ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

AndhraPradesh DCM Pawan kalyan Interview: ಇತಿಹಾಸದ ಬಗ್ಗೆ ನಮ್ಮೆಲ್ಲರಲ್ಲೂ ಅರಿವಿರಬೇಕು: ಪವರ್‌ ಫುಲ್‌ ಪವನ್

ಕನ್ನಡ ಮತ್ತು ತೆಲುಗು ಭಾಷೆಯ ಲಿಪಿಗಳು ಒಂದಕ್ಕೊಂದು ಬಹಳಷ್ಟು ಸಾಮ್ಯತೆ ಹೊಂದಿವೆ. ಸಾಂಸ್ಕೃತಿಕವಾಗಿ ವಿಜಯನಗರ ಸಾಮ್ರಾಜ್ಯವು ಆಂಧ್ರಪ್ರದೇಶಕ್ಕೂ ವ್ಯಾಪಿಸಿತ್ತು. ಹೀಗಾಗಿ ಎರಡೂ ರಾಜ್ಯಗಳ ಮಧ್ಯೆ ಬಹಳಷ್ಟು ಸಾಂಸ್ಕೃತಿಕವಾಗಿ ನಂಟಿದೆ. ನಾನು ಸಿನಿಮಾ ಮೂಲಕ ಎಲ್ಲ ಜನರನ್ನೂ ತಲುಪಲು ಸಾಧ್ಯವಾಗಿರಲಿಲ್ಲ. ಹೀಗಾಗಿ ನನಗೆ ರಾಜಕೀಯ ಪ್ರವೇಶ ಮಾಡುವುದು ಒದಗಿ ಬಂದ ಅವಕಾಶ.

ಇತಿಹಾಸದ ಬಗ್ಗೆ ನಮ್ಮೆಲ್ಲರಲ್ಲೂ ಅರಿವಿರಬೇಕು

Ashok Nayak Ashok Nayak Jul 24, 2025 12:02 PM

ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಜತೆ ರಿಪಬ್ಲಿಕ್ ಕನ್ನಡ ಸುದ್ದಿ ವಾಹಿನಿ ಸಂಪಾದಕಿ ಶೋಭಾ ಮಳವಳ್ಳಿ ನಡೆಸಿದ ಸಂದರ್ಶನ

ಸರ್ ನಮಸ್ಕಾರ, ಇಡೀ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ನಿಮ್ಮ ಅಭಿಮಾನಿಗಳಿದ್ದಾರೆ. ಅವರೆಲ್ಲ ನಿಮ್ಮ ಹರಿ ಹರ ಮಲ್ಲು ಸಿನಿಮಾಗಾಗಿ ಕಾಯುತ್ತಿದ್ದಾರೆ. ಹೇಗನ್ನಿಸ್ತಾ ಇದೆ ಸರ್, ಹರಿಹರ ಮಲ್ಲು ಬಗ್ಗೆ?

ಮೊಟ್ಟ ಮೊದಲ ಬಾರಿಗೆ ನನಗೆ ಈ ಅವಕಾಶ ನೀಡಿದ ತಮಗೆ ಧನ್ಯವಾದ. ಕರ್ನಾಟಕದಲ್ಲಿ ನನಗೆ ಅನೇಕ ಅಭಿಮಾನಿಗಳು, ಉತ್ತಮ ಸೇಹಿತರು ಇದ್ದಾರೆ. ಕರ್ನಾಟಕದವರೇ ಆದ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅವರು ನನ್ನ ಮಾರ್ಗದರ್ಶಕರು. ಹೀಗಾಗಿ ಕರ್ನಾಟಕದ ಜನತೆಯೊಂದಿಗೆ ನನಗೆ ಭಾವನಾತ್ಮಕ ಸಂಬಂಧವಿದೆ.

ಕನ್ನಡ ಮತ್ತು ತೆಲುಗು ಭಾಷೆಯ ಲಿಪಿಗಳು ಒಂದಕ್ಕೊಂದು ಬಹಳಷ್ಟು ಸಾಮ್ಯತೆ ಹೊಂದಿವೆ. ಸಾಂಸ್ಕೃತಿಕವಾಗಿ ವಿಜಯನಗರ ಸಾಮ್ರಾಜ್ಯವು ಆಂಧ್ರಪ್ರದೇಶಕ್ಕೂ ವ್ಯಾಪಿಸಿತ್ತು. ಹೀಗಾಗಿ ಎರಡೂ ರಾಜ್ಯಗಳ ಮಧ್ಯೆ ಬಹಳಷ್ಟು ಸಾಂಸ್ಕೃತಿಕವಾಗಿ ನಂಟಿದೆ. ನಾನು ಸಿನಿಮಾ ಮೂಲಕ ಎಲ್ಲ ಜನರನ್ನೂ ತಲುಪಲು ಸಾಧ್ಯವಾಗಿರಲಿಲ್ಲ. ಹೀಗಾಗಿ ನನಗೆ ರಾಜಕೀಯ ಪ್ರವೇಶ ಮಾಡುವುದು ಒದಗಿ ಬಂದ ಅವಕಾಶ. ವೀರ ವೀರ ಮಲ್ಲು ಬಗ್ಗೆ ಹೇಳಬೇಕಾದರೆ ಸಿನಿಮಾ ಬಹಳ ಆಸಕ್ತಿಕರ ವಾಗಿದೆ. ಈ ಸಿನಿಮಾ ನಾನು ಆಂಧ್ರಪ್ರದೇಶದ ಸರಕಾರದ ಭಾಗವಾಗಿ ಕೆಲಸ ಮಾಡುವುದಕ್ಕಿಂತ ಮುಂಚೆಯೇ ಅಂದರೆ ನಾಲ್ಕೈದು ವರ್ಷಗಳ ಹಿಂದೆಯೇ ಶುರುವಾಗಿತ್ತು.

17ನೇ ಶತಮಾನದಲ್ಲಿ ಮೊಘಲ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ಹರಿ ಹರ ವೀರ ಮಲ್ಲು ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ಒಟ್ಟಾರೆ ಈ ಸಿನಿಮಾದ ಕಥೆ ರಾಜರನ್ನು ಆಧರಿಸಿ ದ್ದಲ್ಲ, ಬದಲಾಗಿ ಸಾಮಾನ್ಯ ಜನರನ್ನು ಆಧರಿಸಿದ ಕಥೆಯಾಗಿದೆ.

ಇದನ್ನೂ ಓದಿ: Vishweshwar Bhat Column: ಇದೊಂದು ಪುಟ್ಟ ಪ್ರಪಂಚ

ಇಂದಿನ ಮಕ್ಕಳಿಗೆ ಇತಿಹಾಸದ ಅಗತ್ಯವೆಷ್ಟು?

ಅತ್ಯಂತ ಅಗತ್ಯವಿದೆ. ಇತಿಹಾಸ ಪುನಾರವರ್ತನೆಯಾಗುತ್ತಲೇ ಇರುತ್ತದೆ. ಪ್ರತಿಯೊಬ್ಬರು ಇತಿಹಾಸದ ಬಗ್ಗೆ ಆಳವಾಗಿ ತಿಳಿದುಕೊಳ್ಳಬೇಕು. ಇತಿಹಾಸದಲ್ಲಿ ಒಳ್ಳೆಯದೂ ಇದೆ, ಕೆಟ್ಟದ್ದು ಇದೆ. ಅದರಲ್ಲಿರುವ ಉತ್ತಮವಾದುದನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು. ಇತಿಹಾಸವಿಲ್ಲದೆ ದೇಶವನ್ನೇ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ನಾವೇನು ಸಾಧಿಸಿದ್ದೇವೆ, ಏನು ಳೆದುಕೊಂಡಿದ್ದೇವೆ, ನಮ್ಮ ಹೋರಾಟ ಏನು ಇತ್ತು ಎನ್ನುವುದನ್ನು ತಿಳಿದುಕೊಳ್ಳುವುದು ಇಂದಿನ ಮಕ್ಕಳಿಗೆ ಕಡ್ಡಾಯ. ಇತಿಹಾಸವೆಂಬುದು ಕೇವಲ ವಿಷಯವಲ್ಲ - ಅದು ಮೌಲ್ಯಗಳು, ಧೈರ್ಯ, ತ್ಯಾಗಗಳ ಕತೆ. ಇತಿಹಾಸವೇ ವ್ಯಕ್ತಿತ್ವ ರೂಪಿಸುವ ಅಸ್ತ್ರವಾಗಿದೆ.

ನಮ್ಮ ಇತಿಹಾಸದಲ್ಲಿ ಮೊಘಲ್ ರಾಜ್ಯವನ್ನು ವೈಭವೀಕರಿಸಿ, ಶಿವಾಜಿ ಮಹಾರಾಜ್‌ರನ್ನು ಕಡೆಗಣಿಸಲಾಗಿದೆಯೇ?

ಖಂಡಿತವಾಗಿ ಇದು ನೋವಿನ ಸಂಗತಿ. ಹಿಂದೂ ಸಾಮ್ರಾಜ್ಯದ ಉಳಿವಿಗೆ ಶಿವಾಜಿ ಮಹಾರಾಜರ ಕೊಡುಗೆ ಅಪಾರವಾಗಿದೆ. ತಮ್ಮ ಆಡಳಿತಾವಧಿಯಲ್ಲಿ ತಮಿಳುನಾಡಿನ ದೇವಸ್ಥಾನಗಳನ್ನೂ ರಕ್ಷಿಸಿ ದ್ದಾರೆ. ಆದರೆ ಇದೆಲ್ಲವೂ ನಮ್ಮ ಶಿಕ್ಷಣದಲ್ಲಿನ ಇತಿಹಾಸದಿಂದ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ಇತಿಹಾಸವೆಂದರೆ ಕೇವಲ ಆಳಿದವರ ಕಥೆ ಅಲ್ಲ. ಹೋರಾಡಿದವರ, ಪ್ರಜೆಯ ಪ್ರಗತಿಗೆ ಶ್ರಮಿಸಿದವರ ಕಥೆಯೂ ಆಗಬೇಕು. ಇತಿಹಾಸದಲ್ಲಿ ಸತ್ಯವಿರುವುದಂತೂ ಖಂಡಿತ, ಆದರೆ ಅದನ್ನು ಬಲವಂತದ ಪ್ರಭಾವದಿಂದ ಆಯ್ಕೆ ಮಾಡಬಾರದು. ಮೊಘಲರನ್ನು ಮಾತ್ರ ದೊಡ್ಡದಾಗಿ ತೋರಿಸಿ, ನಮ್ಮ ಪ್ರಾದೇಶಿಕ ದೊರೆಗಳನ್ನು ಕಡೆಗಣಿಸುವುದು ತಪ್ಪು. ಶಿವಾಜಿ ಮಹಾರಾಜ್ ಅವರು ಧೈರ್ಯ, ಸ್ವಾಭಿಮಾನ, ಜನಸಂರಕ್ಷಣೆಯ ಪ್ರತೀಕ.

ನಮ್ಮ ಭಾರತದ ಇತಿಹಾಸದಲ್ಲಿ ಮೊಘಲರನ್ನು ಬಹಳ ವೈಭವಿಕರಿಸಿದ್ದಾರೆಯೇ? ಅದೆಲ್ಲ ಯಾರಿಂದಾಗಿದೆ?

ಒಂದು ವೇಳೆ ನಮ್ಮ ಅರಿವಿನ ಕೊರತೆಯಿಂದ ಇತಿಹಾಸವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ವಾಗಿಲ್ಲ. ಕೆಲವೊಂದು ಸನ್ನಿವೇಶಗಳಲ್ಲಿ ಉದ್ದೇಶಪೂರ್ವಕವಾಗಿ ಇತಿಹಾಸವನ್ನು ತಿರುಚಲಾಗಿದೆ. ಚಿಕ್ಕಂದಿನಿಂದಲೇ ನಾನು ಕೆಲವು ಇತಿಹಾಸ ಪುಸ್ತಕಗಳನ್ನು ಓದುತ್ತಿದ್ದೆ. ವಿಜಯನಗರ ಸಾಮ್ರಾಜ್ಯ, ಚಾಲುಕ್ಯರ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೇನೆ. ಆದರೆ ಅವರ ಕಥೆಗಳನ್ನು ಬಹಳಷ್ಟು ತಿರುಚಲಾಗಿದೆ.

ಜನಸೇನಾ ಪಕ್ಷ ಶುರುವಾಗಿದ್ದಾಗ ನಿಮ್ಮ ಸಿದ್ಧಾಂತ ಜಾತ್ಯತೀತತೆ ಬಗ್ಗೆ ಇತ್ತು, ಆಗ ಅಂಬೇಡ್ಕರ್ ಬಗ್ಗೆ ಮಾತನಾಡ್ತಿದ್ರಿ, ಬಿಜೆಪಿ ಜತೆ ಕೈಜೋಡಿಸಿದ್ರಿ ಅಂತಾ ನಿಮ್ಮ ಸಿದ್ಧಾಂತ ಬದಲಾಯಿತಾ?

ಯಾವುದೇ ಬದಲಾವಣೆ ಆಗಿಲ್ಲ. ನಾನು ಪ್ರತಿಪಾದಿಸುವ ಸಿದ್ಧಾಂತ ಸ್ಥಿರವಾಗಿದೆ. ಪ್ರತಿಯೊಬ್ಬ ರಿಂದಲೂ ಒಳ್ಳೆಯದನ್ನು ಪಡೆಯಲು ಅವಕಾಶವಿದೆ. ನಾನು ಜಯಪ್ರಕಾಶ್ ನಾರಾಯಣ ಅವರನ್ನೂ ಇಷ್ಟಪಡುತ್ತೇನೆ. ರಾಮಮನೋಹರ ಲೋಹಿಯಾ ಅವರನ್ನೂ ಇಷ್ಟಪಡುತ್ತೇನೆ. ನಾನು ಶಾಲಾ ದಿನಗಳಲ್ಲೇ ಪ್ರತಿಯೊಂದನ್ನೂ ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದೆ.

ಸಹಜವಾಗಿಯೇ ಒಳ್ಳೆಯದರತ್ತ ನಾನು ಆಕರ್ಷಿತನಾಗುತ್ತಿದ್ದೆ. ಜಾತಿ ತಾರತಮ್ಯದ ವಿರುದ್ಧ ಹೋರಾಡಿದ ನಾರಾಯಣ ಗುರುಗಳ ಸಿದ್ಧಾಂತದ ಬಗ್ಗೆ ಆಕರ್ಷಿತನಾಗಿದ್ದೆ. ಹಾಗಾಗಿ ನನ್ನ ಯೋಚನೆ ಸ್ಪಷ್ಟವಾಗಿತ್ತು. ಹಾಗಾಗಿ ನನ್ನ ಸಿದ್ಧಾಂತದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ ಇದೆಲ್ಲವೂ ರಾಜಕೀಯ ಪ್ರವೇಶದ ನಂತರ ಒಂದು ವಿಷಯವಾಗುತ್ತದೆ. ವಾಸ್ತವವಾಗಿ ಇದೆಲ್ಲವೂ ಸಂಸ್ಕೃತಿ ವಿಚಾರ.

ಉಚಿತ ಗ್ಯಾರಂಟಿಗಳು ಬೇಕಾ?

ವೈಯಕ್ತಿಕವಾಗಿ ನಾನು ಉಚಿತ ಯೋಜನೆಗಳನ್ನು ಬೆಂಬಲಿಸುತ್ತೇನೆ. ಪ್ರತಿ ಸರಕಾರವೂ ಸಾಮಾಜಿಕ ಸಬಲೀಕರಣದ ಯೋಜನೆಗಳನ್ನು ಕೊಡಬೇಕು. ಗ್ಯಾರಂಟಿ ಯೋಜನೆಗಳು ಅಭಿವೃದ್ಧಿಗೆ ಪೂರಕವಾಗಿವೆ.

ಉಪಮುಖ್ಯಮಂತ್ರಿಯಾಗಿ ನಿಮ್ಮ ಮುಂದಿನ ಯೋಜನೆ ಯಾವುದು?

ಮೊಟ್ಟ ಮೊದಲ ಬಾರಿಗೆ ನಾನು ಪರಿಸರದ ಬಗ್ಗೆ ಗಮನ ಹರಿಸುತ್ತೇನೆ. ಪಂಚಾಯಿತಿ ಮಟ್ಟದಲ್ಲಿ ಅದಕ್ಕೆ ಪ್ರಾಮುಖ್ಯ ಕೊಡುವ ಹಲವು ಯೋಜನೆಗಳು ನಮ್ಮ ಬಳಿ ಇವೆ.

ಮುಂದೆ ಸಿನಿಮಾಗಳಲ್ಲಿ ನಟಿಸುತ್ತೀರಾ?

ಮೂರು ಸಿನಿಮಾಗಳಿಗೆ ಈಗಾಗಲೇ ಒಪ್ಪಿಕೊಂಡಿದ್ದೇನೆ. ಅವುಗಳನ್ನು ಸದ್ಯದಲ್ಲೇ ಮುಗಿಸುತ್ತೇನೆ.

ಸಂದರ್ಶನದ ಪೂರ್ಣ ವಿವರ : https:// www.youtube.com/watch?v=- 1Mu5C9cL2A