ಸೌರಾಷ್ಟ್ರ ಪರ ರಣಜಿ ಆಡಲಿದ್ದಾರೆ ಜಡೇಜಾ
ಪ್ರಸ್ತುತ ಟೆಸ್ಟ್ ಆಲ್ರೌಂಡರ್ಗಳಲ್ಲಿ ಅಗ್ರಸ್ಥಾನದಲ್ಲಿರುವ 36 ವರ್ಷದ ಜಡೇಜಾ, ಕಳೆದ ಋತುವಿನಲ್ಲಿ ಅಸ್ಸಾಂ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಕೊನೆಯ ಬಾರಿಗೆ ಆಡಿದ್ದರು. ಆ ಋತುವಿನಲ್ಲಿ ಅವರು ಎರಡು ಪಂದ್ಯಗಳನ್ನು ಆಡಿದ್ದರು. ದೆಹಲಿ ವಿರುದ್ಧದ ಪಂದ್ಯದಲ್ಲಿ 38 ರನ್, 66ಕ್ಕೆ ಐದು ಮತ್ತು 38ಕ್ಕೆ ಏಳು ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.