ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Killer BMTC: ಕಿಲ್ಲರ್‌ ಬಿಎಂಟಿಸಿಗೆ ಮತ್ತೊಂದು ಹಿರಿಯ ಜೀವ ಬಲಿ

Bengaluru: ಘಟನಾ ಸ್ಥಳಕ್ಕೆ ಬಿಎಂಟಿಸಿಯ ಹಿರಿಯ ಅಧಿಕಾರಿಗಳು ಹಾಗೂ ಟಾಟಾ ಸ್ಮಾರ್ಟ್ ಲಿಮಿಟೆಡ್ ಕಂಪನಿಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಬಸ್‌ ಚಾಲಕನ ಅಜಾಗರೂಕತೆ ಕಾರಣವೇ ಎಂದು ಪರಿಶೀಲಿಸಲಾಗುತ್ತಿದೆ.

ಕಿಲ್ಲರ್‌ ಬಿಎಂಟಿಸಿಗೆ ಮತ್ತೊಂದು ಹಿರಿಯ ಜೀವ ಬಲಿ

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ Jul 31, 2025 12:06 PM

ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಕಿಲ್ಲರ್ ಬಿಎಂಟಿಸಿ ಮತ್ತೊಂದು ಬಲಿ ತೆಗೆದುಕೊಂಡಿದೆ. ಬಿಎಂಟಿಸಿ ಎಲೆಕ್ಟ್ರಿಕ್ ಬಸ್ (BMTC bus accident) ಡಿಕ್ಕಿ ಹೊಡೆದು ವೃದ್ಧೆಯೊಬ್ಬರು ಸಾವಿಗೀಡಾಗಿರುವ ಘಟನೆ ಸೆಂಟ್ರಲ್ ಸಿಲ್ಕ್ ಬೋರ್ಡ್ (Silk Board) ಬಸ್ ನಿಲ್ದಾಣದ ಬಳಿ ನಡೆದಿದೆ. 62 ವರ್ಷದ ಹಿರಿಯ ನಾಗರಿಕರೊಬ್ಬರು ಎಲೆಕ್ಟ್ರಿಕ್ ಬಸ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಿವರ್ಸ್ ತೆಗೆಯುವಾಗ ಬಸ್ ಹಿಂಬದಿಯಿಂದ ರಸ್ತೆ ದಾಟುತ್ತಿದ್ದ ವೃದ್ಧೆಗೆ ಡಿಕ್ಕಿಯಾಗಿದೆ. ಪರಿಣಾಮ ವೃದ್ಧೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಬಿಎಂಟಿಸಿಯ ಹಿರಿಯ ಅಧಿಕಾರಿಗಳು ಹಾಗೂ ಟಾಟಾ ಸ್ಮಾರ್ಟ್ ಲಿಮಿಟೆಡ್ ಕಂಪನಿಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಬಸ್‌ ಚಾಲಕನ ಅಜಾಗರೂಕತೆ ಕಾರಣವೇ ಎಂದು ಪರಿಶೀಲಿಸಲಾಗುತ್ತಿದೆ.

ಬೆಂಗಳೂರಿನಲ್ಲಿ ಚಾಲಕರ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಬಿಎಂಟಿಸಿ ಬಸ್ಸುಗಳಿಗೆ ಅನೇಕರು ಬಲಿಯಾಗಿದ್ದಾರೆ. ಕಳೆದ ವಾರ ರೇಷ್ಮೆ ಸಂಸ್ಥೆಯ ಮೆಟ್ರೋ ಸ್ಟೇಷನ್ ಬಳಿ ಕನಕಪುರ ಮಾರ್ಗದಲ್ಲಿ ಸಂಚರಿಸುವ ಬಸ್ಸೊಂದು ದ್ವಿಚಕ್ರ ವಾಹನವೊಂದಕ್ಕೆ ಗುದ್ದಿ ಅದರ ಮೇಲೆ ಹರಿದುಹೋದ ಕಾರಣ ಪಿಲಿಯನ್ ರೈಡರ್ ಆಗಿದ್ದ ಮಹಿಳೆ ಮೃತಪಟ್ಟಿದ್ದರು. ವಾಹನ ಓಡಿಸುತ್ತಿದ್ದ ಅವರ ಅಳಿಯ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು ಬದುಕಿನೊಂದಿಗೆ ಹೋರಾಟ ನಡೆಸುತ್ತಿದ್ದಾರೆ.

ಅದಕ್ಕೂ ಹಿಂದಿನ ವಾರ ಪೀಣ್ಯದ ಎರಡನೇ ಹಂತದಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಐವರ ಮೇಲೆ ಚಾಲಕ ಬಿಎಂಟಿಸಿ ಬಸ್ ಹತ್ತಿಸಿದ್ದ ಪರಿಣಾಮ 25 ವರ್ಷದ ಸುಮ ಎನ್ನುವ ಮಹಿಳೆ ಸಾವನ್ನಪ್ಪಿದ್ದರು. ನಾಲ್ಕು ಮಂದಿ ಗಾಯಗೊಂಡಿದ್ದರು.

Gun Firing: ಪ್ರಿಯಕರನ ಪಿಸ್ತೂಲ್‌ ಮಿಸ್‌ಫೈರ್‌, ಯುವತಿಯ ಕಿಡ್ನಿಗೇ ಹಾನಿ

ಬೆಂಗಳೂರು: ಪ್ರಿಯಕರನ ಪಿಸ್ತೂಲ್‌ ಮಿಸ್​ ಫೈರಿಂಗ್ (Miss Firing)​​​ ಆಗಿ ಯುವತಿಯ ಹೊಟ್ಟೆಗೆ ಗುಂಡು ತಗುಲಿದ ಘಟನೆ ಬೆಂಗಳೂರಿನ (Bengaluru) ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರೆಚೆಲ್ ಮಿಸ್ ಫೈರಿಂಗ್​ನಲ್ಲಿ ಗಂಭೀರವಾಗಿ ಗಾಯಗೊಂಡಿರುವ ಯುವತಿ. ಪ್ರಿಯಕರ ನಿಖಿಲ್​​​​ಗೆ ಸೇರಿದ ಗನ್ ಅನ್ನು ರೆಚೆಲ್​ ಪರಿಶೀಲನೆ ಮಾಡುವಾಗ ಮಿಸ್ ಫೈರಿಂಗ್​​ ಆಗಿದೆ. ಗಾಯಾಳು ರೆಚೆಲ್​ ಮತ್ತು ನಿಖಿಲ್​ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಮದುವೆಗೆ ಎರಡೂ ಕುಟುಂಬಗಳು ಸಿದ್ಧತೆ ನಡೆಸಿದ್ದವು. ದುರದೃಷ್ಟವಶಾತ್‌ ಈ ಘಟನೆ ನಡೆದಿದೆ.

ನಿಖಲ್​ ಅವರ ಬಳಿ ಪರವಾನಗಿ ಹೊಂದಿದ ಗನ್​ ಇದೆ. ಜು.28ರಂದು ನಿಖಿಲ್​​​​​ ಟೆರೆಸ್​ ಮೇಲೆ ಗನ್ ಪರಿಶೀಲನೆ ಮಾಡುತ್ತಿದ್ದರು. ಈ ವೇಳೆ ರೆಚೆಲ್​ ಕೂಡ ಜೊತೆಯಲ್ಲಿದ್ದರು. ರೆಚೆಲ್​ ಪ್ರಿಯಕರ ನಿಖಿಲ್​ನಿಂದ ಗನ್​ ಪಡೆದು ಪರಿಶೀಲನೆ ನಡೆಸುತ್ತಿದ್ದಾಗ, ಮಿಸ್​ ಫೈರ್​ ಆಗಿ ಹೊಟ್ಟೆಗೆ ಗುಂಡು ತಗುಲಿದೆ. ಕೂಡಲೇ ರೆಚೆಲ್​ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುಂಡು ತಗುಲಿದ ಪರಿಣಾಮ ರೆಚೆಲ್​ ಅವರ ಒಂದು ಕಿಡ್ನಿಗೆ ಹಾನಿಯಾಗಿದೆ. ಹೀಗಾಗಿ, ವೈದ್ಯರು ರೆಚೆಲ್​ ಅವರ ಒಂದು‌ ಕಿಡ್ನಿಯನ್ನು ಹೊರ ತೆಗೆದಿದ್ದಾರೆ. ರೆಚೆಲ್​ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಹೆಣ್ಣೂರು ಪೊಲೀಸ್​​ ಠಾಣೆಯಲ್ಲಿ ಎಫ್​​​ಐಆರ್ ದಾಖಲಾಗಿದೆ.

ಇದನ್ನೂ ಓದಿ: Murder Case: ತಾಯಿಯ ಕೊಲೆ ಮಾಡಿ ಶವ ಅರೆಬರೆ ಸುಟ್ಟು ಪಕ್ಕದಲ್ಲೇ ಮಲಗಿದ ಮಗ!