ಪತ್ರಿಕೋದ್ಯಮವೇ ಉಸಿರು
ಕೊಡಗಿನ ಮೂಲದ, ಸ್ಥಿತಿವಂತ ಕುಟುಂಬದ ಗಣಪತಿ ಅವರು ಪದವಿ ಮುಗಿಸಿ ಸೇನೆಗೆ ತೆರಳಿದ್ದರೆ ದೊಡ್ಡ ಹುದ್ದೆಯಲ್ಲಿ ಇರೋರು. ಅವರನ್ನು ಸೆಳೆದದ್ದು ಪತ್ರಿಕೋದ್ಯಮ. ಇಂಡಿ ಯನ್ ಎಕ್ಸ್‌ಪ್ರೆಸ್ ಮೂಲಕ ವೃತ್ತಿ ಜೀವನ ಆರಂಭಿಸಿ ಆನಂತರ ಮೈಸೂರಿಗೆ ಬಂದು ಸ್ಟಾರ್ ಆಫ್ ಮೈಸೂರು, ಮೈಸೂರು ಮಿತ್ರ ಆರಂಭಿಸಿದವರು ಗಣಪತಿ.


ಕುಂದೂರು ಉಮೇಶಭಟ್ಟ, ಮೈಸೂರು
ಹಿರಿಯ ಪತ್ರಕರ್ತ
ಮೈಸೂರು ಮಿತ್ರ ಹಾಗೂ ಆಂದೋಲನ ಭಿನ್ನ ಚಿಂತನೆಯ ಪತ್ರಿಕೋದ್ಯಮ ಶಾಲೆ ಗಳು. ಆದರೆ ಆಶಯ ಮಾತ್ರ ಸಮಾಜ ಸುಧಾರಣೆಯೇ ಆಗಿತ್ತು. ಚಿಂತನೆ ಬೇರೆ ಯಾಗಿದ್ದರೂ ಪತ್ರಕರ್ತ ಮೂಲ ಆಶಯ ಬಿಡಬಾರದು ಎಂಬುದು ಕೆಬಿಜಿ ನಿಲುವು.
ಅದು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ದ ಸಮಯ. ವಿಜಯ ಕರ್ನಾಟಕದ ಭಾಗವಾಗಿದ್ದ ಎಂಎಂಸಿಎಲ್ ಸಂಸ್ಥೆ ಸಿಇಒ ಸಂಪಾದಕೀಯ ವಿಭಾಗದ ಹಿರಿಯರ ಸಭೆ ನಡೆಸಿದ್ದರು. ಸ್ಟಾರ್ ಆಫ್ ಮೈಸೂರು ಪತ್ರಿಕೆ ಮುಂದಿಟ್ಟು ಮೈಸೂರು ಭಾಗದವರು ಈ ಪತ್ರಿಕೆಯನ್ನು ಯಾಕೆ ಇಷ್ಟಪಟ್ಟು ಓದುತ್ತಾರೆ.
ಇದರ ಯಶಸ್ಸಿನ ಹಿಂದಿರುವ ಗುಟ್ಟೇನು ಎನ್ನುವ ಪ್ರಶ್ನೆ ಕೇಳಿದ್ದರು. ಸಂಜೆ ಹೊತ್ತಿಗೆ ಟ್ಯಾಬ್ಲಾಯ್ಡ್ ಶೈಲಿಯ ಪತ್ರಿಕೆ ಮೈಸೂರು ಭಾಗ ಮಾತ್ರವಲ್ಲ. ಕರ್ನಾಟಕದಲ್ಲಿ ಇರುವುದು ಒಂದೇ. ಸಂಜೆಗೆ ಜನರ ಚೆಂದದ ಗೆಳೆಯನೂ ಹೌದು. ಬಹುತೇಕ ಮೈಸೂರು ಭಾಗದವರಿಗೆ ಬೇಕಾದ ಸುದ್ದಿ ಅಲ್ಲಿ ಸಿಗುತ್ತದೆ. ವೈವಿಧ್ಯಮಯ ಮಾಹಿತಿಯೂ ಸಿಗುತ್ತದೆ.
ಅಂಕಣಗಳು ಇವೆ. ಖುದ್ದು ಸಂಪಾದಕರೇ ಅಂಕಣ ಬರೆಯುತ್ತಾರೆ. ತಕ್ಷಣದ, ಸಮಕಾಲೀನ ಬೆಳವಣಿಗೆಗಳಿಗೆ ಸ್ಪಂದಿಸುತ್ತಾರೆ. ಸುದ್ದಿಯ ಜತೆಗೆ ಜಾಹೀರಾತು ಈ ಪತ್ರಿಕೆ ಓದುಗರ ಆಕರ್ಷಣೆ. ಮೈಸೂರು ಮಿತ್ರ ಎಂಬ ಬೆಳಗಿನ ಪತ್ರಿಕೆಯೂ ಇದರ ಬಲ ಎನ್ನುವ ಬಗೆ ಬಗೆಯ ಉತ್ತರಗಳು ಬಂದಿದ್ದವು.
ಇದರ ಹಿಂದೆ ಇದ್ದ ಶಕ್ತಿಯೇ ಕೆ.ಬಿ.ಗಣಪತಿ ಎಂಬ ದಿಟ್ಟ ಪತ್ರಕರ್ತ. ಕರ್ನಾಟಕ ಮಾತ್ರ ವಲ್ಲದೇ ಇಡೀ ಏಷ್ಯಾದಲ್ಲಿಯೇ ಹೆಚ್ಚಿನ ಪ್ರಸರಣ, ವೈವಿಧ್ಯಮಯ ಸುದ್ದಿ, ಬಹು ಮುದ್ರಣ ದೊಂದಿಗೆ ಪ್ರಕಟಗೊಳ್ಳುವ ಪ್ರಾದೇಶಿಕ ಪತ್ರಿಕೆಗಳು ಮೈಸೂರು ಮಿತ್ರ, ಸ್ಟಾರ್ ಆಫ್ ಮೈಸೂರು(ಆಂಗ್ಲ), ಆಂದೋಲನ ಮಾತ್ರ ಎನ್ನುವುದು ಹಿರಿಮೆ. ಮೈಸೂರು ಮಿತ್ರ ಕಟ್ಟಿ ಬೆಳೆಸಿದ ಛಾತಿ ಗಣಪತಿ ಅವರದ್ದು.
ಇದನ್ನೂ ಓದಿ: Vishweshwar Bhat Column: ಮಾಯವಾದ ಮ್ಯಾಜಿಷಿಯನ್ ಸಂಪಾದಕ
ಕೊಡಗಿನ ಮೂಲದ, ಸ್ಥಿತಿವಂತ ಕುಟುಂಬದ ಗಣಪತಿ ಅವರು ಪದವಿ ಮುಗಿಸಿ ಸೇನೆಗೆ ತೆರಳಿದ್ದರೆ ದೊಡ್ಡ ಹುದ್ದೆಯಲ್ಲಿ ಇರೋರು. ಅವರನ್ನು ಸೆಳೆದದ್ದು ಪತ್ರಿಕೋದ್ಯಮ. ಇಂಡಿ ಯನ್ ಎಕ್ಸ್‌ಪ್ರೆಸ್ ಮೂಲಕ ವೃತ್ತಿ ಜೀವನ ಆರಂಭಿಸಿ ಆನಂತರ ಮೈಸೂರಿಗೆ ಬಂದು ಸ್ಟಾರ್ ಆಫ್ ಮೈಸೂರು, ಮೈಸೂರು ಮಿತ್ರ ಆರಂಭಿಸಿದವರು ಗಣಪತಿ.
ಬರೀ ಕೊಡಗಿಗೆ ತಮ್ಮನ್ನು ಸೀಮಿತ ಮಾಡಿಕೊಳ್ಳದೇ ಮೈಸೂರು, ಮಂಡ್ಯ, ಕೊಡಗು, ಚಾಮರಾಜ ನಗರ, ಹಾಸನ, ರಾಮನಗರ ಭಾಗಕ್ಕೂ ವಿಸ್ತರಿಸಿದವರು. ವರ್ಷಗಳು ಕಳೆಯುವ ಹೊತ್ತಿಗೆ ಹೆಮ್ಮರವಾಗಿಯೇ ಗಣಪತಿ ಅವರ ಜೋಡಿ ಪತ್ರಿಕೆ ಬೆಳೆದಿದ್ದವು.
1999ರಲ್ಲಿ ಆಂದೋಲನ ಪತ್ರಿಕೆ ಮೂಲಕ ಮೈಸೂರಿನಲ್ಲಿ ನನ್ನ ಪತ್ರಿಕಾ ವೃತ್ತಿ ಗಟ್ಟಿ ಗೊಂಡಾಗ ನಮ್ಮ ಕಚೇರಿಯಲ್ಲಿ ಮಾತ್ರವಲ್ಲ ಸಹೋದ್ಯೋಗಿಗಳು ಕೂಡ, ‘ಇಂದಿನ ಮೈಸೂರು ಮಿತ್ರ ಪತ್ರಿಕೆ ಓದಿದರಾ’ ಎಂದು ಕೇಳೋರು. ಗಣಪತಿ ಅವರು ಅಲ್ಲಿನ ಸಂಪಾದ ಕರು. ಅಲ್ಲಿ ಎಂ.ಆರ್. ಶಿವಣ್ಣ, ಟಿ.ಗುರುರಾಜ, ವಿಶ್ವನಾಥ್, ಗೋವಿಂದೇಗೌಡ, ಗುರು ಸ್ವಾಮಿ, ಎನ್.ಎಂ.ಮಹದೇವ್, ಎ.ಸಿ.ಪ್ರಭಾಕರ್ ಸಹಿತ ಹಲವು ಹಿರಿಯ ಪತ್ರಕರ್ತರಿದ್ದರು.
ಇಲ್ಲಿ ಕೆಲಸ ಮಾಡಿದ ಹೋದ ಹಲವರು ನಾಡಿನ ಪ್ರಮುಖ ಪತ್ರಿಕೆಯಲ್ಲಿ ಪತ್ರಕರ್ತ ರಾಗಿದ್ದರು. ಅವರ ಕುರಿತೂ ತಿಳಿಸೋರು. ಹಾಗೆ ನೋಡಿದರೆ ಆಂದೋಲನ ಮತ್ತು ಮೈಸೂರು ಮಿತ್ರ ಭಿನ್ನ ಚಿಂತನೆಯ ಪತ್ರಿಕೆಗಳು. ಆಂದೋಲನ ಎಡ ಚಿಂತನೆ ಜತೆಗೆ ಸಮಾಜವಾದಿ, ಪ್ರಗತಿಪರ ಮಾರ್ಗದಲ್ಲಿದ್ದರೆ, ಮಿತ್ರ ಸಂಪೂರ್ಣ ಬಲ ಚಿಂತನೆಯ, ರಾಷ್ಟ್ರೀಯವಾದ ಬೆಂಬಲಿಸುವ ಪತ್ರಿಕೆ.
ಅಂಥ ಲೇಖಕರು ಇಲ್ಲಿ ಬರೆಯೋರು. ಆದರೆ ಸುದ್ದಿ ವಿಚಾರದಲ್ಲಿ ಇದು ಕಾಣಿಸುತ್ತಿರಲಿಲ್ಲ. ಗಣಪತಿ ಅವರು ಅಪ್ಪಟ ಪತ್ರಕರ್ತರೇ ಆಗಿದ್ದರು. ಜನರ ದನಿಯಾಗಿ ಕೆಲಸ ಮಾಡಬೇಕು. ಸಮಾಜದಲ್ಲಿನ ಸಮಸ್ಯೆಗಳಿಗೆ ಬೆಳಕು ಚೆಲ್ಲಬೇಕು ಅನ್ನೋರು. ಅದನ್ನು ತಮ್ಮ ವರದಿಗಳ ಮೂಲಕವೂ ವ್ಯಕ್ತಪಡಿಸೋರು.
ಈ ಕಾರಣದಿಂದಲೇ ಮೈಸೂರು ಮಿತ್ರ, ಆಂದೋಲನ ಗಟ್ಟಿಯಾಗಿ ಬೆಳೆದವು. ಒಬ್ಬ ಪತ್ರಕರ್ತ ಹೇಗಿರಬೇಕು. ಅವನ ಸುದ್ದಿ ಗ್ರಹಿಕೆ, ಸಮಾಜಪರತೆ ಹೇಗಿರಬೇಕು ಎಂದು ಗಣಪತಿ ಅವರು ತಮ್ಮ ಭಾಷಣದಲ್ಲಿ ಹೇಳೋರು. ಅವರು ಸದಾ ಲವಲವಿಕೆ ಇರೋ ಪತ್ರಕರ್ತ. ಮುಕ್ತವಾಗಿ ಮಾತನಾಡೋರು.
ಕಚೇರಿಯ ಇರಲಿ. ಕಾರ್ಯಕ್ರಮಗಳ ಆಗಲಿ ಹಾಗೆಯೇ ಇದ್ದು ಅಭಿಪ್ರಾಯ ಹೇಳೋರು. ವಯಸ್ಸಾದರೂ ಅವರಲ್ಲಿದ್ದ ಪತ್ರಕರ್ತನಿಗೆ ವಯಸ್ಸಾಗಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕೆಲಸ ಕಡಿಮೆಯಾಗಿದ್ದರೂ ಪತ್ರಕರ್ತನ ಕಾಯಕ ನಿಂತಿರಲಿಲ್ಲ. ಓದೋರು. ಬರೆಯೋರು. ಮೈಸೂರು ಪತ್ರ ಕರ್ತರ ಸಂಘಕ್ಕೆ ಆಂದೋಲನದ ಸಂಪಾದಕರಾಗಿದ್ದ ರಾಜಶೇಖರ ಕೋಟಿ ಅವರು ಕಾಯಕಲ್ಪ ನೀಡಲು ಮುಂದಾಗಿ ತಂಡ ಕಟ್ಟಿದಾಗ ಗಣಪತಿ ಅವರು ಉಪಾಧ್ಯಕ್ಷರಾಗಿದ್ದರು.
ಸಕ್ರಿಯವಾಗಿದ್ದು ಸಂಘದ ಘನತೆ ಹೆಚ್ಚಿಸಿದರು. ಮೈಸೂರು ಭಾಗದ ಪತ್ರಿಕೋದ್ಯಮದ ಹಿರಿ ತಲೆಮಾರಿನ ಕೊನೆಯ ಕೊಂಡಿ ಗಣಪತಿ ಅವರು. ಅವರ ಬರಹ, ಅಂಕಣಗಳಿಂದ ಮೈಸೂ ರು ಭಾಗದ ಪ್ರಗತಿಯೂ ಆಗಿದೆ. ನಿಜಾರ್ಥದಲ್ಲೂ ಮೈಸೂರು ಸ್ಟಾರ್ ಆಗಿದ್ದ ಅವರಿಗೆ ವಯಸ್ಸಾಗಿದ್ದರೂ ಮಾನಸಿಕವಾಗಿ ಅವರಬ್ಬ ಪತ್ರಕರ್ತ ಸದಾ ಜಾಗೃತ ಆಗಿರುತ್ತಿದ್ದ. ಕೊನೆಯ ಉಸಿರು ಇರುವ ವರೆಗೂ ಪತ್ರಕರ್ತರಾಗಿದ್ದು ಅವರ ಹಿರಿಮೆ.
ಪತ್ರಿಕೋದ್ಯಮದ ಹೆಮ್ಮರ ಉರುಳಿದೆ. ಆ ಮರ ನೆರಳು ಕೊಟ್ಟು ಸಮಾಜಕ್ಕೆ ನೀಡಿದ ಕೊಡುಗೆ ಅಜರಾಮರ. ಹೋಗಿ ಬನ್ನಿ ಸರ್, ನಮಸ್ಕಾರಗಳು...