Mallappa C Khaodnapura: ಜಂಕ್ ಫುಡ್ ತಿನ್ನಬೇಕೆನ್ನುವ ಕ್ರೇಜ್, ಮಕ್ಕಳಿಗದು ಕಾಯಲೆಗೆ ರಹದಾರಿ
ನಮ್ಮ ದೇಶದ ಮಕ್ಕಳಲ್ಲೂ ಬೊಜ್ಜು ಸೇರಿದಂತೆ ಇತರ ರೋಗಗಳ ಪ್ರಮಾಣವು ಅತ್ಯಧಿಕವಾಗಿ ಹೆಚ್ಚುತ್ತಿರುವುದು ಕಂಡುಬಂದಿದೆ. ಗುಜರಾತ್ ರಾಜ್ಯವು ಈ ಪೈಕಿ ಮೊದಲ ಸ್ಥಾನದಲ್ಲಿದ್ದರೆ, ಕೇರಳ ಎರಡನೇಯ ಸ್ಥಾನದಲ್ಲಿದೆ, ನಮ್ಮ ಕರ್ನಾಟಕ ರಾಜ್ಯವು 4ನೇ ಸ್ಥಾನದಲ್ಲಿದೆ. ಈ ಗಂಭೀರ ಅಪಾಯವನ್ನ ರಿತ ಕೇರಳ ರಾಜ್ಯ ಸರಕಾರವು ಜಂಕ್ ಫುಡ್‌ಗಳ ಮೇಲೆ ಹೆಚ್ಚುವರಿಯಾಗಿ ಶೇ 14.5%ರಷ್ಟು ತೆರಿಗೆ ಭಾರ ವಿಧಿಸುವ ಮೂಲಕ ಜಂಕ್ ಫುಡ್ ತಿನ್ನುವುದರಿಂದ ಜನರನ್ನು ತಡೆಯುವ ಪ್ರಯತ್ನ ಮಾಡುವ ಆರೋಗ್ಯ ಸುಧಾರಣಾ ಕ್ರಮಕ್ಕೆ ಮುಂದಾಗಿರುವುದು ಸ್ವಾಗತಾರ್ಹ


ಮಲ್ಲಪ್ಪ. ಸಿ. ಖೊದ್ನಾಪೂರ
ವೈವಿಧ್ಯತೆಯಲ್ಲಿ ಏಕತೆ, ಬಹುಸಂಸ್ಕೃತಿ ಹಾಗೂ ವಿಶಿಷ್ಟ ಬಗೆಯ ಆಹಾರ ಪದ್ಧತಿ ಹೊಂದಿದ ರಾಷ್ಟ್ರ ನಮ್ಮದೆಂಬುದು ನಿಜಕ್ಕೂ ಹೆಮ್ಮೆ. ನಮ್ಮ ಪೂರ್ವಜರು ದೈಹಿಕ ಸದೃಢತೆಗಾಗಿ ಹಾಲು, ಹಣ್ಣು, ಮೊಟ್ಟೆ, ದ್ವಿದಳ ಧಾನ್ಯಗಳು ಮತ್ತು ಸಮತೋಲಿತ ಸಸ್ಯ ಆಹಾರವನ್ನು ಸೇವಿಸುವುದರ ಮೂಲಕ ದೇಹಕ್ಕೆ ಅಗತ್ಯವಿರುವ ಎಲ್ಲಾ ವಿಧದ ಪೋಷಕಾಂಶಗಳನ್ನು ಪಡೆಯುತ್ತಿದ್ದರು. ಆದರೆ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ, ಆಧುನಿಕತೆಯತ್ತ ಮಾರು ಹೋಗುತ್ತಿರುವ ನಮ್ಮ ಇಂದಿನ ಮಕ್ಕಳು ಮತ್ತು ಯುವ ಜನಾಂಗವು ಬರ್ಗರ್, ಫಿಜ್ಜಾ, ಪಾನಿಪುರಿ, ಸ್ಯಾಂಡ್‌ವಿಚ್, ಪಾಸ್ತಾ ಮುಂತಾದ ಸಿದ್ಧಆಹಾರಗಳನ್ನು (ಜಂಕ್ ಫುಡ್) ಸೇವಿಸುತ್ತಾ ಅಮೂಲ್ಯ ಆರೋಗ್ಯ ಸಂಪತ್ತನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.
ಕಛೇರಿಗೆ ಹೋಗುವ ಗಡಿಬಿಡಿಯಲ್ಲಿ ಅಮ್ಮಂದಿರು ಸ್ವತಃ ಮಕ್ಕಳ ಟಿಫಿನ್ ಬಾಕ್ಸ್‌ಗೆ ಜಂಕ್ ಫುಡ್ ಪ್ಯಾಕೆಟ್‌ಗಳನ್ನು ತುರುಕುತ್ತಿರುವುದೂ ನಗರಗಳಲ್ಲಿ ಕಂಡುಬರುತ್ತಿರುವ ಸಾಮಾನ್ಯ ದೃಶ್ಯ. ಯಾವುದೇ ಪೋಷಕಾಂಶ ಇಲ್ಲದ ಹಾಗೂ ಯಾವಾಗಲೋ ತಯಾರಿಸಿದ ಸಿದ್ಧ ಆಹಾರ ಪದಾರ್ಥವನ್ನು ಸೇವಿಸಿ ಮಕ್ಕಳು ಬೊಜ್ಜುವೀರರಾದರೆ ದೇಶದಲ್ಲಿ ಆರೋಗ್ಯವಂತರ ಪ್ರಮಾಣವೂ ಇಳಿಮುಖವಾಗುವುದೂ ಕೂಡ ಸಹಜ.
ಇದನ್ನೂ ಓದಿ: Ravi Hunj Column: ತ್ರಿಪುರಾಂತಕ ದೇವರ ಮೂಲ ಅನುಭವ ಮಂಟಪದ ಸುತ್ತ...
ಇತ್ತೀಚೆಗಿನ ಸಮೀಕ್ಷೆಗಳ ಪ್ರಕಾರ, ನಮ್ಮ ದೇಶದ ಮಕ್ಕಳಲ್ಲೂ ಬೊಜ್ಜು ಸೇರಿದಂತೆ ಇತರ ರೋಗಗಳ ಪ್ರಮಾಣವು ಅತ್ಯಧಿಕವಾಗಿ ಹೆಚ್ಚುತ್ತಿರುವುದು ಕಂಡುಬಂದಿದೆ. ಗುಜರಾತ್ ರಾಜ್ಯವು ಈ ಪೈಕಿ ಮೊದಲ ಸ್ಥಾನದಲ್ಲಿದ್ದರೆ, ಕೇರಳ ಎರಡನೇಯ ಸ್ಥಾನದಲ್ಲಿದೆ, ನಮ್ಮ ಕರ್ನಾಟಕ ರಾಜ್ಯವು 4ನೇ ಸ್ಥಾನದಲ್ಲಿದೆ. ಈ ಗಂಭೀರ ಅಪಾಯವನ್ನರಿತ ಕೇರಳ ರಾಜ್ಯ ಸರಕಾರವು ಜಂಕ್ ಫುಡ್‌ಗಳ ಮೇಲೆ ಹೆಚ್ಚುವರಿಯಾಗಿ ಶೇ 14.5%ರಷ್ಟು ತೆರಿಗೆ ಭಾರ ವಿಧಿಸುವ ಮೂಲಕ ಜಂಕ್ ಫುಡ್ ತಿನ್ನುವುದರಿಂದ ಜನರನ್ನು ತಡೆಯುವ ಪ್ರಯತ್ನ ಮಾಡುವ ಆರೋಗ್ಯ ಸುಧಾರಣಾ ಕ್ರಮಕ್ಕೆ ಮುಂದಾಗಿರುವುದು ಸ್ವಾಗತಾರ್ಹ.
ಬೆಳೆಯುವ ವಯಸ್ಸಿನಲ್ಲಿಯೇ ಮಕ್ಕಳು ಆಧುನಿಕತೆಯ ಹೆಸರಿನಲ್ಲಿ ಪಾಶ್ಚಾತ್ಯರಂತೆ ಜಂಕ್ ಫುಡ್‌ನ ಜೀವನಶೈಲಿಯನ್ನು ಅನುಸರಿಸುತ್ತಿರುವುದರಿಂದ ಸಾಮಾನ್ಯವಾಗಿ ಮಕ್ಕಳಲ್ಲಿ ಹೃದ್ರೋಗ, ಕ್ಯಾನ್ಸರ್, ಹೈ-ಬಿ.ಪಿ, ಡಯಾಬಿಟಿಸ್, ಅಪೆಂಡಿಕ್ಸ್, ಖಿನ್ನತೆ, ನಿರುತ್ಸಾಹ, ಮುಂತಾದ ರೋಗಗಳು ಬರುವ ಸಾಧ್ಯತೆ ಹೆಚ್ಚಿದೆ. ವಿಶ್ವ ಆರೋಗ್ಯ ಸಂಸ್ಥೆಯ ನಿಯಮವೊಂದರ ಪ್ರಕಾರ, ಮಕ್ಕಳಾಗಲೀ, ದೊಡ್ಡವ ರಾಗಲೀ ದಿನನಿತ್ಯ ಸೇವಿಸುವ ಆಹಾರದ ಶಕ್ತಿಯ ಪ್ರಮಾಣದಲ್ಲಿ ಶೇ.10ಕ್ಕಿಂತ ಹೆಚ್ಚು ಸಕ್ಕರೆ ಸೇವನೆ ಇರಬಾರದು ಎಂಬುದಾಗಿದೆ.
ಸಕ್ಕರೆ, ಕೊಬ್ಬು ಮತ್ತು ಉಪ್ಪಿನಾಂಶ
ಹೇರಳವಾಗಿರುವ ಜಂಕ್ ಫುಡ್ ತೊರೆದು, ನಮ್ಮ ಜೀವನಶೈಲಿಗೆ ಅಗತ್ಯವಿರುವ ಹಣ್ಣು-ಹಂಪಲು, ಹಾಲು, ತರಕಾರಿ ಹಾಗೂ ಅತ್ಯಧಿಕ ಪ್ರಮಾಣದಲ್ಲಿ ಪೋಷಕಾಂಶಗಳನ್ನು ನೀಡುವ ದ್ವಿದಳ ಧಾನ್ಯದಿಂದ ತಯಾರಿಸಿದ ಆಹಾರವನ್ನು ಸೇವಿಸಬೇಕು ಮೂಲಕ ಮೂಲ ಆಹಾರ ಪದ್ಧತಿಯ (ಜವಾರಿ) ಪುನಃ ಪ್ರಾರಂಭವಾದರೆ ಅದೊಂದು ಜಾಗೃತಿ ಎನಿಸಿಬಹುದು, ಆಗ ಮಾತ್ರ ನಮ್ಮ ದೇಶದ ಇಂದಿನ ಮಕ್ಕಳು ನಾಳಿನ ಜವಾಬ್ದಾರಿಯುತ ನಾಗರಿಕರಾಗಿ ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಸದೃಢತೆ ಕಾಪಾಡಲು ಸಾಧ್ಯ.