ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವೈದ್ಯಕೀಯ ಅಧ್ಯಯನಕ್ಕೆ ಮೃತದೇಹಗಳ ಬರ !

ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಅಂಗರಚನಾಶಾಸ್ತ್ರದ ಅಧ್ಯಯನ ಬಹಳ ಮಹತ್ವದ್ದಾಗಿದೆ. ಭಾರತೀಯ ವೈದ್ಯಕೀಯ ಮಂಡಳಿಯ ನಿಯಮಗಳ ಪ್ರಕಾರ, 1.4ರ ಪ್ರಮಾಣದಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಮೃತ ದೇಹಗಳ ಅಗತ್ಯ ಇದೆ. 10 ವಿದ್ಯಾರ್ಥಿಗಳಿಗೆ ಅಧ್ಯಯನ, ಸಂಶೋಧನೆ ಉದ್ದೇಶಕ್ಕೆ ಕನಿಷ್ಠ ಒಂದು ಮೃತದೇಹ ಬೇಕು. ಆದರೆ, ಹಲವು ವೈದ್ಯಕೀಯ ಕಾಲೇಜುಗಳಲ್ಲಿ ಈ ಪ್ರಮಾಣದಲ್ಲಿ ಲಭ್ಯವಾಗುತ್ತಿಲ್ಲ.

ವೈದ್ಯಕೀಯ ಅಧ್ಯಯನಕ್ಕೆ ಮೃತದೇಹಗಳ ಬರ !

Ashok Nayak Ashok Nayak Jul 21, 2025 2:56 PM

ರಾಜ್ಯದ 75 ಮೆಡಿಕಲ್ ಕಾಲೇಜುಗಳಲ್ಲಿ ಸಂಶೋಧನೆಗೆ ಮೃತದೇಹಗಳ ಕೊರತೆ

10 ವಿದ್ಯಾರ್ಥಿ ಗಳಿಗೆ ಕನಿಷ್ಠ ಒಂದು ಮೃತದೇಹ ಅಧ್ಯಯನಕ್ಕೆ ಬೇಕು

25ರಿಂದ 30 ವಿದ್ಯಾರ್ಥಿಗಳು ಒಂದು ಮೃತ ದೇಹದಲ್ಲಿ ಅಧ್ಯಯನ

ಬೆಂಗಳೂರು: ವೈದ್ಯಕೀಯ ವಿದ್ಯಾರ್ಥಿಗಳು ಮಾನವ ಅಂಗರಚನಾಶಾಸ್ತ್ರ ಮತ್ತು ಶಸ್ತ್ರ ಚಿಕಿತ್ಸಾ ತಂತ್ರಗಳನ್ನು ಕಲಿಯಲು ರಾಜ್ಯದ ವಿವಿಧ ವೈದ್ಯಕೀಯ ಕಾಲೇಜುಗಳಲ್ಲಿ ಮೃತ ದೇಹಗಳ ಕೊರತೆ ಕಾಡುತ್ತಿದೆ. ರಾಜ್ಯದ ಪ್ರತಿ ಜಿಲ್ಲೆಗೊಂದು ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲಾಗು ತ್ತಿದೆ. ಈ ಹಿಂದೆ ರಾಜ್ಯದಲ್ಲಿ 25ಕ್ಕಿಂತ ಹೆಚ್ಚು ವೈದ್ಯಕೀಯ ಕಾಲೇಜುಗಳಿದ್ದವು. ಇದೀಗ ಇವುಗಳ ಸಂಖ್ಯೆ 75ಕ್ಕಿಂತ ಹೆಚ್ಚು ವೈದ್ಯಕೀಯ ಕಾಲೇಜುಗಳಿವೆ. ಪ್ರತಿ ವೈದ್ಯಕೀಯ ಕಾಲೇಜಿಗೆ 100 ರಿಂದ 150 ವಿದ್ಯಾರ್ಥಿಗಳ ದಾಖಲಾಗುತ್ತಾರೆ. ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಅಂಗರಚನಾಶಾಸ್ತ್ರದ ಅಧ್ಯಯನ ಬಹಳ ಮಹತ್ವದ್ದಾಗಿದೆ. ಭಾರತೀಯ ವೈದ್ಯಕೀಯ ಮಂಡಳಿಯ ನಿಯಮಗಳ ಪ್ರಕಾರ, 1.4ರ ಪ್ರಮಾಣದಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಮೃತ ದೇಹಗಳ ಅಗತ್ಯ ಇದೆ. 10 ವಿದ್ಯಾರ್ಥಿಗಳಿಗೆ ಅಧ್ಯಯನ, ಸಂಶೋಧನೆ ಉದ್ದೇಶಕ್ಕೆ ಕನಿಷ್ಠ ಒಂದು ಮೃತದೇಹ ಬೇಕು. ಆದರೆ, ಹಲವು ವೈದ್ಯಕೀಯ ಕಾಲೇಜುಗಳಲ್ಲಿ ಈ ಪ್ರಮಾಣದಲ್ಲಿ ಲಭ್ಯವಾಗುತ್ತಿಲ್ಲ.

25 ರಿಂದ 30 ವಿದ್ಯಾರ್ಥಿಗಳು ಒಂದು ಮೃತದೇಹದಲ್ಲಿ ಅಧ್ಯಯನ ನಡೆಸಲಾಗುತ್ತಿದೆ. ಇದರಿಂದ ಆಳ ಅಧ್ಯಯನ, ಸಂಶೋಧನೆಗೆ ತೊಡಕಾಗುತ್ತಿದೆ. ಪ್ರತಿ ವರ್ಷ ವೈದ್ಯಕೀಯ ಕ್ಷೇತ್ರಕ್ಕೆ ಪ್ರವೇಶ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ನೀಟ್ ಪ್ರವೇಶ ಪರೀಕ್ಷೆ ಪ್ರಾರಂಭವಾದಾಗಿನಿಂದ ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಸಹ ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆದುಕೊಳ್ಳುತ್ತಿದ್ದಾರೆ. ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ಪ್ರಾರಂಭಿಸಬೇಕು ಎಂಬ ಉದ್ದೇಶ ದಿಂದ ರಾಜ್ಯ ಸರಕಾರವು ರಾಜ್ಯದ ಹಲವು ಜಿಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸು ತ್ತಿದೆ.

ಇದನ್ನೂ ಓದಿ: BGS Medical College: ನೆಲಮಂಗಲದಲ್ಲಿ ಬಿಜಿಎಸ್ ಮೆಡಿಕಲ್ ಕಾಲೇಜು ಉದ್ಘಾಟಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ

ಇಂತಹ ಕಾಲೇಜುಗಳಲ್ಲಿಯೇ ಮೃತದೇಹಗಳ ಕೊರತೆ ಕಾಣಿಸುತ್ತಿದೆ. ಗದಗ, ಹಾವೇರಿ, ಕೊಡಗು, ವಿಜಯನಗರ ಸೇರಿದಂತೆ ಇತರೆ ಕಾಲೇಜುಗಳು ಇತ್ತೀಚೆಗಿನ ವರ್ಷದಲ್ಲಿ ಆರಂಭಗೊಂಡ ವೈದ್ಯ ಕೀಯ ಕಾಲೇಜುಗಳಾಗಿವೆ. ಇಂತಹ ಕಾಲೇಜುಗಳಲ್ಲಿಯೇ ಅತಿ ಹೆಚ್ಚು ಮೃತದೇಹಗಳ ಕೊರತೆ ಇದ್ದು, ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಮಸ್ಯೆಯಾಗಿದೆ.

ಕಾಯಿದೆ ಏನಿದೆ?

ಕರ್ನಾಟಕ ಅಂಗರಚನಾ ಶಾಸ್ತ್ರ ಕಾಯಿದೆ 1957 ಮತ್ತು ತಿದ್ದುಪಡಿ 1999ರ ನಿಯಮದಲ್ಲಿ ವೈದ್ಯ ಕೀಯ ಶಿಕ್ಷಣ ಮತ್ತು ಸಂಶೋಧನೆಯ ಉದ್ದೇಶಕ್ಕಾಗಿ ವಿಶ್ವವಿದ್ಯಾಲಯಗಳು ಮೃತದೇಹವನ್ನು ದಾನವಾಗಿ ಪಡೆಯಬಹುದಾಗಿದೆ. ಮೃತದೇಹವು 6 ಗಂಟೆಗಳ ಬಳಿಕ ಕೊಳೆಯಲು ಪ್ರಾರಂಭ ವಾಗುತ್ತದೆ. ಆದ್ದರಿಂದ ವ್ಯಕ್ತಿ ಮೃತಪಟ್ಟ 6 ಗಂಟೆಯೊಳಗೆ ದೇಹವನ್ನು ದಾನವಾಗಿ ಪಡೆಯ ಬೇಕಾಗುತ್ತದೆ.

ವ್ಯಕ್ತಿ ಬದುಕಿರುವಾಗಲೇ ತಮ್ಮ ದೇಹ ದಾನದ ಬಗ್ಗೆ ಸಮ್ಮತಿಯ ಉಯಿಲನ್ನು ಅಧಿಕೃತ ವೈದ್ಯ ಕೀಯ ಸಂಸ್ಥೆಗಳಲ್ಲಿ ನೋಂದಾಯಿಸಬಹುದು. ಅರ್ಜಿ ಸಲ್ಲಿಸದಿದ್ದಲ್ಲಿ ಮೃತ ವ್ಯಕ್ತಿಯ ದೇಹ ದಾನಕ್ಕೆ ಕುಟುಂಬಸ್ಥರು ಇಚ್ಛಿಸಿದರೆ ಅಫಿಡವಿಟ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಮರಣದ ಕಾರಣವನ್ನು ದೃಢೀಕರಿಸಿದ ಪ್ರಮಾಣಪತ್ರದೊಂದಿಗೆ ಮೃತದೇಹವನ್ನು ಹಸ್ತಾಂತರಿಸಬೇಕಾಗು ತ್ತದೆ. ವ್ಯಕ್ತಿಗಳು ಜೀವಿತಾವಧಿಯಲ್ಲಿ ದಾನಕ್ಕೆ ಪ್ರತಿಜ್ಞೆ ಕೈಗೊಂಡಿದ್ದರೂ ಮರಣ ಹೊಂದಿದ ಸಂದರ್ಭದಲ್ಲಿ ಕುಟುಂಬಸ್ಥರು ವೈದ್ಯಕೀಯ ಸಂಸ್ಥೆಗಳಿಗೆ ಮಾಹಿತಿ ನೀಡದ ಪರಿಣಾಮ ದೇಹ ದಾನಕ್ಕೆ ಹಿನ್ನಡೆಯಾಗುತ್ತಿದೆ.

ಖಾಸಗಿ ಕಾಲೇಜುಗಳ ಲಾಬಿ?

ಸರಕಾರಿ ವೈದ್ಯಕೀಯ ಕಾಲೇಜುಗಳು ಖಾಸಗಿ ವೈದ್ಯಕೀಯ ಕಾಲೇಜುಗಳೊಂದಿಗೆ ಸ್ಪರ್ಧೆವೊಡ್ಡುವ ಪರಿಸ್ಥಿತಿ ಎದುರಾಗಿದೆ. ಖಾಸಗಿ ವೈದ್ಯಕೀಯ ಕಾಲೇಜುಗಳು ಬಲಿಷ್ಠರ ಕಪಿಮುಷ್ಠಿಯಲ್ಲಿರುವ ಕಾರಣ ಸುಲಭವಾಗಿ ಎಲ್ಲಾ ಸೌಕರ್ಯಗಳನ್ನು ಪಡೆದುಕೊಳ್ಳುತ್ತಿವೆ. ಮೃತದೇಹಗಳನ್ನು ಸಹ ಲಾಬಿ ಮಾಡಿ ಪಡೆದುಕೊಳ್ಳುತ್ತಿವೆ. ನಾನಾ ರೀತಿಯ ಅಮಿಷ ಇರಬಹುದು ಅಥವಾ ಪ್ರಭಾವ ಬೀರಿ ಮೃತದೇಹಗಳನ್ನು ಪಡೆದುಕೊಳ್ಳುತ್ತಿವೆ. ತಮ್ಮ ಕಾಲೇಜಿನ ಫಲಿತಾಂಶವನ್ನು ಉತ್ತಮವಾಗಿ ಬರು ವಂತೆ ಮಾಡಿಕೊಳ್ಳಲು ಖಾಸಗಿ ವೈದ್ಯಕೀಯ ಕಾಲೇಜುಗಳು ಭಾರೀ ಪ್ರಮಾಣದಲ್ಲಿ ಲಾಬಿ ನಡೆಸು ತ್ತಿವೆ.

ಹೊಸ ವೈದ್ಯ ಕಾಲೇಜಿಗೆ ತೊಂದರೆ ವೈದ್ಯಕೀಯ ಶಿಕ್ಷಣ ಇಲಾಖೆ ಮೂಲಗಳ ಪ್ರಕಾರ, ಕೊಡಗಿನ ವೈದ್ಯಕೀಯ ಕಾಲೇಜು ಶವಗಳ ಕೊರತೆಯಲ್ಲಿ ಮೊದಲ ಸ್ಥಾನ ಇದ್ದರೆ, ವಿಮ್ಸ್ ಎರಡನೇ ಸ್ಥಾನ ದಲ್ಲಿದೆ. ಇತ್ತೀಚೆಗಿನ ದಿನದಲ್ಲಿ ಶವಗಳ ಕೊರತೆ ಹೆಚ್ಚಾಗಿ ಕಾಡುತ್ತಿವೆ. ಕೊಡಗು, ವಿಜಯನಗರ, ಗದಗ ವೈದ್ಯಕೀಯ ವಿ‌ಜ್ಞಾನ ಸಂಸ್ಥೆಯು 10ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮೃತದೇಹಗಳ ಕೊರತೆ ಎದುರಿಸುತ್ತಿವೆ.

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ಸೇರಿ ಕೆಲ ವೈದ್ಯಕೀಯ ಕಾಲೇಜುಗಳಿಗೆ ಎಂಸಿಐ ಗೊತ್ತುಪಡಿಸಿದ ಸಂಖ್ಯೆಗಿಂತ ಹೆಚ್ಚಿನ ಸಂಸ್ಥೆಯಲ್ಲಿ ಮೃತ ದೇಹಗಳು ಲಭ್ಯವಾಗುತ್ತಿವೆ. ಆದರೆ, ಬೆಂಗಳೂರು ಹೊರತುಪಡಿಸಿ ಜಿಲ್ಲೆಗಳಲ್ಲಿರುವ ವೈದ್ಯಕೀಯ ಕಾಲೇಜುಗಳ ಮೃತದೇಹಗಳ ಕೊರತೆ ಇದೆ.