ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ಹರೀಶ್‌ ಕೇರ

columnist

harish@vishwavani.news

ದಶಕದ ಕಾಲ ಪತ್ರಿಕೋದ್ಯಮ ಅನುಭವ ಹೊಂದಿದ ಹರೀಶ್‌ ಕೇರ ಹುಟ್ಟೂರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ. ಹೊಸದಿಗಂತ, ವಿಜಯ ಕರ್ನಾಟಕ, ಕನ್ನಡಪ್ರಭ, ವಿಸ್ತಾರ ನ್ಯೂಸ್‌ಗಳಲ್ಲಿ ಮುದ್ರಣ, ಡಿಜಿಟಲ್‌ ಹಾಗೂ ಯುಟ್ಯೂಬ್‌ ಮೂರೂ ಸ್ವರೂಪಗಳಲ್ಲಿ ಕೆಲಸ ಮಾಡಿದ ಅನುಭವ. ಸಾಹಿತ್ಯ, ಸಾಂಸ್ಕೃತಿಕ, ನಾಡು ಹಾಗೂ ರಾಷ್ಟ್ರ ರಾಜಕೀಯ, ವಿಜ್ಞಾನ, ಪರಿಸರ ಇತ್ಯಾದಿ ಆಸಕ್ತಿಗಳು. ಕವಿ, ಕತೆಗಾರ, ವಿಮರ್ಶಕ. ಗಿಣಿಬಾಗಿಲು, ನಕ್ಷತ್ರ ನೇಯುವ ಹಕ್ಕಿಗಳು, ಮೇಧಾ ಪಾಟ್ಕರ್‌, ಪ್ರಜ್ವಲ ಮಾತು ಉಜ್ವಲ ಬೆಳಕು, ನಿಮ್ಮೊಳಗಿದೆ ಸಕ್ಸಸ್‌ ಇವರ ಕೃತಿಗಳು. ಉತ್ಥಾನ, ಸಂಚಯ, ಸಂಕ್ರಮಣ ಸಾಹಿತ್ಯ ಸ್ಪರ್ಧೆಗಳಲ್ಲಿ ಪುರಸ್ಕಾರ ದೊರೆತಿದೆ. ಅಭಿವೃದ್ದಿ ಪತ್ರಿಕೋದ್ಯಮ ಮತ್ತು ಅಂಕಣ ಬರಹ ಜೀವದ್ರವ್ಯ.

Articles
Haveri News: ದೀಪಾವಳಿ ಹಬ್ಬದ ನಡುವೆ ದುರಂತ, ಕೊಬ್ಬರಿ ಹೋರಿ ತಿವಿತಕ್ಕೆ ಮೂವರು ಬಲಿ

ದೀಪಾವಳಿ ಹಬ್ಬದ ನಡುವೆ ದುರಂತ, ಕೊಬ್ಬರಿ ಹೋರಿ ತಿವಿತಕ್ಕೆ ಮೂವರು ಬಲಿ

Deepavali Festival: ದೀಪಾವಳಿ ಹಬ್ಬದ ಸಂದರ್ಭ ಕೆಲವರ ಪಾಲಿಗೆ ಸೂತಕವಾಗಿದೆ. ಹೋರಿ ಹಬ್ಬದ ವೇಳೆ ಹೋರಿ ತವಿತದಿಂದ ಮೂವರು ಮೃತಪಟ್ಟಿದ್ದಾರೆ. ಹೋರಿ‌ ಓಟದ ವೇಳೆ ಇನ್ನೂ ಇಬ್ಬರಿಗೆ ಗಂಭೀರ ಗಾಯವಾಗಿದೆ. ಈ ಕುರಿತು ಪ್ರಕರಣಗಳು ಹಾವೇರಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

Foeticide: ಮೈಸೂರಿನಲ್ಲಿ ಭ್ರೂಣ ಲಿಂಗ ಪತ್ತೆ ಗ್ಯಾಂಗ್, ಮಹಿಳೆ ಸೇರಿ ಮೂವರು ಆರೆಸ್ಟ್

ಮೈಸೂರಿನಲ್ಲಿ ಭ್ರೂಣ ಲಿಂಗ ಪತ್ತೆ ಗ್ಯಾಂಗ್, ಮಹಿಳೆ ಸೇರಿ ಮೂವರು ಆರೆಸ್ಟ್

Mysuru Crime News: ಮೈಸೂರು ತಾಲೂಕಿನ ಹುನಗನಹಳ್ಳಿಯಲ್ಲಿರುವ ತೋಟದ ಮನೆಯಲ್ಲಿ ಕಾನೂನು ಬಾಹಿರವಾಗಿ ಸ್ಕ್ಯಾನಿಂಗ್ ಮಾಡಲಾಗುತ್ತಿತ್ತು. ಹೆಣ್ಣು ಭ್ರೂಣ ಲಿಂಗ ಪತ್ತೆಯಾದರೆ ಭ್ರೂಣವನ್ನು ಹತ್ಯೆ ಮಾಡುತ್ತಿದ್ದರು. ಗ್ರಾಮೀಣ ಭಾಗದ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸ್ಕ್ಯಾನಿಂಗ್ ಮಾಡುತ್ತಿದ್ದರು.

Physical Abuse: ಬೆಂಗಳೂರಿನಲ್ಲಿ ಮಹಿಳೆ ಮೇಲೆ ಎರಗಿದ ಮೂವರು ಕಾಮುಕರ ಸೆರೆ

ಬೆಂಗಳೂರಿನಲ್ಲಿ ಮಹಿಳೆ ಮೇಲೆ ಎರಗಿದ ಮೂವರು ಕಾಮುಕರ ಸೆರೆ

Robbery Case: ಸಂತ್ರಸ್ತೆ ವಾಸವಿದ್ದ ಮನೆಗೆ ನುಗ್ಗಿದ ಐವರು ಆರೋಪಿಗಳ ಗ್ಯಾಂಗ್‌, ತಾವು 'ಪೀಣ್ಯ ಪೊಲೀಸರ ಇನ್ಫಾರ್ಮರ್ಸ್' (ಮಾಹಿತಿದಾರರು) ಎಂದು ಹೇಳಿಕೊಂಡಿದ್ದಾರೆ. "ನಿಮ್ಮ ಮನೆಯಲ್ಲಿ ಗಾಂಜಾ ಮತ್ತು ವೇಶ್ಯವಾಟಿಕೆ ನಡೆಸುತ್ತಿದ್ದೀರಾ" ಎಂದು ಆರೋಪಿಸಿದ್ದಾರೆ. ನಂತರ ಮಾರಕಾಸ್ತ್ರಗಳನ್ನು ತೋರಿಸಿ ಮನೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸಿದ್ದಾರೆ.

Police Encounter: ದೆಹಲಿಯಲ್ಲಿ ಪೊಲೀಸ್ ಎನ್‌ಕೌಂಟರ್‌, ನಾಲ್ವರು ಕುಖ್ಯಾತ ಗ್ಯಾಂಗ್‌ಸ್ಟರ್‌ಗಳ ಹತ್ಯೆ

ದೆಹಲಿಯಲ್ಲಿ ಪೊಲೀಸ್ ಎನ್‌ಕೌಂಟರ್‌, 4 ಕುಖ್ಯಾತ ಗ್ಯಾಂಗ್‌ಸ್ಟರ್‌ಗಳ ಹತ್ಯೆ

Gangsters: ಅಕ್ಟೋಬರ್ 22ರ ರಾತ್ರಿ ಸುಮಾರು 2:20ರ ಜಾವ, ಬಿಹಾರ ಪೊಲೀಸ್ ಮತ್ತು ದೆಹಲಿ ಪೊಲೀಸ್ ಅಪರಾಧ ವಿಭಾಗದ ಜಂಟಿ ತಂಡ ದೆಹಲಿಯ ರೋಹಿಣಿ ಪ್ರದೇಶದಲ್ಲಿ ನಡೆಸಿದ ಎನ್‌ಕೌಂಟರ್‌ನಲ್ಲಿ ನಾಲ್ವರು ಶಂಕಿತ ದರೋಡೆಕೋರರನ್ನು ಹೊಡೆದುರುಳಿಸಿದ್ದಾರೆ.

Hasanamba Devi: ಶಕ್ತಿದೇವತೆ ಹಾಸನಾಂಬೆ ದೇಗುಲ ಗರ್ಭಗುಡಿಗೆ ಇಂದು ತೆರೆ, ಈ ವರ್ಷ 26 ಲಕ್ಷ ಮಂದಿ ದರ್ಶನ

ಇಂದು ಹಾಸನಾಂಬೆ ದೇಗುಲ ಗರ್ಭಗುಡಿಗೆ ತೆರೆ, ಈ ವರ್ಷ 26 ಲಕ್ಷ ಮಂದಿ ದರ್ಶನ

ಕಳೆದ 13 ದಿನಗಳಿಂದ ಇದುವರೆಗೂ 26 ಲಕ್ಷ ಭಕ್ತರು ಹಾಸನಾಂಬೆ ದರ್ಶನ ಪಡೆದುಕೊಂಡಿದ್ದಾರೆ. ಅಲ್ಲದೆ ಈ ವರ್ಷ ದಾಖಲೆ 22 ಕೋಟಿಗೂ ಹೆಚ್ಚು ಆದಾಯ ಸಂಗ್ರಹವಾಗಿದೆ. ಕಳೆದ 13 ದಿನಗಳಿಂದ ಅನೇಕ ರಾಜಕೀಯ ನಾಯಕರು, ಸಿನಿಮಾ ತಾರೆಯರು ಸೇರಿದಂತೆ ಹಲವರು ದೇವರ ದರ್ಶನ ಪಡೆದಿದ್ದಾರೆ.

Deepavali Festival: ಕತ್ತಲಾದ ದೀಪಾವಳಿ, ಪಟಾಕಿ ಸಿಡಿಸುವಾಗ 190ಕ್ಕೂ ಅಧಿಕ ಮಂದಿಗೆ ಗಾಯ, ಕಣ್ಣೇ ಕಳೆದುಕೊಂಡ 8  ಮಂದಿ

ಪಟಾಕಿ ಸಿಡಿಸುವಾಗ 190ಕ್ಕೂ ಅಧಿಕ ಮಂದಿಗೆ ಗಾಯ, ಕಣ್ಣೇ ಕಳೆದುಕೊಂಡ 8 ಮಂದಿ

Fire crackers: ಬೆಂಗಳೂರಿನ ವಾಯು ಗುಣಮಟ್ಟ ದೀಪಾವಳಿ ಪಟಾಕಿಯಿಂದಾಗಿ ಮತ್ತಷ್ಟು ಹದಗೆಟ್ಟಿದೆ. BWSSB ಕಾಡುಬೀಸನಹಳ್ಳಿಯಲ್ಲಿ AQI ಅಂದ್ರೆ ಏರ್‌ ಕ್ವಾಲಿಟಿ ಇಂಡೆಕ್ಸ್‌ ಅರ್ಥಾತ್‌ ಗಾಳಿಯ ಗುಣಮಟ್ಟ 140 ಆಗಿದೆ. ಅಂದ್ರೆ ಇಲ್ಲೇ ಹೆಚ್ಚು ಮಾಲಿನ್ಯ ಆಗಿರುವುದು ಕಂಡುಬಂದಿದೆ.

Physical Abuse: ಬೆಂಗಳೂರಿನಲ್ಲಿ ಮನೆಗೆ ನುಗ್ಗಿ ಮಹಿಳೆ ಮೇಲೆ ಮೂವರಿಂದ ಅತ್ಯಾಚಾರ

ಬೆಂಗಳೂರಿನಲ್ಲಿ ಮನೆಗೆ ನುಗ್ಗಿ ಮಹಿಳೆ ಮೇಲೆ ಮೂವರಿಂದ ಅತ್ಯಾಚಾರ

Harassment: ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿಗಳು ಅಪರಾಧ ಎಸಗುವ ಮುನ್ನ ಮದ್ಯಪಾನ ಮಾಡಿದ್ದರು ಎನ್ನಲಾಗಿದೆ. ಪಶ್ಚಿಮ ಬಂಗಾಳ ಮೂಲದ ಮಹಿಳೆ ಇಲ್ಲಿ ಬಾಡಿಗೆ ಮನೆಯಲ್ಲಿದ್ದರು.

Police Firing: ಗೋಪೂಜೆ ದಿನವೇ ಅಕ್ರಮ ಗೋ ಸಾಗಾಟಗಾರನ ಕಾಲಿಗೆ ಗುಂಡು

ಗೋಪೂಜೆ ದಿನವೇ ಅಕ್ರಮ ಗೋ ಸಾಗಾಟಗಾರನ ಕಾಲಿಗೆ ಗುಂಡು

Cow trafficking: ಪೊಲೀಸರು ಲಾರಿಯನ್ನು ಅಡ್ಡಗಟ್ಟಿದ್ದಾರೆ. ಆದರೂ ನಿಲ್ಲದ ಚಾಲಕ ಪೊಲೀಸರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಪಿಎಸ್‌ಐ ಆರೋಪಿಯ ಮೇಲೆ ಎರಡು ಸುತ್ತು ಗುಂಡುಗಳನ್ನು ಫೈಯರ್ ಮಾಡಿದ್ದಾರೆ. ಇದರಿಂದ ಒಂದು ಗುಂಡು ವಾಹನದ ಮೇಲೆ ಹಾಗೂ ಮತ್ತೊಂದು ಆರೋಪಿಯ ಕಾಲಿಗೆ ಬಿದ್ದಿದೆ.

RSS: ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗಿಯಾದ ಅಡುಗೆ ಸಿಬ್ಬಂದಿ ವಜಾ

ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗಿಯಾದ ಅಡುಗೆ ಸಿಬ್ಬಂದಿ ವಜಾ

Bidar News: ಬೀದರ್‌ ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದ ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಸುಮಾರು 20ಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ನಡೆದ ಪಥಸಂಚಲನದಲ್ಲಿ ಹಲವು ಸರ್ಕಾರಿ ಸಿಬ್ಬಂದಿ, ಅಧಿಕಾರಿಗಳು ಭಾಗಿಯಾಗಿದ್ದಾರೆ.

Road Accident: ಶಾಸಕ ಅಶೋಕ್‌ ಮನಗೂಳಿ ಕಾರು ಅಪಘಾತ, ಪ್ರಯಾಣಿಕರು ಪಾರು

ಶಾಸಕ ಅಶೋಕ್‌ ಮನಗೂಳಿ ಕಾರು ಅಪಘಾತ, ಪ್ರಯಾಣಿಕರು ಪಾರು

Ashok Managuli: ಕಲಬುರಗಿಯಿಂದ ಸಿಂದಗಿ ಕಡೆಗೆ ಬರ್ತಿದ್ದ ಸ್ವಿಫ್ಟ್ ಕಾರು, ಶಾಸಕರ ಕಾರಿಗೆ ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಎರಡೂ ಕಾರುಗಳಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Hasanamba Devi: ಇಂದು ಹಾಸನಾಂಬೆ ದರ್ಶನ ಮುಕ್ತಾಯ, ದೇವಿ ಸನ್ನಿಧಿಯಲ್ಲಿ ಮಾಂಗಲ್ಯ ಸರದ ಪವಾಡ!

ಇಂದು ಹಾಸನಾಂಬೆ ದರ್ಶನ ಮುಕ್ತಾಯ, ದೇವಿ ಸನ್ನಿಧಿಯಲ್ಲಿ ಮಾಂಗಲ್ಯ ಸರದ ಪವಾಡ!

Hassan: ಇತಿಹಾಸದಲ್ಲೇ ಇದೇ ಮೊದಲ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದಾರೆ ಎನ್ನುವ ದಾಖಲೆ ಸೃಷ್ಟಿಯಾಗಿದೆ. ಇಂದು ಕೊನೆ ದಿನವಾಗಿದ್ದರಿಂದ ಮುಂಜಾನೆ 6 ಗಂಟೆಯಿಂದಲೂ ಭಕ್ತರ ದಂಡು ಪ್ರವಾಹ ರೂಪದಲ್ಲಿ ಹರಿದುಬರುತ್ತಿದೆ. ಇಂದು ಸಂಜೆ 7 ಗಂಟೆವರೆಗೂ ದರ್ಶನಾವಕಾಶವಿರಲಿದೆ.

Chinese Manja: ನಿಷೇಧಿತ ಚೈನೀಸ್‌ ಮಾಂಜಾ ದಾರದಿಂದ ಕುತ್ತಿಗೆಗೆ ಗಾಯ, ಬಾಲಕಿ ಗಂಭೀರ

ನಿಷೇಧಿತ ಚೈನೀಸ್‌ ಮಾಂಜಾ ದಾರದಿಂದ ಕುತ್ತಿಗೆಗೆ ಗಾಯ, ಬಾಲಕಿ ಗಂಭೀರ

Belagavi news: ಚೈನೀಸ್ ಮಾಂಜಾ ದಾರ ಮಾರಾಟ ಮತ್ತು ಬಳಕೆಯ ಮೇಲೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ನಿಷೇಧ ಹೇರಿದೆ. ಆದರೂ, ದಾರವನ್ನು ಬಹಿರಂಗವಾಗಿ ಮಾರಾಟ ಮಾಡಲಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ, ಇದೇ ರೀತಿಯ ಘಟನೆಗಳಲ್ಲಿ ಕನಿಷ್ಠ ಮೂರರಿಂದ ನಾಲ್ಕು ಜನರು ಪ್ರಾಣ ಕಳೆದುಕೊಂಡಿದ್ದಾರೆ.

Drowned: ಹಬ್ಬದ ದಿನವೇ ದುರಂತ, ಕೆರೆಯಲ್ಲಿ ಮುಳುಗಿ ಮೂವರ ಸಾವು

ಹಬ್ಬದ ದಿನವೇ ದುರಂತ, ಕೆರೆಯಲ್ಲಿ ಮುಳುಗಿ ಮೂವರ ಸಾವು

Tumkur news: ಕೆರೆಯ ಕಡೆಗೆ ವಿಹಾರಕ್ಕೆ ತೆರಳಿದ್ದ ಶ್ರಾವ್ಯ ಮತ್ತು ಸ್ನೇಹಿತೆ ಪುಣ್ಯ ಕಾಲು ಜಾರಿ ಕೆರೆಗೆ ಬಿದ್ದಿದ್ದು, ಇಬ್ಬರು ಬಾಲಕಿಯರ ರಕ್ಷಣೆಗೆ ಬಂದಿದ್ದ ತಂದೆ ವೆಂಕಟೇಶ್ ಕೂಡ ಮುಳುಗಿ ಸಾವಿಗೀಡಾಗಿದ್ದಾರೆ. ಶವಗಳನ್ನು ಅಗ್ನಿಶಾಮಕದಳ ಸಿಬ್ಬಂದಿ ಹೊರಗೆ ತೆಗೆದಿದ್ದಾರೆ. ಅಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Deepavali Festival: 100ಕ್ಕೂ ಹೆಚ್ಚು ಮಂದಿಗೆ ಕತ್ತಲಾದ ದೀಪಾವಳಿ, ಪಟಾಕಿ ಸಿಡಿಸುವಾಗ ಗಾಯ

100ಕ್ಕೂ ಹೆಚ್ಚು ಮಂದಿಗೆ ಕತ್ತಲಾದ ದೀಪಾವಳಿ, ಪಟಾಕಿ ಸಿಡಿಸುವಾಗ ಗಾಯ

fire crackers: ಪಟಾಕಿ ಹಚ್ಚುವಾಗ ರಕ್ಷಣಾತ್ಮಕ ಕನ್ನಡಕಗಳನ್ನು ಬಳಕೆ ಮಾಡಬೇಕು. ಯಾವಾಗಲೂ ಪಟಾಕಿಯಿಂದ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಬೇಕು. ಅದರಲ್ಲಿಯೂ ಮಕ್ಕಳು ಪಟಾಕಿ ಸಿಡಿಸುವಾಗ ಪೋಷಕರು ಹೆಚ್ಚಿನ ಕಾಳಜಿ ವಹಿಸಬೇಕು. ಶಬ್ದ ಮಾಡುವ ಪಟಾಕಿಗಳಿಗಿಂತ ಸುರಕ್ಷಿತ, ಕಡಿಮೆ ತೀವ್ರತೆಯ ಪಟಾಕಿಗಳನ್ನು ಬಳಕೆ ಮಾಡುವುದು ಬಹಳ ಉತ್ತಮ ಎಂದು ಆರೋಗ್ಯ ಇಲಾಖೆ ಸೂಚಸಿದೆ.

ಶ್ವೇತಭವನದಲ್ಲಿ ದೀಪಾವಳಿ ಆಚರಿಸಿ ʼಮೋದಿ ನನ್ನ ಬೆಸ್ಟ್‌ ಫ್ರೆಂಡ್‌ʼ ಎಂದ ಟ್ರಂಪ್

ಶ್ವೇತಭವನದಲ್ಲಿ ದೀಪಾವಳಿ ಆಚರಿಸಿ ʼಮೋದಿ ಬೆಸ್ಟ್‌ ಫ್ರೆಂಡ್‌ʼ ಎಂದ ಟ್ರಂಪ್

Deepavali: ಭಾರತ- ಅಮೆರಿಕಗಳ ನಡುವಿನ ತೆರಿಗೆ ಸಮರದ ನಡುವೆಯೇ ಇದು ಘಟಿಸಿದೆ. ಶ್ವೇತಭವನದಲ್ಲಿ ನಡೆದ ದೀಪಾವಳಿ ಆಚರಣೆ ಸಮಯದ ಹೇಳಿಕೆಯಲ್ಲಿ ಡೊನಾಲ್ಡ್ ಟ್ರಂಪ್, “ಭಾರತದ ಜನರಿಗೆ ನಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ” ಎಂದು ಹೇಳಿದರು.

CM Siddaramaiah: ಒಂದು ವಾರದಲ್ಲಿ ರಸ್ತೆ ಗುಂಡಿಗಳನ್ನೆಲ್ಲ ಮುಚ್ಚಲು ಸಿಎಂ ಸಿದ್ದರಾಮಯ್ಯ ಆದೇಶ

ಒಂದು ವಾರದಲ್ಲಿ ರಸ್ತೆ ಗುಂಡಿಗಳನ್ನೆಲ್ಲ ಮುಚ್ಚಲು ಸಿಎಂ ಸಿದ್ದರಾಮಯ್ಯ ಆದೇಶ

Bengaluru: ಹೊಸ ಹೊಸ ಔಟರ್ ರಿಂಗ್ ರಸ್ತೆ, ಸುರಂಗ ಮಾರ್ಗ, ಫ್ಲೈ ಓವರ್, ಡಬಲ್ ಡೆಕ್ಕರ್ ರಸ್ತೆಗಳು ಸೇರಿ ಬೆಂಗಳೂರಿನ ಅಭಿವೃದ್ಧಿಗೆ ₹1,20,000 ಕೋಟಿ ನೀಡುತ್ತಿದ್ದೇವೆ. ಆದ್ದರಿಂದ ಕೆಲಸ ಮಾಡುವವರ ಪರವಾಗಿ ನೀವು ಗಟ್ಟಿಯಾಗಿ ನಿಲ್ಲಬೇಕು ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

Self Harming: ಬೆಂಗಳೂರಿನಲ್ಲಿ ಲಿವಿಂಗ್ ಟುಗೆದರ್‌ನಲ್ಲಿದ್ದ ಜೋಡಿ ಆತ್ಮಹತ್ಯೆ

ಬೆಂಗಳೂರಿನಲ್ಲಿ ಲಿವಿಂಗ್ ಟುಗೆದರ್‌ನಲ್ಲಿದ್ದ ಜೋಡಿ ಆತ್ಮಹತ್ಯೆ

Bengaluru Crime: ರಾಕೇಶ್ ಪದೇ ಪದೆ ಕುಡಿದು ಬಂದು ಜಗಳ ಮಾಡುತ್ತಿದ್ದ. ಭಾನುವಾರವೂ ಜಗಳ ಮಾಡಿದ್ದ. ಸೋಮವಾರ ಬೆಳಗ್ಗೆ ನೋಡಿದಾಗ ರಾಕೇಶ್ ನೇಣು ಬಿಗಿದುಕೊಂಡಿದ್ದ. ಬಳಿಕ ಸೀಮಾ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.

Digital Arrest: ಬೆಂಗಳೂರಿನ ನಿವೃತ್ತ ಅಧಿಕಾರಿಗೆ 14 ದಿನಗಳ ಕಾಲ ಡಿಜಿಟಲ್‌ ಆರೆಸ್ಟ್‌, ₹1.62 ಕೋಟಿ ವಂಚನೆ

ನಿವೃತ್ತ ಅಧಿಕಾರಿಗೆ 14 ದಿನ ಡಿಜಿಟಲ್‌ ಆರೆಸ್ಟ್‌, ₹1.62 ಕೋಟಿ ವಂಚನೆ

Cyber Crime: ನಿಮ್ಮ ವಿರುದ್ಧ ಮಾನವ ಕಳ್ಳಸಾಗಣೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ವಿಡಿಯೋ ಕಾಲ್​​ ಮಾಡಿದ ವ್ಯಕ್ತಿ ಹೇಳಿದ್ದಾನೆ. ಈ ಕಾರಣಕ್ಕೆ ನಿಮ್ಮನ್ನು ಬಂಧನ ಮಾಡಲಾಗುವುದು ಎಂದು ಬೆದರಿಸಿದ್ದಾನೆ. ಇದರಿಂದ ಭಯಗೊಂಡು ತನ್ನ ಉಳಿತಾಯ ಮತ್ತು ಸ್ಥಿರ ಠೇವಣಿ ವಿವರಗಳನ್ನು ವಂಚಕನೊಂದಿಗೆ ಹಂಚಿಕೊಂಡಿದ್ದಾರೆ.

CM Siddaramaiah: ನಂದಿ ಬೆಟ್ಟದಲ್ಲಿ 2 ಭಾರತೀಯ ಮೀಸಲು ಪಡೆ ಆರಂಭಕ್ಕೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

ನಂದಿ ಬೆಟ್ಟದಲ್ಲಿ 2 ಭಾರತೀಯ ಮೀಸಲು ಪಡೆ ಆರಂಭ: ಸಿಎಂ ಸಿದ್ದರಾಮಯ್ಯ

Nandi Hills: ನಂದಿ ಬೆಟ್ಟದಲ್ಲಿ ಎರಡು ಭಾರತೀಯ ಮೀಸಲು ಪಡೆ ಆರಂಭಕ್ಕೆ ಒಪ್ಪಿಗೆ ನೀಡಲಾಗಿದೆ. ನಾಗರೀಕರಿಗಾಗಿ ಮನೆ ಮನೆಗೆ ಪೊಲೀಸ್ ಜಾರಿ ಮಾಡಿದ್ದೇವೆ. ಎಸ್‌ಸಿ, ಎಸ್‌ಟಿ ಜನರ ರಕ್ಷಣೆಗೆ ಡಿಸಿಆರ್‌ಎ ಠಾಣೆ ತೆರೆದಿದ್ದೇವೆ. ನಿವೃತ್ತ ಪೊಲೀಸ್ ಅಧಿಕಾರಿ ಸಿಬ್ಬಂದಿಗಾಗಿ 10 ಕೋಟಿ ರೂಪಾಯಿ ಮೀಸಲು ಇಡಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

Assault Case: ಪೋಷಕರಿಗೆ ಕರೆ ಮಾಡಿದ್ದಕ್ಕೆ ವಿದ್ಯಾರ್ಥಿ ಮೇಲೆ ಅಮಾನುಷ ಹಲ್ಲೆ ಮಾಡಿದ ಅಧ್ಯಾಪಕ

ಪೋಷಕರಿಗೆ ಕರೆ ಮಾಡಿದ್ದಕ್ಕೆ ವಿದ್ಯಾರ್ಥಿ ಮೇಲೆ ಶಿಕ್ಷಕನಿಂದ ಅಮಾನುಷ ಹಲ್ಲೆ

Chitrdadurga: ಆ ವಿದ್ಯಾರ್ಥಿಗೆ ಕಾಲಲ್ಲಿ ಒದ್ದು ವಿಕೃತಿ ಮೆರೆದಿದ್ದು, ಆ ಶಿಕ್ಷಕನ ಕ್ರೌರ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಆಕ್ರೋಶದಿಂದ ಪುಟ್ಟ ವಿದ್ಯಾರ್ಥಿ ಮೇಲೆ ಈ ರೀತಿ ಅಮಾನುಷವಾಗಿ ಶಿಕ್ಷಕ ಕ್ರೌರ್ಯ ಮೆರೆದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಇದರ ಬೆನ್ನಲ್ಲೇ ಶಿಕ್ಷಕ ವೀರೇಶ್ ನಾಪತ್ತೆಯಾಗಿದ್ದಾನೆ.

Putturu: ಪುತ್ತೂರಿನಲ್ಲಿ ಸಿಎಂ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನೂಕುನುಗ್ಗಲು, 11ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಪುತ್ತೂರಿನ ಕಾರ್ಯಕ್ರಮದಲ್ಲಿ ನೂಕುನುಗ್ಗಲು, 11ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Putturu: ರೈ ಎಸ್ಟೇಟ್ ಎಜುಕೇಶನ್ ಮತ್ತು ಚ್ಯಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಶಾಸಕ ಅಶೋಕ ರೈ ನೇತೃತ್ವದಲ್ಲಿ ಪುತ್ತೂರಿನ ಕೊಂಬೆಟ್ಟು ಮೈದಾನದಲ್ಲಿ ದೀಪಾವಳಿ ಪ್ರಯುಕ್ತ 13ನೆ ವರ್ಷದ (ವಸ್ತ್ರ ವಿತರಣಾ) ಜನಮನ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದರು. ‌

Deepavali Festival: ʼಕತ್ತಲೆಯ ಮೇಲೆ ಬೆಳಕಿನ ವಿಜಯʼ ಎಂದು ದೀಪಾವಳಿ ಹಬ್ಬಕ್ಕೆ ಶುಭ ಕೋರಿದ ಟ್ರಂಪ್‌

ʼಕತ್ತಲೆಯ ಮೇಲೆ ಬೆಳಕಿನ ವಿಜಯʼ ದೀಪಾವಳಿ ಹಬ್ಬಕ್ಕೆ ಶುಭ ಕೋರಿದ ಟ್ರಂಪ್‌

Donald Trump: ದೀಪಾವಳಿಯನ್ನು ಆಚರಿಸುವ ಪ್ರತಿಯೊಬ್ಬ ಅಮೆರಿಕನ್ನರಿಗೆ, ಈ ಆಚರಣೆಯು ಶಾಶ್ವತ ಪ್ರಶಾಂತತೆ, ಸಮೃದ್ಧಿ, ಭರವಸೆ ಮತ್ತು ಶಾಂತಿಯನ್ನು ತರಲಿ ಎಂದು ಡೊನಾಲ್ಡ್‌ ಟ್ರಂಪ್ ಅವರು ಶುಭ ಹಾರೈಸಿದ್ದಾರೆ. ಭಾರತ- ಅಮೆರಿಕ ನಡುವಿನ ಬಿಗಡಾಯಿಸಿದ ತೆರಿಗೆ ಜಟಾಪಟಿಯ ನಡುವೆಯೇ ಅವರ ಹಾರೈಕೆ ಬಂದಿದೆ.

Fire crackers: ಬೆಂಗಳೂರಲ್ಲಿ ಪಟಾಕಿ ಸಿಡಿತದ ವೇಳೆ 8 ಜನರಿಗೆ ಗಾಯ

ಬೆಂಗಳೂರಲ್ಲಿ ಪಟಾಕಿ ಸಿಡಿತದ ವೇಳೆ 8 ಜನರಿಗೆ ಗಾಯ

ಹಬ್ಬದ ಹಿನ್ನೆಲೆ ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರ ಹಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹಬ್ಬದ ಸಂದರ್ಭದಲ್ಲಿ ಸಿಡಿಸುವ ಪಟಾಕಿಗಳು ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯ ಉಂಟು ಮಾಡಿ ಪರಿಸರಕ್ಕೆ ಹಾನಿ ಮಾಡುತ್ತಿದೆ. ಜೊತೆಗೆ ಜನರ ಆರೋಗ್ಯವನ್ನು ಹದಗೆಡಿಸುತ್ತಿದೆ. ಹೀಗಾಗಿ ಮಾಲಿನ್ಯ ರಹಿತವಾಗಿ ಆಚರಿಸಲು ಮನವಿ ಮಾಡಲಾಗಿದೆ.

Self Harming: ಸಂಬಳ ಸಿಗದೆ ಓಲಾ ಕಂಪನಿ ಸಿಬ್ಬಂದಿ ಆತ್ಮಹತ್ಯೆ, ಸಿಇಒ ಮೇಲೆ ದೂರು

ಸಂಬಳ ಸಿಗದೆ ಓಲಾ ಕಂಪನಿ ಸಿಬ್ಬಂದಿ ಆತ್ಮಹತ್ಯೆ, ಸಿಇಒ ಮೇಲೆ ದೂರು

Bengaluru: ಮೃತ ಅರವಿಂದ್ ರೂಮಿನಲ್ಲಿ 28 ಪುಟಗಳ ಡೆತ್ ನೋಟ್ ಪತ್ತೆಯಾಗಿದ್ದು, ಆಗ ಕಂಪನಿಯ ವಂಚನೆ ಬಯಲಾಗಿದೆ. ಇದೀಗ ಓಲಾ ಸಂಸ್ಥೆಯ ಸಿಇಒ ಭವೇಶ್ ಅಗರ್ವಾಲ್ ಮತ್ತು ಹಿರಿಯ ಸಿಬ್ಬಂದಿ ಸುಬ್ರತ್ ಕುಮಾರ್ ದಾಸ್ ವಿರುದ್ಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Loading...