CBI Raid: ವಾಲ್ಮೀಕಿ ನಿಗಮ ಹಗರಣ ತನಿಖೆಗೆ ಸಿಬಿಐ ಎಂಟ್ರಿ; ಬಳ್ಳಾರಿ ಕಾರ್ಪೋರೇಟರ್ ಮನೆ ಮೇಲೆ ದಾಳಿ
Valmiki corporation scam: ವಾಲ್ಮೀಕಿ ಹಗರಣಕ್ಕೂ ಮುನ್ನ ಕಾರ್ಪೋರೇಟರ್ ಗೋವಿಂದರಾಜು ಮನೆಯನ್ನು ಮಾಜಿ ಸಚಿವ ನಾಗೇಂದ್ರ ಅವರಿಗೆ ಮಾರಾಟ ಮಾಡಲಾಗಿತ್ತು. ಆದರೆ ಖರೀದಿಯಾಗಿರಲಿಲ್ಲ, ಹಣದ ವಹಿವಾಟು ಆಗಿದ್ದರಿಂದ ಸಿಬಿಐ ದಾಳಿಯಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ.

-

ಬಳ್ಳಾರಿ: ಬಳ್ಳಾರಿಯ ಮಾಜಿ ಕಾರ್ಪೋರೇಟರ್ ಕುಮಾರ ಸ್ವಾಮಿ ಮತ್ತು ಅವರ ಮಗ ಹಾಲಿ ಪಾಲಿಕೆ ಸದಸ್ಯ ಗೋವಿಂದ ರಾಜು ಮನೆ ಮೇಲೆ ದಾಳಿ ಸಿಬಿಐ ಅಧಿಕಾರಿಗಳು ದಾಳಿ (CBI Raid) ನಡೆಸಿದ್ದಾರೆ. ಬಳ್ಳಾರಿ ಗಾಂಧಿನಗರದ ನಿವಾಸದ ಮೇಲೆ ದಾಳಿ ನಡೆದಿದ್ದು, ಪರಿಶೀಲನೆ ನಡೆಸಿದ್ದಾರೆ.
ಮೊಟ್ಟೆ ವ್ಯಾಪಾರ ಸೇರಿ ಹಲವು ಉದ್ಯಮದಲ್ಲಿ ಪಾಲಿಕೆ ಮಾಜಿ ಸದಸ್ಯ ಕುಮಾರಸ್ವಾಮಿ ತೊಡಗಿಸಿಕೊಂಡಿದ್ದಾರೆ. ಅವರ ಪುತ್ರ, ಕಾರ್ಪೋರೇಟರ್ ಗೋವಿಂದರಾಜು ಕೂಡ ವಿವಿಧ ಕಡೆ ಹಣ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ರಾಜ್ಯ, ಹೊರ ರಾಜ್ಯದಲ್ಲಿ ಮೊಟ್ಟೆ ವ್ಯಾಪಾರ ಮಾಡುವ ಉದ್ಯಮಿ ಕುಮಾರಸ್ವಾಮಿ ಮತ್ತು ಆತನ ಮಗ ಗೋವಿಂದರಾಜು ಅಕೌಂಟ್‌ನಲ್ಲಿ ಕೋಟ್ಯಂತರ ರೂ. ವಹಿವಾಟು ನಡೆದಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ದಾಳಿಯಾಗಿದೆ.
ಇನ್ನು ಸಿಬಿಐ ದಾಳಿಯಿಂದ ಹುಟ್ಟುಹಬ್ಬದ ದಿನವೇ ಮಾಜಿ ಸಚಿವ ಬಿ.ನಾಗೇಂದ್ರಗೆ ಶಾಕ್ ಎದುರಾಗಿದೆ. ವಾಲ್ಮೀಕಿ ಹಗರಣದ ಹಿನ್ನೆಲೆ ಈ ದಾಳಿ ನಡೆದಿದೆ ಎನ್ನಲಾಗುತ್ತಿದೆ. ನೆಕ್ಕಂಟಿ ನಾಗರಾಜ್ ಅಕೌಂಟ್‌ನಿಂದ ಕಾರ್ಪೋರೇಟರ್ ಗೋವಿಂದ ರಾಜು ಅಕೌಂಟ್‌ಗೆ ಹಣ ವರ್ಗಾವಣೆಯಾಗಿತ್ತು.
ಈ ಸುದ್ದಿಯನ್ನೂ ಓದಿ | Ranjith H Ashwath Column: ಎಲ್ಲದಕ್ಕೂ ಸಿಬಿಐ ತನಿಖೆಯೊಂದೇ ಪರಿಹಾರವೇ ?
ವಾಲ್ಮೀಕಿ ಹಗರಣಕ್ಕೂ ಮುನ್ನ ಕಾರ್ಪೋರೇಟರ್ ಗೋವಿಂದರಾಜು ಮನೆಯನ್ನು ನಾಗೇಂದ್ರ ಅವರಿಗೆ ಮಾರಾಟ ಮಾಡಲಾಗಿತ್ತು. ಆದರೆ ಖರೀದಿಯಾಗಿರಲಿಲ್ಲ, ಹಣದ ವಹಿವಾಟು ಮಾತ್ರ ಆಗಿತ್ತು. ಈ ಹಿನ್ನೆಲೆ ದಾಳಿಯಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ.