ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮಹಿಳೆ ಮೇಲೆ ಎರಗಿದ ಸಾಕು ನಾಯಿ; ಇಲ್ಲಿದೆ ಭಯಾನಕ ವಿಡಿಯೊ

ಗುರುಗ್ರಾಮದ ಗಾಲ್ಫ್ ವಸತಿ ಸಂಕೀರ್ಣದೊಳಗೆ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದಾಗ ಇನ್ನೊಬ್ಬ ಮಹಿಳೆ ಹಿಡಿದುಕೊಂಡು ಬರುತ್ತಿದ್ದ ಸಾಕುನಾಯಿ ದಾಳಿ ಮಾಡಿದೆ. ಮಹಿಳೆಯ ಕೈಯನ್ನು ನಾಯಿ ಬಲವಾಗಿ ಕಚ್ಚಿದ್ದು, ಅದನ್ನು ಬಿಡಿಸಲು ಪ್ರಯತ್ನಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಾಕಿಂಗ್ ಮಾಡುತ್ತಿದ್ದ ಮಹಿಳೆ ಮೇಲೆ ಸಾಕು ನಾಯಿ ದಾಳಿ

ಗುರುಗ್ರಾಮ: ದೇಶಾದ್ಯಂತ ಬೀದಿ ನಾಯಿಗಳಿಂದ (Street dog) ಆಗುತ್ತಿರುವ ಸಮಸ್ಯೆಗಳ ಬಗ್ಗೆ ಕೇಳಿದ್ದೇವೆ. ಆದರೆ ಇದೀಗ ಸಾಕು ನಾಯಿಯೊಂದು (Pet dog) ಮಹಿಳೆಗೆ ಕಚ್ಚಿರುವ ಘಟನೆ ನಡೆದಿದೆ. ವಸತಿ ಸಂಕೀರ್ಣದಲ್ಲಿ ವಾಕಿಂಗ್ ಮಾಡುತ್ತಿದ್ದಾಗ ಸಾಕು ನಾಯಿಯೊಂದು ಮಹಿಳೆಯೊಬ್ಬರ ಮೇಲೆ ಎರಗಿದ (dog attack) ಘಟನೆ ಗುರುಗ್ರಾಮ್‌ನಲ್ಲಿ (gurugram) ನಡೆದಿದೆ. ಗಾಲ್ಫ್ ಕೋರ್ಸ್ ರಸ್ತೆ ಪ್ರದೇಶದ ಐಷಾರಾಮಿ ವಸತಿ ಸಂಕೀರ್ಣದಲ್ಲಿ ಮಹಿಳೆಯ ಮೇಲೆ ಸಾಕು ನಾಯಿ ದಾಳಿ ಮಾಡಿದೆ. ಇದರಿಂದ ಮಹಿಳೆಗೆ ಗಂಭೀರ ಗಾಯಗಳಾಗಿವೆ. ಇದರ ಆಘಾತಕಾರಿ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.



ವಸತಿ ಸಂಕೀರ್ಣದೊಳಗೆ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದಾಗ ಇನ್ನೊಬ್ಬ ಮಹಿಳೆ ಹಿಡಿದುಕೊಂಡು ಬರುತ್ತಿದ್ದ ಸಾಕುನಾಯಿ ದಾಳಿ ಮಾಡಿದೆ. ಆಕೆಯ ಕೈಯನ್ನು ಬಲವಾಗಿ ಕಚ್ಚಿದ್ದು, ಅದನ್ನು ಬಿಡಿಸಲು ನಾಯಿಯನ್ನು ಕರೆದುಕೊಂಡು ಬರುತ್ತಿದ್ದ ಮಹಿಳೆ ಮತ್ತು ಇತರರು ಪ್ರಯತ್ನಿಸುತ್ತಿರುವುದು ವಿಡಿಯೊ ದೃಶ್ಯದಲ್ಲಿ ಕಾಣಬಹುದು.

ಏನಿದೆ ವಿಡಿಯೊದಲ್ಲಿ?

ಗಾಲ್ಫ್ ಕೋರ್ಸ್ ರಸ್ತೆ ಪ್ರದೇಶದ ವಸತಿ ಸಂಕೀರ್ಣದಲ್ಲಿ ಭಾನುವಾರ ಸಂಜೆ ಮಹಿಳೆಯೊಬ್ಬರು ತನ್ನ ಗೆಳೆಯರೊಂದಿಗೆ ಮಾತನಾಡುತ್ತ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಇದೇ ಸಂದರ್ಭದಲ್ಲಿ ಇನ್ನೊಂದು ಬದಿಯಿಂದ ಇನ್ನೊಬ್ಬ ಮಹಿಳೆ ಸಾಕು ನಾಯಿಯನ್ನು ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಅವರ ನಾಯಿ ಇದ್ದಕ್ಕಿದ್ದಂತೆ ಎದುರಿಂದ ಬರುತ್ತಿದ್ದ ಮಹಿಳೆಯ ಮೇಲೆ ಹಾರಿದೆ. ಇದರಿಂದ ಅವರು ಕೆಳಗೆ ಬಿದ್ದಿದ್ದಾರೆ. ನಾಯಿಯನ್ನು ನಿಯಂತ್ರಿಸಲು ಅಲ್ಲಿದ್ದ ಸಾಕಷ್ಟು ಮಂದಿ ಪ್ರಯತ್ನಿಸಿದರೂ ನಾಯಿ ಮಹಿಳೆಯ ಕೈಯನ್ನು ಬಲವಾಗಿ ಹಿಡಿದಿತ್ತು. ಕನಿಷ್ಠ 15 ಸೆಕೆಂಡುಗಳ ಕಾಲ ನಾಯಿ ಮಹಿಳೆಯ ಕೈಯನ್ನು ಕಚ್ಚಿದ್ದರಿಂದ ಗಂಭೀರ ಗಾಯವಾಗಿದೆ.

ಇದನ್ನೂ ಓದಿ: Nandini Kashyap: ಹಿಟ್‌ ಆ್ಯಂಡ್‌ ರನ್‌ ಕೇಸ್‌; ಅಸ್ಸಾಮಿ ನಟಿ ಅರೆಸ್ಟ್‌

ಇತ್ತೀಚೆಗೆ ದೆಹಲಿಯ ಎನ್‌ಸಿಆರ್‌ನಲ್ಲಿನ ಹಲವು ವಸತಿ ಸಂಕೀರ್ಣಗಳ ಸಾಕುಪ್ರಾಣಿಗಳು ಇತರರ ಮೇಲೆ ದಾಳಿ ನಡೆಸಿರುವುದು ವರದಿಯಾಗಿದೆ. ಇದರಿಂದ ವಸತಿ ಸಂಕೀರ್ಣದ ಆವರಣದಲ್ಲಿ ಸಾಕುಪ್ರಾಣಿಗಳನ್ನು ಕರೆದುಕೊಂಡು ಬರದಂತೆ ಕಠಿಣ ನಿಯಮಗಳನ್ನು ಹೇರಲು ಅನೇಕರು ಒತ್ತಾಯಿಸಿದ್ದಾರೆ ಎನ್ನಲಾಗಿದೆ.