Vishweshwar Bhat Column: ಅತಿ ಹೆಚ್ಚು ಜನರಿದ್ದ ವಿಮಾನ
ಒಂದು ಬೋಯಿಂಗ್ 747 ವಿಮಾನವು ಸುಮಾರು 400-500 ಪ್ರಯಾಣಿ ಕರನ್ನು ಹೊತ್ತೊಯ್ಯಬಲ್ಲದು. ಆದರೆ, ಈ ತುರ್ತು ಕಾರ್ಯಾಚರಣೆಯಲ್ಲಿ ಸಾಧ್ಯವಾದಷ್ಟು ಹೆಚ್ಚು ಜನರನ್ನು ಕರೆತರಲು ವಿಮಾನ ದೊಳಗಿನ ಎಲ್ಲ ಆಸನಗಳನ್ನು ತೆಗೆದು ಹಾಕಲಾಯಿತು. ಅಧಿಕೃತ ವಾಗಿ ವಿಮಾನ ಹತ್ತುವಾಗ 1086 ಪ್ರಯಾಣಿಕರಿದ್ದರು. ಆದರೆ, ಪ್ರಯಾಣದ ಸಮಯದಲ್ಲಿ ವಿಮಾನದಲ್ಲಿಯೇ ಮಗುವೊಂದು ಜನಿಸಿದ್ದ ರಿಂದ, ವಿಮಾನವು ಇಸ್ರೇಲ್ ನಲ್ಲಿ ಇಳಿದಾಗ ಒಟ್ಟು ಪ್ರಯಾಣಿಕರ ಸಂಖ್ಯೆ 1087 ಆಗಿತ್ತು.