ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Crime News: ಕದ್ದ ವಾಹನದಲ್ಲಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ದಂಪತಿ ಅರೆಸ್ಟ್

ಅಮೆರಿಕದ ವೆಸ್ಟ್ ವರ್ಜೀನಿಯಾದ ಬ್ಲೂಫೀಲ್ಡ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಕದ್ದ ಆರ್‌ವಿ ವಾಹನದಲ್ಲಿ ಮದ್ಯಪಾನ ಮಾಡಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಾನನ್ ಬ್ರಯಂಟ್ ಮತ್ತು ಮ್ಯಾಥ್ಯೂ ಮೆಕ್‌ಡೊನೆಲ್ ಎಂಬ ದಂಪತಿಯನ್ನು, ಬ್ಲೂಫೀಲ್ಡ್‌ನ ರಸ್ತೆಯಲ್ಲಿ ಕದ್ದ ಆರ್‌ವಿ ಚಾಲನೆ ಮಾಡುತ್ತಿರುವಾಗ ರೆಡ್‌ಹ್ಯಾಂಡ್ ಆಗಿ ಹಿಡಿಯಲಾಯಿತು.

ನಡುರಸ್ತೆಯಲ್ಲೇ ಕಾರು ನಿಲ್ಲಿಸಿ ಲೈಂಗಿಕ ಕ್ರಿಯೆ ನಡೆಸಿದ ಕಳ್ಳ ಜೋಡಿ

ಸಾಂದರ್ಭಿಕ ಚಿತ್ರ -

Profile Sushmitha Jain Sep 2, 2025 9:36 PM

ವಾಷಿಂಗ್ಟನ್‌: ಅಮೆರಿಕದ (America) ವೆಸ್ಟ್ ವರ್ಜೀನಿಯಾದ (West Virginia) ಬ್ಲೂಫೀಲ್ಡ್‌ನಲ್ಲಿ (Bluefield) ಆಘಾತಕಾರಿ ಘಟನೆಯೊಂದು ನಡೆದಿದೆ. ಕದ್ದ ಆರ್‌ವಿ ವಾಹನದಲ್ಲಿ ಮದ್ಯಪಾನ ಮಾಡಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಾನನ್ ಬ್ರಯಂಟ್ (35) ಮತ್ತು ಮ್ಯಾಥ್ಯೂ ಮೆಕ್‌ಡೊನೆಲ್ (48) ಎಂಬ ದಂಪತಿಯನ್ನು, ಬ್ಲೂಫೀಲ್ಡ್‌ನ ರಸ್ತೆಯಲ್ಲಿ ಕದ್ದ ಆರ್‌ವಿ ಚಾಲನೆ ಮಾಡುತ್ತಿರುವಾಗ ರೆಡ್‌ಹ್ಯಾಂಡ್ ಆಗಿ ಹಿಡಿಯಲಾಯಿತು.

ವರದಿಯ ಪ್ರಕಾರ, ಜುಲೈ 2ರ ಮಧ್ಯಾಹ್ನ ಪೊಲೀಸ್ ಅಧಿಕಾರಿ ಆರ್.ಎಲ್. ಹ್ಯಾಮ್ ಆರ್‌ವಿಯನ್ನು ತಡೆದಾಗ, ಶಾನನ್ ಚಾಲಕನ ಆಸನದಲ್ಲಿ ಮ್ಯಾಥ್ಯೂ ಮೇಲೆ ಕುಳಿತಿರುವುದು ಕಂಡುಬಂದಿತು. ವಾಹನ ತಡೆದ ಸ್ವಲ್ಪ ಹೊತ್ತಿನಲ್ಲಿ ದಂಪತಿ ಆಸನಗಳನ್ನು ಬದಲಾಯಿಸಿಕೊಂಡಿದ್ದರು. ಪೊಲೀಸರು ಚಾಲಕನ ಕಿಟಕಿಯ ಬಳಿ ಬಂದಾಗ, ಮ್ಯಾಥ್ಯೂ ಪ್ರಯಾಣಿಕರ ಆಸನದಲ್ಲಿ ಕುಳಿತಿದ್ದ. ಶಾನನ್, ತಾವು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದೇವೆ ಎಂದು ಒಪ್ಪಿಕೊಂಡಳು. ಮೆಕ್‌ಡೊನೆಲ್ ಕೂಡ, "ನಾವು ಬೆತ್ತಲೆಯಾಗಿ, ಚಾಲನೆ ಮಾಡುವಾಗ ಲೈಂಗಿಕ ಕ್ರಿಯೆಗೆ ಯತ್ನಿಸುತ್ತಿದ್ದೆವು" ಎಂದು ಒಪ್ಪಿಕೊಂಡ.

ತಪಾಸಣೆಯ ವೇಳೆ, ಆರ್‌ವಿಯಲ್ಲಿ ಔಷಧೀಯ ವಸ್ತುಗಳು, ಬಿಳಿ ಪುಡಿ, ನೋವು ನಿವಾರಕ ಮಾತ್ರೆ ಮತ್ತು ಒಡೆದ ಗಾಜಿನ ಪೈಪ್ ಕಂಡುಬಂದವು. ಶಾನನ್, ಮೆಕ್‌ಡೊನೆಲ್ ತಪಾಸಣೆ ಸಮಯದಲ್ಲಿ ಗಾಜಿನ ಪೈಪ್‌ ಅನ್ನು ಕಿಟಕಿಯಿಂದ ಎಸೆದಿದ್ದ ಎಂದು ತಿಳಿಸಿದಳು. ವಾಹನ ತಪಾಸಣೆಯಿಂದ ಆರ್‌ವಿ ಪ್ರಿನ್ಸ್‌ಟನ್‌ನಿಂದ ಕದ್ದಿದ್ದು ಎಂದು ಖಚಿತವಾಗಿದೆ.

ಈ ಸುದ್ದಿಯನ್ನು ಓದಿ: Viral Video: ಶ್ವಾನದ ಮೈಮೇಲಿನ ರೋಮ ತೆಗೆದು ಟ್ಯಾಟೂ ಹಾಕಿಸಿ ವಿಕೃತಿ ಮೆರೆದ ಮಾಲೀಕ; ಕಠಿಣ ಕ್ರಮಕ್ಕೆ ಆಗ್ರಹ

ದಂಪತಿಯ ವಿರುದ್ಧ ಅನೈತಿಕ ಚಟುವಟಿಕೆ, ಔಷಧೀಯ ವಸ್ತುಗಳ ಸ್ವಾಧೀನ, ಮದ್ಯಪಾನ ಮಾಡಿ ಚಾಲನೆ ಮತ್ತು ವಾಹನ ಕಳ್ಳತನ ಆರೋಪಗಳನ್ನು ದಾಖಲಿಸಲಾಗಿದೆ. ಆರೋಪಿಗಳಿಬ್ಬರು ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದರೂ, ನ್ಯಾಯಾಲಯದಲ್ಲಿ ತಪ್ಪಿತಸ್ಥರಲ್ಲ ಎಂದು ವಾದಿಸಿದ್ದಾರೆ. ಮೆಕ್‌ಡೊನೆಲ್‌ಗೆ ಈಗಾಗಲೇ ತಾಜ್‌ವೆಲ್ ಕೌಂಟಿಯಲ್ಲಿ ಬಂಧನ ವಾರಂಟ್ ಇದೆ. ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.