Suresh Gudaganavar Column: ತಲೆಕೂದಲಿನಲ್ಲಿ ದಾಖಲೆ !
ಸ್ಮಿತಾ 14ನೇ ವಯಸ್ಸಿನವರೆಗೆ ಬಾಬ್ ಕಟ್ ಶೈಲಿಯನ್ನು ಹೊಂದಿದ್ದರೂ, 2012ರಲ್ಲಿ ತನ್ನ ಎರಡನೇ ಮಗನಿಗೆ ಜನ್ಮ ನೀಡಿದ ನಂತರ ಕೂದಲನ್ನು ಬೆಳೆಯಲು ಬಿಡಲು ನಿರ್ಧರಿಸಿದರು. ಸ್ಮಿತಾ ಸಾಮಾನ್ಯ ವಾಗಿ ವಾರಕ್ಕೆ ಎರಡು ಬಾರಿ ತನ್ನ ಕೂದಲನ್ನು ತೊಳೆಯುತ್ತಾರೆ. ಅವರು ಕೂದಲನ್ನು ತೊಳೆದು ಒಣಗಿಸುವ ಮೊದಲು 40-45 ನಿಮಿಷಗಳನ್ನು ಕಳೆಯುತ್ತಾರೆ. “ನಾನು ಒಂದು ಹಾಳೆಯನ್ನು ಕೆಳಗೆ ಇಡುತ್ತೇನೆ. ಅದರ ಮೇಲೆ ತನ್ನ ಹಾಸಿಗೆಯ ಮೇಲೆ ನಿಂತು ಕೂದಲನ್ನು ಉದ್ದವಾಗಿ ಬಿಡುತ್ತೇನೆ" ಎಂದು ಅವರು ಹೇಳುತ್ತಾರೆ


ಸುರೇಶ ಗುದಗನವರ
ನಿಸರ್ಗದಲ್ಲಿ ದೊರೆಯುವ ಸಸ್ಯೋತ್ಪನ್ನ ಮತ್ತು ಇತರ ವಿಧಾನ ಬಳಸಿ, ಜಗತ್ತಿನ ಅತಿ ಉದ್ದದ ತಲೆಕೂದಲನ್ನು ಬೆಳೆಸಿದ ದಾಖಲೆ ಈ ಮಹಿಳೆಯದ್ದು!
ಹವ್ಯಾಸಗಳು ನಾನಾ ಬಗೆಯ ಮುಖಗಳನ್ನು ಹೊಂದಿವೆ. ಅದು ವಯೋಮಾನ, ಕಾಲ-ಪರಿಸರ, ಸಂದರ್ಭ, ಸನ್ನಿವೇಶಗಳಿಗೆ ಅನುಗುಣವಾಗಿ ಮೇಳೈಸಿರುತ್ತದೆ ಎಂದು ಹೇಳಬುದೇನೊ! ಬಹುತೇಕ ಜನರಲ್ಲಿ ಹಲವಾರು ಹವ್ಯಾಸಗಳಿರುತ್ತವೆ. ಕೆಲವರಿಗೆ ಓದುವುದು ಸಾಹಿತ್ಯ ರಚನೆಯಲ್ಲಿ ತೊಡಗು ವುದು, ಮೊಬೈಲ್ ವಿಡಿಯೋ ನೋಡುವುದು, ಪ್ರವಾಸದಲ್ಲಿ ತೊಡಗುವುದು, ಹರಟೆ ಹೊಡೆಯು ವುದು, ಗಾಯನ, ಚಿತ್ರಕಲೆ, ಫೋಟೋಗ್ರಾಪಿ, ಈಜುವುದು ಇತ್ಯಾದಿಯಾಗಿ ಹಲವಾರು ಬಗೆಯ ಹವ್ಯಾಸಗಳು ಒಳಗೊಂಡಿವೆ. ಆದರೆ ಉತ್ತರಪ್ರದೇಶದ 47 ವರ್ಷದ ಸ್ಮಿತಾ ಶ್ರೀವಾಸ್ತವ ಅವರು ಉದ್ದನೆಯ ಕೂದಲು ಬೆಳೆಸುವ ಹವ್ಯಾಸವನ್ನು ಹೊಂದಿದ್ದಾರೆ.
ಅಚ್ಚರಿಯಲ್ಲವೆ! ಹೀಗಾಗಿ ಅವರು ಅತಿ ಉದ್ದನೆಯ ಕೂದಲನ್ನು ಹೊಂದಿರುವ ಗಿನ್ನೆಸ್ ವಿಶ್ವದಾಖಲೆಯನ್ನು ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಉತ್ತರಪ್ರದೇಶದ ಪ್ರಯಾಗರಾಜದ ಅಲ್ಲಾಪುರ ಪ್ರದೇಶದ ಸ್ಮಿತಾ ಅವರು ತಾಯಿ ಸುಶೀಲಾ ಶ್ರೀವಾಸ್ತವ ಅವರಿಂದ 75ನೇ ವಯಸ್ಸಿನಲ್ಲಿಯೂ ಮೂರು ಅಡಿ ಉದ್ದ ಕೂದಲನ್ನು ಕಾಪಾಡಿಕೊಳ್ಳುವ ಸಮರ್ಪಣೆಯಿಂದ ಪ್ರೇರಿತರಾಗಿದ್ದರು.
ಸ್ಮಿತಾ 14ನೇ ವಯಸ್ಸಿನವರೆಗೆ ಬಾಬ್ ಕಟ್ ಶೈಲಿಯನ್ನು ಹೊಂದಿದ್ದರೂ, 2012ರಲ್ಲಿ ತನ್ನ ಎರಡನೇ ಮಗನಿಗೆ ಜನ್ಮ ನೀಡಿದ ನಂತರ ಕೂದಲನ್ನು ಬೆಳೆಯಲು ಬಿಡಲು ನಿರ್ಧರಿಸಿದರು. ಸ್ಮಿತಾ ಸಾಮಾನ್ಯವಾಗಿ ವಾರಕ್ಕೆ ಎರಡು ಬಾರಿ ತನ್ನ ಕೂದಲನ್ನು ತೊಳೆಯುತ್ತಾರೆ. ಅವರು ಕೂದಲನ್ನು ತೊಳೆದು ಒಣಗಿಸುವ ಮೊದಲು 40-45 ನಿಮಿಷಗಳನ್ನು ಕಳೆಯುತ್ತಾರೆ. “ನಾನು ಒಂದು ಹಾಳೆ ಯನ್ನು ಕೆಳಗೆ ಇಡುತ್ತೇನೆ. ಅದರ ಮೇಲೆ ತನ್ನ ಹಾಸಿಗೆಯ ಮೇಲೆ ನಿಂತು ಕೂದಲನ್ನು ಉದ್ದವಾಗಿ ಬಿಡುತ್ತೇನೆ" ಎಂದು ಅವರು ಹೇಳುತ್ತಾರೆ.
ಇದನ್ನೂ ಓದಿ: Srivathsa Joshi Column: ಈಸ್ಟರ್ ಎಷ್ಟು ಸೌರಮಾನವೋ ಅಷ್ಟೇ ಚಾಂದ್ರಮಾನವೂ ಹೌದು !
ಅವರ ಕೂದಲು ಜಡೆಯಾಗಿ ಒಣಗಿದ ನಂತರ ಅದನ್ನು ಜಡೆ ಮಾಡಿ ಬನ್ ಆಗಿ ಕಟ್ಟುತ್ತಾರೆ. “ಜನರು ನನ್ನ ಬಳಿಗೆ ಬರುತ್ತಾರೆ, ನನ್ನ ಕೂದಲನ್ನು ಮುಟ್ಟುತ್ತಾರೆ. ಪೋಟೋಗಳನ್ನು
ತೆಗೆದು ಕೊಳ್ಳುತ್ತಾರೆ ಮತ್ತು ನನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಾರೆ. ನಾನು ಬಳಸುವ ಉತ್ಪನ್ನಗಳ ಬಗ್ಗೆ ವಿಚಾರಿಸುತ್ತಾರೆ. ಆರೋಗ್ಯಕರ ಕೂದಲನ್ನು ಹೊಂದಲು ಅದೇ ರೀತಿ ಮಾಡುವ ಉದ್ದೇಶವನ್ನು ವ್ಯಕ್ತಪಡಿಸುತ್ತಾರೆ" ಎಂದು ಸ್ಮಿತಾ ತಿಳಿಸುತ್ತಾರೆ.
ಶಾಂಪೂ ಬಳಸುವುದಿಲ್ಲ!
ಅವರು ಕೃತಕ ಶಾಂಪೂಗಳು ಮತ್ತು ಉತ್ಪನ್ನಗಳನ್ನು ಕೂದಲಿನ ಆರೈಕೆಗೆ ಬಳಸುವುದಿಲ್ಲ ಅವುಗಳ ಬದಲಾಗಿ ಸೀಗೆಕಾಯಿ, ಬೆಟ್ಟದ ನೆಲ್ಲಿಕಾಯಿ ಹಾಗೂ ರೀತಾ (ಸಪಿಂಡಸ್ ಮುಕೊರೊಸ್ಸಿ) ಮಿಶ್ರಣ ವನ್ನು ಬಳಸುತ್ತಾರೆ. ಅಲ್ಲದೇ ಮೊಟ್ಟೆ, ಈರುಳ್ಳಿ ರಸ ಅಥವಾ ಅಲೋವೆರಾ ಮತ್ತು ಮ್ಯಾಂಗ್ರೇಲ್ ಜೊತೆಗೆ ಸೇರಿಸುತ್ತಾರೆ. ಕಳೆದ 20 ವರ್ಷಗಳಿಂದ ಅವರು ಎಂದಿಗೂ ಕೂದಲನ್ನು ಕತ್ತರಿಸಿಲ್ಲ.
ಅವರ ಕೂದಲಿನ ಉದ್ದ 236.22 ಸೆಂ.ಮೀ (7 ಅಡಿ 9 ಇಂಚು) ಆಗಿದ್ದು, ಸ್ಮಿತಾ ಶ್ರೀವಾಸ್ತವ ಹಲವು ದಾಖಲೆ ಪುಸ್ತಕದಲ್ಲಿ ಮನ್ನಣೆ ಗಳಿಸಿದ್ದಾರೆ. 2012ರಿಂದ ತನ್ನ ಅಸಾಧಾರಣ ಕೂದಲಿನ ಉದ್ದಕ್ಕಾಗಿ ಲಿಮ್ಕಾ ಬುಕ್ ಆಪ್ ವರ್ಲ್ಡ್ ರೆಕಾರ್ಡ್ಸ್ ಹೊಂದಿರುವ ಅವರು 2023ರ ನವೆಂಬರ್ 29ರಂದು ಗಿನ್ನೆಸ್ ವಿಶ್ವ ದಾಖಲೆ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಮಾರ್ಚ್6, 2024ರಂದು ಏಶಿಯಾ ಬುಕ್ ಆ- ರೆಕಾರ್ಡ್ಸ್‌ನಲ್ಲಿಯೂ ಸಹ ಮನ್ನಣೆ ಗಳಿಸಿದ್ದಾರೆ.
“ಉದ್ದ ಕೂದಲು ಮಹಿಳೆಯರ ಸೌಂದರ್ಯವನ್ನು ಹೆಚ್ಚಿಸುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ, ಸಾಂಪ್ರದಾಯಿಕವಾಗಿ ದೇವತೆಗಳು ಬಹಳ ಉದ್ದ ಕೂದಲನ್ನು ಹೊಂದಿದ್ದರು. ನಮ್ಮ ಸಮಾಜದಲ್ಲಿ ಕೂದಲು ಕತ್ತರಿಸುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಮಹಿಳೆಯರು ಕೂದಲು ಬೆಳೆಸುತ್ತಿದ್ದರು" ಎಂಬುದು ಅವರ ಅಭಿಪ್ರಾಯ.