Pakistan Flood: ಪ್ರವಾಹದ ರಿಪೋರ್ಟಿಂಗ್‌ಗೆ ಹೋದ ಪಾಕ್ ಪತ್ರಕರ್ತೆಯ ಸ್ಥಿತಿ ಅಧೋಗತಿ! ಈ ಶಾಕಿಂಗ್ ವಿಡಿಯೊ ಇಲ್ಲಿದೆ
Pakistani journalist scared: ಪಾಕಿಸ್ತಾನದ ಪತ್ರಕರ್ತೆಯೊಬ್ಬರ ಪ್ರವಾಹ ವರದಿ ಮಾಡುವಾಗ ಭಯಪಟ್ಟಿದ್ದಾರೆ. ಪತ್ರಕರ್ತೆ ಮೆಹರುನ್ನೀಸಾ ಎಂಬುವವರು ಪ್ರವಾಹದ ಸಮಯದಲ್ಲಿ ದೋಣಿಯಲ್ಲಿ ಕುಳಿತು ವರದಿ ಮಾಡಿದ್ದಾರೆ. ದೋಣಿ ಅಲ್ಲಾಡುತ್ತಿದ್ದಂತೆ ಜೋರಾಗಿ ಕಿರುಚಿದ್ದಾರೆ. ನನಗಾಗಿ ಪ್ರಾರ್ಥಿಸಿ ಎಂದಿ ವೀಕ್ಷಕರಲ್ಲಿ ಮನವಿ ಮಾಡಿದ್ದಾರೆ.

-

ಕರಾಚಿ: ಪ್ರವಾಹವಿರಲಿ, ಭೂಕಂಪವಿರಲಿ ಪತ್ರಕರ್ತರು ಮಾತ್ರ ತಮ್ಮ ಪ್ರಾಣದ ಹಂಗು ತೊರೆದು ವರದಿ ಮಾಡುತ್ತಾರೆ. ಕೆಲವೊಮ್ಮೆ ಆ ಕ್ಷಣವೂ ಭಯಾನಕವಾಗಿರುತ್ತದೆ. ಇದರಿಂದ ಅವರು ಭಯ ಕೂಡ ಪಡಬಹುದು. ಇದೀಗ ಅಂಥದ್ದೇ ಘಟನೆ ನಡೆದಿದೆ. ಪಾಕಿಸ್ತಾನದ ಪತ್ರಕರ್ತೆಯೊಬ್ಬರ (Journalist) ಪ್ರವಾಹ ವರದಿ ಮಾಡುವಾಗ ಭಯಪಟ್ಟಿದ್ದಾರೆ. ಪತ್ರಕರ್ತೆ ಮೆಹರುನ್ನೀಸಾ ಎಂಬುವವರು ಪ್ರವಾಹದ ಸಮಯದಲ್ಲಿ ದೋಣಿಯಲ್ಲಿ ಕುಳಿತು ವರದಿ ಮಾಡಿದ್ದಾರೆ. ಆದರೆ, ಅವರು ಇದ್ದಕ್ಕಿದ್ದಂತೆ ತಮ್ಮ ವೃತ್ತಿಪರತೆಯನ್ನು ಮರೆತು ಭಯವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್(Viral Video) ಆಗುತ್ತಿದೆ.
ಪಾಕಿಸ್ತಾನದಲ್ಲಿ ಭಾರಿ ಮಳೆಯಿಂದ (Pakistan Flood) ತೀವ್ರ ಪ್ರವಾಹ ಉಂಟಾಗಿದೆ. ಕರಾಚಿ ಪ್ರವಾಹಕ್ಕೆ ಮುಳುಗಿದೆ. ಪತ್ರಕರ್ತೆ ಮೆಹರುನ್ನೀಸಾ ಎಂಬುವವರು ಲೈಫ್ ಜಾಕೆಟ್ ಧರಿಸಿ ದೋಣಿಯಲ್ಲಿ ಕುಳಿತು ವರದಿ ಮಾಡುತ್ತಿದ್ದರು. ಈ ವೇಳೆ ನೀರಿನ ಪ್ರಮಾಣ ಹೆಚ್ಚಾದಂತೆ ಭಯಪಟ್ಟಿದ್ದಾರೆ. ಅಲ್ಲದೆ ದೋಣಿ ತೂಗಾಡುತ್ತಿದ್ದಂತೆ ಭಯದಿಂದ ಜೋರಾಗಿ ಕೂಗಿದ್ದಾರೆ. ನನ್ನ ಹೃದಯ ತುಂಬಾ ಹೊಡೆದುಕೊಳ್ಳುತ್ತಿದೆ ಎಂದು ಭೀತಿಯಿಂದ ತಿಳಿಸಿದ್ದಾರೆ. ವಿಡಿಯೊ ಮುಖಾಂತರ, ತನಗೆ ತುಂಬಾ ಭಯವಾಗುತ್ತಿದೆ. ಎಲ್ಲರೂ ತಮಗಾಗಿ ಪ್ರಾರ್ಥಿಸುವಂತೆ ವೀಕ್ಷಕರಲ್ಲಿ ಮನವಿ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ರೀಲ್ಸ್‌ಗಾಗಿ ಫ್ಲೈಓವರ್‌ನಿಂದ ಜಿಗಿದು ರಸ್ತೆಗೆ ಬಿದ್ದು, ನರಳಾಡಿದ ಯುವಕ: ನಿಂಗಿದು ಬೇಕಿತ್ತಾ ಎಂದ ನೆಟ್ಟಿಗರು
ಪಾಕಿಸ್ತಾನ ರಣಭೀಕರ ಮಳೆ-ಪ್ರವಾಹ
ಜೂನ್ ಅಂತ್ಯದಿಂದ ಪಾಕಿಸ್ತಾನದಾದ್ಯಂತ ಭಾರಿ ಮಳೆ ಸುರಿಯುತ್ತಿದೆ. ವರುಣನ ಆರ್ಭಟಕ್ಕೆ ಹಠಾತ್ ಪ್ರವಾಹ ಉಂಟಾಗಿದ್ದು ಕನಿಷ್ಠ 739 ಜನರು ಸಾವನ್ನಪ್ಪಿದ್ದಾರೆ. 2,400 ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ, ಸುಮಾರು 1,000 ಜನರು ಗಾಯಗೊಂಡಿದ್ದಾರೆ ಮತ್ತು 1,000ಕ್ಕೂ ಹೆಚ್ಚು ಪ್ರಾಣಿಗಳು ಸಾವನ್ನಪ್ಪಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಸೆಪ್ಟೆಂಬರ್‌ವರೆಗೂ ಇದೇ ರೀತಿ ಮಳೆ ಮುಂದುವರಿಯುವ ಮುನ್ಸೂಚನೆ ಇದೆ.
ಪಾಕ್‌ನ ವಾಯುವ್ಯ ಪ್ರಾಂತ್ಯವಾದ ಖೈಬರ್ ಪಖ್ತುನ್ಖ್ವಾ ಅತ್ಯಂತ ಹಾನಿಗೊಳಗಾಗಿದ್ದು, ಧಾರಾಕಾರ ಮಳೆಯಿಂದಾಗಿ 368 ಜನರು ಸಾವನ್ನಪ್ಪಿ, 182 ಜನರು ಗಾಯಗೊಂಡು, 1,300 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಒಂಬತ್ತು ಜಿಲ್ಲೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಕರಾಚಿಯಲ್ಲಿ ಪ್ರವಾಹ ಉಂಟಾಗಿದ್ದು, ಆರು ಜನರು ಸಾವನ್ನಪ್ಪಿದ್ದಾರೆ. ಪಂಜಾಬ್‌ನಲ್ಲಿ ಸಿಂಧೂ ಮತ್ತು ಚೆನಾಬ್ ನದಿಗಳ ಉದ್ದಕ್ಕೂ ದೊಡ್ಡ ಪ್ರಮಾಣದ ಬೆಳೆ ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ.