ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮಕ್ಕಳು ಇರುವ ಕಾರಣಕ್ಕಾಗಿ ಮಹಿಳೆಗೆ ಉದ್ಯೋಗ ನೀಡಲು ನೋ ಎಂದ HR!

Woman says HR denied job: ಮಕ್ಕಳು ಇರುವ ಕಾರಣಕ್ಕಾಗಿ ತನಗೆ ಉದ್ಯೋಗವನ್ನು ತಿರಸ್ಕರಿಸಲಾಗಿದೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಮುಖ್ಯ ಮಾರ್ಕೆಟಿಂಗ್ ಅಧಿಕಾರಿ (CMO) ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಅವರು, ಸಂದರ್ಶನದ ಸಮಯದಲ್ಲಿ ಅನುಚಿತ ವೈಯಕ್ತಿಕ ಪ್ರಶ್ನೆಗಳನ್ನು ಎದುರಿಸಿದ್ದಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

ಮಕ್ಕಳು ಇರುವ ಕಾರಣಕ್ಕೆ ಕೆಲಸ ಕೊಡೋಕೆ ನಿರಾಕರಿಸಿದ HR

Priyanka P Priyanka P Jul 30, 2025 4:43 PM

ದೆಹಲಿ: ಮಕ್ಕಳು ಇರುವ ಕಾರಣಕ್ಕಾಗಿ ತನಗೆ ಉದ್ಯೋಗ ನೀಡಲು ನಿರಾಕರಿಸಿದ್ದಾರೆ ಎಂದು ಮಹಿಳೆಯೊಬ್ಬರು ದೂರಿದ್ದಾರೆ. ತನಗೆ ಮಕ್ಕಳಿದ್ದಾರೆ ಎಂಬ ಕಾರಣಕ್ಕೆ ಎಚ್ಆರ್ (ಮಾನವ ಸಂಪನ್ಮೂಲ) ಅಧಿಕಾರಿ ಈ ರೀತಿ ಮಾಡಿದರು ಎಂದು ಲಿಂಕ್ಡ್ಇನ್‍ನಲ್ಲಿ ಮಹಿಳೆ ಆರೋಪಿಸಿದ್ದಾರೆ. ಈ ಪೋಸ್ಟ್ ವೈರಲ್(Viral News) ಆಗಿದೆ. ಮಹಿಳೆಯೊಬ್ಬರು, ಮುಖ್ಯ ಮಾರ್ಕೆಟಿಂಗ್ ಅಧಿಕಾರಿ (CMO) ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಸಂದರ್ಶನದ ಸಮಯದಲ್ಲಿ ಅವರು ಅನುಚಿತ ವೈಯಕ್ತಿಕ ಪ್ರಶ್ನೆಗಳನ್ನು ಎದುರಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಎಚ್ಆರ್ ಅವರೊಂದಿಗಿನ ಸಂದರ್ಶನದ ನಂತರದ ಸಂಭಾಷಣೆಯ ಸ್ಕ್ರೀನ್‌ಶಾಟ್ ಅನ್ನು ಸಹ ಪ್ರಜ್ಞಾ ಹಂಚಿಕೊಂಡಿದ್ದಾರೆ. ಅವರ ಪ್ರತಿಕ್ರಿಯೆಯು ತೀವ್ರ ನಿರಾಶೆಗೊಳಿಸಿದ್ದಾಗಿ ತಿಳಿಸಿದ್ದಾರೆ.

14 ನಿಮಿಷಗಳ ಸಂದರ್ಶನವು ಮಹಿಳಾ ವೃತ್ತಿಪರರ ಬಗ್ಗೆ ಕಂಪನಿಯ ಮನೋಭಾವದ ಬಗ್ಗೆ ವಾಸ್ತವತೆಯನ್ನು ಮಹಿಳೆ ಬಹಿರಂಗಪಡಿಸಿದರು. ಪ್ರಜ್ಞಾ ತನ್ನ ವೃತ್ತಿಜೀವನದ ಸಾಧನೆಗಳ ಬಗ್ಗೆ 11 ನಿಮಿಷಗಳ ಸಾರಾಂಶವನ್ನು ನೀಡಿದ್ದರೂ, ಆಕೆಗೆ ಕೇಳಲಾದ ಪ್ರಶ್ನೆಗಳು ಆಕೆಯ ವೈಯಕ್ತಿಕ ಜೀವನದ ಬಗ್ಗೆ ಮಾತ್ರವಾಗಿತ್ತು. ಆಕೆಯ ಕುಟುಂಬ ಸದಸ್ಯರು, ಮಕ್ಕಳ ವಯಸ್ಸು, ಶಾಲೆ ಮತ್ತು ಆಕೆಯ ಅನುಪಸ್ಥಿತಿಯಲ್ಲಿ ಅವರನ್ನು ಯಾರು ನೋಡಿಕೊಳ್ಳುತ್ತಾರೆ ಎಂಬ ಪ್ರಶ್ನೆಗಳಿದ್ದವು. ಆದರೆ ಆಕೆ ಪ್ರತಿದಿನ ಗುರುಗ್ರಾಮದಲ್ಲಿರುವ ಕಚೇರಿಗೆ ಪ್ರಯಾಣಿಸುತ್ತಿದ್ದಳು.

ಈ ಸುದ್ದಿಯನ್ನೂ ಓದಿ: Viral Video: ಕೇವಲ 7,000 ರೂ.ಗೆ ವಿಮಾನ ನಿರ್ಮಿಸಿದನೇ ಈ ಬಾಲಕ? ವೈರಲ್‌ ವಿಡಿಯೊದ ಅಸಲಿಯತ್ತೇನು?

ಆದರೆ, ಆದಾಯ, ಕೆಲಸದ ಅನುಭವ, ಸಾಧನೆ, ವೈಫಲ್ಯಗಳು ಇತ್ಯಾದಿ ಬಗ್ಗೆ ಯಾವುದೇ ಪ್ರಶ್ನೆಗಳನ್ನು ಕೇಳಲಿಲ್ಲ. ಇದು ತನ್ನನ್ನು ತೀವ್ರ ನಿರಾಶೆಗೊಳಿಸಿತು ಎಂದು ಪ್ರಜ್ಞಾ ಹೇಳಿದ್ದಾರೆ. ತನ್ನ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ತಿಳಿದಿದ್ದರೂ ಮರುದಿನವೇ ಕಂಪನಿಯ ಎಚ್ಆರ್ ಅವರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂಬ ಮಾತು ಕೇಳಿ ಪ್ರಜ್ಞಾಗೆ ದಿಗ್ಭ್ರಮೆಯಾಗಿದೆ.

ಮಕ್ಕಳು ತುಂಬಾ ಚಿಕ್ಕವರಿರುವ ಕಾರಣ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ತಿಳಿಸಲಾಯಿತು. ಇದು, ನಿರಾಕರಣೆಗಿಂತ ಹೆಚ್ಚಾಗಿ, ಕಂಪನಿಯ ನಡವಳಿಕೆಯು ಮನಸ್ಸನ್ನು ನೋಯಿಸಿತು ಎಂದು ಪ್ರಜ್ಞಾ ತಿಳಿಸಿದರು. ಈ ಪೋಸ್ಟ್‌ಗೆ ಅನೇಕರು ಪ್ರತಿಕ್ರಿಯಿಸಿದ್ದು, ಉದ್ಯೋಗದ ಹುಡುಕಾಟದ ವೇಳೆ ತಾವು ಕೂಡ ಇದೇ ರೀತಿಯ ಅನುಭವಗಳನ್ನು ಎದುರಿಸಬೇಕಾಯ್ತು ಎಂದು ತಿಳಿಸಿದ್ದಾರೆ. ಅಲ್ಲದೆ, ತನ್ನ ಸ್ನೇಹಿತರಿಗೂ ಇದೇ ರೀತಿಯ ಅನುಭವವಾಗಿದೆ ಎಂದು ಪ್ರಜ್ಞಾ ಹೇಳಿದ್ದಾರೆ.

ತನ್ನ ಅನೇಕ ಸ್ನೇಹಿತರಿಗೂ ಹೀಗೆ ಆಗಿದೆ. ಬಡ್ತಿಯನ್ನು ಕಡೆಗಣಿಸಲಾಗಿದ್ದಲ್ಲದೆ, ಕನಿಷ್ಠ ವೇತನ ಹೆಚ್ಚಳವನ್ನೂ ಮಾಡಲಾಗಿಲ್ಲ. ಅಲ್ಲದೆ, ಅವರಿಗೆ ಪ್ರಾಮಾಣಿಕ ಅವಕಾಶವನ್ನು ಸಹ ನೀಡಲಾಗಿಲ್ಲ. ಸ್ಟಾರ್ಟ್‌ಅಪ್‌ಗಳು ಮತ್ತು ಇತರೆ ಸಂಸ್ಥೆಗಳಲ್ಲಿ ಪುರುಷ ಪ್ರಾಬಲ್ಯದ ಬಗ್ಗೆ ಪ್ರಜ್ಞಾ ವಿಷಾದ ವ್ಯಕ್ತಪಡಿಸಿದರು.