ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಬೈಕ್‍ಗೆ ಸ್ಕೂಟರ್ ಡಿಕ್ಕಿ; ರಸ್ತೆಯಲ್ಲಿ ಮೂವರ ಜಗಳ, 11 ಕೆಜಿ ಬೆಳ್ಳಿ ಕಳವು

Man Stops Scooter During Fight: ಸ್ಕೂಟರ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ ಬೈಕ್‌ ಡಿಕ್ಕಿ ಹೊಡೆದಿದೆ. ಈ ವೇಳೆ ಸ್ಕೂಟರ್ ಸವಾರ ಹಾಗೂ ದ್ವಿಚಕ್ರ ಸವಾರರ ನಡುವೆ ವಾಗ್ವಾದ ನಡೆದಿದೆ. ಬಳಿಕ ಮನೆಗೆ ಬಂದು ನೋಡಿದಾಗ ಸ್ಕೂಟರ್‌ನಲ್ಲಿಟ್ಟಿದ್ದ 11 ಕೆಜಿ ಬೆಳ್ಳಿ ಕಳವಾಗಿರುವುದು ಬೆಳಕಿಗೆ ಬಂದಿದೆ.

ಸ್ಕೂಟರ್‌ನಲ್ಲಿಟ್ಟಿದ್ದ 11 ಕೆಜಿ ಬೆಳ್ಳಿ ಕಳವು

-

Priyanka P Priyanka P Oct 13, 2025 8:03 PM

ದೆಹಲಿ: ರಸ್ತೆಯಲ್ಲಿ ಜಗಳವಾಗುತ್ತಿದ್ದಾಗ ವ್ಯಕ್ತಿಯೊಬ್ಬರ ಬಳಿಯಿದ್ದ ಬೆಳ್ಳಿಯನ್ನು ಕಳವು ಮಾಡಲಾಗಿದೆ. ಈಶಾನ್ಯ ದೆಹಲಿಯ (Delhi) ನ್ಯೂ ಉಸ್ಮಾನ್‌ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳೊಂದಿಗೆ ಜಗಳ ನಡೆದಿದೆ. ಈ ವೇಳೆ ಸ್ಕೂಟರ್ ಸವಾರ ವಾಹನದಲ್ಲಿದ್ದ 11 ಕೆಜಿ ಬೆಳ್ಳಿಯನ್ನು ದೋಚಲಾಗಿದೆ (Viral News) ಎಂದು ತಿಳಿದು ಬಂದಿದೆ.

ಭಾನುವಾರ (ಅ. 12) ಜೆಪಿಸಿ ಆಸ್ಪತ್ರೆ ಬಳಿ ಈ ಘಟನೆ ನಡೆದಿದೆ. ಶಹದಾರ ನಿವಾಸಿ ರಾಮರತನ್ ಅಗರ್ವಾಲ್ (22) ಅವರ ಬಳಿಯಿದ್ದ ಬೆಳ್ಳಿ ಕಳವಾಗಿದೆ. ಈ ಸಂಬಂಧ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಕೂಟರ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ ಆರೋಪಿಗಳ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಇದರಿಂದ ಅವರಿಬ್ಬರ ಜತೆ ಅಗರ್ವಾಲ್‍ಗೆ ಜಗಳವಾಗಿದೆ. ಸ್ವಲ್ಪ ಸಮಯದ ವಾಗ್ವಾದದ ನಂತರ ಇಬ್ಬರು ಆರೋಪಿಗಳು ಅಲ್ಲಿಂದ ಹೊರಟು ಹೋದರು. ಆದರೆ ಮನೆಗೆ ತಲುಪಿದ ನಂತರ ಅಗರ್ವಾಲ್ ತನ್ನ ಸ್ಕೂಟರ್‌ನ ಡಿಕ್ಕಿಯಲ್ಲಿಟ್ಟಿದ್ದ 11 ಕೆಜಿ ಬೆಳ್ಳಿ ಕಾಣೆಯಾಗಿರುವುದು ಕಂಡುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಮರತನ್ ಅಗರ್ವಾಲ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ಗುರುತಿಸಲು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: Viral Video: 8 ಅಡಿ ಉದ್ದದ ಮೊಸಳೆಯನ್ನು ಹೆಗಲ ಮೇಲೆ ಹೊತ್ತು ಸಾಗಿದ ಭೂಪ! ಈ ವಿಡಿಯೊ ನೋಡಿ

ಇತ್ತೇಚೆಗಷ್ಟೇ ದೆಹಲಿಯ ಕೆಂಪು ಕೋಟೆಯಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ 1 ಕೋಟಿ ರೂ. ಮೌಲ್ಯದ ಚಿನ್ನ ಮತ್ತು ರತ್ನ-ಖಚಿತ ಕಲಶವೊಂದು ಕಳವಾಗಿತ್ತು. ಈ ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಇತರ ಹಲವು ವಿಐಪಿಗಳು ಭಾಗವಹಿಸಿದ್ದರು. ಇನ್ನು ಖದೀಮ ಈ ಕಲಶವನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

150 ಗ್ರಾಂ ವಜ್ರಗಳು, ಮುತ್ತು-ರತ್ನಗಳಿಂದ ಕೂಡಿದ್ದ 760 ಗ್ರಾಂ ಚಿನ್ನದ ಕಲಶ ಜನದಟ್ಟಣೆಯ ನಡುವೆ ಕಾಣೆಯಾಗಿತ್ತು. ಪೊಲೀಸರ ಪ್ರಕಾರ, ಉದ್ಯಮಿ ಸುಧೀರ್ ಜೈನ್ ನಿಯಮಿತವಾಗಿ ಪೂಜೆಗೆ ಕಲಶವನ್ನು ತರುತ್ತಿದ್ದರು. ಕಾರ್ಯಕ್ರಮದ ಮಧ್ಯದಲ್ಲಿ ಅದು ವೇದಿಕೆಯಿಂದ ಕಣ್ಮರೆಯಾಗಿದೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಜೈನ ಅರ್ಚಕನ ವೇಷದಲ್ಲಿ ಬಂದ ಶಂಕಿತ ವ್ಯಕ್ತಿಯು ಆವರಣದಿಂದ ಹೊರನಡೆಯುವ ಅವನ ಚಟುವಟಿಕೆಗಳೆಲ್ಲವೂ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಕದ್ದ ಬೆಲೆಬಾಳುವ ವಸ್ತುಗಳನ್ನು ಹೊಂದಿರುವ ಚೀಲವನ್ನು ಅವನು ತನ್ನ ಭುಜದ ಮೇಲೆ ಇಟ್ಟುಕೊಂಡು ಹೊರನಡೆದಿದ್ದಾನೆ.