ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Supreetha Venkat Column: ಐಟಿ ಕೆಲಸದ ಹೆಬ್ಬಯಕೆಯೇ..ಹಾಗಿದ್ದರೆ ನಿಮಗಿಲ್ಲೊಂದಿಷ್ಟು ಟಿಪ್ಸ್

ಐಟಿ ಕ್ಷೇತ್ರದಲ್ಲಿ ಕೆಲಸ ಹುಡುಕಿ, ಒಂದು ಕಂಪನಿ ಸೇರಬೇಕೆಂದರೆ ಇಂಟರ್ವ್ಯೂ ಹಂತದಲ್ಲೂ ದಿನ ಕ್ಕೊಂದು ಟ್ರೆಂಡ್ ಚಾಲ್ತಿಯಲ್ಲಿದೆ ಎಂಬುದು ವಾಸ್ತವ. ಇವತ್ತಿರುವ ರೂಢಿ ನಾಳೆ ಇರಲ್ಲ, ಒಂದು ಕಂಪೆನಿಯ ರಿಕ್ರೂಟ್‌ಮೆಂಟ್ ಪ್ರೊಸೆಸ್ ಒಂದು ತರಹವಾದರೆ, ಮತ್ತೊಂದು ಕಂಪೆನಿದು ಇನ್ನೊಂದು ವಿಧ

ಐಟಿ ಕೆಲಸದ ಹೆಬ್ಬಯಕೆಯೇ..ಹಾಗಿದ್ದರೆ ನಿಮಗಿಲ್ಲೊಂದಿಷ್ಟು ಟಿಪ್ಸ್

Profile Ashok Nayak Apr 18, 2025 1:00 PM

ಸುಪ್ರೀತಾ ವೆಂಕಟ್

ಆರ್ಟಿಫಿಷಿಯಲ್ ಇಂಟಲ್ಲಿಜೆನ್ಸ್ (ಎಐ)-ಇದೀಗ ಎಲ್ಲೆಡೆ ಕೇಳಿಬರುತ್ತಿರುವ ಪದ. ಐಟಿ ಕ್ಷೇತ್ರದಲ್ಲೂ ಇದರ ಪ್ರಭಾವ ಹೆಚ್ಚಾಗಲಿದೆ ಎನ್ನುವ ಮಾತೂ ಹೆಚ್ಚಿದೆ. ಅದೆಷ್ಟೋ ಜನರ ಕೆಲಸ ಹೋಗಬಹುದು, ಬಹಳಷ್ಟು ಮಂದಿ ಮಾಡುವ ಕೆಲಸವನ್ನು ಎಐ ಫಟಾಫಟ್ ಎಂದು ಮಾಡಿ, ಸಮಯ ಹಾಗೂ ವೆಚ್ಚವನ್ನು ಕಡಿಮೆ ಮಾಡಬಹುದೆನ್ನುವ ಮಾತುಗಳೂ ಈಗ ಸಾರ್ವತ್ರಿಕ. ಇದು ನಿಜವಾದರೆ ಒಂದು ದಿನ ಎಲ್ಲರೂ ಎಐ ಬಗ್ಗೆಯೇ ಕಲಿಯೋ ತರಹ ಆಗಬಹುದೇನೋ?

ಅದೇನೇ ಇರಲಿ, ಐಟಿ ಕ್ಷೇತ್ರದಲ್ಲಿ ಕೆಲಸ ಹುಡುಕಿ, ಒಂದು ಕಂಪನಿ ಸೇರಬೇಕೆಂದರೆ ಇಂಟರ್ವ್ಯೂ ಹಂತದಲ್ಲೂ ದಿನಕ್ಕೊಂದು ಟ್ರೆಂಡ್ ಚಾಲ್ತಿಯಲ್ಲಿದೆ ಎಂಬುದು ವಾಸ್ತವ. ಇವತ್ತಿರುವ ರೂಢಿ ನಾಳೆ ಇರಲ್ಲ, ಒಂದು ಕಂಪೆನಿಯ ರಿಕ್ರೂಟ್‌ಮೆಂಟ್ ಪ್ರೊಸೆಸ್ ಒಂದು ತರಹವಾದರೆ, ಮತ್ತೊಂದು ಕಂಪೆನಿದು ಇನ್ನೊಂದು ವಿಧ. ಹಾಗಾಗಿ ಹೊಸ ಐಟಿ ಕಂಪೆನಿಗಳಲ್ಲಿ ಕೆಲಸಕ್ಕೆ ಸೇರ ಬಯಸುವವರು ಕೆಲವೊಂದು ಸಲಹೆಗಳನ್ನು ಪಾಲಿಸಿದರೆ ಅದು ಅವರ ವೃತ್ತಿಜೀವನಕ್ಕೆ ರಹದಾರಿ.

ಹಾಗಾಗಿ ಪ್ರಮುಖವಾದವುಗಳನ್ನು ಇಲ್ಲಿ ಗಮನಿಸೋಣ:

ರೆಸ್ಯೂಮೆ: ಬೇರೆ ಕೆಲಸ ಹುಡುಕುವ ಮೊದಲ ಹಂತವಾಗಿ ರೆಸ್ಯೂಮೆಯ ಪಾತ್ರ ಬಹಳಷ್ಟು ಮಹತ್ವ . ಮೊದಲೆಲ್ಲಾ ಒಬ್ಬರು ಉಪಯೋಗಿಸಿದ ಟೆಂಪ್ಲೇಟ್ ಬಳಸಿ, ಅದರಲ್ಲಿ ನಮ್ಮ ನಮ್ಮ ವೃತ್ತಿ ಕೌಶಲ್ಯಗಳನ್ನು ಹಾಕಿ ಶೇರ್ ಮಾಡಿದರೆ ನಡೀತಿತ್ತು, ಕೆಲಸ ಸಿಗೋದು ಕಷ್ಟವೇನಿರಲಿಲ್ಲ.

ಕಂಪೆನಿಗಳು ರೆಸ್ಯೂಮೆಗೆ ಅಷ್ಟೊಂದು ಒತ್ತು ಕೊಡುತ್ತಿರಲಿಲ್ಲ, ಆದರೆ ಈಗಿನ ಚಿತ್ರಣವೇ ಬದಲಾಗಿದೆ. ಎಪ್ಲಿಕೆಂಟ್ ಟ್ರ್ಯಾಕಿಂಗ್ ಸಿಸ್ಟರ್ಮ (ಎಟಿಎಸ್) ಫ್ರೆಂಡ್ಲಿ ರೆಸ್ಯೂಮೆ ಬೇಕೇ ಬೇಕು. ಒಂದು ಹುದ್ದೆಗೆ ಸಾವಿರಾರು ಅಪ್ಲಿಕೇಶನ್ಸ್ ಬರುತ್ತವೆ. ಅವನ್ನೆಲ್ಲಾ ಕಂಪೆನಿಯವರಿಗೆ ಪರಿಶೀಲಿಸಲು ಸಾಧ್ಯವಿಲ್ಲ. ಅದಕ್ಕೆಂದೇ ಸಾಫ್ಟ್‌ ವೇರ್ ತಯಾರಿಸಿ, ಆ ಸಾಫ್ಟ್‌ ವೇರ್ ಎಲ್ಲಾ ರೆಸ್ಯೂಮೆಗಳನ್ನು ಸ್ಕ್ಯಾನ್ ಮಾಡಿ, ಯಾವುದೆಲ್ಲ ಎಟಿಎಸ್ ಅಂಕ ದಾಟುತ್ತೋ, ಅವುಗಳನ್ನ ಮಾತ್ರ ಆಯ್ಕೆ ಮಾಡುತ್ತದೆ. ಹೀಗಾಗಿ ಎಟಿಎಸ್ ಪಾಸ್ ಆಗುವ ರೆಸ್ಯೂಮೆ ತಯಾರಿಸಲೇಬೇಕು. ಇದಕ್ಕೆಂದೇ ಆನ್ ಲೈನ್‌ನಲ್ಲಿ ಎಷ್ಟೋ ವೆಬ್‌ಸೈಟ್‌ಗಳಿವೆ ಅಥವಾ ಹಲವು ಸರ್ವಿಸಸ್ ಹಲವು ಆಪ್‌ಗಳು ನೀಡುತ್ತವೆ. ಇವುಗಳ ಉತ್ತಮ ಬಳಕೆ ಮಾಡಿಕೊಂಡರೆ, ಅತ್ಯುತ್ತಮವಾದ ರೆಸ್ಯೂಮೆ ನಿಮ್ಮದಾಗುತ್ತದೆ.

ಇದನ್ನೂ ಓದಿ: Ravi Hunj Column: ತ್ರಿಪುರಾಂತಕ ದೇವರ ಮೂಲ ಅನುಭವ ಮಂಟಪದ ಸುತ್ತ...

ಟೆಕ್ನಿಕಲ್ ಸ್ಕಿಲ್ಸ್: ಡಿಗ್ರಿ ಮುಗಿಸಿ ಮೊದಲ ಬಾರಿಗೆ ಕೆಲಸಕ್ಕೆ ಸೇರಿದಾಗ ಸಿಗುವ ಜೂನಿಯರ್ ಹುದ್ದೆಯಿಂದ, ವರ್ಷಗಳು ಉರುಳಿದಂತೆ ಉನ್ನತ ಹುದ್ದೆಗೇರುತ್ತಾ ಹೋಗುವುದು ಸಾಮಾನ್ಯ. ಉನ್ನತ ಹುದ್ದೆಗೇರಿದ ನಂತರ ಸಾಮಾನ್ಯವಾಗಿ ಒಂದು ತಂಡವನ್ನು ನಿಭಾಯಿಸುವ ಜವಾಬ್ದಾರಿ ಸಿಗುತ್ತದೆ. ಡೆವಲಪರ್ ಅಥವಾ ಟೆಸ್ಟರ್ ಆಗಿ ಕೆರಿಯರ್ ಪ್ರಾರಂಭಿಸುವವರು ಮುಂದೊಂದು ದಿನ ಮ್ಯಾನೇಜರ್ ಹುದ್ದೆಗೇರುತ್ತಾರೆ. ಮ್ಯಾನೇಜರ್ ಹುದ್ದೆಗೇರಿದ ಮೇಲೆ ಸಾಮಾನ್ಯವಾಗಿ ಮುಂಚೆ ಯೆಲ್ಲಾ ಟೆಕ್ನಿಕಲ್ ಕೆಲಸ ಕಡಿಮೆ ಇರುತಿತ್ತು, ಆದರೆ ಈಗ ಹಾಗಿಲ್ಲ, ಎಲ್ಲಾ ಉದ್ಯೀಗಿಗಳಿಂದಲೂ ಸಂಸ್ಥೆಯು ಟೆಕ್ನಿಕಲ್ ಕೆಲಸವನ್ನು ಅಪೇಕ್ಷಿಸುತ್ತದೆ, ಹೀಗಾಗಿ ಅದೇನೇ ಸವಾಲುಗಳು ಎದುರಾಗಲಿ, ಎಲ್ಲದಕ್ಕೂ ಸಿದ್ಧರಾಗಿರಬೇಕು. ಐಟಿನಲ್ಲಿ ಮುಂದುವರಿಯಬೇಕೆಂದರೆ. ಟೆಕ್ನಿಕಲ್ ಸ್ಕಿಲ್ ಅಭಿವೃದ್ಧಿ ಗಾಗಿ ಆನ್‌ಲೈನ್‌ನಲ್ಲಿ ಬಹಳಷ್ಟು ಕಲಿಕಾ ವೆಬ್‌ಸೈಟ್ ಗಳಿವೆ, ಅವುಗಳನ್ನು ಸದುಪಯೋಗಗೊಳಿ ಸಿಕೊಳ್ಳಬಹುದು.

ತಾಳ್ಮೆ ಮತ್ತು ಅದೃಷ್ಟ: ಹೊಸ ಕೆಲಸ ಸಿಗುವುದು ಅಂದುಕೊಂಡಷ್ಟು ಸುಲಭವೇನಲ್ಲ. ನಾವಂದುಕೊಂಡ ರೀತಿ ಆಗದೇ ಇರಬಹುದು. ರೆಸ್ಯೂಮೆ ಚೆನ್ನಾಗಿದೆ, ಟೆಕ್ನಿಕಲ್ ಸ್ಕಿಲ್ ಕೂಡ ಚೆನ್ನಾಗಿದೆ ಆದರೂ ಕೆಲಸ ಸಿಗುತ್ತಿಲ್ಲ, ಯಾಕೆ ? ಎಂಬ ಪ್ರಶ್ನೆ ಬಹಳಷ್ಟು ಮಂದಿಯನ್ನು ಕಾಡುವುದು ಸಹಜ. ಇಂತಹ ಸಮಯದಲ್ಲಿ ತಾಳ್ಮೆ ಕಳೆದುಕೊಳ್ಳದೆ, ಬಂದಂತಹ ಸವಾಲುಗಳನ್ನು ಧೈರ್ಯದಿಂದಲೇ ಎದುರಿಸಬೇಕು. ಕೆಲಸ ಸಿಗುವುದೂ ಒಂದು ರೀತಿಯ ಅದೃಷ್ಟವೇ. ತಾಳ್ಮೆ ಕಳೆದುಕೊಂಡ ತಕ್ಷಣ ಪ್ರಸ್ತುತ ಸ್ಥಿತಿ ಬದಲಾಗದು. ಅದರ ಬದಲಾಗಿ, ಇನ್ಯಾವ ತರಹ ನಮ್ಮನ್ನು ನಾವೇ ಅಪ್‌ಸ್ಕಿಲ್ ಮಾಡಿಕೊಳ್ಳಬಹುದು ಎಂದು ಯೋಚಿಸಬೇಕು. ನಮ್ಮ ಅದೃಷ್ಟ, ತಾಳ್ಮೆಯ ಮೇಲೆ ನಂಬಿಕೆಯಿಟ್ಟು ಪ್ರಯತ್ನ ಮುಂದುವರಿಯಬೇಕು. ಮೇಲಿನ ಸಲಹೆಗಳೆಲ್ಲವೂ ಎಲ್ಲರಿಗೂ ಅನ್ವಯವಾಗಬೇಕೆಂದೇನಿಲ್ಲ. ಪ್ರತಿಯೊಬ್ಬರ ಸ್ಥಿತಿಯೂ ವಿಭಿನ್ನ. ತನ್ನತನದ ಮೇಲೆ ಸಂಪೂರ್ಣ ನಂಬಿಕೆಯಿಟ್ಟು, ಅದೇನು ಸೂಕ್ತ ಎನಿಸುವುದೋ, ಅದನ್ನೇ ಪಾಲಿಸಿ ಹೆಜ್ಜೆಯಿಟ್ಟರೆ ಉತ್ತಮ..!