Viral Video: ಅಬ್ಬಾ... ಎಂಥಾ ಭೀಕರ ದೃಶ್ಯ! ತುಂಬಿ ತುಳುಕುತ್ತಿರುವ ರೈಲಿನಲ್ಲಿ ಈ ಯುವತಿ ಬದುಕುಳಿದಿದ್ದೇ ಒಂದು ಪವಾಡ
Girl struggles to breathe: ಕಿಕ್ಕಿರಿದ ರೈಲಿನ ಎರಡನೇ ದರ್ಜೆಯ ಬೋಗಿಯಲ್ಲಿ ಯುವತಿಯೊಬ್ಬಳಿಗೆ ಉಸಿರುಗಟ್ಟುತ್ತಿರುವ ಆಘಾತಕಾರಿ ವಿಡಿಯೊ ವೈರಲ್ ಆಗಿದೆ. ಭಾರತದಲ್ಲಿ ಹಬ್ಬದ ವೇಳೆ ಪ್ರಯಾಣದ ದಟ್ಟಣೆಯ ಸಮಯದಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ಜನಸಂದಣಿ ನಿಯಂತ್ರಣದಲ್ಲಿ ತುರ್ತು ಸುಧಾರಣೆಗಳಿಗೆ ಇದು ಮತ್ತೆ ಕರೆ ನೀಡಿದೆ. ಅನೇಕ ಜನರು ನಕ್ಕಿದ್ದಲ್ಲದೆ, ಆಕೆಯನ್ನು ಅಪಹಾಸ್ಯ ಮಾಡಿದರು ಹಾಗೂ ಅವಳ ಪರಿಸ್ಥಿತಿಯನ್ನು ಚಿತ್ರೀಕರಿಸಿದ್ದಾರೆ.


ನವದೆಹಲಿ: ಕಿಕ್ಕಿರಿದ ರೈಲಿನ ಎರಡನೇ ದರ್ಜೆಯ ಬೋಗಿಯಲ್ಲಿ ಯುವತಿಯೊಬ್ಬಳಿಗೆ ಉಸಿರುಗಟ್ಟುತ್ತಿರುವ ಆಘಾತಕಾರಿ ವಿಡಿಯೊ ವೈರಲ್(Viral Video) ಆಗಿದೆ. ಭಾರತದಲ್ಲಿ ಹಬ್ಬದ ವೇಳೆ ಪ್ರಯಾಣದ ದಟ್ಟಣೆಯ ಸಮಯದಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ಜನಸಂದಣಿ ನಿಯಂತ್ರಣದಲ್ಲಿ ತುರ್ತು ಸುಧಾರಣೆಗಳಿಗೆ ಇದು ಮತ್ತೆ ಕರೆ ನೀಡಿದೆ. ಎಕ್ಸ್‌ನಲ್ಲಿ (ಹಿಂದೆ ಟ್ವಿಟರ್) ವೋಕ್ ಎಮಿನೆಂಟ್ ಎಂಬ ಬಳಕೆದಾರ ಹಂಚಿಕೊಂಡ ಈ ವಿಡಿಯೊದಲ್ಲಿ, ಕಿಟಕಿಯ ಬಳಿ ಕುಳಿತಿದ್ದ ಯುವತಿಯೊಬ್ಬಳು, ಮುಖದ ಮೇಲೆ ನೀರು ಚಿಮುಕಿಸುತ್ತಾ, ಉಸಿರಾಡಲು ಕಷ್ಟಪಡುತ್ತಿರುವುದನ್ನು ತೋರಿಸುತ್ತದೆ.
ವರದಿ ಪ್ರಕಾರ, ರೈಲಿನಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದರಿಂದ ಆಕೆ ಬಹುತೇಕ ಉಸಿರುಗಟ್ಟಿದಳು. ಆದರೆ, ಯುವತಿಗೆ ಸಹಾಯ ಮಾಡುವ ಬದಲು, ಪ್ಲಾಟ್‌ಫಾರ್ಮ್‌ನಲ್ಲಿದ್ದ ಅನೇಕ ಜನರು ನಕ್ಕಿದ್ದಲ್ಲದೆ, ಆಕೆಯನ್ನು ಅಪಹಾಸ್ಯ ಮಾಡಿದರು ಹಾಗೂ ಅವಳ ಪರಿಸ್ಥಿತಿಯನ್ನು ಚಿತ್ರೀಕರಿಸಿ ವ್ಯಂಗ್ಯ ಮಾಡಿದ್ದಾರೆ. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಕೆಲವು ಪ್ರಯಾಣಿಕರು ಮಾತ್ರ ತೀವ್ರ ಕಳವಳ ವ್ಯಕ್ತಪಡಿಸಿದರು.
“ಯುವತಿಯೊಬ್ಬಳು ಉಸಿರುಗಟ್ಟಿ ಸಂಕಷ್ಟಪಡುತ್ತಿದ್ದಾಳೆ. ಅವಳು ರೈಲು ಬೋಗಿಯೊಳಗೆ ಸಿಲುಕಿದ್ದಳು. ಪ್ಲಾಟ್‌ಫಾರ್ಮ್‌ನಲ್ಲಿದ್ದ ಜನಸಮೂಹ ನಗುತ್ತಾ ಅವಳನ್ನು ಅಪಹಾಸ್ಯ ಮಾಡುತ್ತಿತ್ತು. ಅಂತಹ ನಡವಳಿಕೆಯನ್ನು ನೀವು ಏನೆಂದು ಕರೆಯುತ್ತೀರಿ?” ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ. ಆದರೆ, ಈ ಘಟನೆ ಎಲ್ಲಿ ನಡೆದಿದ್ದು ಎಂಬ ಬಗ್ಗೆ ತಿಳಿದಿಲ್ಲ.
ವಿಡಿಯೊ ಇಲ್ಲಿದೆ:
A girl was almost suffocated stampeded into a train coach and she was running out of breath.
— Woke Eminent (@WokePandemic) August 11, 2025
The crowd on the platform was laughing and mocking her.
What do you call such behavior?
Dear @AshwiniVaishnaw Ji @RailMinIndia @RailwaySeva
Every festival the surge at railway… pic.twitter.com/1UICJwx9YZ
ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್, ರೈಲ್ವೆ ಸಚಿವಾಲಯಯನ್ನು ಟ್ಯಾಗ್ ಮಾಡಿದ ಬಳಕೆದಾರರು, ಗರಿಷ್ಠ ಪ್ರಯಾಣದ ದಿನಗಳಲ್ಲಿ ಜನಸಂದಣಿ ನಿರ್ವಹಣಾ ಕ್ರಮಗಳನ್ನು ಜಾರಿಗೆ ತರುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು. ಸದ್ಯ ಈ ವಿಡಿಯೊ ವೈರಲ್ ಆಗಿದ್ದು, ಅಧಿಕೃತ ರೈಲ್ವೆ ಸೇವಾ ಖಾತೆ ಪ್ರತಿಕ್ರಿಯಿಸಿದೆ. “ಇದನ್ನು ನೋಡಿದ ಬಳಿಕ ನಮಗೆ ಕಳವಳವುಂಟಾಗಿದೆ. ದಯವಿಟ್ಟು ಘಟನೆಯ ಸ್ಥಳ, ಘಟನೆಯ ದಿನಾಂಕ ಮತ್ತು ಮೊಬೈಲ್ ಸಂಖ್ಯೆಯಂತಹ ವಿವರಗಳನ್ನು ಹಂಚಿಕೊಳ್ಳಿ. ಇದರಿಂದ ನಾವು ಅದನ್ನು ಪರಿಶೀಲಿಸಬಹುದು. ತ್ವರಿತ ಪರಿಹಾರಕ್ಕಾಗಿ ನೇರವಾಗಿ https://railmadad.indianrailways.gov.in ನಲ್ಲೂ ದೂರು ನೀಡಬಹುದು” ಎಂದು ಪ್ರತಿಕ್ರಿಯಿಸಿದೆ.
ಈ ಸುದ್ದಿಯನ್ನೂ ಓದಿ: Viral Video: ಕೇವಲ 7,000 ರೂ.ಗೆ ವಿಮಾನ ನಿರ್ಮಿಸಿದನೇ ಈ ಬಾಲಕ? ವೈರಲ್ ವಿಡಿಯೊದ ಅಸಲಿಯತ್ತೇನು?
ಈ ಘಟನೆಯು ಹಬ್ಬದ ಋತುವಿನಲ್ಲಿ ಪ್ರಯಾಣಿಕರ ಕ್ಷೇಮಕ್ಕಾಗಿ ಕಠಿಣ ಸುರಕ್ಷತಾ ಶಿಷ್ಟಾಚಾರಗಳು, ಜನಸಂದಣಿ ನಿಯಂತ್ರಣ ಮತ್ತು ತುರ್ತು ಅಗತ್ಯದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗಳನ್ನು ತೀವ್ರಗೊಳಿಸಿದೆ.