ಕುವೆಂಪುಗೆ ಭಾರತ ರತ್ನ ಕೊಡಬೇಕು
ಸೌಹಾರ್ದ ಸಹಬಾಳ್ವೆ ಸಮಾನತೆಯ ಆಶಯ ಹೊಂದಿ, ಜಾತಿ ಧರ್ಮ ಕಟ್ಟುಪಾಡುಗಳಿಗೆ ಎಂದೂ ಬೀಳದೆ, ತಾವು ಂಬಿದ ಜಾತ್ಯತೀತ ತತ್ತ್ವವನ್ನು ತಮ್ಮ ಬದುಕಿನ ಉದ್ದಗಲಕ್ಕೂ ಅಳವಡಿಸಿ ಉಳಿಸಿ ಕೊಂಡು ಆದರ್ಶಪ್ರಾಯರಾಗಿ ಮಾದರಿ ಜೀವನ ನಡೆಸಿ, ಮೇಲ್ಪಂಕ್ತಿ ಹಾಕಿ ಕೊಟ್ಟ ಹಿರಿಮೆ ಕುವೆಂಪು ಅವರದು.

-

ಸಕಾಲಿಕ
ಅನಿಲ್ ಕುಮಾರ್, ನಂಜನಗೂಡು
ನಮ್ಮ ನಾಡಿನ ಸಾಕ್ಷಿ ಪ್ರಜ್ಞೆ, ಜಗದಗಲಕ್ಕೂ ಮನುಜ ಮತ ವಿಶ್ವಪಥ ಎಂಬ ಸಂದೇಶ ಸಾರಿದ ಮೇರುವ್ಯಕ್ತಿತ್ವದ ಜ್ಞಾನ ಶಿಖರ ರಾಷ್ಟ್ರಕವಿ ಕುವೆಂಪು ಅವರಿಗೆ ದೇಶ ಕೊಡ ಮಾಡುವ ಪ್ರತಿಷ್ಠಿತ ಭಾರತ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ಕೊಡಬೇಕು ಎಂಬ ಮನವಿಯನ್ನು ರಾಜ್ಯ ಸರ್ಕಾರ ಮಾಡಿದೆ. ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವುದು ಶ್ಲಾಘನೀಯ ಹಾಗೂ ಕನ್ನಡಿಗರಿಗೆ ಹೆಮ್ಮೆಯ ವಿಷಯ.
ಇವರ ಅಮೂಲಾಗ್ರ ಬರಹ ಚಿಂತನೆಗಳನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಪಸರಿಸಿ ವಿಶ್ವವ್ಯಾಪಿಯಾಗಿಸಲು ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವುದು ಇಂದಿನ ತುರ್ತು ಅಗತ್ಯವಾಗಿದೆ.
ಸೌಹಾರ್ದ ಸಹಬಾಳ್ವೆ ಸಮಾನತೆಯ ಆಶಯ ಹೊಂದಿ, ಜಾತಿ ಧರ್ಮ ಕಟ್ಟುಪಾಡುಗಳಿಗೆ ಎಂದೂ ಬೀಳದೆ, ತಾವು ಂಬಿದ ಜಾತ್ಯತೀತ ತತ್ತ್ವವನ್ನು ತಮ್ಮ ಬದುಕಿನ ಉದ್ದಗಲಕ್ಕೂ ಅಳವಡಿಸಿ ಉಳಿಸಿಕೊಂಡು ಆದರ್ಶಪ್ರಾಯರಾಗಿ ಮಾದರಿ ಜೀವನ ನಡೆಸಿ, ಮೇಲ್ಪಂಕ್ತಿ ಹಾಕಿ ಕೊಟ್ಟ ಹಿರಿಮೆ ಕುವೆಂಪು ಅವರದು.
ಇದನ್ನೂ ಓದಿ: Kaushik Gattigar Column: ಸ್ವಾಭಿಮಾನಿ ರಾಷ್ಟ್ರನಿರ್ಮಾಣ ನಮ್ಮ ಹೊಣೆಯಾಗಲಿ
ನಮ್ಮ ಮಾತೃಭಾಷೆ ಕನ್ನಡಕ್ಕೆ ಶ್ರೀರಾಮಾಯಣ ದರ್ಶನಂ ಎಂಬ ಮಹಾಕಾವ್ಯದ ಮೂಲಕ ಜ್ಞಾನಪೀಠ ಪುರಸ್ಕಾರ ದೊರಕಿಸಿಕೊಟ್ಟ ಪ್ರಥಮ ವ್ಯಕ್ತಿ ಕುವೆಂಪು. ‘ಕಾನೂರು ಹೆಗ್ಗಡತಿ’, ‘ಮಲೆ ಗಳಲ್ಲಿ ಮದುಮಗಳು’ ಎಂಬ ಸೊಗಸಾದ ಶ್ರೀಮಂತ ಕಾದಂಬರಿಗಳ ಮೂಲಕ ಇಡೀ ಭಾರತೀಯ ಸಾಹಿತ್ಯ ಲೋಕದಲ್ಲಿ ಎಂದಿಗೂ ಅಚ್ಚಳಿಯದೇ ಉಳಿದ ಮೇರು ಪ್ರತಿಭೆ. ನಮ್ಮ ಅನ್ನದ ಚಿನ್ನದ ಕನ್ನಡ ಭಾಷೆಯ ಸಾಹಿತ್ಯ ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸಿದವರಲ್ಲಿ ಕುವೆಂಪು ಎಂದಿಗೂ ಅಗ್ರಗಣ್ಯರು.
ಇವರ ಆಶಯ ಹಾಗೂ ಮೌಲ್ಯಗಳು ಸರ್ವ ಕಾಲಕ್ಕೂ ಪ್ರಸ್ತುತ. ರಾಷ್ಟ್ರಕವಿ ಕುವೆಂಪು ಅವರಿಗೆ ದೇಶದ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಗೆ ತಡವಾಗಿಯಾದರೂ ಶಿಫಾರಸು ಮಾಡಿದ ರಾಜ್ಯ ಸರ್ಕಾರಕ್ಕೆ ತುಂಬು ಹೃದಯದ ಅಭಿನಂದನೆಗಳು. ಕೇಂದ್ರ ಸರ್ಕಾರವು ಅರ್ಹ ಹಾಗೂ ಯೋಗ್ಯ ರಾದ ಇವರನ್ನು ಗೌರವಿಸಿ, ಭಾರತ ರತ್ನ ಎಂದು ಘೋಷಿಸಲಿ ಎಂದು ಆಶಿಸುತ್ತೇನೆ.