IND vs PAK: ಪಾಕ್ ರಾಷ್ಟ್ರಗೀತೆಯ ಬದಲು ಜಲೇಬಿ ಬೇಬಿ ನುಡಿಸಿದ ಡಿಜೆ; ವಿಡಿಯೊ ವೈರಲ್
ಪಂದ್ಯಕ್ಕೂ ಮುನ್ನ ಉಭಯ ತಂಡಗಳ ಆಟಗಾರರು ರಾಷ್ಟ್ರಗೀತೆಗಾಗಿ ಮೈದಾನಕ್ಕೆ ಬಂದರು. ಮೊದಲು ಭಾರತದ ರಾಷ್ಟ್ರಗೀತೆಯನ್ನು ಪ್ರಸಾರ ಮಾಡಲಾಯಿತು. ಆ ಬಳಿಕ ಪಾಕಿಸ್ತಾನ ರಾಷ್ಟ್ರಗೀತೆಯ ಸರದಿ ಇತ್ತು. ಆದರೆ ಇಲ್ಲಿ ರಾಷ್ಟ್ರಗೀತೆಯನ್ನು ಪ್ರಸಾರ ಮಾಡುವಲ್ಲಿ ಎಡವಟ್ಟು ಮಾಡಿದ ಡಿಜೆ, ಪಾಕಿಸ್ತಾನದ ರಾಷ್ಟ್ರಗೀತೆಯ ಬದಲು ಜಲೇಬಿ ಬೇಬಿ ಹಾಡನ್ನು ಪ್ರಸಾರ ಮಾಡಿದರು. ಒಂದೆರಡು ಸೆಕೆಂಡ್ ಹಾಡು ಕೂಡ ಪ್ರಸಾರವಾಯಿತು.

-

ದುಬೈ: ಸೆಪ್ಟೆಂಬರ್ 14, ಭಾನುವಾರ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಿನ ಪಂದ್ಯದಲ್ಲಿ ನಡೆದ ಎಡವಟ್ಟಿನಿಂದ ಪಾಕಿಸ್ತಾನ ಆಟಗಾರರು ಮಾತ್ರವಲ್ಲದೆ ಪಂದ್ಯ ವೀಕ್ಷಿಸಲು ಬಂದಿದ್ದ ಅಭಿಮಾನಗಲೂ ಒಂದು ಕ್ಷಣ ದಿಗ್ಭ್ರಮೆಗೆ ಒಳಪಟ್ಟರು. ಹೌದು ಪಂದ್ಯಕ್ಕೂ ಮುನ್ನ ಪಾಕಿಸ್ತಾನ ಆಟಗಾರರು ತಮ್ಮ ರಾಷ್ಟ್ರಗೀತೆಗೆ ಸಿದ್ಧರಾಗುತ್ತಿದ್ದಂತೆ, 'ಜಲೇಬಿ ಬೇಬಿ' ಹಾಡು ನುಡಿಸಲಾಯಿತು. ಇದು ಆಟಗಾರರು ಮತ್ತು ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿತು. ಸದ್ಯ ಈ ವಿಡಿಯೊ ವೈರಲ್ ಆಗಿದೆ.
ಟಾಸ್ ಮುಗಿದ ಬಳಿಕ ಉಭಯ ತಂಡಗಳ ಆಟಗಾರರು ರಾಷ್ಟ್ರಗೀತೆಗಾಗಿ ಮೈದಾನಕ್ಕೆ ಬಂದರು. ಮೊದಲು ಭಾರತದ ರಾಷ್ಟ್ರಗೀತೆಯನ್ನು ಪ್ರಸಾರ ಮಾಡಲಾಯಿತು. ಆ ಬಳಿಕ ಪಾಕಿಸ್ತಾನ ರಾಷ್ಟ್ರಗೀತೆಯ ಸರದಿ ಇತ್ತು. ಆದರೆ ಇಲ್ಲಿ ರಾಷ್ಟ್ರಗೀತೆಯನ್ನು ಪ್ರಸಾರ ಮಾಡುವಲ್ಲಿ ಎಡವಟ್ಟು ಮಾಡಿದ ಡಿಜೆ, ಪಾಕಿಸ್ತಾನದ ರಾಷ್ಟ್ರಗೀತೆಯ ಬದಲು ಜಲೇಬಿ ಬೇಬಿ ಹಾಡನ್ನು ಪ್ರಸಾರ ಮಾಡಿದರು. ಒಂದೆರಡು ಸೆಕೆಂಡ್ ಹಾಡು ಕೂಡ ಪ್ರಸಾರವಾಯಿತು.
DJ played Jalebi Baby song on Pakistan National anthem 🤣#INDvsPAK #BoycottINDvPAK pic.twitter.com/rJBmfvqedI
— 𝗩 𝗔 𝗥 𝗗 𝗛 𝗔 𝗡 (@ImHvardhan21) September 14, 2025
ತಕ್ಷಣ ಎಚ್ಚೆತ್ತುಕೊಂಡ ಡಿಜೆ ಆಪರೇಟರ್ ಪಾಕಿಸ್ತಾನದ ರಾಷ್ಟ್ರಗೀತೆಯನ್ನು ಪ್ರಸಾರ ಮಾಡಿದರು. ಆದರೆ ಅದಾಗಲೇ ಡಿಜೆ ಮಾಡಿದ ಎಡವಟ್ಟಿನ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಪಾಕಿಸ್ತಾನದ ಎಲ ನೆಟ್ಟಿಗರು ಭಾರತ ಬೇಕಂತಲೇ ಈ ರೀತಿ ಮಾಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಆರೋಪಗಳನ್ನು ಮಾಡಲಾರಂಭಿಸಿದ್ದಾರೆ.
ಇದನ್ನೂ ಓದಿ IND vs PAK: ಮುಂದಿನ ಭಾನುವಾರ ಮತ್ತೆ ಭಾರತ-ಪಾಕ್ ಪಂದ್ಯ