ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral video: ಭಾರತದ ಪವಿತ್ರ ನದಿಯಲ್ಲಿ ಪುಣ್ಯಸ್ನಾನ ಮಾಡಿದ ಹಾಲಿವುಡ್ ನಟಿ; ಅದು ಹೇಗೆ ಸಾಧ್ಯ ಅಂತೀರಾ? ಇಲ್ಲಿದೆ ವಿಡಿಯೊ

Actress Sydney Sweeney: ಹಾಲಿವುಡ್ ನಟಿ ಸಿಡ್ನಿ ಸ್ವೀನಿ ಭಾರತದ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದನ್ನು ಯಾರೂ ಊಹಿಸಲೂ ಸಾಧ್ಯವಿಲ್ಲ. ಇನ್‌ಸ್ಟಾಗ್ರಾಮ್‌ನಲ್ಲಿ ಈಗ ವೈರಲ್ ಆಗಿರುವ ವಿಡಿಯೊದಲ್ಲಿ, ಜನಪ್ರಿಯ ಹಾಲಿವುಡ್ ನಟಿಯ ಫೋಟೋಗೆ ವ್ಯಕ್ತಿಯೊಬ್ಬ ಪವಿತ್ರ ಸ್ನಾನ ಮಾಡಿಸಿದ್ದಾನೆ. ಪವಿತ್ರ ನೀರಿನಲ್ಲಿ ಫೋಟೋ ಅದ್ದಿ, ಅದನ್ನು ‘ಡಿಜಿಟಲ್ ಸ್ನಾನ’ ಎಂದು ಹೇಳಿದ್ದಾನೆ.

ಭಾರತದ ನದಿಯಲ್ಲಿ ಪುಣ್ಯಸ್ನಾನ ಮಾಡಿದ ಹಾಲಿವುಡ್ ನಟಿ ಸಿಡ್ನಿ ಸ್ವೀನಿ!

Priyanka P Priyanka P Aug 5, 2025 5:14 PM

ಪ್ರಯಾಗ್‍ರಾಜ್: ಹಾಲಿವುಡ್ ನಟಿ ಸಿಡ್ನಿ ಸ್ವೀನಿ ಭಾರತದ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದನ್ನು ಯಾರೂ ಊಹಿಸಲೂ ಸಾಧ್ಯವಿಲ್ಲ. ಆದರೆ, ಅವರು ಸ್ನಾನ ಮಾಡಿದರು. ಹಾಗಂತ ಸ್ವತಃ ನಟಿ ಬಂದು ನದಿಯಲ್ಲಿ ಪವಿತ್ರ ಸ್ನಾನ ಮಾಡಿದ್ದಲ್ಲ. ನಟಿಯ ಫೋಟೋವನ್ನು ಹಿಡಿದುಕೊಂಡ ವ್ಯಕ್ತಿಯೊಬ್ಬ ಗಂಗಾ ಸ್ನಾನ ಮಾಡಿಸಿದ್ದಾನೆ. ಹೌದು, ಇನ್‌ಸ್ಟಾಗ್ರಾಮ್‌ನಲ್ಲಿ ಈಗ ವೈರಲ್ ಆಗಿರುವ ವಿಡಿಯೊದಲ್ಲಿ(Viral Video), ಅಮೆರಿಕನ್ ಈಗಲ್ ಎಂಬ ಡೆನಿಮ್ ಬ್ರ್ಯಾಂಡ್‌ನ ವಿವಾದಾತ್ಮಕ ಜಾಹೀರಾತಿನಲ್ಲಿ ನಟಿಸಿದ್ದಕ್ಕಾಗಿ ಇತ್ತೀಚೆಗೆ ಸುದ್ದಿಯಲ್ಲಿರುವ ಜನಪ್ರಿಯ ಹಾಲಿವುಡ್ ನಟಿಯ ಫೋಟೋಗೆ ವ್ಯಕ್ತಿಯೊಬ್ಬ ಪವಿತ್ರ ಸ್ನಾನ ಮಾಡಿಸಿದ್ದಾನೆ.

ವೃತ್ತಿಯಲ್ಲಿ ಪತ್ರಕರ್ತ ಎಂದು ಹೇಳಿಕೊಳ್ಳುವ ಆ ವ್ಯಕ್ತಿ ಸಿಡ್ನಿಯ ಚಿತ್ರವನ್ನು ಕೈಯಲ್ಲಿ ಹಿಡಿದುಕೊಂಡು ತನ್ನ ವೀಕ್ಷಕರಿಗೆ ಅವಳನ್ನು ಪರಿಚಯಿಸಿದ್ದಾನೆ. “ಇದು ಸಿಡ್ನಿ ಸ್ವೀನಿ. ಅವರಿಗೆ ಯಾವುದೇ ಪರಿಚಯದ ಅಗತ್ಯವಿಲ್ಲ. ಆಗಸ್ಟ್ 3, 2025 ರಂದು ಪ್ರಯಾಗರಾಜ್‌ನಲ್ಲಿ ಸಂಗಮದ ಪವಿತ್ರ ನೀರಿನಲ್ಲಿ 'ಡಿಜಿಟಲ್ ಸ್ನಾನ' ಅಥವಾ ವರ್ಚುವಲ್ ಸ್ನಾನ ಮಾಡಲಿದ್ದಾರೆ” ಎಂದು ಹೇಳಿದರು.

ನಂತರ ಅವನು ನಟಿಯ ಫೋಟೋವನ್ನು ಪ್ರಯಾಗ್‌ರಾಜ್‌ನ ಸಂಗಮದ ಪವಿತ್ರ ನೀರಿನಲ್ಲಿ ಎರಡು ಬಾರಿ ಅದ್ದಿ, ಅದನ್ನು ‘ಡಿಜಿಟಲ್ ಸ್ನಾನ’ ಎಂದು ಹೇಳಿದನು. ಈ ವರ್ಷದ ಆರಂಭದಲ್ಲಿ ಮಹಾಕುಂಭ ಮೇಳದ ಸಮಯದಲ್ಲಿ ಈ ಪ್ರವೃತ್ತಿ ಅಪಾರ ಜನಪ್ರಿಯತೆಯನ್ನು ಗಳಿಸಿತು. ಆ ವ್ಯಕ್ತಿ “ಸಿಡ್ನಿ ಸ್ವೀನಿ ಪ್ರಯಾಗ್‌ರಾಜ್‌ನ ಸಂಗಮದಲ್ಲಿ ಡಿಜಿಟಲ್ ಸ್ನಾನ ಮಾಡುತ್ತಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.

ವಿಡಿಯೊ ವೀಕ್ಷಿಸಿ:

ಈ ವಿಡಿಯೊ ಹಂಚಿಕೊಂಡಾಗಿನಿಂದ ತಕ್ಷಣವೇ ಅದು ನೆಟ್ಟಿಗರ ಗಮನ ಸೆಳೆಯಿತು. ಒಂದು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಇದು ಗಳಿಸಿತು. ಕೆಲವರು ಇಂತಹ ಪ್ರವೃತ್ತಿಗೆ ತಮಾಷೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಆಘಾತಕ್ಕೊಳಗಾದರು. ಒಬ್ಬ ಬಳಕೆದಾರರು ಹಾಸ್ಯಾಸ್ಪದವಾಗಿ ನೀರನ್ನು ಮಾರಾಟ ಮಾಡಬಹುದು ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ಸಾವಿರಾರು ಜನ ಓಡಾಡೋ ಹೈವೇಯಲ್ಲಿ ನೇತಾಡುತ್ತಿದೆ ಅಪಾಯಕಾರಿ ಕೇಬಲ್‌ ವೈರ್‌! ವಿಡಿಯೊ ಫುಲ್‌ ವೈರಲ್‌

ಸಿಡ್ನಿ ಸ್ವೀನಿ ಇದ್ದಕ್ಕಿದ್ದಂತೆ ಹೆಪಟೈಟಿಸ್‌ಗೆ ತುತ್ತಾದರೆ ಈಗ ಯಾರೂ ಆಶ್ಚರ್ಯಪಡಬೇಕಾಗಿಲ್ಲ ಎಂದು ಮತ್ತೊಬ್ಬ ಬಳಕೆದಾರ ಹಾಸ್ಯ ಚಟಾಕಿ ಹಾರಿಸಿದರು. ಇನ್ನೊಬ್ಬ ಬಳಕೆದಾರರು ನಟಿ ಇದಕ್ಕೆ ಒಪ್ಪಿಗೆ ನೀಡಿದ್ದಾಳೆಂದು ತಾನು ಭಾವಿಸುವುದಿಲ್ಲ ಎಂದು ತಮಾಷೆ ಮಾಡಿದರು.