ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮದ್ವೆ ಫೋಟೋಶೂಟ್‌ ವೇಳೆ ನವಜೋಡಿಯ ಲಿಪ್-ಲಾಕ್; ವಿಡಿಯೊ ಫುಲ್‌ ವೈರಲ್!

Wedding Photoshoot: ನವಜೊಡಿಯೊಂದು ಲಿಪ್ ಲಾಕ್ ಮಾಡಿಕೊಳ್ಳುವ ವಿಡಿಯೊವೊಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಛಾಯಾಗ್ರಾಹಕರು ಹೇಳಿದಂತೆ ಫೋಟೋಗೆ ಫೋಸ್ ಕೊಡುತ್ತಾ ಪರಸ್ಪರ ಚುಂಬಿಸಿದ್ದಾರೆ. ಈ ಲಿಪ್-ಲಾಕ್ ದೃಶ್ಯವು ನೆಟ್ಟಿಗರ ಕೆಂಗಣ್ಣಿಗೆ ಕಾರಣವಾಗಿದೆ.

ಮದ್ವೆ ಫೋಟೋಶೂಟ್‌ ವೇಳೆ ನವಜೋಡಿಯ ಲಿಪ್-ಲಾಕ್!

-

Priyanka P Priyanka P Sep 15, 2025 6:05 PM

ದೆಹಲಿ: ವಿವಾಹದ ಫೋಟೋಶೂಟ್‍ಗಳು ಸಾಕಷ್ಟು ವೈರಲ್ ಆಗುತ್ತಿರುತ್ತವೆ. ಇದೀಗ ನವಜೊಡಿಯೊಂದು ಲಿಪ್ ಲಾಕ್ ಮಾಡಿಕೊಳ್ಳುವ ವಿಡಿಯೊ ಸಾಮಾಜಿಕ ಮಾಧ್ಯಮ (social media) ದಲ್ಲಿ ವೈರಲ್ ಆಗಿದೆ. ಛಾಯಾಗ್ರಾಹಕರ ತಂಡವು ತಮ್ಮ ಕ್ಯಾಮರಾದಲ್ಲಿ ಪ್ರಣಯದ ಕ್ಷಣವನ್ನು ಸೆರೆಹಿಡಿದಿದೆ. ಈ ವಿಡಿಯೊ ಇನ್‌ಸ್ಟಾಗ್ರಾಮ್‌ನಲ್ಲಿ ಭಾರಿ ವೈರಲ್ (Viral Video) ಆಗುತ್ತಿದೆ ಮತ್ತು ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ.

ವೈರಲ್ ಆಗಿರುವ ವಿಡಿಯೊದಲ್ಲಿ, ದಂಪತಿಗಳು ತಮ್ಮ ರೋಮಾಂಚಕ ಮದುವೆಯ ವೇಷಭೂಷಣಗಳಲ್ಲಿ ಕಂಗೊಳಿಸುತ್ತಿರುವುದನ್ನು ಕಾಣಬಹುದು. ಛಾಯಾಗ್ರಾಹಕರು ಹೇಳಿದಂತೆ ಫೋಟೋಗೆ ಫೋಸ್ ಕೊಡುತ್ತಾ ಪರಸ್ಪರ ಚುಂಬಿಸಿದ್ದಾರೆ. ಮದುವೆಯ ಫೋಟೋಶೂಟ್‍ಗಳಲ್ಲಿ ವಿಭಿನ್ನ ಕ್ಷಣಗಳನ್ನು ಸೆರೆಹಿಡಿಯುವುದು ಸಾಮಾನ್ಯವಾಗಿದೆ. ಆದರೆ, ಈ ಲಿಪ್-ಲಾಕ್ ದೃಶ್ಯವು ನೆಟ್ಟಿಗರ ಕೆಂಗಣ್ಣಿಗೆ ಕಾರಣವಾಗಿದೆ.

ಈ ರೀತಿ ಬಹಿರಂಗವಾಗಿ ಪರಸ್ಪರ ಲಿಪ್‍ಲಾಕ್‍ನಲ್ಲಿ ತೊಡಗುವುದು ನಮ್ಮ ಸಂಸ್ಕೃತಿಯ ಭಾಗವಲ್ಲ. ಈ ಪ್ರವೃತ್ತಿ ಕೇವಲ ಪಾಶ್ಚಿಮಾತ್ಯ ದೇಶಗಳ ಸಾಂಸ್ಕೃತಿಕ ಪ್ರಭಾವ ಎಂದು ಹೇಳುವ ಮೂಲಕ ಟೀಕಿಸುತ್ತಿದ್ದಾರೆ. ಕೆಲವು ಮಂದಿ ಸಾಮಾಜಿಕ ಮಾಧ್ಯಮ ಬಳಕೆದಾರರು ದಂಪತಿಗಳ ಪರವಾಗಿ ನಿಲುವು ತೆಗೆದುಕೊಳ್ಳುತ್ತಿದ್ದಾರೆ. ಅದು ಅವರ ಸ್ವಂತ ಆಯ್ಕೆ ಎಂದು ಹೇಳಿದ್ದಾರೆ.

ವಿಡಿಯೊ ವೀಕ್ಷಿಸಿ:



ಈ ವಿಡಿಯೊವನ್ನು @coolfunnytshirt ಎಂಬುವವರು X ನಲ್ಲಿ ಪೋಸ್ಟ್ ಮಾಡಿದ್ದಾರೆ. ಜನರು ಇದರ ಬಗ್ಗೆ ಏಕೆ ಹೀಗೆ ಹುಚ್ಚರಾಗುತ್ತಿದ್ದಾರೆಂದು ನನಗೆ ತಿಳಿದಿಲ್ಲ? ಇದು ಅವರ ಜೀವನ, ಅವರ ಆಯ್ಕೆಯಾಗಿದೆ. ಆದರೆ, ಈ ರೀತಿ ವರ್ತಿಸುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ಸದ್ಯ, ಈ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರು ತರಹೇವಾರಿ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಇದು ಅವರ ಜೀವನ ಮತ್ತು ಆಯ್ಕೆ ಈ ಬಗ್ಗೆ ಯಾವುದೇ ಮಾತಿಲ್ಲ. ಆದರೆ, ನಾವು ಪಾಶ್ಚಿಮಾತ್ಯ ದೇಶಗಳಿಂದ ಸಾಂಸ್ಕೃತಿಕ ಭಿನ್ನತೆಗಳನ್ನು ಹೊಂದಿದ್ದೇವೆ ಎಂಬುದನ್ನು ನಿರ್ಲಕ್ಷಿಸಬಾರದು. ಖಾಸಗಿಯಾಗಿ ಉಳಿದಿದ್ದ ವಿಷಯಗಳು ಈಗ ಸಾರ್ವಜನಿಕ ಮನರಂಜನೆಯಾಗಿ ಬದಲಾಗುತ್ತಿವೆ. ಒಂದು ಕಾಲದಲ್ಲಿ ಪವಿತ್ರವಾಗಿದ್ದ ಎಲ್ಲವೂ ಈಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದೆ. ನಮ್ಮ ಸಂಸ್ಕೃತಿಗೆ ಏನಾಗುತ್ತಿದೆ ಎಂಬುದರ ಬಗ್ಗೆ ಚಿಂತಿಸಬೇಕಿದೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ನಾವು ಪ್ರಾಣಿ ಜನಾಂಗದಿಂದಲ್ಲ, ಮಾನವ ಜನಾಂಗದಿಂದ ಬಂದವರು. ನಾಗರಿಕ ಸಮಾಜ ಎಂದು ಕರೆಯಲು ಪ್ರತಿಯೊಬ್ಬರೂ ಪಾಲಿಸಬೇಕಾದ ಕೆಲವು ನೈತಿಕತೆಗಳಿವೆ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಆಯ್ಕೆಯ ಸ್ವಾತಂತ್ರ್ಯಕ್ಕೆ ಮಿತಿಗಳಿವೆ. ಕೆಲವು ಕ್ರಿಯೆಗಳನ್ನು ಸಾರ್ವಜನಿಕಗೊಳಿಸಿದಾಗ, ಅವು ಸಮಾಜದ ಮೇಲೆ ಪ್ರಭಾವ ಬೀರುತ್ತವೆ. ಸ್ವಂತ ಜೀವನದ ಹೆಸರಿನಲ್ಲಿ ಎಲ್ಲವನ್ನೂ ಸಾಮಾನ್ಯೀಕರಿಸುವುದರಿಂದ ಸಾಂಸ್ಕೃತಿಕ ಮೌಲ್ಯಗಳು ಮತ್ತು ಘನತೆ ಕಡಿಮೆಯಾಗುತ್ತದೆ. ಪ್ರತಿಯೊಂದು ಖಾಸಗಿ ಕ್ಷಣವನ್ನು ಮನರಂಜನೆಯಾಗಿ ಪರಿವರ್ತಿಸುವ ಅಗತ್ಯವಿಲ್ಲ ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Viral Video: ಮನೆಕೆಲಸದಾಕೆ ನೀಡಿದ ರಾಜೀನಾಮೆ ಪತ್ರ ಫುಲ್‌ ವೈರಲ್; ಅಂತಹದ್ದೇನಿದೆ ಇದರಲ್ಲಿ?