ಬದ ಆಚರಣೆಯ ಸಂಭ್ರವಮನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ. ಬಾಲಕನ ಮುಗ್ಧತೆಯನ್ನು ನೆಟ್ಟಿಗರು ನೋಡಿ ಭಾವುಕರಾಗಿದ್ದಾರೆ. ಈ ದೈವಿಕ ಅನುಭವವು ಗಣೇಶನ ದರ್ಶನವನ್ನು ವಿಶೇಷವಾಗಿಸುತ್ತದೆ ಎಂದು ಭಕ್ತರು ಹೇಳಿದ್ದಾರೆ.

ವಿಡಿಯೊ ವೀಕ್ಷಿಸಿ:

ಮಕ್ಕಳು ಇದನ್ನು ಪವಾಡ ಎಂದು ಕರೆಯಬಹುದಾದರೂ, ವಾಸ್ತವವೆಂದರೆ ವಿಗ್ರಹದೊಳಗೆ ಯಾಂತ್ರಿಕ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ. ಪ್ರತಿ ಬಾರಿ ಭಕ್ತರು ಮೂಷಿಕನಿಗೆ ಆಹಾರವನ್ನು ನೀಡಿದಾಗ, ಒಂದು ಟ್ರಿಗ್ಗರ್ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ. ಅದು ಗಣಪತಿಯ ಅಂಗೈ ಮೂಲಕ ನಿಧಾನವಾಗಿ ಒಂದು ಲಡ್ಡನ್ನು ಹೊರತರುತ್ತದೆ. ಇದು ಗಣೇಶ ಸ್ವತಃ ಭಕ್ತರಿಗೆ ಪ್ರಸಾದವನ್ನು ನೀಡುತ್ತಿದ್ದಾರೆ ಎಂಬ ಭ್ರಮೆಯನ್ನು ನೀಡುತ್ತದೆ.

ಮಕ್ಕಳ ನಗುವಿನಿಂದ ಹಿಡಿದು ವಿಶಿಷ್ಟ ರೀತಿಯಲ್ಲಿ ಪ್ರಸಾದವನ್ನು ಸ್ವೀಕರಿಸುವ ಸಂತೋಷದವರೆಗೆ, ಈ ವಿಗ್ರಹವು ಸಂಪ್ರದಾಯ ಮತ್ತು ಕಲ್ಪನೆಯು ಹೇಗೆ ಒಟ್ಟಿಗೆ ಸೇರಿ ಹಬ್ಬಗಳನ್ನು ಸ್ಮರಣೀಯವಾಗಿಸಬಹುದು ಎಂಬುದನ್ನು ತೋರಿಸಿದೆ.

ವಿಡಿಯೊ ವೀಕ್ಷಿಸಿ:

ಇದನ್ನೂ ಓದಿ: Father’s Clever Trick: ಮಗನಿಗಾಗಿ ತಂದೆ ಮಾಡಿದ್ದೇನು ಗೊತ್ತೆ? ಶಾಲೆಗೆ ಕಳುಹಿಸಲು ಇದಕ್ಕಿಂತ ಒಳ್ಳೆಯ ಐಡಿಯಾ ಬೇಕಾ?