ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮೆಹಂದಿ ಹಚ್ಚುವಾಗಲೇ ಧಮ್‌ ಮಾರೋ ಧಮ್‌; ಮಾರ್ಡನ್‌ ಮಹಿಳೆಯರ ಕರ್ವಾ ಚೌತ್‍ ವಿಡಿಯೋ ವೈರಲ್‌

Women Enjoy Hookah: ಕರ್ವಾ ಚೌತ್ ಒಂದು ಪವಿತ್ರ ಹಬ್ಬವಾಗಿದ್ದು, ವಿವಾಹಿತ ಮಹಿಳೆಯರು ಸೂರ್ಯೋದಯದಿಂದ ಚಂದ್ರೋದಯದವರೆಗೆ ಉಪವಾಸ ಮಾಡುತ್ತಾರೆ. ಈ ನಡುವೆ ಪಶ್ಚಿಮ ದೆಹಲಿಯಲ್ಲಿ ಸುಂದರ ದೃಶ್ಯವೊಂದು ಕಂಡುಬಂತು. ಮಹಿಳೆಯರು ಒಟ್ಟಾಗಿ ಕುಳಿತು ಮೆಹಂದಿ ಹಚ್ಚಿದ್ದಲ್ಲದೆ ಹುಕ್ಕಾ ಸೇದಿದ್ದಾರೆ.

ಮೆಹಂದಿ ಹಚ್ಚುವಾಗಲೇ ಧಮ್‌ ಮಾರೋ ಧಮ್‌

-

Priyanka P Priyanka P Oct 10, 2025 5:25 PM

ದೆಹಲಿ: ಕರ್ವಾ ಚೌತ್ ಹಬ್ಬದ ಮುನ್ನಾದಿನವನ್ನು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಆಚರಿಸಲು ಮಹಿಳೆಯರ ಗುಂಪೊಂದು ಒಟ್ಟುಗೂಡಿದ ಸುಂದರ ದೃಶ್ಯವೊಂದು ಪಶ್ಚಿಮ ದೆಹಲಿಯಲ್ಲಿ ಕಂಡುಬಂತು. ಇದರ ವಿಡಿಯೊ ವೈರಲ್ (Viral Video) ಆಗಿದೆ. ಸಾಂಪ್ರದಾಯಿಕವಾಗಿ, ಕರ್ವಾ ಚೌತ್ (Karwa Chauth) ಒಂದು ಪವಿತ್ರ ಹಬ್ಬವಾಗಿದ್ದು, ವಿವಾಹಿತ ಮಹಿಳೆಯರು ಸೂರ್ಯೋದಯದಿಂದ ಚಂದ್ರೋದಯದವರೆಗೆ ಉಪವಾಸ ಮಾಡುತ್ತಾರೆ. ತಮ್ಮ ಗಂಡಂದಿರ ದೀರ್ಘಾಯುಷ್ಯ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಾರೆ. ಆದರೆ, ಉಪವಾಸ ದಿನ ಪ್ರಾರಂಭವಾಗುವ ಮೊದಲು, ಮಹಿಳೆಯರು ಮೆಹಂದಿ (Mehndi) ಹಚ್ಚಲು, ನಗು ಹಂಚಿಕೊಳ್ಳಲು ಮತ್ತು ಮುಂದಿನ ಆಚರಣೆಗಳಿಗೆ ಸಿದ್ಧರಾಗಲು ಒಟ್ಟಾಗಿ ಸೇರುತ್ತಾರೆ.

ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೊ ಒಂದು ಮಿಲಿಯನ್‍ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದರಲ್ಲಿ ಮಹಿಳೆಯರ ಗುಂಪೊಂದು ವೃತ್ತಾಕಾರವಾಗಿ ಕುಳಿತು, ಕೈಗಳಲ್ಲಿ ಗೋರಂಟಿ (ಮೆಹಂದಿ) ವಿನ್ಯಾಸಗಳಿಂದ ಅಲಂಕರಿಸಿಕೊಂಡು, ಹರಟೆ ಹೊಡೆಯುತ್ತಾ, ನಗುತ್ತಾ, ಹಬ್ಬದ ವಾತಾವರಣವನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ಆದರೆ, ಈ ಖುಷಿಯ ನಡುವೆ ಇನ್ನೊಂದು ತಿರುವು ಪಡೆದುಕೊಂಡಿದೆ. ಮಹಿಳೆಯರು ತಮ್ಮ ಕೈಗಳಿಗೆ ಮೆಹಂದಿಯನ್ನು ಹಚ್ಚುವುದಕ್ಕಾಗಿ ಕುಳಿತುಕೊಂಡಾಗ, ವ್ಯಕ್ತಿಯೊಬ್ಬ ಹುಕ್ಕಾ ಸೇದಲು ಅವರಿಗೆ ಸಹಾಯ ಮಾಡಿದ್ದಾನೆ.

ಇಲ್ಲಿದೆ ವಿಡಿಯೊ:

ಈ ಮಹಿಳೆಯರಿಗೆ, ಆ ಸಂಜೆ ಕೇವಲ ಆಚರಣೆಗಿಂತ ಹೆಚ್ಚಿನದಾಗಿತ್ತು. ಅದು ಸಹೋದರತ್ವ ಮತ್ತು ಒಗ್ಗಟ್ಟಿನ ಆಚರಣೆಯಾಗಿತ್ತು. ಮುಗುಳ್ನಗೆ, ಸಂಗೀತ ಮತ್ತು ಮೆಹಂದಿಯ ಸುವಾಸನೆಯ ನಡುವೆ, ಅವರು ಆಟಗಳನ್ನು ಆಡಿದರು, ಸೆಲ್ಫಿಗಳನ್ನು ಕ್ಲಿಕ್ಕಿಸಿದರು ಮತ್ತು ಆ ಕ್ಷಣವನ್ನು ಅತ್ಯಂತ ಸಂಭ್ರಮದಿಂದ ಆನಂದಿಸಿದರು.

ಇದನ್ನೂ ಓದಿ: Viral Video: ನಡುರಸ್ತೆಯಲ್ಲಿ ಯುವಕರ ಬಿಗ್‌ ಫೈಟ್‌! ಧೂಮ್‌ ಮಚಾಲೇ ಎಂದ ನೆಟ್ಟಿಗರು- ವಿಡಿಯೊ ಇದೆ

ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕೆಲವು ಬಳಕೆದಾರರು, ಇಂತಹ ಪವಿತ್ರ ಸಂದರ್ಭದಲ್ಲಿ ಹುಕ್ಕಾ ಸೇದುವುದನ್ನು ಅಗೌರವ ಎಂದು ಕರೆದಿದ್ದಾರೆ. ಇನ್ನು ಕೆಲವರು, ಅದನ್ನು ಸಂತೋಷ ಮತ್ತು ಪ್ರತ್ಯೇಕತೆಯ ನಿರುಪದ್ರವ ಅಭಿವ್ಯಕ್ತಿ ಎಂದು ತಿಳಿಸಿದ್ದಾರೆ. ಕರ್ವಾ ಚೌತ್‌ನ ಸಾರವು ಪ್ರೀತಿ ಮತ್ತು ಭಕ್ತಿಯಲ್ಲಿದೆ. ಈ ಮಹಿಳೆಯರು ಅದನ್ನು ತಮ್ಮದೇ ಆದ ರೀತಿಯಲ್ಲಿ ಆಚರಿಸಲು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಇನ್ನೂ ಕೆಲವರು ಖುಷಿಪಟ್ಟರು.

ಹಳೆಯ ಸಂಪ್ರದಾಯ ಮತ್ತು ಹೊಸದನ್ನು ನಿರಂತರವಾಗಿ ಸಮತೋಲನಗೊಳಿಸುವ ನಗರದಲ್ಲಿ, ಇದು ಬದಲಾಗುತ್ತಿರುವ ಭಾರತದ ಸಂಕೇತ ಎಂದರೆ ತಪ್ಪಾಗಲಾರದು. ಅಲ್ಲಿ ಮಹಿಳೆಯರು ಸಂಪ್ರದಾಯ ಮತ್ತು ಸ್ವಾತಂತ್ರ್ಯ ಎರಡನ್ನೂ ಸ್ವೀಕರಿಸುತ್ತಾರೆ. ಮೆಹಂದಿ ಹಚ್ಚಿದ ಕೈಗಳು ಸಂಸ್ಕೃತಿಯನ್ನು ಹಿಡಿದಿಟ್ಟುಕೊಳ್ಳಬಹುದು ಹಾಗೂ ಹುಕ್ಕಾ ಸೇದುವ ಮೂಲಕ ಸ್ವಲ್ಪ ಮೋಜನ್ನು ಕೂಡ ಪಡೆಯಬಹುದು.