Viral Video: ಬರ್ತ್ ಡೇ ಅಂತಾ ಪಾರ್ಟಿ ಅರೇಂಜ್ ಮಾಡಿದ್ರೆ ಫ್ರೆಂಡ್ಸ್ ಹೀಗಾ ಮಾಡೋದು?
Woman Plans Birthday Dinner: ಮಹಿಳೆಯೊಬ್ಬಳು ತನ್ನ ಅದ್ಧೂರಿ ಹುಟ್ಟುಹಬ್ಬ ಆಯೋಜಿಸಲು ಪ್ಲ್ಯಾನ್ ಮಾಡಿದ್ದಳು. ಇದಕ್ಕಾಗಿ ತರಹೇವಾರಿ ಖಾದ್ಯಗಳನ್ನು ಕೂಡ ತಯಾರಿಸಲಾಗಿತ್ತು. ಸ್ನೇಹಿತೆಯರನ್ನು ಪಾರ್ಟಿಗೆ ಆಹ್ವಾನಿಸಿದ್ದಳು. ಆದರೆ, ಆ ರಾತ್ರಿಯಿಡೀ ಅವಳು ದುಃಖದಿಂದ ಅತ್ತಿದ್ದಳು. ಯಾಕೆ ಗೊತ್ತಾ? ಇಲ್ಲಿದೆ ಸ್ಟೋರಿ.

-

ದೆಹಲಿ: ಇತ್ತೀಚೆಗೆ ಹುಟ್ಟುಹಬ್ಬ ಪಾರ್ಟಿ (Birthday Party) ಅನ್ನು ಬಹಳ ಅದ್ಧೂರಿಯಾಗಿ ಮಾಡಲಾಗುತ್ತದೆ. ಸ್ನೇಹಿತರು, ಸಂಬಂಧಿಕರನ್ನು ಆಮಂತ್ರಿಸಲಾಗುತ್ತದೆ. ಅವರಿಗಾಗಿ ಬಾಯಲ್ಲಿ ನೀರೂರುವ ಬಗೆ-ಬಗೆಯ ಭಕ್ಷ್ಯ (food) ಗಳನ್ನು ತಯಾರಿಸಲಾಗುತ್ತದೆ. ಆದರೆ, ಇಲ್ಲೊಬ್ಬ ಮಹಿಳೆ ಅದ್ಧೂರಿ ಹುಟ್ಟುಹಬ್ಬ ಆಯೋಜಿಸಲು ಪ್ಲ್ಯಾನ್ ಮಾಡಿದ್ದಳು. ಇದಕ್ಕಾಗಿ ತರಹೇವಾರಿ ಖಾದ್ಯಗಳನ್ನು ಕೂಡ ತಯಾರಿಸಲಾಗಿತ್ತು. ಆದರೆ, ಬೇಸರದ ಸಂಗತಿಯೆಂದರೆ ಈ ಹುಟ್ಟುಹಬ್ಬಕ್ಕೆ ಯಾರೂ ಬರಲಿಲ್ವಂತೆ.
ಹೌದು, ಮಹಿಳೆಯೊಬ್ಬಳು ಬರ್ತ್ಡೇ ಪಾರ್ಟಿ ಆಯೋಜಿಸಲು ತೀರ್ಮಾನಿಸಿದಳು. ಇದಕ್ಕಾಗಿ ಬಗೆ-ಬಗೆಯ ಭಕ್ಷ್ಯಗಳು ಸಿದ್ಧವಾದವು. ಆದರೆ, ಏಕಾಂಗಿಯಾಗಿ ಹುಟ್ಟುಹಬ್ಬ ಆಚರಿಸಬೇಕಾಯಿತು. ಆಕೆಯ ನೋವಿನ ಕಥೆಯನ್ನು ಇತ್ತೀಚೆಗೆ ಶೆಫ್ ಬ್ರಿಟ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ಭಕ್ಷ್ಯಗಳು ಮತ್ತು ಪಾನೀಯಗಳನ್ನು ಇಡಲಾಗಿರುವ ಟೇಬಲ್ ಸೆಟ್ ಅನ್ನು ಸೆರೆಹಿಡಿಯಲಾಗಿದೆ. ಇದೆಲ್ಲವೂ ಬರ್ತ್ ಡೇ ಪಾರ್ಟಿಗಾಗಿ ಸಿದ್ಧವಾಗಿದೆ.
“ನನ್ನ ಕ್ಲೈಂಟ್ ತನ್ನ ಹುಟ್ಟುಹಬ್ಬಕ್ಕೆ ಹುಡುಗಿಯರೊಂದಿಗೆ ರಾತ್ರಿ ಪಾರ್ಟಿ (girls party at night) ಯೋಜಿಸಿದ್ದಳು. ಒಬ್ಬ ಸ್ನೇಹಿತೆಯೂ ಕಂಡುಬಂದಿಲ್ಲ” ಎಂದು ವಿಡಿಯೊಗೆ ಶೀರ್ಷಿಕೆ ನೀಡಲಾಗಿದೆ. ಈ ಬಗ್ಗೆ ಇನ್ನಷ್ಟು ವಿವರಿಸಿದ ಬ್ರಿಟ್, ತನ್ನ ಕ್ಲೈಂಟ್ ಹುಟ್ಟುಹಬ್ಬವನ್ನು ವಿಶೇಷವಾಗಿಸಲು ರಾತ್ರಿ ಪಾರ್ಟಿ ಆಯೋಜಿಸಿದ್ದರು. ಆ ಜಾಗವನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ಬಾರ್ಟೆಂಡರ್ ಅನ್ನು ಕೂಡ ವ್ಯವಸ್ಥೆ ಮಾಡಿದ್ದರು. ಇದಕ್ಕಾಗಿ ಸಾಕಷ್ಟು ಖರ್ಚು ಮಾಡಿದ್ದರು. ಆದರೆ, ಯಾರೂ ಕೂಡ ಪಾರ್ಟಿಗೆ ಬಂದಿಲ್ಲ ಎಂದು ಹೇಳಿದರು.
ವಿಡಿಯೊ ವೀಕ್ಷಿಸಿ:
“ಈ ಘಟನೆ ನಿಜವಾಗಿಯೂ ಸಂಭವಿಸಿದೆಯೇ? ಎಂದು ನಿಮಗೆ ಪ್ರಶ್ನಿಸಬಹುದು. ಇದು ನಿಜವಾಗಲೂ ಸಂಭವಿಸಿದೆ. ನಾನು ಅವಳ ಕಥೆಯ ಸನ್ನಿವೇಶದ ಬಗ್ಗೆ ಎಂದಿಗೂ ಪೋಸ್ಟ್ ಮಾಡುವುದಿಲ್ಲ. ಅವಳಿಗೆ ತುಂಬಾ ಬೇಸರವಾಗಿತ್ತು. ದುಃಖದಿಂದ ಅತ್ತಳು. ನನಗೂ ತುಂಬಾ ಬೇಸರವಾಯಿತು. ನಾನು ಅವಳೊಂದಿಗೆ ಉಳಿದು ಸಮಯ ಕಳೆಯಲು ಮುಂದಾದೆ. ಇದರ ನಂತರವೂ ಅವರು ಸ್ನೇಹಿತರಾಗಿಯೇ ಉಳಿಯುತ್ತಾರೆಯೇ? ನನಗೆ ಅರ್ಥವಾಗುತ್ತಿಲ್ಲ” ಎಂದು ಬ್ರಿಟ್ ಬರೆದಿದ್ದಾರೆ.
ಮೇಲೆ ತಿಳಿಸಿದಂತೆ ಶೀರ್ಷಿಕೆ ಬರೆದು, ವಿವಿಧ ಭಕ್ಷ್ಯಗಳ ವಿಡಿಯೊವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಸದ್ಯ, ಈ ವಿಡಿಯೊ ಭಾರಿ ವೈರಲ್ (Viral Video) ಆಗಿದೆ. 4 ಮಿಲಿಯನ್‍ಗಿಂತಲೂ ಹೆಚ್ಚಿನ ವೀವ್ಸ್ ಪಡೆದಿದೆ. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಸಹಾನುಭೂತಿ ತೋರಿಸಿದರೆ, ಕೆಲವರು ಕೋಪಗೊಂಡಿದ್ದಾರೆ. ಇನ್ನೂ ಕೆಲವರು ತಮಗಾಗಿರುವ ವೈಯಕ್ತಿಕ ಅನುಭವವನ್ನು ಹಂಚಿಕೊಂಡರು.
ಇದು ನಿಜಕ್ಕೂ ಬೇಸರದ ಸಂಗತಿ. ಉಡುಗೊರೆ ತರಬೇಕು ಅನ್ನೋದನ್ನು ಬಯಸುವುದಿಲ್ಲ. ಆದರೆ, ತಮಗೆ ಯಾರಿದ್ದಾರೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಎಷ್ಟೇ ಬ್ಯುಸಿಯಾಗಿದ್ದರೂ ನಮ್ಮವರಿಗಾಗಿ ಸ್ವಲ್ಪ ಸಮಯ ಕೊಡಬೇಕು ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಇದು ದುಃಖಕರ ವಿಷಯ. ಇಂಥವರು ನಿಜವಾಗಿಯೂ ಸ್ನೇಹಿತರಾಗುವುದಕ್ಕೆ ಲಾಯಕ್ಕಲ್ಲ ಎಂದು ಮತ್ತೊಬ್ಬ ಬಳಕೆದಾರ ಬರೆದಿದ್ದಾರೆ. ಯಾರೂ ಕೂಡ ಈ ರೀತಿ ಇರುವುದಿಲ್ಲ. ಇಂಥವರೂ ಇದ್ದಾರೆ ಅಂದ್ರೆ ಅವರು ನಿಜಕ್ಕೂ ಸ್ನೇಹಿತರಲ್ಲ ಎಂದು ಮಗದೊಬ್ಬ ಬಳಕೆದಾರ ತಿಳಿಸಿದ್ದಾರೆ.
ಇನ್ನು ಕೆಲವರು ತಮ್ಮ ವೈಯಕ್ತಿಕ ವಿವರಗಳನ್ನು ಹಂಚಿಕೊಂಡರು. ಕೋವಿಡ್ ಸಮಯದಲ್ಲಿ ತನ್ನ 40 ವರ್ಷದ ಹುಟ್ಟುಹಬ್ಬವಿತ್ತು. ಹೀಗಾಗಿ ತುಂಬಾ ಜನರು ಝೂಮ್ ಕಾಲ್‍ನಲ್ಲಿ ಆಚರಿಸೋಣ ಎಂದು ತಿಳಿಸಿದ್ರು. ಆದರೆ, ಬಹುತೇಕ ಮಂದಿ ಝೂಮ್ ಮೀಟಿಂಗ್‍ನಲ್ಲಿ ಹಾಜರಾಗಿರಲಿಲ್ಲ. ಇದು ತನಗೆ ವೈಯಕ್ತಿಕವಾಗಿ ನೋವುಂಟು ಮಾಡಿದ್ದ ವಿಚಾರವಾಗಿತ್ತು ಎಂದು ವ್ಯಕ್ತಿಯೊಬ್ಬರು ಹೇಳಿದರು.
ಮತ್ತೊಬ್ಬರು, ತನ್ನ ಪದವಿ ವ್ಯಾಸಂಗ ಪೂರ್ಣಗೊಳಿಸಿದ್ದಕ್ಕೆ ಸ್ನೇಹಿತರು ಪಾರ್ಟಿ ಕೇಳಿದ್ದರು. ಬಳಿಕ ಮದುವೆಯ ಪಾರ್ಟಿಯನ್ನೂ ಕೇಳಿದ್ದರು. ಆದರೆ, ತಾಯಿ ಮೃತಪಟ್ಟಾಗ ಯಾರೂ ಬರಲಿಲ್ಲ. ಆಗ ತನಗೆ ಕೇವಲ 28 ದಿನದ ಮಗುವನ್ನು ಹೊಂದಿದ್ದೆ. ಅಲ್ಲಿಂದ ತಾನು ಯಾವುದೇ ಸ್ನೇಹಿತರನ್ನು ಹೊಂದಿಲ್ಲ ಎಂದು ನೋವಿನ ಸಂಗತಿಯನ್ನು ತಿಳಿಸಿದರು.
ಇದನ್ನೂ ಓದಿ: Viral Video; ಇದು ಪೊಲೀಸ್ ಸಿಬ್ಬಂದಿಗಳ 'ಪೋಲಿ' ಕೆಲಸ; ಸರಸ ಹಾಡುವಾಗಲ್ಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ರು