3 ತಿಂಗಳಲ್ಲಿ 45 ವರದಕ್ಷಿಣೆ ಕಿರುಕುಳ
ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಿವೆ. ೨೦೨೫ ಪ್ರಾರಂಭದ ಮೂರು ತಿಂಗಳಲ್ಲಿ ೫೭ ಮಂದಿ ದೂರು ಸಲ್ಲಿಸಿದ್ದರು. ನಂತರದ ಮೂರು ತಿಂಗಳಲ್ಲಿ ೬೬ ಮಹಿಳೆಯರು ಕೌಟುಂಬಿಕ ದೌರ್ಜನ್ಯದಿಂದ ರಕ್ಷಣೆ ನೀಡುವಂತೆ ಇಲಾಖೆಯ ಹೋಗಿದ್ದಾರೆ. ಆರು ತಿಂಗಳಲ್ಲಿ ಒಟ್ಟು ೧೨೩ ಪ್ರಕರಣಗಳು ದಾಖಲಾಗಿವೆ. ಈ ಸಂಬಂಧ ದಂಪತಿಗಳಿಗೆ ಆಪ್ತ ಸಮಾಲೋಚನೆ ನಡೆಸಿ ೭೧ ಪ್ರಕರಣ ಇತ್ಯರ್ಥ ಪಡಿಸಲಾಗಿದೆ.

-

ರಂಗನಾಥ ಕೆ. ಹೊನ್ನಮರಡಿ, ತುಮಕೂರು
ಜಿಲ್ಲೆಯಲ್ಲಿ ಹೆಚ್ಚುತ್ತಿವೆ ಡೌರಿ ಕೇಸ್
ವಿದ್ಯಾವಂತರಲ್ಲೇ ಅಧಿಕ
‘ಶೈಕ್ಷಣಿಕ ಹಬ್ ’ ಜಿಲ್ಲೆಯಾಗಿ ಬೆಳೆಯುತ್ತಿರುವ ಕಲ್ಪತರು ನಾಡಿನ ತುಮಕೂರು ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಹಾಗೂ ಮಹಿಳೆಯರ ಮೇಲೆ ಕೌಟುಂಬಿಕ ದೌರ್ಜನ್ಯ, ಬಾಲ್ಯ ವಿವಾಹದಂಥ ಪ್ರಕರಣಗಳು ಹೆಚ್ಚುತ್ತಿವೆ. ಇದು ಜಿಲ್ಲೆಯ ಪ್ರಜ್ಞಾವಂತರಲ್ಲಿ ಆತಂಕ ಮೂಡಿಸಿದೆ.ವಿದ್ಯಾವಂತ ದಂಪತಿಗಳ ನಡುವೆ ಹೆಚ್ಚಾಗಿ ವರದಕ್ಷಿಣೆ ದೌರ್ಜನ್ಯ, ಕಿರುಕುಳ ಪ್ರಕರಣ ಸಂಭವಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಅಽಕ ಶಿಕ್ಷಣ ಪಡೆದ ವಿದ್ಯಾವಂತರು, ಉದ್ಯೋಗನಿರತ ದಂಪತಿಗಳು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ವಿಚ್ಛೇದನದ ಮೊರೆ ಹೋಗುತ್ತಿರುವುದು ದುರಂತದ ಸಂಗತಿ.
ಜಿಲ್ಲೆಯಲ್ಲಿ ೨೦೨೫ ಏ. ೧ ರಿಂದ ಜೂನ್ ೩೦ರ ವರೆಗೆ ಮೂರು ತಿಂಗಳಲ್ಲಿ ಒಟ್ಟು ೪೫ ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ. ಇದರಲ್ಲಿ ಎಂಟು ಪ್ರಕರಣ ವಿಲೇವಾರಿಯಾಗಿದ್ದು, ೩೭ ಬಾಕಿ ಉಳಿದಿವೆ. ೨೦೨೫ರ ಜನವರಿಯಿಂದ ಮಾರ್ಚ್ ಅಂತ್ಯಕ್ಕೆ ೧೪ ಪ್ರಕರಣಗಳು ವರದಿಯಾಗಿದ್ದವು. ನಂತರದ ಮೂರೇ ತಿಂಗಳಲ್ಲಿ ಮೂರು ಪಟ್ಟು ಅಧಿಕಗೊಂಡಿವೆ.
ಕೌಟುಂಬಿಕ ದೌರ್ಜನ್ಯ
ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಿವೆ. ೨೦೨೫ ಪ್ರಾರಂಭದ ಮೂರು ತಿಂಗಳಲ್ಲಿ ೫೭ ಮಂದಿ ದೂರು ಸಲ್ಲಿಸಿದ್ದರು. ನಂತರದ ಮೂರು ತಿಂಗಳಲ್ಲಿ ೬೬ ಮಹಿಳೆಯರು ಕೌಟುಂಬಿಕ ದೌರ್ಜನ್ಯದಿಂದ ರಕ್ಷಣೆ ನೀಡುವಂತೆ ಇಲಾಖೆಯ ಹೋಗಿದ್ದಾರೆ. ಆರು ತಿಂಗಳಲ್ಲಿ ಒಟ್ಟು ೧೨೩ ಪ್ರಕರಣಗಳು ದಾಖಲಾಗಿವೆ. ಈ ಸಂಬಂಧ ದಂಪತಿಗಳಿಗೆ ಆಪ್ತ ಸಮಾಲೋಚನೆ ನಡೆಸಿ ೭೧ ಪ್ರಕರಣ ಇತ್ಯರ್ಥ ಪಡಿಸಲಾಗಿದೆ.
ಇದನ್ನೂ ಓದಿ: Dowry case: ಥೂ... ಎಂತಾ ನೀಚರು; ವರದಕ್ಷಿಣೆಗಾಗಿ ಸೊಸೆಗೆ ಆಸಿಡ್ ಕುಡಿಸಿ ಕೊಂದ ಅತ್ತೆ-ಮಾವ
ಹಲವು ಕಾರಣಗಳು
ಮಹಿಳೆಯರ ಮೇಲೆ ದೌರ್ಜನ್ಯದಂತಹ ಪ್ರಕರಣಗಳು ಹೆಚ್ಚಾಗಲು ಅನೇಕ ಕಾರಣಗಳಿವೆ. ಬಡತನ, ಅನಕ್ಷರತೆ, ವಿದ್ಯಾವಂತ ದಂಪತಿಗಳ ನಡುವೆ ಹೊಂದಾಣಿಕೆ ಸಮಸ್ಯೆ, ಕಾನೂನಿನ ವಿಚಾರವಾಗಿ ಸರಿಯಾದ ಮಾಹಿತಿ ಇಲ್ಲದಿರುವ ಕಾರಣದಿಂದ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಅಧಿಕವಾಗುತ್ತಿದೆ. ದೌರ್ಜನ್ಯ ಅನುಭವಿಸಿದ ಮಹಿಳೆಯರಿಗೆ ಮಹಿಳಾ ಆಯೋಗ ಸೂಕ್ತ ರಕ್ಷಣೆ ಒದಗಿಸಲು ಕ್ರಮ ಕೈಗೊಂಡು ಅವರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದೆ.
ಅತ್ಯಾಚಾರ, ಪೋಕ್ಸೋ ಪ್ರಕರಣಗಳಲ್ಲಿ ಶೀಘ್ರವೇ ವಿಚಾರಣೆ ಮಾಡಿ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಬೇಕಾಗಿದೆ.
೨೪ ಗಂಟೆ ಸಹಾಯವಾಣಿ
ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ನೆರವಾಗುವ ದೃಷ್ಟಿಯಿಂದ ದಿನದ ೨೪ ಗಂಟೆ ಸಹಾಯವಾಣಿ ಕಾರ್ಯ ನಿರ್ವಹಿಸಲಿದೆ. ವಿವಿಧ ರೀತಿಯಿಂದ ಕಿರುಕುಳಕ್ಕೆ ಒಳಗಾಗುವ ಮಹಿಳೆಯರು ಸಹಾಯವಾಣಿ ಸಂಖ್ಯೆ- ೧೮೧ಕ್ಕೆ ಕರೆ ಮಾಡಿ ಸಹಾಯ ಪಡೆಯಬಹುದು.
ಬಾಲ್ಯ ವಿವಾಹ ಹಾವಳಿ
ಜಿಲ್ಲೆಯಲ್ಲಿ ಜ. ೧ರಿಂದ ಜೂನ್ ೩೦ರ ವರೆಗೆ ಬಾಲ್ಯ ವಿವಾಹದ ಬಗ್ಗೆ ಇಲಾಖೆಗೆ ಒಟ್ಟು ೬೪ ದೂರು ಗಳು ಸಲ್ಲಿಕೆಯಾಗಿದ್ದು, ೫೪ ಬಾಲ್ಯ ವಿವಾಹ ತಡೆಯಲಾಗಿದೆ. ಇದರಲ್ಲಿ ೭ ಪ್ರಕರಣದಲ್ಲಿ ವಿವಾಹ ಜರುಗಿದೆ. ಈ ಬಗ್ಗೆ ಸಂಬಂಧಪಟ್ಟ ಠಾಣೆಗಳಲ್ಲಿ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಿಸಲಾಗಿದೆ. ನಗರ ಪ್ರದೇಶದಲ್ಲೇ ಹೆಚ್ಚು ಗ್ರಾಮಾಂತರ ಪ್ರದೇಶಕ್ಕೆ ಹೋಲಿಸಿದರೆ ನಗರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ.
ಸಹಾಯವಾಣಿಯ ಮೂಲಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ದೂರು ಸಲ್ಲಿಸಿದ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಕಿರುಕುಳಕ್ಕೆ ಒಳಗಾದ ಮಹಿಳೆಯರಿಗೆ ಸಾಂತ್ವನ ಕೇಂದ್ರಗಳು ನೆರವಾಗುವ ಮೂಲಕ ಸಹಾಯ ಮಾಡುತ್ತಿವೆ.
ಕೌಟುಂಬಿಕ ದೌರ್ಜನ್ಯ
ವರದಕ್ಷಿಣೆ ಕಿರುಕುಳಗಳು ಸೇರಿದಂತೆ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರು ಆತ್ಮಹತ್ಯೆಗೆ ಶರಣಾಗುತ್ತಿರುವ ಘಟನೆಗಳು ಸಹ ಜಿಲ್ಲೆಯಲ್ಲಿ ಸಂಭವಿಸುತ್ತಿವೆ. ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕೊನೆಗಾಣಿಸಲು ಮಹಿಳಾ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಿಸುವ ಮೂಲಕ ಸಹಾಯವಾಣಿಯ ಬಗ್ಗೆ ಇನ್ನೂ ಹೆಚ್ಚಿನ ಅರಿವನ್ನು ಮೂಡಿಸಿ ದೌರ್ಜನ್ಯ, ಬಾಲ್ಯ ವಿವಾಹದಂತಹ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಲು ಇನ್ನೂ ಹೆಚ್ಚಿನ ರೀತಿ ಸಮನ್ವಯತೆಯಿಂದ ಪರಸ್ಪರ ಕಾರ್ಯನಿರ್ವಹಿಸಬೇಕಾಗಿದೆ.