ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ರೂಪಾ ಗುರುರಾಜ್

rgururaj628@gmail.com

ಮೂಲತಃ ಬೆಂಗಳೂರಿನವರಾದ ಶ್ರೀಮತಿ. ರೂಪ ಗುರುರಾಜ್ ರೇಡಿಯೋ ಉದ್ಘೋಷಕಿಯಾಗಿ, ದೂರದರ್ಶನಗಳಲ್ಲಿ ನಿರೂಪಕಿ ಹಾಗೂ ವಾರ್ತಾ ವಾಚಕಿಯಾಗಿ, ಸೃಜನಾತ್ಮಕ ಬರಹಗಾರರಾಗಿ, ರೂಪದರ್ಶಿ, ನಟನೆ, ಸಮಾಜ ಸೇವೆ ಹೀಗೆ ಹಲವು ರಂಗಗಳಲ್ಲಿ ಅನುಭವ ಹೊಂದಿದ್ದಾರೆ.‌ - ಬೆಂಗಳೂರು ದೂರದರ್ಶನದ ಚಂದನ ವಾಹಿನಿ. - ಆಕಾಶವಾಣಿ ನಿಲಯ. - ಎಫ್.ಎಂ ರೈನ್ ಬೋ ಕಂಪನಾಂಕ. - ಅಂತಾರಾಷ್ಟ್ರೀಯ ಡಿಜಿಟಲ್ ರೇಡಿಯೋ "ನಮ್ ರೇಡಿಯೋ" ಕಾರ್ಯಕ್ರಮಗಳಲ್ಲಿ ರೂಪ ಗುರುರಾಜ್ ಅವರ ಧ್ವನಿ ಚಿರಪರಿಚಿತ. ಕಳೆದ ಒಂದೂವರೆ ದಶಕಕ್ಕೂ ಅಧಿಕ ಕಾಲ ನಿರೂಪಣಾ ಕ್ಷೇತ್ರದಲ್ಲಿ ದೇಶ ವಿದೇಶಗಳಲ್ಲಿ 800ಕ್ಕೂ ಅಧಿಕ ಕಾರ್ಯಕ್ರಮಗಳ ನಿರೂಪಣೆ ಕಿರುತೆರೆ, ಹಲವು ಸಿನೆಮಾಗಳಲ್ಲಿ ಅಭಿನಯಿಸಿರುವುದಲ್ಲದೇ, ರೂಪದರ್ಶಿಯಾಗಿ ಉಡುಪು ಹಾಗೂ ಬೆಳ್ಳಿ ಆಭರಣ ಸಂಸ್ಥೆಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ವಿಶ್ವವಾಣಿ ದೈನಿಕದಲ್ಲಿ ಅಂಕಣಗಾರ್ತಿಯಾಗಿ "ಒಂದೊಳ್ಳೆ ಮಾತು" ಅಂಕಣವನ್ನು ಕಳೆದ 4 ವರ್ಷಗಳಿಂದ ಪ್ರತಿದಿನ ಬರೆಯುತ್ತಿದ್ದಾರೆ. ಅದಲ್ಲದೇ ಕನ್ನಡದ ಅನುಭವ ಮಂಟಪ ಎಂದೇ ಖ್ಯಾತಿ ಪಡೆದ "ವಿಶ್ವವಾಣಿ ಕ್ಲಬ್ ಹೌಸ್" ನ ಸಹ ನಿರೂಪಕಿಯಾಗಿ ಸತತ0 4 ವರ್ಷಗಳಿಂದ ( 1,100) ಪ್ರತಿದಿನ ನಡೆಸಿಕೊಂಡು ಬರುತ್ತಿದ್ದಾರೆ. ವಿಶ್ವವಾಣಿ ಟಿವಿಯಲ್ಲಿ ( ಯೂಟ್ಯೂಬ್ ಚಾನೆಲ್) ನಲ್ಲಿ ಇವರ “ಒಂದೊಳ್ಳೆ ಮಾತು “ ಸರಣಿ ವಿಡಿಯೋಗಳು ಬಿತ್ತರಗೊಳ್ಳುತ್ತಿವೆ. 50 ಕವನ ಸಂಕಲನಗಳ "ರೂಪಾಂತರ" ಹಾಗೂ ಮೂರು ಸಂಚಿಕೆಗಳ "ಒಂದೊಳ್ಳೆ ಮಾತು" ಪುಸ್ತಕಗಳು ಲೋಕಾರ್ಪಣೆಗೊಂಡಿದೆ. ಮನ: ಪ್ರಸಾದ, ಪ್ರೇರಣ ಮುಂತಾದ ಸರ್ಕಾರೇತರ ಸಂಸ್ಥೆಗಳಲ್ಲಿ ಸಮಾಜಸೇವೆಗಾಗಿ ತೊಡಗಿಸಿಕೊಂಡಿದ್ದಾರೆ.‌

Articles
Roopa Gururaj Column: ಸೋಮಾರಿ ತಿರುಕನ ಕನಸು

ಸೋಮಾರಿ ತಿರುಕನ ಕನಸು

ಒಂದೂರಿನಲ್ಲಿ ಒಬ್ಬ ಸೋಮಾರಿ ಮನುಷ್ಯನಿದ್ದ. ಗಟ್ಟಿ ಮುಟ್ಟಾಗಿದ್ದರೂ ಯಾವ ಕೆಲಸವನ್ನೂ ಮಾಡದೆ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ. ಇವನಿಗೆ ಯಾವ ಬಂಧು ಬಳಗದವರೂ ಇರಲಿಲ್ಲ. ಶುದ್ಧ ಸೋಮಾರಿಯಾದ ಇಂಥವನಿಗೆ ಮದುವೆಯ ಭಾಗ್ಯವೂ ಇರಲಿಲ್ಲ. ಭಿಕ್ಷೆ ಬೇಡಿ ತಿನ್ನುವುದು, ತಿಂದು ಮಲಗೋದು ಅಷ್ಟೇ ಇವನ ಕೆಲಸ.

Roopa Gururaj Column: ಕ್ಷಮಿಸುವುದು ಕೂಡ ಸಿಟ್ಟಿನ ಲಕ್ಷಣವೇ ಎಂದ ಬುದ್ಧ

ಕ್ಷಮಿಸುವುದು ಕೂಡ ಸಿಟ್ಟಿನ ಲಕ್ಷಣವೇ ಎಂದ ಬುದ್ಧ

ನಾವು ಯಾರಿಗಾದರೂ ಸಹಾಯ ಮಾಡಿದ್ದೀವಿ ಎಂದು ಹೇಳಿಕೊಳ್ಳುವುದು, ಕ್ಷಮಿಸಿದ್ದೀವಿ ಎಂದು ಸಮಾಧಾನ ಮಾಡುವುದು ಎಲ್ಲವೂ ನಾವು ಮಾಡಿದ ಕೆಲಸವನ್ನ ಮತ್ತೆ ಎತ್ತಿ ಹಿಡಿಯುವಂತಹವು. ಇಂತಹ ಕ್ರಿಯೆಗಳಿಂದ ಮಾಡಿದ ಕೆಲಸದ ಮಹತ್ವ ಕೂಡ ಕಳೆದು ಹೋಗುತ್ತದೆ. ಬದುಕನ್ನು ಅರ್ಥ ಮಾಡಿಕೊಂಡು ಮಾಗಿದಷ್ಟೂ ಹೆಚ್ಚು ಜಾಗೃತರಾಗುತ್ತಾ ಹೋಗುತ್ತೇವೆ.

Roopa Gururaj Column: ನಾಗರ ಪಂಚಮಿ ಹಬ್ಬದ ಐತಿಹ್ಯ

ನಾಗರ ಪಂಚಮಿ ಹಬ್ಬದ ಐತಿಹ್ಯ

ರಾಜನು ಬ್ರಾಹ್ಮಣನಿಗೆ ನೀಡಿದ ವರವನ್ನು ನಿರಾಕರಿಸುವಂತೆ ಇರಲಿಲ್ಲ, ಹಾಗಾಗಿ ಋಷಿಗಳು ಮಾಡು ತ್ತಿದ ಸರ್ಪ ಯಜ್ಞವನ್ನು ನಿಲ್ಲಿಸಲಾಯಿತು. ಇಂದ್ರ, ತಕ್ಷಕ ಮತ್ತು ಅವನ ಇತರ ಸರ್ಪ ಜನಾಂಗದ ಜೀವಗಳನ್ನು ಉಳಿಸಲಾಯಿತು. ಆ ದಿನ, ಹಿಂದೂ ಪಂಚಾಂಗದ ಪ್ರಕಾರ, ಶ್ರಾವಣ ಶುಕ್ಲ ಪಂಚಮಿ ಯ ದಿನ. ಅಂದಿನಿಂದ ಈ ದಿನವು ನಾಗಗಳ ಹಬ್ಬದ ದಿನವಾಗಿದೆ, ಏಕೆಂದರೆ ಈ ದಿನದಲ್ಲಿ ಅವುಗಳ ಪ್ರಾಣ ಉಳಿದಿದ ದಿನ.

Roopa Gururaj Column: ಹಸುವಿನ ಕುತ್ತಿಗೆಗೆ ಕಟ್ಟಿದ ಹಗ್ಗ, ಅವನನ್ನೂ ಬಂಧಿಸಿತ್ತು

ಹಸುವಿನ ಕುತ್ತಿಗೆಗೆ ಕಟ್ಟಿದ ಹಗ್ಗ, ಅವನನ್ನೂ ಬಂಧಿಸಿತ್ತು

ಯಾರನ್ನು ನಾವು ಬಂಧಿಸಿಡುತ್ತೇವೆಯೊ, ಅವರೊಂದಿಗೆ ನಾವೇ ಬಂದಿತರಾಗಿರುತ್ತೇವೆ. ಅವರನ್ನು ಬಿಟ್ಟು ನಮ್ಮಿಂದ ಇರಲಾಗದು.ಇದೇ ಜೀವನದ ಒಂದು ಅನಿವಾರ್ಯ ಕರ್ಮ ಎಂದರು. ಅವನಿಗೆ ಅವರ ಮಾತುಗಳ ಒಳಾರ್ಥ ತಿಳಿಯಿತು. ಕೈಮುಗಿದು ತನಗೆ ಸಿಕ್ಕ ಜ್ಞಾನಕ್ಕೆ ಅವರಿಗೆ ನಮಸ್ಕರಿಸಿದ. ಆಗ ಸಂತರು ಹೇಳಿದರು ‘ಯಾರು ಬಂಧನದಿಂದ ಮುಕ್ತರಾಗಲು ಬಯಸುತ್ತಾರೋ, ಅವರು ಎಂದಿಗೂ ಯಾರನ್ನೂ ಬಂಧಿತರನ್ನಾಗಿ ಮಾಡುವುದಿಲ್ಲ.

Roopa Gururaj Column: ಸದ್ಗುಣ ಸಂಪನ್ನ ವಿಭೀಷಣ

ಸದ್ಗುಣ ಸಂಪನ್ನ ವಿಭೀಷಣ

ವಿಭೀಷಣನ ಸದ್ಗುಣಗಳಿಗೆ ಮೆಚ್ಚಿದ ಬ್ರಹ್ಮನು ಈತನು ಅಪೇಕ್ಷಿಸಿದ ವರವನ್ನಿತ್ತುದಲ್ಲದೆ ‘ಚಿರಂಜೀವಿ ಯಾಗು’ ಎಂಬ ವರವನ್ನೂ ಕರುಣಿಸಿದ. ಸಪ್ತ ಚಿರಂಜೀವಿಗಳಲ್ಲಿ ವಿಭೀಷಣ ಒಬ್ಬ. ಹನುಮಂತನಿಂದ ಲಂಕಾದಹನವಾದ ಮೇಲೆ ಮಂತ್ರಾಲೋಚನಾ ಸಭೆ ಕರೆದ ರಾವಣ, ಆಂಜನೇಯನನ್ನು ವಧಿಸಲು ಆಜ್ಞೆ ಮಾಡಿದಾಗ ದೂತವಧೆಯು ಸಲ್ಲದು ಎಂದು ಹೇಳಿ ದುಷ್ಕಾರ್ಯವನ್ನು ವಿಭೀಷಣ ತಡೆಯುತ್ತಾನೆ.

Roopa Gururaj Column: ಶ್ರಾವಣದಲ್ಲಿ ಪಡಿ ಬೇಡುವ ಪದ್ದತಿ

Roopa Gururaj Column: ಶ್ರಾವಣದಲ್ಲಿ ಪಡಿ ಬೇಡುವ ಪದ್ದತಿ

ಪ್ರಥಮವಾಗಿ ಪಡಿ ಬೇಡುವುದರಿಂದ ಮಕ್ಕಳಲ್ಲಿನ ಸಂಕೋಚ ಸ್ವಭಾವ ನೀಗುತ್ತದೆ ಮತ್ತು ಕಷ್ಟದ ಪರಿಸ್ಥಿತಿಯಲ್ಲಿ ಮಧುಕರಿವೃತ್ತಿ ಮಾಡಿ ಜೀವನ ನಡೆಸಬಹುದು ಎಂಬುದನ್ನು ಕಲಿಸುತ್ತದೆ. ಮಕ್ಕಳಿಗೆ ತಾವು ತಿನ್ನುವ ಅಕ್ಕಿಯ ಸಂಪಾದಿಸುವುದರ ಮಹತ್ವ ಮತ್ತು ಮತ್ತೊಬ್ಬರ ಮನೆಯಲ್ಲಿ ಭಿಕ್ಷೆ ಬೇಡುವ ಮೂಲಕ ತಗ್ಗಿ ಬಗ್ಗಿ ನಡೆಯವುದನ್ನೂ ಮತ್ತು ಕೀಳರಿಮೆಯನ್ನು ಹೋಗಲಾಡಿ ಸುತ್ತದೆ.

Roopa Gururaj Column: ಎಲ್ಲರೊಳಗಿನ ನಾರಾಯಣ

ಎಲ್ಲರೊಳಗಿನ ನಾರಾಯಣ

ಮಾವುತ ಕೂಗಿ ಎಚ್ಚರಿಸುತ್ತಿದ್ದರೂ ಕಡೆಗಣಿಸಿ ಆನೆಯೆದುರು ಸಾಷ್ಟಾಂಗ ನಮಸ್ಕಾರ ಹಾಕ ತೊಡಗಿದ. ಮೊದಲೇ ಆನೆಗೆ ಮದವೇರಿತ್ತು. ತನ್ನೆದುರು ಮಂಡಿಯೂರುತ್ತಿದ್ದ ಆ ಶಿಷ್ಯನನ್ನು ಅದು ಸೊಂಡಿಲಿ ನಿಂದ ಎತ್ತಿ ಬಿಸಾಡಿತು. ಪೂರ್ವಪುಣ್ಯದಿಂದ ಶಿಷ್ಯ ಸಮೀಪದ ಕೊಳದಲ್ಲಿ ಬಿದ್ದು ಪೆಟ್ಟುಗಳಿಂದ ಬಚಾವಾದ.

Roopa Gururaj Column: ಶ್ರೀಕೃಷ್ಣನನ್ನು ಕೆಣಕಿ, ಅವನ ರೌದ್ರರೂಪಕ್ಕೆ ಮಂಡಿಯೂರಿದ ಭೀಷ್ಮ ಪಿತಾಮಹರು

ಶ್ರೀಕೃಷ್ಣನನ್ನು ಕೆಣಕಿ, ಅವನ ರೌದ್ರರೂಪಕ್ಕೆ ಮಂಡಿಯೂರಿದ ಭೀಷ್ಮ ಪಿತಾಮಹರು

ಕೃಷ್ಣನ ನೊಸಲೊಡೆದು ನೆತ್ತರು ಚಿಮ್ಮಿತ್ತು. ಪಾರ್ಥಸಾರಥಿ ಕುದುರೆಗಳ ವಾಘೆಯನ್ನು ಕೈಬಿಟ್ಟ. ನೋವಿ ನಿಂದ ರಥದಿಂದ ಕೆಳಕ್ಕೆ ಜಿಗಿದ. ಪಾಂಡವ, ಕೌರವ ಸೇನೆ ದಿಗ್ಭ್ರಮೆಗೊಂಡಿತು. ಮುಂದೇನಾಗಬಹುದು? ಪ್ರಳಯವೇ, ಬೆಂಕಿಯ ಮಳೆಯೇ, ಚಂಡ ಮಾರುತವೇ, ಭೂಕಂಪನವೇ? ಅದೋ ಬಂತು, ಕೃಷ್ಣನ ಕೈಗೆ ಸುದರ್ಶನ ಚಕ್ರ. ಅಸುರಾರಿ, ಕೃಷ್ಣ ಮುರಾರಿ ಪ್ರಳಯ ಕಾಲದ ರುದ್ರನಾದ! ಕಣ್ಣುಗಳಲ್ಲಿ ಕಿಡಿಕಾರ ತೊಡಗಿದ.

Roopa Gururaj Column: ಆಷಾಢ ಏಕಾದಶಿಯ ಮಹತ್ವ

ಆಷಾಢ ಏಕಾದಶಿಯ ಮಹತ್ವ

ಹಲವು ಭಕ್ತರು ಇಡೀ ರಾತ್ರಿ ಪ್ರಾರ್ಥನೆ, ಭಜನೆ ಮಾಡುತ್ತಾರೆ. ಭಕ್ತರು ಉಪವಾಸವಿದ್ದು, ಮುಂದಿನ ನಾಲ್ಕು ತಿಂಗಳ ಕಾಲ (ಚಾತುರ್ಮಾಸ) ಆಚರಿಸಬೇಕಾದ ವ್ರತಗಳನ್ನು ಈ ದಿನದಿಂದ ಪ್ರಾರಂಭಿಸು ತ್ತಾರೆ. ಈ ಅವಧಿಯಲ್ಲಿ, ಭಗವಾನ್ ವಿಷ್ಣುವು ಯೋಗನಿದ್ರೆಗೆ ಹೋಗುತ್ತಾನೆ ಎಂದು ನಂಬಲಾಗಿದೆ ಮತ್ತು ಆದ್ದರಿಂದ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ.

Roopa Gururaj Column: ತನ್ನ ಸ್ವಾಮಿಯ ಆಜ್ಞಾಪಾಲಕನಾದ ಹನುಮಂತ

ತನ್ನ ಸ್ವಾಮಿಯ ಆಜ್ಞಾಪಾಲಕನಾದ ಹನುಮಂತ

ಕೋಪಗೊಂಡ ಹನುಮಂತನನ್ನು ನೋಡಿದ ಕರ್ಣನು ಧನುಸ್ಸನ್ನು ರಥದ ಮೇಲೆ ಇಟ್ಟು ಕೈ ಮುಗಿದು ಕ್ಷಮೆಯಾಚಿಸಿದನು. ಶ್ರೀ ಕೃಷ್ಣನು ಹನುಮಂತನು ಕೋಪದಲ್ಲಿದ್ದುದ್ದನ್ನು ಕಂಡು ತನ್ನತ್ತ ತಿರುಗಿ ನೋಡುವಂತೆ ಹೇಳುತ್ತಾನೆ. ನಂತರ ಹನುಮಂತನು ಕೋಪದಿಂದಲೇ ಶ್ರೀಕೃಷ್ಣನನ್ನು ನೋಡುತ್ತಾನೆ. ತನ್ನ ಪ್ರಭುವನ್ನು ನೋಡುತ್ತಿದ್ದಂತೆ ಹನುಮಂತನ ಕೋಪ ಕರಗಿ ಮತ್ತೆ ಹಿಂದಿರುಗಿ ಬಂದು ರಥವನ್ನೇರಿ ಕುಳಿತುಕೊಳ್ಳುತ್ತಾನೆ.

Roopa Gururaj Column: ದೇವರ ಅನುಗ್ರಹಕ್ಕೆ ಕೃತಜ್ಞತೆ ಹೇಳಲು ಮರೆತ ಮನುಷ್ಯರು

ದೇವರ ಅನುಗ್ರಹಕ್ಕೆ ಕೃತಜ್ಞತೆ ಹೇಳಲು ಮರೆತ ಮನುಷ್ಯರು

ಕೆಲಸಗಳು ಸರಸರ ನಿಮಿಷವೂ ಬಿಡುವಿಲ್ಲದಂತೆ ನಡೆಯುತ್ತಲೇ ಇತ್ತು. ಇದನ್ನು ಕಂಡ ಮನುಷ್ಯ ಮತ್ತೆ ದೇವತೆಯನ್ನು ಕೇಳಿದ, ಅದಕ್ಕೆ ದೇವತೆ ಇದು ‘ವಿತರಣಾ’ ವಿಭಾಗ. ಪ್ರಾರ್ಥನೆ ಹಾಗೂ ಪೂಜೆಯ ಮೂಲಕ ಸಂದಾಯವಾದ ಜನರ ಬೇಡಿಕೆಗಳನ್ನೆಲ್ಲಾ ಪರಿಶೀಲಿಸಿ ಅಗತ್ಯಕ್ಕೆ ತಕ್ಕಂತೆ ಭಗವಂತನು ಅನುಗ್ರಹಿಸುತ್ತಾನೆ. ಅವುಗಳನ್ನೆಲ್ಲಾ ಸರಿ ಮಾಡಿ ಆ ಅನುಗ್ರಹಗಳನ್ನು ಅದಕ್ಕೆ ಸಂಬಂಧಪಟ್ಟವರಿಗೆ ತಲುಪಿಸುವ ಕೆಲಸ ಈ ವಿಭಾಗದ್ದು. ಮನುಷ್ಯನಿಗೆ ಬಹಳ ಸಂತೋಷವಾಯಿತು.

Roopa Gururaj Column: ಭಗವದ್ಗೀತೆಯಂಥ ಧರ್ಮಗ್ರಂಥಗಳನ್ನು ಏಕೆ ಓದಬೇಕು ?

ಭಗವದ್ಗೀತೆಯಂಥ ಧರ್ಮಗ್ರಂಥಗಳನ್ನು ಏಕೆ ಓದಬೇಕು ?

ಅಜ್ಜ ಸ್ವಲ್ಪ ಹೊತ್ತು ಯೋಚನೆ ಮಾಡಿ ನಿನ್ನ ಪ್ರಶ್ನೆಗೆ ಉತ್ತರ ಕೊಡುತ್ತೇನೆ. ಅದಕ್ಕೆ ಮೊದಲು ನಿನಗೊಂದು ಕೆಲಸವಿದೆ. ಅಡುಗೆ ಮನೆಯಲ್ಲಿರುವ ಜೋಳಿಗೆಯಲ್ಲಿ ಇದ್ದಿಲು ತುಂಬಿದೆ. ಅದನ್ನು ಖಾಲಿ ಮಾಡಿಕೋ, ಹತ್ತಿರದಲ್ಲಿ ನದಿ ಹರಿಯುತ್ತಿದೆ. ನದಿಯಿಂದ ಜೋಳಿಗೆ ತುಂಬ ನೀರು ತುಂಬಿಸಿ ಕೊಂಡು ಬಾ ಎಂದರು. ಮೊಮ್ಮಗ ಜೋಳಿಗೆಯನ್ನು ಖಾಲಿ ಮಾಡಿದ.

Roopa Gururaj Column: ತುಳಸಿದಾಸರಿಗೆ ರಾಮನಾಗಿ ದರ್ಶನ ನೀಡಿದ ಪುರಿ ಜಗನ್ನಾಥ

ತುಳಸಿದಾಸರಿಗೆ ರಾಮನಾಗಿ ದರ್ಶನ ನೀಡಿದ ಪುರಿ ಜಗನ್ನಾಥ

ನೀವೇಕೆ ಪ್ರಸಾದ ವಾಪಸ್ಸು ತೆಗೆದುಕೊಂಡು ಹೋಗಲು ಹೇಳುವಿರಿ? ಎಂದು ಕೇಳಿದಾಗ, ನನ್ನ ಇಷ್ಟದೈವ ರಾಮನ ಪೂಜೆ ಮಾಡಿ ಅವನಿಗೆ ಅರ್ಪಿಸದೆ ಏನನ್ನೂ ಸೇವಿಸುವಹಾಗಿಲ್ಲ. ಅಲ್ಲದೆ ನಿನ್ನ ಜಗನ್ನಾಥನ ಪ್ರಸಾದವನ್ನು ನನ್ನ ರಾಮನಿಗೆ ಹೇಗೆ ನೈವೇದ್ಯ ಮಾಡಲಿ? ಆದುದರಿಂದ ಈ ಪ್ರಸಾದವನ್ನು ಸ್ವೀಕರಿಸಲಾರೆ ಎಂದರು.

Roopa Gururaj Column: ನಳ ನೀಲರ ಸ್ಪರ್ಶದಿಂದ ತೇಲಿದ ರಾಮಸೇತುವಿನ ಕಲ್ಲುಗಳು

ನಳ ನೀಲರ ಸ್ಪರ್ಶದಿಂದ ತೇಲಿದ ರಾಮಸೇತುವಿನ ಕಲ್ಲುಗಳು

ಇಬ್ಬರೂ ಋಷಿಗಳ ಆಶ್ರಮದಲ್ಲಿ ವಿದ್ಯಾರ್ಜನೆಗಾಗಿ ನೆಲೆಸಿದ್ದರು. ಋಷಿಗಳು ಹೋಮ ಹವನ, ದೇವರ ಪೂಜೆಯಲ್ಲಿ ಮಗ್ನರಾಗಿದ್ದಾಗ ಈ ತುಂಟ ಸಹೋದರರಿಬ್ಬರೂ ದೇವರ ವಿಗ್ರಹಗಳನ್ನು ಹೊತ್ತು ನೀರಿಗೆ ಎಸೆಯುತಿದ್ದರು. ಮಕ್ಕಳ ಮೇಲಿನ ಪ್ರೀತಿಯಿಂದಾಗಿ, ತಪಸ್ಸಿಗೆ ಅಡ್ಡಿ ಉಂಟಾದರೂ ಕೂಡ ಋಷಿಗಳು ಇವರ ತುಂಟತನಕ್ಕೆ ಶಿಕ್ಷೆ ನೀಡದೆ ಸಹಿಸಿಕೊಳ್ಳುತ್ತಿದ್ದರು.

Roopa Gururaj Column: ಭಾಗವತದಲ್ಲಿ ಬರುವ ತುಳಸಿ ಕಥೆ

ಭಾಗವತದಲ್ಲಿ ಬರುವ ತುಳಸಿ ಕಥೆ

ಲಕ್ಷ್ಮೀದೇವಿಯು ಸಮುದ್ರದಿಂದ ಜನಿಸಿದ ಕಾರಣ, ನೀನು ನನಗೆ ಭ್ರಾತೃವಾಗಬೇಕು ಎಂದು ಅವನಿಗೆ ತಿಳಿ ಹೇಳಿದಳು. ಲಕ್ಷ್ಮಿ ದೊರೆಯದಿದ್ದಾಗ, ಈ ಅಸುರ ಪಾರ್ವತಿ ದೇವಿಯನ್ನು ಅರಸುತ್ತಾ ಕೈಲಾಸ ಪರ್ವತಕ್ಕೆ ಬಂದನು. ತನ್ನ ಮಾಯಾವಿ ಶಕ್ತಿಯಿಂದ ಶಿವನ ರೂಪವನ್ನು ಧರಿಸಿ ತಾಯಿ ಪಾರ್ವತಿಯ ಬಳಿ ಹೋದನು. ಆದರೆ ತಾಯಿಯು ತಕ್ಷಣವೇ ತನ್ನ ಯೋಗ ಬಲದಿಂದ ಅವನನ್ನು ಗುರುತಿಸಿ ಅಲ್ಲಿಂದ ಕಣ್ಮರೆಯಾದಳು.

Roopa Gururaj Column: ತಾವೇ ನೀಡಿದ ವರದಿಂದ ಹತರಾದ ಮಧು ಕೈಟಭ

ತಾವೇ ನೀಡಿದ ವರದಿಂದ ಹತರಾದ ಮಧು, ಕೈಟಭ

ಬ್ರಹ್ಮನು ತನ್ನ ಜೀವವನ್ನುಉಳಿಸಿಕೊಳ್ಳಲು ವಿಷ್ಣುವಿನ ಮೊರೆ ಹೋದನು. ಆದರೆ ವಿಷ್ಣುವು ತಾಯಿ ಭಗವತಿಯ ಪ್ರಭಾವದಿಂದ ಯೋಗ ನಿದ್ರೆಯಲ್ಲಿದ್ದರು. ಅಷ್ಟರಲ್ಲಿ ಮಧು - ಕೈಟಭ ಎಂಬ ರಾಕ್ಷಸರಿ ಬ್ಬರೂ ಬ್ರಹ್ಮನ ಕಡೆಗೆ ಓಡತೊಡಗಿದರು. ಬಹಳ ಕಷ್ಟದಿಂದ ಬ್ರಹ್ಮನು ತಾಯಿ ಭಗವತಿಯನ್ನು ಸಹಾ ಯಕ್ಕಾಗಿ ಕರೆದು ಈ ಇಬ್ಬರು ರಾಕ್ಷಸರು ನನ್ನನ್ನು ಕೊಂದರೆ ಬ್ರಹ್ಮಾಂಡ ವನ್ನು ಯಾರು ರಚಿಸುತ್ತಾರೆ ಎಂದು ಕೇಳಿದನು.

Roopa Gururaj Column: ನವಗುಂಜರದ ಭಕ್ತಿ ಸಾರ

ನವಗುಂಜರದ ಭಕ್ತಿ ಸಾರ

ನವಗುಂಜರ ಎಂಬ ಈ ರೂಪವು ಸೃಷ್ಟಿಯಲ್ಲಿ ಎಲ್ಲರೂ ದೇವರ ಅಂಶವಾಗಿದ್ದಾರೆ ಎಂಬ ತತ್ತ್ವವನ್ನು ತೋರಿಸು ತ್ತದೆ. ದೇವರು ಎಲ್ಲರೂ ಆಗಿದ್ದಾನೆ ಹಸುವಿನಲ್ಲಿ, ಹಕ್ಕಿಯಲ್ಲಿ, ಹಾವುಗಳಲ್ಲಿ, ಮನುಷ್ಯನಲ್ಲಿ, ಪ್ರತಿ ರೂಪದಲ್ಲೂ. ಭಗವಂತನ ರೂಪ ನಿರ್ವಚನಾ ತೀತ, ಅಪಾರ, ಅಪರೂಪ ಎಂಬುದೇ ಕಥೆಯ ಭಾವಾರ್ಥ.

Roopa Gururaj Column: ಪ್ರಾಣ ಉಳಿಸುವ ಸಮಯ ಪ್ರಜ್ಞೆ

ಪ್ರಾಣ ಉಳಿಸುವ ಸಮಯ ಪ್ರಜ್ಞೆ

ನಾಲ್ಕು ಜನ ಗಂಡು ಮಕ್ಕಳೂ ಹಲವು ವರ್ಷಗಳ ಕಾಲ ವಿವಿಧ ರಂಗಗಳಲ್ಲಿ ಯಕ್ಷಣಿ ಮುಂತಾದ ವಿದ್ಯೆಗಳನ್ನು ಕಲಿತು ಪ್ರತಿಭಾವಂತರಾಗಿ ಬಹಳ ವರ್ಷಗಳ ನಂತರ ತಂದೆ ಹೇಳಿ ಕಳುಹಿಸಿದಾಗ ತಮ್ಮ ಊರಿಗೆ ಮರಳ ತೊಡಗಿದರು. ಹೀಗೆ ನಾಲ್ವರು ಒಟ್ಟಿಗೆ ಬರುತ್ತಿರುವಾಗ ಎಲ್ಲರಿಗೂ ತಾವು ಕಲಿತ ವಿದ್ಯೆಯನ್ನು ಪ್ರದರ್ಶಿಸಬೇಕು ಎಂಬ ಮಹತ್ವಾಕಾಂಕ್ಷೆ ಇತ್ತು.

Roopa Gururaj Column: ಶ್ರೀಕೃಷ್ಣನ ಅಂತ್ಯಕ್ಕೆ ಕಾರಣನಾದ ಜರವ್ಯಾಧ

ಶ್ರೀಕೃಷ್ಣನ ಅಂತ್ಯಕ್ಕೆ ಕಾರಣನಾದ ಜರವ್ಯಾಧ

ಆಹಾ! ಈ ದಿನ ನನಗೆ ಒಳ್ಳೆಯ ಬೇಟೆ ಸಿಗುತ್ತಿದೆ ಎಂದು ಭಾವಿಸಿದ ಆತ. ತಡ ಮಾಡದೆ ಅವನು ತನ್ನ ಬಾಣವನ್ನು ಪ್ರಯೋಗ ಮಾಡಿಯೇ ಬಿಟ್ಟ. ನಂತರ ತನ್ನ ಬೇಟೆ ಎಲ್ಲಿ ಬಿದ್ದಿದೆ ಎಂದು ಅರಸುತ್ತಾ ಬಂದಾಗ ಅಲ್ಲಿ ಬಾಣ ಕೃಷ್ಣನ ಪಾದಕ್ಕೆ ತಾಕಿರುವುದನ್ನು ನೋಡಿ ಭಯದಿಂದ ಗಡಗಡ ನಡುಗ ತೊಡಗಿದನು.

Roopa Gururaj Column: ನವಗುಂಜರದ ಭಕ್ತಿ ಸಾರ

ನವಗುಂಜರದ ಭಕ್ತಿ ಸಾರ

ನವಗುಂಜರ ಎಂದರೇನು? ನವಗುಂಜರ ಎಂಬುದು ಅನೇಕ ಪ್ರಾಣಿಗಳ ಅಂಗಾಂಗಗಳಿಂದ ಕೂಡಿದ ಒಂದು ಅದ್ಭುತ ರೂಪ. “ನವ" ಅಂದರೆ ಒಂಬತ್ತು ಮತ್ತು “ಗುಂಜರ" ಅಂದರೆ ಪಶು/ಪ್ರಾಣಿ. ನವ ಗುಂಜರದ ಆಕಾರದಲ್ಲಿ ತಲೆಯು ಕೋಳಿಯ ಒಂದು ತಂಗಳಿ ಆನೆ ಒಂದು ತಂಗಳಿ ಹಸು ಒಂದು ತಂಗಳಿ ವೃಶ್ಚಿಕ ಕತ್ತೆ ಅಥವಾ ಸಿಂಹದ ಅಂಗ ಹಕ್ಕಿಯ ಮೇಲ್ದೋಳು ಮನುಷ್ಯನ ಕೈ, ಅದರಲ್ಲಿ ತ್ರಿಶೂಲ ಅಥವಾ ಹೂವಿನ ತೆನೆ, ಹಾವುಗಳ ಶಿರೋಪರಿ, ಇಡೀ ರೂಪವು ಭಯಾನಕವೂ ಜೊತೆ ಜೊತೆಗೆ ಅದ್ಭುತವೂ ಆಗಿರುವುದು ವಿಶೇಷ.

Roopa Gururaj Column: ಸಂತೋಷವಾಗಿರಲು ಏನು ಮಾಡಬೇಕು ?

ಸಂತೋಷವಾಗಿರಲು ಏನು ಮಾಡಬೇಕು ?

ಹಣವಾಗಲಿ, ವಸ್ತುಗಳಾಗಲೀ ತಕ್ಕಮಟ್ಟಿನ ಪ್ರಾಪಂಚಿಕ ಸೌಲಭ್ಯವನ್ನು ತರಬಲ್ಲವೇ ವಿನಾ ಸುಖ ಶಾಂತಿ ಗಳನ್ನು ತರಲಾರವು. ಅವುಗಳ ಸಂಗ್ರಹ ಮಿತಿಮೀರಿದಾಗ ಮನಸ್ಸು ಕ್ಷೋಭೆಗೆ ಒಳಗಾಗಿ ಇದ್ದ ನೆಮ್ಮದಿ ಯೂ ನಾಶವಾಗುತ್ತದೆ ." ‘ನಿಮ್ಮ ಪೂರ್ವಿಕರು ಈ ಗುಟ್ಟನ್ನು ಅರಿತಿದ್ದರು. ಅವರು ಕಾಮ ಕ್ರೋಧ ಗಳನ್ನು ದೂರವಿರಿಸಿ ತೃಪ್ತಿ, ಪ್ರೀತಿಗಳ ಸ್ನೇಹವನ್ನು ಸಂಪಾದಿಸಿದ್ದರು. ಸುಖ ನೆಮ್ಮದಿಗಳು ಅವರನ್ನು ಎಡಬಿಡದೆ ಅನುಸರಿಸುತ್ತಿವೆ.

Roopa Gururaj Column: ಕೋಳೂರಿನ ಚೆನ್ನಮ್ಮನ ಶಿವಭಕ್ತಿ

ಕೋಳೂರಿನ ಚೆನ್ನಮ್ಮನ ಶಿವಭಕ್ತಿ

ಆತಂಕದಿಂದ ಶಿವನನ್ನು ಮತ್ತೆ ಮತ್ತೆ ಬೇಡಿಕೊಳ್ಳತೊಡಗಿದಳು. ಬಹುಶಃ ತಾನು ಎದುರಿಗಿರುವು ದರಿಂದ ಶಿವ ಹಾಲನ್ನು ಕುಡಿಯಲಾರನೆಂದು ಮರೆಗೆ ಹೋಗಿ ನಿಂತಳು. ಪುನಃ ಬಂದು ನೋಡಿದಳು; ಪ್ರಾರ್ಥಿಸಿ ದಳು. ಎಲ್ಲವೂ ವ್ಯರ್ಥವಾದಾಗ ಅವಳ ಸಂಕಟ ಮಿತಿಮೀರಿತು. ತನ್ನ ಭಕ್ತಿಯಲ್ಲೇನೋ ಕುಂದಿರ ಬೇಕೆಂದು ಅನಿಸಿತು.

Roopa Gururaj Column: ಪಾರಿವಾಳಕ್ಕಾಗಿ ಜೀವವನ್ನೇ ಒತ್ತೆಯಿಟ್ಟ ಮೇಘರಥ

ಪಾರಿವಾಳಕ್ಕಾಗಿ ಜೀವವನ್ನೇ ಒತ್ತೆಯಿಟ್ಟ ಮೇಘರಥ

ನೀನು ಬಯಸುವ ಯಾವುದೇ ರೀತಿಯ ಆಹಾರವನ್ನು ನಾನು ನಿನಗೆ ನೀಡುತ್ತೇನೆ; ಮತ್ತೊಂದು ಪಕ್ಷಿ ಯನ್ನು ಕೊಂದು ತಿನ್ನುವುದು ಅನ್ಯಾಯವಲ್ಲವೇ? ಎಂದನು. ಅದನ್ನು ಕೇಳಿ ನಕ್ಕ ಗಿಡುಗ, ಭಗವಂತ ನನ್ನನ್ನು ಮಾಡಿರುವುದೇ ಹೀಗೆ. ಇದು ಪ್ರಕೃತಿ ನಿಯಮ. ನೀನು ಅದಕ್ಕೆ ವಿರುದ್ಧವಾಗಿ ವರ್ತಿಸುವ ಹಾಗಿಲ್ಲ. ನನ್ನ ಆಹಾರ ನೀನು ಕಸಿದುಕೊಳ್ಳಲಾಗದು ಎಂದಿತು.

Roopa Gururaj Column: ಧರ್ಮರಾಯನಿಗೆ ಸಮಯದ ಪಾಠ ಮಾಡಿದ ಭೀಮ

ಧರ್ಮರಾಯನಿಗೆ ಸಮಯದ ಪಾಠ ಮಾಡಿದ ಭೀಮ

ಭೀಮಸೇನನು, ಒಂದು ಸಂತಸದ ಸುದ್ದಿಯನ್ನು ಹೇಳಲಿದ್ದೇನೆ ಎಂದನು. ನಂತರ ಅವನು ಅಣ್ಣನಾದ ಧರ್ಮರಾಜನು ಪಾದಗಳಿಗೆ ನಮಸ್ಕರಿಸುತ್ತ ಅಲ್ಲಿ ನೆರೆದಿದ್ದ ಪ್ರಜೆಗಳ ಕಡೆಗೆ ತಿರುಗಿ, ‘ನಮ್ಮ ಅಣ್ಣನು ದೊಡ್ಡ ವಿಜಯವನ್ನು ಸಂಪಾದಿಸಿದ್ದಾನೆ. ತಾವೆಲ್ಲರೂ ಆ ವಿಷಯವನ್ನು ಕೇಳಿದ ಮೇಲೆ ನನಗಿಂತ ಹೆಚ್ಚಿನ ಸಂತೋಷವನ್ನು ಪಡುವಿರಿ. ಹಾಗೆಯೇ ನಾವೆಲ್ಲರೂ ಅಣ್ಣನ ಸಂತೋಷದಲ್ಲಿ ಪಾಲ್ಗೊಳ್ಳೋಣ’ ಎಂದನು.

Loading...