ಬೆಂಗಳೂರಿನಲ್ಲಿ ಹೊಟೇಲ್ ತಿಂಡಿ ತಿನಿಸು ಬೆಲೆ ಏರಿಕೆ
ಊಟ, ತಿಂಡಿಗಾಗಿ ಹೊಟೇಲ್ ಅನ್ನೇ ನೆಚ್ಚಿಕೊಂಡಿದ್ದೀರಾ ? ಹಾಗಿದ್ದರೆ ಬೆಂಗಳೂರು ಹೊಟೇಲ್ ಗಳು ನಿಮಗೆ ಶಾಕ್ ಕೊಡುವುದು ಗ್ಯಾರಂಟಿ. ಬಹುತೇಕ ಎಲ್ಲಾ ಹೊಟೇಲ್ ಗಳಲ್ಲೂ ಚಹಾ, ಕಾಫಿ, ತಿಂಡಿ, ಊಟದ ಬೆಲೆಯನ್ನು ಹೆಚ್ಚಿಸಲಾಗಿದೆ. ಕನಿಷ್ಠ 5 ರೂ. ನಿಂದ 20 ರೂ. ವರೆಗೂ ದರ ಹೆಚ್ಚಳ ಮಾಡಲಾಗಿದ್ದು, ಇದು ಗ್ರಾಹಕರ ಜೇಬಿಗೆ ಕತ್ತರಿ ಹಾಕಲಿದೆ.