ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮನೆಕೆಲಸದಾಕೆ ನೀಡಿದ ರಾಜೀನಾಮೆ ಪತ್ರ ಫುಲ್‌ ವೈರಲ್; ಅಂತಹದ್ದೇನಿದೆ ಇದರಲ್ಲಿ?

Resignation Letter: ಕಂಪನಿಗಳಲ್ಲಿ ಕೆಲಸ ಮಾಡುವವರು ಬೇರೆ ಕಡೆ ಕೆಲಸ ಸಿಕ್ಕಾಗ ತಾವಿದ್ದ ಕಂಪನಿಯನ್ನು ತೊರೆಯುತ್ತಾರೆ. ಕೆಲಸ ಬಿಡುವ ಮುನ್ನ ರಾಜೀನಾಮೆ ಪತ್ರ ಬರೆಯುತ್ತಾರೆ. ಅದೇ ರೀತಿ ಇಲ್ಲೊಬ್ಬ ಮನೆಕೆಲಸದ ಮಹಿಳೆಯೊಬ್ಬಳು ರಾಜೀನಾಮೆ ಪತ್ರ ಬರೆದು ಕೆಲಸ ಬಿಟ್ಟಿದ್ದಾಳೆ. ಈ ಪತ್ರದ ವಿಡಿಯೊ ವೈರಲ್ ಆಗಿದೆ.

ಮನೆಕೆಲಸದಾಕೆ ನೀಡಿದ ರಾಜೀನಾಮೆ ಪತ್ರ ವೈರಲ್

-

Priyanka P Priyanka P Sep 15, 2025 2:03 PM

ಗುರುಗ್ರಾಮ: ಕಾರ್ಪೊರೇಟ್ ಕೆಲಸದಂತೆ, ಮನೆಕೆಲಸಗಾರ ರಾಜೀನಾಮೆ ಪತ್ರವನ್ನು ನೀಡುವ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಇದು ಹಾಸ್ಯಮಯವಾಗಿ ತೋರಬಹುದು. ಆದರೆ, ಹರಿಯಾಣದ ಗುರುಗ್ರಾಮದಲ್ಲಿ ಮನೆಕೆಲಸದ ಮಹಿಳೆಯೊಬ್ಬರು ರಾಜೀನಾಮೆ ಪತ್ರ (Resignation Letter) ನೀಡಿದ್ದಾರೆ. ವೃತ್ತಿಪರ ರೀತಿಯಲ್ಲೇ ರಾಜೀನಾಮೆ ನೀಡಿರುವುದು ಮನೆ ಮಾಲೀಕನಿಗೆ ಅಚ್ಚರಿ ಮತ್ತು ಸಂತೋಷ ಎರಡೂ ಆಗಿದೆ. ರಾಜೀನಾಮೆ ಪತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ವಿಡಿಯೊ ಭಾರಿ ವೈರಲ್ (Viral Video) ಆಗಿದೆ.

ವ್ಯಕ್ತಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ರಾಜೀನಾಮೆ ಪತ್ರವನ್ನು ಹಂಚಿಕೊಳ್ಳುತ್ತಾ ಘಟನೆಯನ್ನು ವಿವರಿಸಿದರು. ನಂತರ ಇಡೀ ಘಟನೆಯನ್ನು ಹಂಚಿಕೊಂಡಿದ್ದಾರೆ. ಮೊದಲಿಗೆ ತನಗೆ ಒಂದು ಲಕೋಟೆ ಸಿಕ್ಕಿತು ಎಂದು ಬಹಿರಂಗಪಡಿಸಿದನು. ಮೊದಲಿಗೆ, ಅದು ಏನೆಂದು ಅವನಿಗೆ ಗೊಂದಲವಾಯಿತು. ಕ್ಷಮಿಸಿ, ಆದರೆ ಇದನ್ನು ಮಾಡಲೇಬೇಕಿತ್ತು ಎಂದು ಅದರ ಮೇಲೆ ದಪ್ಪ ಅಕ್ಷರಗಳಲ್ಲಿ ಬರೆಯಲಾಗಿತ್ತು. ಅಂತಹ ಪದಗಳು ಬಹುಶಃ ಯಾರೋ ಹುಡುಗಿ ಅವನಿಗೆ ಬ್ರೇಕ್-ಅಪ್ ಪತ್ರವನ್ನು ಕಳುಹಿಸಿರಬಹುದು ಎಂದು ಭಾವಿಸುವಂತೆ ಮಾಡಿತು.

ಪತ್ರವನ್ನು ತೆರೆದು ನೋಡಿದಾಗ ಅದು ಮನೆಕೆಲಸದವಳಿಂದ ಬಂದ ಪತ್ರವಾಗಿತ್ತು. ಅವಳು ರಾಜೀನಾಮೆ ಪತ್ರಕ್ಕೆ ಸಹಿ ಹಾಕುತ್ತಾ, ನಾಳೆಯಿಂದ ನಾನು ಬರುವುದಿಲ್ಲ ಎಂದು ಬರೆದಿದ್ದಳು. ನಾನು ಬಹಳ ದಿನಗಳಿಂದ ಏನನ್ನಾದರೂ ಹೇಳಲು ಬಯಸುತ್ತಿದ್ದೆ, ಆದರೆ ಏನೋ ಯಾವಾಗಲೂ ನನ್ನನ್ನು ತಡೆಯುತ್ತಿತ್ತು. ಆ ಮಾತುಗಳು ಹೇಳದೆ ಉಳಿದವು ಎಂದು ಬರೆದಿದ್ದಾಳೆ.

ವಿಡಿಯೊ ವೀಕ್ಷಿಸಿ:

ಇಂದು ನಾನು ಈ ಮಾತುಗಳನ್ನು ಹೇಳಲು ಸಾಧ್ಯವಾಗದಿದ್ದರೆ, ನನಗೆ ಎಂದಿಗೂ ಸಾಧ್ಯವಾಗದಿರಬಹುದು. ಆದ್ದರಿಂದ, ಬಹಳ ಕಷ್ಟದಿಂದ ನನ್ನ ಹೃದಯವನ್ನು ಗಟ್ಟಿ ಮಾಡಿಕೊಂಡು ನಾನು ಹೇಳುತ್ತಿದ್ದೇನೆ. ನಾನು, ಇನ್ನು ಮುಂದೆ ಬರುವುದಿಲ್ಲ ಎಂದು ಬರೆದಿದ್ದಾಳೆ. ಅಷ್ಟೇ ಅಲ್ಲದೆ, ಮನೆಯ ಕೆಲಸದಾಕೆ ಅವನಿಗೆ ತನಗಿಂತ ಉತ್ತಮ ವ್ಯಕ್ತಿ ಸಿಗಬೇಕು, ಸೋಫಾದ ಹಿಂದೆ ಕಸವನ್ನು ಮುಚ್ಚಿಡದವನು ಸಿಗಬೇಕು ಎಂದು ಹೇಳಿದ್ದಾಳೆ. ಮನೆ ಮಾಲೀಕನಿಗೆ ಈ ಪತ್ರವನ್ನು ಓದಿ ನಂಬಲು ಕಷ್ಟವಾಗಿದೆ. ಮೊದಲಿಗೆ ಅಚ್ಚರಿ ಎನಿಸಿದರೂ ಆಮೇಲೆ ನಗು ತರಿಸಿದೆ.

ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ತಕ್ಷಣ, ಅದು ನೆಟ್ಟಿಗರ ಗಮನ ಸೆಳೆಯಿತು. ಅವರಿಗೆ ಈ ಹಾಸ್ಯಾಸ್ಪದ ಪರಿಸ್ಥಿತಿಯಿಂದ ಹೊರಬರಲು ಸಾಧ್ಯವಾಗಲಿಲ್ಲ. ಒಬ್ಬ ಬಳಕೆದಾರರು, ನಾನು ಇಲ್ಲಿಯವರೆಗೆ ಅನಾರೋಗ್ಯ ರಜೆ ಪತ್ರವನ್ನು ಸಹ ಬರೆದಿಲ್ಲ ಎಂದು ಹೇಳಿದರು. ಸರ್, ನಾನು ಯಾವಾಗ ಹಾಗೆ ಹೇಳಿದೆ? ಎಂದು ಮರುದಿನ ಬೆಳಗ್ಗೆ ಕೆಲಸದಾಕೆ ಹೀಗೆ ಹೇಳಬಹುದು ಎಂದು ಮತ್ತೊಬ್ಬ ಬಳಕೆದಾರರು ತಮಾಷೆ ಮಾಡಿದ್ದಾರೆ.

ನಿಮ್ಮ ನೆರೆಹೊರೆಯವರು ಈ ಪತ್ರವನ್ನು ಬರೆದು ಕಳುಹಿಸಿದ್ದಾರೆ ಎಂದು ಮಗದೊಬ್ಬರು ಕಿಚಾಯಿಸಿದ್ದಾರೆ. ಕೆಲವು ಬಳಕೆದಾರರು ಚಾಟ್ ಜಿಪಿಟಿ ಮಹಿಮೆ ಎಂದಿದ್ದಾರೆ. ಇನ್ನು ಕೆಲವರು, ಇದು ಪ್ರಾಂಟೊ ಅವರ ಬುದ್ಧಿವಂತ ಜಾಹೀರಾತು ಅಭಿಯಾನ ಎಂದು ಹೇಳಿದ್ದಾರೆ. ಇಡೀ ಘಟನೆಯನ್ನು ಸ್ಕ್ರಿಪ್ಟ್ ಎಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Viral News: ‘ಹೂವಿನ ಬಾಣದಂತೆ’ ಹಾಡಿನಿಂದ ಫೇಮಸ್‌ ಆದ ಹುಡುಗಿಯ ಇನ್‌ಸ್ಟಾದಲ್ಲಿ ಫಾಲೋವರ್ಸ್ ಸಂಖ್ಯೆ 150ರಿಂದ 40 ಸಾವಿರಕ್ಕೆ!