ಕಾಮನ್ ಮ್ಯಾನ್ ಸ್ಪರ್ಧಿಗಳ ಅತಿರೇಕದ ವರ್ತನೆ! ಕಿಚ್ಚನ ನೆನೆದು ಮಂಜುಗೆ ಭಯ
Bigg Boss kannada 13: ಬಿಗ್ ಬಾಸ್ ಕನ್ನಡ 13ರಲ್ಲಿ ಮಾಡರ್ನ್ ಮಹಾಕವಿ (Mahakavi Manja) ಮಂಜು ನಡೆದುಕೊಳ್ಳುತ್ತಿರುವ ರೀತಿ ಹಾಗೂ ಸಹ-ಸ್ಪರ್ಧಿಗಳ ಕ್ಯಾರೆಕ್ಟರ್ ಬಗ್ಗೆ ಆಡಿದ ಮಾತುಗಳು ತೀವ್ರ ವಿವಾದಕ್ಕೆ ಕಾರಣವಾಗಿವೆ. ಕಿಚ್ಚ ಸುದೀಪ್ ಅವರಿಂದ ತಮಗೆ ಭಾರಿ ಕ್ಲಾಸ್ ಕಾದಿದೆ ಎಂದು ಸ್ವತಃ ಮಂಜನೇ ಭಯ ಹೊರ ಹಾಕಿದ್ದಾರೆ. ಕಾಮನ್ ಮ್ಯಾನ್ ಸ್ಪರ್ಧಿಗಳ ಆಟ ದಿಕ್ಕು ತಪ್ಪಿದ್ದು, ಬೇರೆಯವರ ಆಹಾರ ಕದ್ದು ತಿನ್ನುವ ಮೂಲಕ ಸಹ-ಸ್ಪರ್ಧಿಗಳು ಹಾಗೂ ವೀಕ್ಷಕರ ಆಕ್ರೋಶಕ್ಕೆ ಈಡಾಗಿದ್ದಾರೆ.