ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

Priyanka P

Freelance Writer

priyankagowda593@gmail.com

ನನ್ನ ಹೆಸರು ಪ್ರಿಯಾಂಕಾ. ನಮ್ಮೂರು ಉಪ್ಪಿನಂಗಡಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂಸಿಜೆ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದೇನೆ. ಪ್ರಜಾ ಟಿವಿ, ದಿಗ್ವಿಜಯ ನ್ಯೂಸ್ ಚಾನೆಲ್, ಅವಧಿ ಮ್ಯಾಗಝೀನ್, ಕನ್ನಡ ದುನಿಯಾ, ವಿಜಯಕರ್ನಾಟಕ ಮತ್ತು ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಈ ಮೊದಲು ಸುದ್ದಿ ಮತ್ತು ಜೀವನಶೈಲಿ ವಿಭಾಗದಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ, ವಿಶ್ವವಾಣಿಯಲ್ಲಿ ವೈರಲ್ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Articles
ಪಾಕಿಸ್ತಾನಕ್ಕೆ ಗೂಢಚಾರಿಕೆ ಆರೋಪ: ಅಸ್ಸಾಂನಲ್ಲಿ ನಿವೃತ್ತ ವಾಯುಪಡೆ ಅಧಿಕಾರಿಯ ಬಂಧನ

ಅಸ್ಸಾಂನಲ್ಲಿ ನಿವೃತ್ತ ವಾಯುಪಡೆ ಅಧಿಕಾರಿಯ ಬಂಧನ

Retired Air Force Officer Arrested: ಅಸ್ಸಾಂನಲ್ಲಿ ನಿವೃತ್ತ ವಾಯುಸೇನಾ ಅಧಿಕಾರಿ ಕುಲೆಂದ್ರ ಶರ್ಮಾನನ್ನು ಪಾಕಿಸ್ತಾನಕ್ಕೆ ಗೂಢಚಾರಿಕೆ ನಡೆಸಿದ ಆರೋಪದ ಮೇರೆಗೆ ಬಂಧಿಸಲಾಗಿದೆ. ಶರ್ಮಾನ ಚಲನವಲನಗಳ ಬಗ್ಗೆ ತೀವ್ರ ನಿಗಾ ವಹಿಸಿದ್ದ ಪೊಲೀಸರು, ಕೊನೆಗೆ ಬಂಧಿಸಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

ಸಹಜ ಸ್ಥಿತಿಯತ್ತ ಇಂಡಿಗೋ ಕಾರ್ಯಾಚರಣೆ; ಇಂದು 2,050ಕ್ಕೂ ಹೆಚ್ಚು ವಿಮಾನಗಳ ಹಾರಾಟ

ಸಹಜ ಸ್ಥಿತಿಯತ್ತ ಇಂಡಿಗೋ ವಿಮಾನಗಳ ಕಾರ್ಯಾಚರಣೆ

IndiGo Flight operations: ಇಂಡಿಗೋ ಸಂಸ್ಥೆಯ ವಿಮಾನ ಕಾರ್ಯಾಚರಣೆ 1 ವಾರಗಳ ವ್ಯತ್ಯಯದ ನಂತರ ಸಹಜ ಸ್ಥಿತಿಗೆ ಬಂದಿದೆ. ಡಿಸೆಂಬರ್ 13ರಂದು ಸಂಸ್ಥೆಯ 2,050ಕ್ಕೂ ಹೆಚ್ಚು ವಿಮಾನಗಳು ಕಾರ್ಯ ನಿರ್ವಹಿಸಿದವು. ಪ್ರಯಾಣಿಕರಿಗೆ ಮರುಪಾವತಿ ಹಾಗೂ ಪರಿಹಾರ ನೀಡುವ ಮೂಲಕ ಗ್ರಾಹಕ ಸೇವೆಯನ್ನು ಸುಧಾರಿಸುವ ಮೇಲೆ ಗಮನಹರಿಸಲಾಗಿದೆ.

Year Ender 2025: ಇಡ್ಲಿಯಿಂದ ಬೀಟ್ರೂಟ್ ಕಾಂಜಿವರೆಗೆ; 2025ರಲ್ಲಿ ಗೂಗಲ್‍ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಲ್ಪಟ್ಟ ಭಾರತೀಯ ಖಾದ್ಯಗಳಿವು

2025ರಲ್ಲಿ ಗೂಗಲ್‍ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಲ್ಪಟ್ಟ ಖಾದ್ಯಗಳಿವು

2025ರಲ್ಲಿ ಗೂಗಲ್‌ನಲ್ಲಿ ಜನರ ಗಮನ ಸೆಳೆದ ಅತಿದೊಡ್ಡ ಖಾದ್ಯಗಳ ಪಟ್ಟಿ ಇಲ್ಲಿದೆ. ಈ ಆಹಾರಗಳು ಜನರಲ್ಲಿ ಹೆಚ್ಚು ಆಸಕ್ತಿ ಹುಟ್ಟಿಸಿದ್ದವು ಮತ್ತು ಆರೋಗ್ಯ, ರುಚಿಯ ಕಾರಣದಿಂದಲೂ ಜನಪ್ರಿಯವಾಗಿವೆ. ಅವುಗಳು ಯಾವ್ಯಾವು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

4 ವರ್ಷಗಳ ಬಳಿಕ ಹೈ ಪ್ರೊಫೈಲ್ ಕೊಲೆ ಪ್ರಕರಣ ಭೇದಿಸಿದ ಪೊಲೀಸರು; ಪತ್ನಿಯನ್ನು ಕೊಂದು ದರೋಡೆಯ ಕಥೆ ಕಟ್ಟಿದ ಪ್ರೊಫೆಸರ್ ಅರೆಸ್ಟ್

ಪತ್ನಿ ಕೊಂದ ಆರೋಪದ ಮೇಲೆ ಪ್ರೊಫೆಸರ್ ಅರೆಸ್ಟ್

ಚಂಡೀಗಢದ ಪಂಜಾಬ್ ಯುನಿವರ್ಸಿಟಿಯ ಹಿರಿಯ ಪ್ರಾಧ್ಯಾಪಕ ಬಿಬಿ ಗೋಯಲ್‌ನನ್ನು ಪತ್ನಿ ಸೀಮಾ ಗೋಯಲ್ ಅವರ ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಪೊಲೀಸ್ ತಂಡವು ದೀರ್ಘ ಕಾಲದ ತನಿಖೆಯ ನಂತರ ಈ ಹೈ–ಪ್ರೊಫೈಲ್ ಕೊಲೆ ಪ್ರಕರಣವನ್ನು ಭೇದಿಸಿದ್ದು, ಬ್ರೇನ್–ಮ್ಯಾಪಿಂಗ್ ಮತ್ತು BEOS ಪ್ರೊಫೈಲಿಂಗ್ ಮೂಲಕ ಪ್ರಮುಖ ಸಾಕ್ಷ್ಯಗಳನ್ನು ಪತ್ತೆ ಹಚ್ಚಲಾಗಿದೆ.

Viral Video: ಇಂಡಿಗೋ ವಿಮಾನ ರದ್ದು; ಪುತ್ರನಿಗಾಗಿ 800 ಕಿ.ಮೀ ದೂರ ಕಾರು ಚಲಾಯಿಸಿದ ತಂದೆ!

ಪುತ್ರನಿಗಾಗಿ 800 ಕಿ.ಮೀ ದೂರ ಕಾರು ಚಲಾಯಿಸಿದ ತಂದೆ

IndiGo crisis: ಇಂಡಿಗೋ ವಿಮಾನ ರದ್ದಾದ ಘಟನೆಯ ನಡುವೆ, ಹರಿಯಾಣದ ರೋಹ್ಟಕ್ ಜಿಲ್ಲೆಯಲ್ಲಿ ತಂದೆಯೊಬ್ಬರು ತಮ್ಮ ಮಗನ ಪರೀಕ್ಷೆಗೆ ಶಾಲೆಗೆ ತಲುಪಲು 800 ಕಿಲೋಮೀಟರ್ ದೂರವನ್ನು ಕಾರು ಚಾಲನೆ ಮಾಡಿದ್ದಾರೆ. ವಿಮಾನ ರದ್ದಾದ ಕಾರಣ ಪುತ್ರ ಪರೀಕ್ಷೆ ಕಳೆದುಕೊಳ್ಳಬಾರದು ಎಂದು ಈ ನಿರ್ಧಾರ ಕೈಗೊಂಡಿದ್ದಾರೆ.

ಎಲಾನ್ ಮಸ್ಕ್‌ಗೆ ಪತ್ರ ಬರೆದ ಇಮ್ರಾನ್ ಖಾನ್ ಮಾಜಿ ಪತ್ನಿ ಜೆಮಿಮಾ ಗೋಲ್ಡ್ ಸ್ಮಿತ್; ಎಕ್ಸ್‌ ಮಾಲಿಕನಲ್ಲಿ ಮಾಡಿದ ವಿಶೇಷ ಮನವಿ ಏನು?

ಎಲಾನ್ ಮಸ್ಕ್‌ಗೆ ಪತ್ರ ಬರೆದ ಇಮ್ರಾನ್ ಖಾನ್ ಮಾಜಿ ಪತ್ನಿ

Imran Khan’s ex-wife writes a letter to Elon Musk: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ಜೆಮಿಮಾ ಗೋಲ್ಡ್‌ಸ್ಮಿತ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಮ್ಮ ಪೋಸ್ಟ್‌ಗಳನ್ನು ಡಿಲೀಟ್‌ ಮಾಡಲಾಗುತ್ತದೆ ಎಂಬ ಆರೋಪದೊಂದಿಗೆ ಅದರ ಮಾಲೀಕ ಎಲಾನ್ ಮಸ್ಕ್ ಅವರಿಗೆ ಪತ್ರ ಬರೆದಿದ್ದಾರೆ.

ಭಾರತೀಯ ಸೇನೆಗೆ ಮತ್ತಷ್ಟು ಬಲ; 2,500 ಕೋಟಿ ರೂ. ಮೌಲ್ಯದ ಪಿನಾಕಾ ರಾಕೆಟ್‌ ಖರೀದಿಗೆ ಪ್ರಸ್ತಾವನೆ: ಪಾಕಿಸ್ತಾನಕ್ಕೆ ನಡುಕು ಶುರು

ಪಿನಾಕಾ ರಾಕೆಟ್‍ ಪ್ರಸ್ತಾವನೆ ಮುಂದಿಟ್ಟ ಭಾರತೀಯ ಸೇನೆ

Pinaka rockets: ಭಾರತೀಯ ಸೇನೆ ದೀರ್ಘ ವ್ಯಾಪ್ತಿಯ ಪಿನಾಕಾ ರಾಕೆಟ್‌ ಖರೀದಿಸಲು 2,500 ಕೋಟಿ ರೂ. ಮೌಲ್ಯದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದೆ. DRDO ಅಭಿವೃದ್ಧಿಪಡಿಸಿದ ಈ ರಾಕೆಟ್‌ಗಳು ದೇಶೀಯ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಬಲಪಡಿಸಿ, ಸೇನೆಯ ನಿಖರತೆ ಮತ್ತು ವ್ಯಾಪ್ತಿಯ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕೆ ಕಾರಣವಾಗಲಿದೆ.

Air Strick: ಆಸ್ಪತ್ರೆಯ ಮೇಲೆ ಮಯನ್ಮಾರ್ ಸೇನೆಯ ವೈಮಾನಿಕ ದಾಳಿ; 31 ಸಾವು, 68 ಮಂದಿಗೆ ಗಾಯ

ಆಸ್ಪತ್ರೆಯ ಮೇಲೆ ಮಯನ್ಮಾರ್ ಸೇನೆಯ ವೈಮಾನಿಕ ದಾಳಿ

Airstrike by Myanmar military: ಮಯನ್ಮಾರ್‌ನಲ್ಲಿ ಸೇನಾ ಆಡಳಿತ ಮತ್ತೆ ಕ್ರೂರತೆಯನ್ನು ಪ್ರದರ್ಶಿಸಿದೆ. ಆಸ್ಪತ್ರೆಯ ಮೇಲಿನ ವೈಮಾನಿಕ ದಾಳಿಯಿಂದ ಕನಿಷ್ಠ 31 ಮಂದಿ ಪ್ರಾಣ ಕಳೆದುಕೊಂಡಿದ್ದು, 68ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪರಿಸ್ಥಿತಿ ತುಂಬಾ ಭಯಾನಕವಾಗಿದೆ ಎಂದು ಅಲ್ಲಿನ ಜನರು ಭೀತಿಗೊಂಡಿದ್ದಾರೆ.

ವೋಟ್ ಚೋರಿ ಬಗ್ಗೆ ಬಹಿರಂಗ ಸವಾಲು ಹಾಕಿದರೂ ಗೃಹಸಚಿವರು ಉತ್ತರ ನೀಡಿಲ್ಲ: ರಾಹುಲ್ ಗಾಂಧಿ ವಾಗ್ದಾಳಿ

ಅಮಿತ್ ಶಾ ವಿರುದ್ಧ ರಾಹುಲ್ ಗಾಂಧಿ ವಾಕ್ಪ್ರಹಾರ

Rahul Gandhi allegation: ಸಂಸತ್ತಿನಲ್ಲಿ ವೋಟ್ ಚೋರಿ ಕುರಿತ ಸಾರ್ವಜನಿಕ ಸವಾಲಿನ ಬಳಿಕವೂ ಗೃಹ ಸಚಿವ ಅಮಿತ್ ಶಾ ಯಾವುದೇ ಉತ್ತರ ನೀಡಿಲ್ಲ ಎಂದು ರಾಹುಲ್ ಗಾಂಧಿ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ನಾಯಕರು ಒತ್ತಡದಲ್ಲಿರುವಂತೆ ತೋರುತ್ತಿದೆ, ಅವರ ಕೈಗಳು ಕಂಪಿಸುತ್ತಿದ್ದವು ಎಂದು ಹೇಳಿದರು.

ಪಾಕಿಸ್ತಾನದ ಗುಪ್ತಚರ ಇಲಾಖೆಯ ಮಾಜಿ ಮುಖ್ಯಸ್ಥನಿಗೆ 14 ವರ್ಷ ಜೈಲು; ಮಿಲಿಟರಿ ಕೋರ್ಟ್‌ ಆದೇಶ

ಪಾಕಿಸ್ತಾನದ ಗುಪ್ತಚರ ಇಲಾಖೆಯ ಮಾಜಿ ಮುಖ್ಯಸ್ಥನಿಗೆ 14 ವರ್ಷ ಜೈಲು

Pakistan’s intelligence agency: ಪಾಕಿಸ್ತಾನದ ಮಾಜಿ ಗುಪ್ತಚರ ಮುಖ್ಯಸ್ಥನಿಗೆ ಫೀಲ್ಡ್ ಜನರಲ್ ಕೋರ್ಟ್ ಮಾರ್ಷಲ್ 14 ವರ್ಷ ಕಠೋರ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಲೆಫ್ಟಿನೆಂಟ್ ಜನರಲ್ (ನಿವೃತ್ತ) ಫೈಜ್ ಹಮೀದ್ ಅವರ ವಿರುದ್ಧ ಈ ತೀರ್ಪು ನೀಡಲಾಗಿದೆ. ಇದು ಪಾಕಿಸ್ತಾನದ ಮಿಲಿಟರಿ ಅಥವಾ ರಾಜಕೀಯದಲ್ಲಿ ಅಭೂತಪೂರ್ವ ತೀರ್ಪು ಎಂದು ವಿಶ್ಲೇಷಿಸಲಾಗಿದೆ.

Spy For Pakistan:  ಪಾಕಿಸ್ತಾನಿ ಹ್ಯಾಂಡ್ಲರ್‌ಗಳಿಗಾಗಿ ಸೇನಾ ನೆಲೆಗಳ ಮೇಲೆ ಬೇಹುಗಾರಿಕೆ; ಇಬ್ಬರು ಅರೆಸ್ಟ್

ಸೇನಾ ನೆಲೆಗಳ ಮೇಲೆ ಬೇಹುಗಾರಿಕೆ; ಇಬ್ಬರು ಅರೆಸ್ಟ್

Spying On Army Installations: ಅರುಣಾಚಲ ಪ್ರದೇಶದಲ್ಲಿ ಪಾಕಿಸ್ತಾನದ ಹ್ಯಾಂಡ್ಲರ್‌ಗಳಿಗೆ ಸಹಾಯ ಮಾಡಲು ಸೇನೆಯ ಚಲನವಲನಗಳನ್ನು ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ನಜೀರ್ ಅಹ್ಮದ್ ಮಲಿಕ್ ಮತ್ತು ಸಬೀರ್ ಅಹ್ಮದ್ ಮಿರ್ ಎಂದು ಗುರುತಿಸಲಾಗಿದ್ದು, ಹೆಚ್ಚಿನ ತನಿಖೆ ಪ್ರಾರಂಭವಾಗಿದೆ.

Goa Night Club Fire: ಕ್ಲಬ್‌ ಹೊತ್ತಿ ಉರಿಯುವಾಗಲೇ ಥೈಲ್ಯಾಂಡ್‌ಗೆ ಎಸ್ಕೇಪ್‌; ಲೂತ್ರಾ ಸಹೋದರರ ಪತ್ತೆ ಮಾಡಿದ್ದೇ ರೋಚಕ

ಥೈಲ್ಯಾಂಡ್‍ಗೆ ಪರಾರಿಯಾದ ಲೂತ್ರಾ ಸಹೋದರರ ಬಂಧನ

Luthra Brothers Arrested: ಗೋವಾ ನೈಟ್‌ಕ್ಲಬ್ ದುರಂತದ ಪ್ರಕರಣದಲ್ಲಿ ಪರಾರಿಯಾದ ಲೂತ್ರಾ ಸಹೋದರರನ್ನು ಥೈಲ್ಯಾಂಡ್‌ನಲ್ಲಿ ಬಂಧಿಸಲಾಗಿದೆ. ಭಾರತ ಮತ್ತು ಥಾಯ್ ಅಧಿಕಾರಿಗಳ ಸಹಯೋಗದೊಂದಿಗೆ, ಅವರ ಚಲನವಲನವನ್ನು ಶೀಘ್ರವಾಗಿ ಪತ್ತೆಹಚ್ಚಲಾಗಿದ್ದು, ಕಾನೂನು ಕ್ರಮ ಮುಂದುವರೆಯುತ್ತಿದೆ. ಆರೋಪಿ ಸಹೋದರರು ಪ್ರಸ್ತುತ ಥಾಯ್ ಬಂಧನದಲ್ಲಿದ್ದಾರೆ.

Viral News: ಅಕ್ಷಯ್‌ ಖನ್ನಾ ವೈರಲ್‌ ಡ್ಯಾನ್ಸ್‌ಗೆ ದೆಹಲಿ ಪೊಲೀಸರು ಫಿದಾ; ಜಾಗೃತಿ ಮೂಡಿಸಲು ಏನ್‌ ಮಾಡಿದ್ರು ಗೊತ್ತಾ?

ಅಕ್ಷಯ್‌ ಖನ್ನಾ ವೈರಲ್‌ ಡ್ಯಾನ್ಸ್‌ಗೆ ದೆಹಲಿ ಪೊಲೀಸರು ಫಿದಾ

Delhi Police take a cinematic route: ಮಾದಕ ವಸ್ತುಗಳ ಬಳಕೆಯನ್ನು ತಡೆಯಲು ದೆಹಲಿ ಪೊಲೀಸರು ವಿಭಿನ್ನ ಕ್ರಮಕ್ಕೆ ಮುಂದಾಗಿದ್ದಾರೆ. ಸಿನಿಮಾವೊಂದರ ದೃಶ್ಯದ ಮೂಲಕ ಸಂದೇಶ ರವಾನಿಸಿದ್ದಾರೆ. ಜನಪ್ರಿಯ ಧುರಂಧರ್ ಚಿತ್ರದಲ್ಲಿ ಅಕ್ಷಯ್ ಖನ್ನಾ ನೃತ್ಯ ಮಾಡುವ ದೃಶ್ಯವನ್ನು ಮೀಮ್ಸ್ ರೂಪದಲ್ಲಿ ಹಂಚಿ, ಯುವಕರಿಗೆ ಮಾದಕ ವ್ಯಸನದ ಹಾನಿಗಳನ್ನು ಮನದಟ್ಟು ಮಾಡಿದ್ದಾರೆ.

India- Pak: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಬೆಂಡೆತ್ತಿದ ಭಾರತ; ವಿಡಿಯೋ ನೋಡಿ

ಅಫ್ಘನ್ ವಿರುದ್ಧದ ಪಾಕಿಸ್ತಾನದ ವಾಯುದಾಳಿಯನ್ನು ಖಂಡಿಸಿದ ಭಾರತ

India condemns Pakistan’s airstrike: ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ನಡೆಸಿದ ವಾಯುದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ಈ ಬೆಳವಣಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲೂ ಗಮನಾರ್ಹ ಚರ್ಚೆಗೆ ಕಾರಣವಾಯಿತು. ಪ್ರಾದೇಶಿಕ ಸ್ಥಿರತೆ, ನಾಗರಿಕರ ರಕ್ಷಣೆಯ ಅಗತ್ಯತೆ ಮತ್ತು ಅಂತಾರಾಷ್ಟ್ರೀಯ ಕಾನೂನುಗಳ ಪಾಲನೆ ಕುರಿತಂತೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ.

TMC ನಾಯಕನ ವಿರುದ್ಧದ ದೂರಿನ ಪ್ರಮುಖ ಸಾಕ್ಷಿಯ ಮಗ ಅಪಘಾತದಲ್ಲಿ ಸಾವು; ಸಿಬಿಐ ತನಿಖೆಗೆ ಆಗ್ರಹ

TMC ನಾಯಕನ ವಿರುದ್ಧದ ದೂರಿನ ಪ್ರಮುಖ ಸಾಕ್ಷಿಯ ಮಗನ ನಿಗೂಢ ಸಾವು

ತೃಣಮೂಲ ಕಾಂಗ್ರೆಸ್‍ನ ಪದಚ್ಯುತಗೊಂಡ ನಾಯಕ ಶಹಜಹಾನ್ ಶೇಖ್ ವಿರುದ್ಧ ದಾಖಲಾದ ದೂರಿನ ಪ್ರಮುಖ ಸಾಕ್ಷಿಯ ಮಗ ಅಪಘಾತದಲ್ಲಿ ಜೀವ ಕಳೆದುಕೊಂಡ ಘಟನೆ ನಡೆದಿದೆ. ತಂದೆ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣವನ್ನು ಸಿಬಿಐ ಮೂಲಕ ತನಿಖೆ ನಡೆಸುವಂತೆ ಜನರು ಆಗ್ರಹಿಸಿದ್ದಾರೆ.

ಇಂಡಿಗೋ ವಿಮಾನಗಳ ಹಾರಾಟದಲ್ಲಿ ಅಡಚಣೆ; 11 ಏರ್‌ಪೋರ್ಟ್‌ ತಕ್ಷಣ ಪರಿಶೀಲಿಸಲು ಕೇಂದ್ರದ ಆದೇಶ

ವಿಮಾನ ನಿಲ್ದಾಣಗಳಲ್ಲಿ ಸ್ಥಳ ಪರಿಶೀಲನೆಗೆ ಕೇಂದ್ರದ ಆದೇಶ

IndiGo Flight Crisis: ಇಂಡಿಗೋ ವಿಮಾನಗಳ ಹಾರಾಟದಲ್ಲಿ ಸಂಭವಿಸಿರುವ ಅಡಚಣೆ ಮತ್ತು ವಿಮಾನ ವಿಳಂಬ, ರದ್ದು ಇತ್ಯಾದಿ ಅನಿಶ್ಚಿತತೆಯ ನಂತರ ಕೇಂದ್ರ ಸರ್ಕಾರ 11 ವಿಮಾನ ನಿಲ್ದಾಣಗಳನ್ನು ಪರಿಶೀಲಿಸುವಂತೆ ಆದೇಶ ನೀಡಿದೆ. ತಪಾಸಣೆ ಪೂರ್ಣಗೊಂಡ 24 ಗಂಟೆಗಳ ಒಳಗೆ ಡಿಜಿಸಿಎಗೆ ಸಮಗ್ರ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ.

ಪ್ರಜ್ಞೆ ತಪ್ಪಿ ಬಿದ್ದ ಹೆಬ್ಬಾವಿಗೆ ಪುನರ್ಜನ್ಮ; ಸಿಪಿಆರ್‌ ನೀಡಿದ ಉರಗ ರಕ್ಷಕ, ಇಲ್ಲಿದೆ ನೋಡಿ ವಿಡಿಯೊ

ಪ್ರಜ್ಞೆತಪ್ಪಿ ಬಿದ್ದಿದ್ದ ಹೆಬ್ಬಾವಿಗೆ ಪುನರ್ಜನ್ಮ ನೀಡಿದ ಉರಗ ರಕ್ಷಕ

Snake Rescuer Gives CPR: ತಲೆಗೆ ಗಾಯಗೊಂಡು ಪ್ರಜ್ಞೆತಪ್ಪಿ ಬಿದ್ದಿದ್ದ ಹೆಬ್ಬಾವನ್ನು ಉರಗ ರಕ್ಷಕನೊಬ್ಬ ಸಿಪಿಆರ್‌ ನೀಡುವ ಮೂಲಕ ಬದುಕುಳಿಸಿದ ಘಟನೆ ಗುಜರಾತ್‍ನಲ್ಲಿ ನಡೆದಿದೆ. ಧೈರ್ಯ ಮತ್ತು ತಕ್ಷಣದ ಸ್ಪಂದನೆಯಿಂದ ನಡೆದ ಈ ರಕ್ಷಣಾ ಕಾರ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಶಂಸೆಗೆ ಪಾತ್ರವಾಗಿದೆ.

ನಕಲಿ ಕ್ಲಿನಿಕ್‌ ಅಟ್ಟಹಾಸಕ್ಕೆ ಮತ್ತೊಂದು ಬಲಿ; ಯೂಟ್ಯೂಬ್ ನೋಡಿ ಶಸ್ತ್ರಚಿಕಿತ್ಸೆ ಮಾಡುತ್ತಿದ್ದ ವೇಳೆ ಮಹಿಳೆ ಸಾವು

ಯೂಟ್ಯೂಬ್ ನೋಡಿ ಶಸ್ತ್ರಚಿಕಿತ್ಸೆ, ಮಹಿಳೆ ಸಾವು

YouTube-guided surgery: ಯೂಟ್ಯೂಬ್ ವಿಡಿಯೊ ನೋಡಿ ಶಸ್ತ್ರಚಿಕಿತ್ಸೆ ನಡೆಸಿದ ಪರಿಣಾಮ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಆರೋಗ್ಯ ಸುರಕ್ಷತೆ, ನಕಲಿ ವೈದ್ಯರು ಮತ್ತು ನಿಯಂತ್ರಣವಿಲ್ಲದ ಚಿಕಿತ್ಸಾ ಕೇಂದ್ರಗಳ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಫುಟ್ಬಾಲ್ ಪಂದ್ಯದ ವೇಳೆ ಟೀ ಶರ್ಟ್ ಮೇಲೆತ್ತಿ ದೇಹ ಪ್ರದರ್ಶನ; ಯುವತಿಯನ್ನು ಬಂಧಿಸಿದ ಪೊಲೀಸರು

ಫುಟ್ಬಾಲ್ ಪಂದ್ಯದ ವೇಳೆ ಟೀ ಶರ್ಟ್ ಮೇಲೆತ್ತಿ ಯುವತಿಯಿಂದ ದೇಹ ಪ್ರದರ್ಶನ

Football match incident: ಅಮೆರಿಕದಲ್ಲಿ ನಡೆದ ಫುಟ್ಬಾಲ್ ಪಂದ್ಯದ ನಡುವೆ ಯುವತಿ ಟೀ ಶರ್ಟ್ ಅನ್ನು ಮೇಲೆತ್ತಿ ದೇಹ ಪ್ರದರ್ಶಿಸಿದ ಘಟನೆ ಸ್ಟೇಡಿಯಂನಲ್ಲಿ ಗೊಂದಲ ಸೃಷ್ಟಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕ ಅಶ್ಲೀಲ ವರ್ತನೆ ಆರೋಪದ ಮೇರೆಗೆ ಪೊಲೀಸರು ಯುವತಿಯನ್ನು ತಕ್ಷಣವೇ ಬಂಧಿಸಿದ್ದಾರೆ.

Year Ender 2025: ಭಾರತ-ಪಾಕ್, ಇಸ್ರೇಲ್-ಇರಾನ್ ಸಂಘರ್ಷ; 2025ರ 5 ಪ್ರಮುಖ ಯುದ್ಧಗಳಿವು

2025ರಲ್ಲಿ ಸಂಭವಿಸಿದ 5 ಪ್ರಮುಖ ಯುದ್ಧಗಳಿವು

5 Major Wars: 2025ರಲ್ಲಿ ಜಗತ್ತಿನ ವಿವಿಧ ಭಾಗಗಳಲ್ಲಿ ಹಲವು ಪ್ರಮುಖ ಯುದ್ಧ, ಸಂಘರ್ಷಗಳು ಸಂಭವಿಸಿ, ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ಭದ್ರತೆಯ ಪರಿಸ್ಥಿತಿಯನ್ನು ಗಂಭೀರವಾಗಿ ಬದಲಿಸಿವೆ. ಭಾರತ-ಪಾಕಿಸ್ತಾನ ಮತ್ತು ಇಸ್ರೇಲ್-ಇರಾನ್ ಸಂಘರ್ಷಗಳು ಸೇರಿದಂತೆ ಈ ಐದು ಪ್ರಮುಖ ಯುದ್ಧಗಳು ಈ ವರ್ಷ ಜಗತ್ತಿನ ನಿದ್ದೆಗೆಡಿಸಿದವು.

ಗೋವಾ ನೈಟ್‌ಕ್ಲಬ್ ದುರಂತ: ಲೂತ್ರಾ ಸಹೋದರರು ಪರಾರಿ, ಸಹ-ಮಾಲೀಕನ ಬಂಧನ

ಗೋವಾ ನೈಟ್‌ಕ್ಲಬ್ ದುರಂತ: ಮಾಲೀಕರು ಥೈಲ್ಯಾಂಡ್‍ಗೆ ಪರಾರಿ

Goa Nightclub Tragedy: ಗೋವಾದಲ್ಲಿ ಸಂಭವಿಸಿದ ನೈಟ್‌ಕ್ಲಬ್ ದುರಂತ ಪ್ರಕರಣ ಹೊಸ ತಿರುವು ಪಡೆದಿದೆ. ಘಟನೆಯ ಬಳಿಕ ಆರೋಪಿಗಳಾದ ಲೂತ್ರಾ ಸಹೋದರರು ಥೈಲ್ಯಾಂಡ್‍ಗೆ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಸಹ–ಮಾಲೀಕರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಗೆ ಸಂಬಂಧಿಸಿದ ಕಟ್ಟಡಗಳನ್ನು ಕೆಡವಲಾಗುತ್ತಿದೆ.

ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತೆಯತ್ತ ನೋಡಿ ಕಣ್ಣು ಮಿಟುಕಿಸಿದ ಪಾಕಿಸ್ತಾನ ಸೇನಾ ವಕ್ತಾರ

ಪತ್ರಕರ್ತೆಯತ್ತ ನೋಡಿ ಕಣ್ಣು ಮಿಟುಕಿಸಿದ ಪಾಕ್ ಸೇನಾ ವಕ್ತಾರ

Pak Army Spokesperson Winks at Woman Journalist: ಪಾಕಿಸ್ತಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸೇನಾ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿಯು ಮಹಿಳಾ ಪತ್ರಕರ್ತೆಯತ್ತ ಅಸಮಂಜಸವಾಗಿ ಕಣ್ಣು ಮಿಟುಕಿಸಿದ್ದಾರೆ. ಈ ದೃಶ್ಯದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ವೋಟ್ ಚೋರಿಗಿಂತ ದೊಡ್ಡ ರಾಷ್ಟ್ರ ವಿರೋಧಿ ಕೃತ್ಯ ಇನ್ನೊಂದಿಲ್ಲ: ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ವೋಟ್ ಚೋರಿ ರಾಷ್ಟ್ರ ವಿರೋಧಿ ಕೃತ್ಯ ಎಂದ ರಾಹುಲ್‌ ಗಾಂಧಿ

Rahul Gandhi alleges against the BJP: ವೋಟ್ ಚೋರಿ (ಮತದಾನ ಕಳವು)ಗಿಂತ ದೊಡ್ಡ ರಾಷ್ಟ್ರ ವಿರೋಧಿ ಕೃತ್ಯ ಮತ್ತೊಂದಿಲ್ಲ ಎಂದು ಕಾಂಗ್ರೆಸ್‌ ನಾಯಕ, ಸಂಸದ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಹಾಗೂ ಚುನಾವಣಾ ಪ್ರಕ್ರಿಯೆಯ ಮೇಲಿನ ವಿಶ್ವಾಸದ ಬಗ್ಗೆ ಅವರು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.

ʼವಂದೇ ಮಾತರಂʼ ಬಂಗಾಳಕ್ಕೆ ಸೀಮಿತವಾಗಿಲ್ಲ; ಪ್ರಿಯಾಂಕಾ ಗಾಂಧಿಗೆ ಅಮಿತ್‌ ಶಾ ತಿರುಗೇಟು

ಪ್ರಿಯಾಂಕಾ ಗಾಂಧಿಗೆ ಅಮಿತ್‌ ಶಾ ತಿರುಗೇಟು

Amit Shah response: ಸಂಸತ್ತಿನಲ್ಲಿ ವಂದೇ ಮಾತರಂ ಗೀತೆಯ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ಇದು ಪಶ್ಚಿಮ ಬಂಗಾಳದ ಚುನಾವಣೆಯ ಗಿಮಿಕ್ ಎಂದು ಕಾಂಗ್ರೆಸ್ ಆರೋಪಕ್ಕೆ ಅಮಿತ್ ಶಾ ತಿರುಗೇಟು ನೀಡಿದ್ದಾರೆ. ರಾಷ್ಟ್ರೀಯ ಗೀತೆ ಬಂಗಾಳಕ್ಕೆ ಮಾತ್ರ ಸೀಮಿತವಾಗಿಲ್ಲ, ಅದನ್ನು ರಾಜಕೀಯದೊಂದಿಗೆ ಜೋಡಿಸುವುದು ದುರದೃಷ್ಟಕರ ಎಂದು ಹೇಳಿದರು.

Loading...