ತಂದೂರಿ ರೋಟಿಗಾಗಿ ಮದುವೆ ಮನೆಯಲ್ಲಿ ಮುಗಿಬಿದ್ದ ಅತಿಥಿಗಳು
ಇಲ್ಲೊಂದು ಮದುವೆ ಸಮಾರಂಭದಲ್ಲಿ ತಂದೂರಿ ರೋಟಿಗಾಗಿ ಮದುವೆ ಮನೆಯೇ ರಣರಂಗವಾಗಿದೆ. ಹರಿಯಾಣದ ಸಿರ್ಸಾ ಜಿಲ್ಲೆಯ ಗೊಲ್ಚಾ ಪ್ಯಾಲೇಸ್ನಲ್ಲಿ ಈ ಘಟನೆ ನಡೆದಿದ್ದು ಆಹಾರ ವಿತರಣೆಯ ವೇಳೆ ಉಂಟಾದ ತೀವ್ರ ಅವ್ಯವಸ್ಥೆಯಿಂದಾಗಿ ಮದುವೆ ಸಭಾಂಗಣದಲ್ಲೇ ಜಗಳ ಉಂಟಾಗಿದೆ. ತಂದೂರಿ ರೋಟಿಗಾಗಿ ಅತಿಥಿಗಳು ತೋರಿದ ಅಸಭ್ಯ ವರ್ತನೆಯ ವಿಡಿಯೊ ವೈರಲ್ ಆಗಿದ್ದು ವ್ಯಾಪಕ ಟೀಕೆಗೆ ಕಾರಣವಾಗಿದೆ.