ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಬಾಯಲ್ಲಿ ಪಟಾಕಿ ಹಚ್ಚಿಕೊಂಡ ವ್ಯಕ್ತಿ; ಗಾಜಿಯಾಬಾದ್‌ನ ರಾವಣ ಎಂದ ನೆಟ್ಟಿಗರು, ವಿಡಿಯೊ ನೋಡಿ

A man lit a firecracker in his mouth: ದೀಪಾವಳಿ ಆಚರಣೆ ವೇಳೆಯ ಭಯಾನಕ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬ ತನ್ನ ಬಾಯಿಯಲ್ಲಿ ಪಟಾಕಿಯನ್ನು ಇಟ್ಟು, ನಂತರ ಲೈಟರ್‌ನಿಂದ ಅದನ್ನು ಬೆಳಗಿಸಿದ್ದಾನೆ. ಇದಕ್ಕೆ ಘಾಜಿಯಾಬಾದ್‌ನ ರಾವಣ ಎಂದು ನೆಟ್ಟಿಗರು ಲೇವಡಿ ಮಾಡಿದ್ದಾರೆ.

ಬಾಯಲ್ಲಿ ಪಟಾಕಿ ಹಚ್ಚಿಕೊಂಡ ವ್ಯಕ್ತಿ; ಇಲ್ಲಿದೆ ನೋಡಿ ವಿಡಿಯೊ

-

Priyanka P Priyanka P Oct 23, 2025 6:58 PM

ಲಖನೌ: ದೀಪಾವಳಿಯಲ್ಲಿ (Deepavali) ಪಟಾಕಿ ಇಲ್ಲದಿದ್ದರೆ ಹಬ್ಬಕ್ಕೆ ಕಳೆಯೇ ಇರುವುದಿಲ್ಲ. ಎಲ್ಲರೂ ಪಟಾಕಿ ಸಿಡಿಸಿ ಬೆಳಕಿನ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಇದೀಗ ಹಬ್ಬದ ಆಚರಣೆ ವೇಳೆಯ ಭಯಾನಕ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಇದನ್ನು ನೋಡಿದ ಬಳಕೆದಾರರು ಆಘಾತಕ್ಕೊಳಗಾಗಿದ್ದಾರೆ ಮತ್ತು ಆಕ್ರೋಶಗೊಂಡಿದ್ದಾರೆ. ದೀಪಗಳು, ಅಲಂಕಾರಗಳು ಮತ್ತು ಸಾಂಪ್ರದಾಯಿಕ ಸಿಹಿತಿಂಡಿಗಳಿಂದ ಅಲಂಕರಿಸಲ್ಪಟ್ಟ ಹಬ್ಬದ ನಡುವೆ ಈ ಅಪಾಯಕಾರಿ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‍ನಲ್ಲಿ ಈ ಘಟನೆ ನಡೆದಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಕೆಂಪು ಶರ್ಟ್ ಧರಿಸಿದ ವ್ಯಕ್ತಿಯೊಬ್ಬ ತನ್ನ ಬಾಯಿಯಲ್ಲಿ ಪಟಾಕಿಯನ್ನು ಇಟ್ಟು, ನಂತರ ಲೈಟರ್‌ನಿಂದ ಅದನ್ನು ಬೆಳಗಿಸುತ್ತಿರುವುದು ಕಂಡುಬಂದಿದೆ. ಪಟಾಕಿ ಹೊತ್ತಿಕೊಂಡಾಗ ಕಿಡಿಗಳು ಅದರಿಂದ ಹಾರುತ್ತವೆ. ಆದರೂ ಆ ವ್ಯಕ್ತಿ ಭಯವಿಲ್ಲದೆ ತನ್ನ ತೋಳುಗಳನ್ನು ಅಗಲವಾಗಿ ಹಿಡಿದು ನಿಂತಿದ್ದಾನೆ. ಪಟಾಕಿಯು ಢಮ್ಮನೇ ಸಿಡಿದಿದೆ. ಆದರೆ ಪಟಾಕಿ ಹೊತ್ತಿಸಿದ ವ್ಯಕ್ತಿ ಸೇರಿದಂತೆ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.

ವಿಡಿಯೊ ವೀಕ್ಷಿಸಿ:

ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಬೇಗನೆ ಗಮನ ಸೆಳೆಯಿತು. ನೆಟ್ಟಿಗರು ಆತನ ವಿರುದ್ಧ ಸಿಟ್ಟಿಗೆದ್ದಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಕೂಡ ಈ ದುಸ್ಸಾಹಸವನ್ನು ತೀವ್ರವಾಗಿ ಟೀಕಿಸಿದ್ದಾರೆ. ಈ ವ್ಯಕ್ತಿಗೆ ತನ್ನ ಸ್ವಂತ ಜೀವದ ಬಗ್ಗೆ ಬೆಲೆ ಗೊತ್ತಿಲ್ಲ ಎಂದು ಒಬ್ಬ ಬಳಕೆದಾರರು ಪ್ರತಿಕ್ರಿಯಿಸಿದರು. ಗಾಜಿಯಾಬಾದ್‌ನ ರಾವಣ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಭಾರತ ಇನ್ನು ಮುಂದೆ ಭಾರತೀಯರಿಗೆ ಅಲ್ಲ ಎಂದು ಮಗದೊಬ್ಬರು ಟೀಕಿಸಿದ್ದಾರೆ.

ಇದನ್ನೂ ಓದಿ: Viral Video: ದೀಪಾವಳಿಗೆ 1.5 ಕೆ.ಜಿ ಚಿನ್ನದ ಶಾಪಿಂಗ್ ಮಾಡಿದ ಭೂಪ! ವಿಡಿಯೊ ವೈರಲ್‌

ದಯವಿಟ್ಟು ಸಿಲಿಂಡರ್‌ನೊಂದಿಗೆ ಒಮ್ಮೆ ಹಾಗೆ ಮಾಡಿ ಎಂದು ವ್ಯಕ್ತಿಯೊಬ್ಬರು ಕೋಪದಿಂದ ಪ್ರತಿಕ್ರಿಯಿಸಿದ್ದಾರೆ. ಬಹುಶಃ ಅವನು ನಿಮ್ಮೊಳಗಿನ ರಾವಣನನ್ನು ಸುಟ್ಟುಹಾಕಿ ಎಂಬ ಸಾಲನ್ನು ಗಂಭೀರವಾಗಿ ಪರಿಗಣಿಸಿರಬೇಕು ಎಂದು ಮತ್ತೊಬ್ಬ ವ್ಯಕ್ತಿ ಕಮೆಂಟ್ ಮಾಡಿದ್ದಾರೆ. ದಯವಿಟ್ಟು ಈ ರೀತಿ ಮಾಡಬೇಡಿ. ಮಕ್ಕಳು ಇದನ್ನು ನೋಡಿ ಪ್ರಭಾವಿತರಾಗುತ್ತಾರೆ ಎಂದು ಮಗದೊಬ್ಬರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಪಟಾಕಿಗೆ ಕಣ್ಣು ಕಳೆದುಕೊಂಡ 8 ಮಂದಿ

ಬೆಂಗಳೂರಿನಲ್ಲಿ ದೀಪಾವಳಿ ಹಬ್ಬ ಮುಕ್ತಾಯವಾಗುತ್ತಿದ್ದಂತೆ ಪಟಾಕಿ ಸಿಡಿತದಿಂದ ಗಾಯಗೊಂಡ ಪ್ರಕರಣಗಳ ಸಂಖ್ಯೆ ಕೂಡ ಹೆಚ್ಚುತ್ತಿದೆ. ಇದೀಗ 190ಕ್ಕೆ ಪಟಾಕಿ ಸಿಡಿತದಿಂದ ಗಾಯಗೊಂಡಿರುವ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು, ಇದುವರೆಗೂ ಎಂಟು ಜನರು ಶಾಶ್ವತವಾಗಿ ತಮ್ಮ ಕಣ್ಣು ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಪಟಾಕಿ ಸಿಡಿದು 190ಕ್ಕೂ ಹೆಚ್ಚು ಜನರಿಗೆ ಗಂಭೀರವಾದ ಗಾಯಗಳಾಗಿವೆ. ಶಾಶ್ವತವಾಗಿ 8 ಜನರು ತಮ್ಮ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ. ನಿಂತು ನೋಡುವವರು, ದಾರಿಹೋಕರ ಕಣ್ಣಿಗೆ ಗಂಭೀರವಾದ ಗಾಯಗಳಾಗಿವೆ. ಶೇಕಡ 60ರಷ್ಟು ಜನರಿಗೆ ಪಟಾಕಿ ಸಿಡಿದು ಕಣ್ಣಿಗೆ ಹಾನಿಯಾಗಿದೆ. ನಾರಾಯಣ ನೇತ್ರಾಲಯಕ್ಕೆ 75 ಜನರನ್ನು ದಾಖಲು ಮಾಡಲಾಗಿದೆ. ಮಿಂಟೋ ಆಸ್ಪತ್ರೆಯಲ್ಲಿ 25ಕ್ಕೂ ಹೆಚ್ಚು ಜನರು ದಾಖಲಾಗಿದ್ದಾರೆ.