ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೆಂಗಳೂರು ನಗರ

First Night: ಫಸ್ಟ್‌ನೈಟ್‌ ಮಾಡಿಕೊಳ್ಳದ ಗಂಡ, ಪೊಲೀಸರಿಗೆ ದೂರು ನೀಡಿದ ಹೆಂಡತಿ

ಫಸ್ಟ್‌ನೈಟ್‌ ಮಾಡಿಕೊಳ್ಳದ ಗಂಡ, ಪೊಲೀಸರಿಗೆ ದೂರು ನೀಡಿದ ಹೆಂಡತಿ

ಮದುವೆಯ ದಿನದಿಂದಲೂ ತನ್ನ ಪತಿ ಯಾವುದೇ ದೈಹಿಕ ಸಂಬಂಧವನ್ನು ತಪ್ಪಿಸಿದ್ದಾನೆ.‌ ಸಾಮಾನ್ಯ ವೈವಾಹಿಕ ಜೀವನದ ನಿರೀಕ್ಷೆಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರೂ, ತನ್ನ ಪತಿ ನಿರಂತರವಾಗಿ ದೂರ ಉಳಿದು 'ಮೊದಲ ರಾತ್ರಿ'ಗೆ ಒಪ್ಪಲಿಲ್ಲ. ಇದು ತನಗೆ ತೀವ್ರ ಮಾನಸಿಕ ಯಾತನೆಯನ್ನು ಉಂಟುಮಾಡಿತು ಎಂದು ಮಹಿಳೆ ತಮ್ಮ ನೋವು ತೋಡಿಕೊಂಡಿದ್ದಾರೆ.

Namma Metro: ನಮ್ಮ ಮೆಟ್ರೋ ಪಿಂಕ್‌ ಲೈನ್‌ ಮೇ ತಿಂಗಳಿಂದ ಕಾರ್ಯಾಚರಣೆಗೆ ಭರದ ಸಿದ್ಧತೆ, 4 ರೈಲು ಆಗಮನ

ನಮ್ಮ ಮೆಟ್ರೋ ಪಿಂಕ್‌ ಲೈನ್‌ ಮೇ ತಿಂಗಳಿಂದ ಕಾರ್ಯಾಚರಣೆಗೆ ಭರದ ಸಿದ್ಧತೆ

ಪಿಂಕ್ ಲೈನ್ ಒಟ್ಟು 21.25 ಕಿ.ಮೀ. ವಿಸ್ತೀರ್ಣ ಹೊಂದಿದ್ದು 18 ಮೆಟ್ರೋ ನಿಲ್ದಾಣಗಳನ್ನು ಒಳಗೊಂಡಿದೆ. ಆ ಪೈಕಿ 12 ಅಂಡರ್ ಗ್ರೌಂಡ್ ಮತ್ತು 6 ಎಲಿವೇಟೆಡ್ ಸ್ಟೇಷನ್. ಈ ವರ್ಷ ಮೇನಲ್ಲಿ 6 ಎಲಿವೇಟೆಡ್ ಮೆಟ್ರೋ ನಿಲ್ದಾಣಗಳನ್ನು ಓಪನ್ ಮಾಡಲು ಬಿಎಂಆರ್ಸಿಎಲ್ ಸಿದ್ದತೆ ಮಾಡಿಕೊಂಡಿದ್ದು, ಉಳಿದ 13.76.ಕಿ.ಮೀ ವಿಸ್ತೀರ್ಣದ 12 ಅಂಡರ್ ಗ್ರೌಂಡ್ ಸ್ಟೇಷನ್​​ ಮಾರ್ಗದ ಕಾಮಗಾರಿ ನಡೆಯುತ್ತಿವೆ.

ತುಂಡುಡುಗೆ ತೊಟ್ಟು ರೀಲ್ಸ್‌ ಮಾಡ್ತಿದ್ದ ಯುವತಿಗೆ ಬುದ್ಧಿವಾದ ಹೇಳಿದ ಅಜ್ಜಿ; ವಿಡಿಯೊ ವೈರಲ್‌

ತುಂಡುಡುಗೆ ತೊಟ್ಟು ರೀಲ್ಸ್‌ ಮಾಡುತ್ತಿದ್ದ ಯುವತಿಗೆ ಅಜ್ಜಿಯಿಂದ ಕ್ಲಾಸ್

ಬೆಂಗಳೂರು ಮೂಲದ ಯುವತಿ ತುಂಡುಡುಗೆ ತೊಟ್ಟು ರಸ್ತೆಯಲ್ಲಿ ರೀಲ್ಸ್‌ ಮಾಡುತ್ತಿದ್ದ ವೇಳೆ ಅದೇ ಮಾರ್ಗದಲ್ಲಿ ಬರುತ್ತಿದ್ದ ಅಜ್ಜಿ ನೋಡಿದ್ದಾರೆ. ಯುವತಿಯ ಉಡುಗೆ ತೊಡುಗೆ ನೋಡಿದ ಅಜ್ಜಿ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಬೆಂಗಳೂರಿನ ರಸ್ತೆಗಳಲ್ಲಿ ಬೀದಿ ವ್ಯಾಪಾರಕ್ಕಿಲ್ಲ ಅವಕಾಶ, ರೋಡ್‌ ಸೈಡ್‌ ಹಳೆ ವಾಹನ ನಿಲ್ಲಿಸಿದ್ರೆ ಡಂಪ್: ಡಿಕೆಶಿ

ಇನ್ನುಮುಂದೆ ಬೆಂಗಳೂರಿನ ರಸ್ತೆಗಳಲ್ಲಿ ಬೀದಿ ವ್ಯಾಪಾರಕ್ಕೆ ಅವಕಾಶವಿಲ್ಲ

ಜಿಬಿಎ ವ್ಯಾಪ್ತಿಯ ಎಲ್ಲಾ ಶಾಸಕರನ್ನು ಕರೆದು ಪಾಲಿಕೆಗಳ ಬಜೆಟ್ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್‌ ಸಭೆ ನಡೆಸಿದ್ದಾರೆ. ಅನಧಿಕೃತ ಫ್ಲೆಕ್ಸ್‌, ಮುಖ್ಯ ರಸ್ತೆಗಳಲ್ಲಿ ಬೀದಿ ವ್ಯಾಪಾರ ಹಾಗೂ ರಸ್ತೆಬದಿ ಹಳೆಯ ವಾಹನಗಳನ್ನು ನಿಲ್ಲಿಸುವುದು ಸೇರಿ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ.

Karnataka Weather: ರಾಜ್ಯದಲ್ಲಿ ಮುಂದಿನ 4 ದಿನ ಅಬ್ಬರಿಸಲಿದೆ ಮಳೆ; ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!

ಯೆಲ್ಲೋ ಅಲರ್ಟ್; ರಾಜ್ಯದಲ್ಲಿ ಮುಂದಿನ 4 ದಿನ ಅಬ್ಬರಿಸಲಿದೆ ಮಳೆ!

ಕರ್ನಾಟಕ ಹವಾಮಾನ ವರದಿ: ಮಾರ್ಚ್‌ 21ರಂದು ಶನಿವಾರ ರಾಯಚೂರು, ಕೊಪ್ಪಳ, ಗದಗ, ಧಾರವಾಡ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಸೇರಿ ಕರ್ನಾಟಕದ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದ್ದು, ಸಾಧಾರಣ ಮಳೆ ಗುಡುಗು ಸಹಿತ ಮಳೆಯಾಗುವ ಸಂಭವವಿದೆ.

Teachers promotion: 10 ಸಾವಿರಕ್ಕೂ ಹೆಚ್ಚು ಸಹ ಶಿಕ್ಷಕರಿಗೆ ಮುಖ್ಯಶಿಕ್ಷಕರಾಗಿ ಬಡ್ತಿ; ಶಿಕ್ಷಣ ಸಚಿವರಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಧನ್ಯವಾದ

10 ಸಾವಿರಕ್ಕೂ ಹೆಚ್ಚು ಸಹ ಶಿಕ್ಷಕರಿಗೆ ಮುಖ್ಯಶಿಕ್ಷಕರಾಗಿ ಬಡ್ತಿ

ರಾಜ್ಯದ ಸಾವಿರಾರು ಶಿಕ್ಷಕರಿಗೆ ಬಡ್ತಿ ನೀಡಲು ಕ್ರಮ ಕೈಗೊಂಡಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಧನ್ಯವಾದ ಸಲ್ಲಿಸಿದ್ದಾರೆ.

BESCOM: ಪೂರ್ವ ಮುಂಗಾರು ಮಳೆ ಅಬ್ಬರ; ವಿದ್ಯುತ್ ಸುರಕ್ಷತಾ ಕ್ರಮ ಅನುಸರಿಸಲು ಬೆಸ್ಕಾಂ ಮನವಿ

ಭಾರಿ ಮಳೆ; ವಿದ್ಯುತ್ ಸುರಕ್ಷತಾ ಕ್ರಮ ಅನುಸರಿಸಲು ಬೆಸ್ಕಾಂ ಮನವಿ

BESCOM: ಗಾಳಿ-ಮಳೆ ಸಂದರ್ಭದಲ್ಲಿ ಕರೆಗಳ ಒತ್ತಡದಿಂದ ಬೆಸ್ಕಾಂ ಸಹಾಯವಾಣಿ ಸಂಖ್ಯೆ 1912 ಕೆಲವೊಮ್ಮೆ ಲಭ್ಯವಾಗುವುದಿಲ್ಲ, ಹೀಗಾಗಿ ಬೆಸ್ಕಾಂ ವಾಟ್ಸ್ ಆಪ್ ಸಂಖ್ಯೆಗಳಿಗೆ ವಿದ್ಯುತ್ ಸಮಸ್ಯೆ ಕುರಿತ ಸಂದೇಶಗಳನ್ನು ಕಳುಹಿಸಲು ಬೆಸ್ಕಾಂ ಮನವಿ ಮಾಡಿದೆ. ಈ ಕುರಿತ ವಿವರ ಇಲ್ಲಿದೆ.

Bengaluru's Second Airport: ಬೆಂಗಳೂರಿನ 2ನೇ ಏರ್‌ಪೋರ್ಟ್‌ಗೆ ರಾಜ್ಯ ಸರ್ಕಾರದಿಂದ ಟೆಂಡರ್ ಆಹ್ವಾನ

ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟೆಂಡರ್

ಪ್ರಸ್ತಾವಿತ ಬೆಂಗಳೂರಿನ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದ ವಾಯು ಸಂಚಾರ ಬೇಡಿಕೆಯನ್ನು ಪೂರೈಸಲು ಮತ್ತು ಕರ್ನಾಟಕದ ದೀರ್ಘಕಾಲೀನ ವಾಯುಯಾನ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಭದ್ರಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.

73 ವರ್ಷದ ಮಹಿಳೆಯ ಎದೆಯಲ್ಲಿ ಪತ್ತೆಯಾಗಿದ್ದ ಉದರದ ಅಂಗಾಂಗಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಅಪರೂಪದ ಪ್ರಕರಣ: ವೈದ್ಯರ ತಂಡದ ಸಾಧನೆ

ಮಹಿಳೆಯ ದೇಹದಲ್ಲಿನ ಈ ಸಂಕೀರ್ಣ ಸ್ವರೂಪದ ಆರೋಗ್ಯ ಸಮಸ್ಯೆಗೆ ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆಯ ಲ್ಯಾಪರೊಸ್ಕೋಪಿಕ್ ಮತ್ತು ಜಠರಗರುಳಿನ ಶಸ್ತ್ರಚಿಕಿತ್ಸಕ ಡಾ. ಪ್ರಣವ್ ಹೊನ್ನಾವರ ಶ್ರೀನಿವಾಸನ್ ಮತ್ತು ಅವರ ಶಸ್ತ್ರಚಿಕಿತ್ಸಾ ತಂಡವು ನಡೆಸಿದ ಕಡಿಮೆ ನೋವಿನ ಸುಲಭದ ಶಸ್ತ್ರಚಿಕಿತ್ಸೆ ಮೂಲಕ ಈ ಸಂಕೀರ್ಣ ಬಗೆಯ ಆರೋಗ್ಯ ಸಮಸ್ಯೆಯನ್ನು ಯಶಸ್ವಿ ಯಾಗಿ ಗುಣಪಡಿಸಲಾಗಿದೆ.

ಸಮವಸ್ತ್ರದಲ್ಲೇ ರಾಮಚಂದ್ರ ರಾವ್‌ ಮಹಿಳೆಯರೊಂದಿಗೆ ನಡೆಸಿದ ಸರಸದ ವಿಡಿಯೊ ಅಸಲಿ; ತನಿಖಾ ತಂಡದಿಂದ ಬಯಲಾಯ್ತು ಸತ್ಯ

ರಾಮಚಂದ್ರ ರಾವ್‌ ಸರಸದ ವಿಡಿಯೊ ಅಸಲಿ ಎಂದ ತನಿಖಾ ತಂಡ

DGP Ramachandra Rao Case: ಐಪಿಎಸ್‌ ಅಧಿಕಾರಿ ರಾಮಚಂದ್ರ ರಾವ್ ತಮ್ಮ ಕಚೇರಿಯಲ್ಲೇ ಸಮವಸ್ತ್ರ ಧರಿಸಿ ಮಹಿಳೆಯರೊಂದಿಗೆ ಸರಸವಾಡಿರುವ ವಿಡಿಯೊಗಳು ಅಸಲಿ ಎನ್ನುವುದು ಇದೀಗ ಸಾಬೀತಾಗಿದೆ. ನಡೆಸಿದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆರ್. ಹಿತೇಂದ್ರ ನೇತೃತ್ವದ ಐಪಿಎಸ್​​ ಅಧಿಕಾರಿಗಳ ತಂಡದ 100 ಪುಟಗಳ ವರದಿಯಲ್ಲಿ ವಿಡಿಯೊದ ಸತ್ಯಾಸತ್ಯತೆ ಹೊರ ಬಿದ್ದಿದೆ.

Robbery Case: ಬುರ್ಖಾ ಧರಿಸಿ 80 ಲಕ್ಷ ರುಪಾಯಿ ಮೌಲ್ಯದ ಕಂಪ್ಯೂಟರ್‌ ಬಿಡಿಭಾಗಗಳನ್ನು ಕದ್ದ ಅಪ್ಪ-ಮಗ

80 ಲಕ್ಷ ರು. ಮೌಲ್ಯದ ಕಂಪ್ಯೂಟರ್‌ ಬಿಡಿಭಾಗ ಕದ್ದ ಅಪ್ಪ-ಮಗ

Bengaluru News: ಬುರ್ಖಾ ಧರಿಸಿ ಅಪ್ಪ-ಮಗನ ಜೋಡಿ ಬರೋಬ್ಬರಿ 80 ಲಕ್ಷ ರುಪಾಯಿ ಮೌಲ್ಯದ ಕಂಪ್ಯೂಟರ್‌ ಬಿಡಿ ಭಾಗಗಳನ್ನು ಕದ್ದ ಘಟನೆ ನಡೆದಿದೆ. ಸದ್ಯ ಇವರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ನಾಗಾವರದಲ್ಲಿ ಈ ಘಟನೆ ನಡೆದಿದೆ.

ಬೆಂಗಳೂರಿನ 2ನೇ ವಿಮಾನ ನಿಲ್ದಾಣದ ಬಗ್ಗೆ ಡಿ.ಕೆ. ಶಿವಕುಮಾರ್‌ ಕೊಟ್ರು ಬಿಗ್‌ ಅಪ್‌ಡೇಟ್‌ Video

ಉಪಚುನಾವಣೆ ಟಿಕೆಟ್‌ ಹಂಚಿಕೆ ಬಗ್ಗೆ ಡಿ.ಕೆ. ಶಿವಕುಮಾರ್‌ ಹೇಳಿದ್ದೇನು?

DK Shivakumar: ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ʼʼರಾಜ್ಯದ ಎಲ್ಲ ಸಂಸದರನ್ನು ನಿವಾಸದಲ್ಲಿ ನಡೆದ ಸಭೆಗೆ ಆಹ್ವಾನಿಸಿದ್ದೆ. 24 ಸಂಸದರು ಆಗಮಿಸಿದ್ದರು. ಜೆಡಿಎಸ್‌ ಬಿಟ್ಟು ಬಿಜೆಪಿ, ಕಾಂಗ್ರೆಸ್‌ ಸಂಸತ್‌ ಸದಸ್ಯರು, ಸ್ವತಂತ್ರರು ಹಾಜರಿದ್ದರು. ಅವರ ಜತೆ ರಾಜ್ಯದ ಅನೇಕ ನೀರಾವರಿ ಯೋಜನೆಗಳನ್ನು ಪ್ರಸ್ತಾವಿಸಿದ್ದೇನೆ. ಸದ್ಯದಲ್ಲೇ ಸರ್ವ ಪಕ್ಷ ಸಭೆ ನಡೆಸಲು ನಿರ್ಧರಿಸಿದ್ದೇವೆ. ಕೃಷ್ಣ ನದಿ ನೀರಿನ ವಿಚಾರದಲ್ಲಿ ಚರ್ಚೆ ನಡೆಸಿದ್ದೇನೆʼʼ ಎಂದರು. ಜತೆಗೆ ಮಾಧ್ಯಮದವರು ಕೇಳಿದ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದರು.

Bengaluru AQI : ತಂಪಾಯ್ತು ಸಿಟಿ, ವೃದ್ಧಿಯಾಯ್ತು ಗಾಳಿಯ ಗುಣಮಟ್ಟ: ಎಲ್ಲಾ ತುಂತುರು ಮಳೆಯ ಪರಿಣಾಮ

ತಂಪಾಯ್ತು ಸಿಟಿ, ವೃದ್ಧಿಯಾಯ್ತು ಗಾಳಿಯ ಗುಣಮಟ್ಟ: ಎಲ್ಲಾ ಮಳೆಯ ಪರಿಣಾಮ

ಇಂದಿನ ವಾಯು ಗುಣಮಟ್ಟ ಎಲ್ಲಾ ವಯಸ್ಸಿನವರಿಗೂ ಸುರಕ್ಷಿತವಾಗಿದೆ. ದೈಹಿಕ ವ್ಯಾಯಾಮ ಮತ್ತು ಹೊರಾಂಗಣ ಚಟುವಟಿಕೆಗಳಿಗೆ ಇದು ಸೂಕ್ತ ಸಮಯ. ಪೀಣ್ಯ ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ಸಣ್ಣ ಪ್ರಮಾಣದ ಮಾಲಿನ್ಯವಿದ್ದರೂ ಅದು ‘ತೃಪ್ತಿದಾಯಕ’ ಮಟ್ಟದಲ್ಲಿಯೇ ಇದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ವಾಯು ಮಾಲಿನ್ಯದ ಮಟ್ಟ ಪ್ರಸ್ತುತ ನಿಯಂತ್ರಣದಲ್ಲಿದೆ.

ನಮ್ಮೊಂದಿಗೆ ಪ್ರೀತಿ, ಮೋದಿ ಜತೆ ಮದುವೆ ಎಂದಿದ್ದ ಖರ್ಗೆಗೆ ತೀಕ್ಷ್ಣ ಉತ್ತರ ಕೊಟ್ಟ ಎಚ್.ಡಿ. ದೇವೇಗೌಡರು

ಕಾಂಗ್ರೆಸ್‌ಗೆ ವಿಚ್ಛೇದನ ಕೊಟ್ಟಿದ್ದಕ್ಕೆ ಕಾರಣ ಕೊಟ್ಟ ಎಚ್‌.ಡಿ.ದೇವೇಗೌಡರು

HD Deve Gowda: ಕಾಂಗ್ರೆಸ್ ಪಕ್ಷದ ಜೊತೆಗಿನದ್ದು ಪ್ರೀತಿಯಲ್ಲ, ಅದು ಒಂದು ಬಲವಂತದ ಮದುವೆಯಾಗಿತ್ತು ಎಂದು ಕಿಡಿಕಾರಿರುವ ಮಾಜಿ ಪ್ರಧಾನಿಗಳು, ಆ ಅಂದಿನ ಸಂಬಂಧದಲ್ಲಿನ ಕಿರುಕುಳ ಹಾಗೂ ಹಿಂಸೆ ಇದ್ದ ಕಾರಣದಿಂದಲೇ ನಾನು ಅವರಿಗೆ ವಿಚ್ಛೇದನ ನೀಡಿದೆ ಎಂದು ಹೇಳಿದ್ದಾರೆ.

ಕಾಯಿನ್‌ಸ್ವಿಚ್‌ನಿಂದ ಭಾರತದ ಎಚ್‌ಎನ್‌ಐಗಳು ಮತ್ತು ಸಂಸ್ಥೆಗಳಿಗೆ ಸುರಕ್ಷಿತ ಕ್ರಿಪ್ಟೋ ಕಸ್ಟಡಿ ಪರಿಹಾರವಾದ ಡಿಜಿವಾಲ್ಟ್ ಬಿಡುಗಡೆ

ಭಾರತದ ಕ್ರಿಪ್ಟೋ ಪರಿಸರ ವ್ಯವಸ್ಥೆ ಪ್ರಬುದ್ಧ ಹಂತಕ್ಕೆ ತಲುಪಿದೆ

ಭಾರತೀಯ ನಿಯಮಗಳಿಗೆ ಪೂರಕವಾದ ಬಲವಾದ ಕಸ್ಟಡಿ ಮೂಲಸೌಕರ್ಯದ ಕೊರತೆಯು ಒಂದು ದೊಡ್ಡ ಸವಾಲಾಗಿತ್ತು. ಡಿಜಿವಾಲ್ಟ್ ಈ ಕೊರತೆಯನ್ನು ನೀಗಿಸಲಿದ್ದು, ಜಾಗತಿಕ ಮಟ್ಟದ ಭದ್ರತೆ, ಸ್ಥಳೀಯ ನಿಯಮಗಳಿಗೆ ಅನುಗುಣವಾದ ಆಡಳಿತ ಮತ್ತು ಟೋಕ ನೈಸೇಶನ್‌ಗೆ ಸಿದ್ಧವಾಗಿರುವ ಮೂಲ ಸೌಕರ್ಯವನ್ನು ಒದಗಿಸಲಿದೆ.

SED: ನೈಸರ್ಗಿಕ ಬುದ್ಧಿಮತ್ತೆ ಮತ್ತು ನರವಿಜ್ಞಾನ ಆಧಾರಿತ ಕಲಿಕಾ ರೋಗನಿರ್ಣಯ ವೇದಿಕೆ ಪ್ರಾರಂಭ

ನೈಸರ್ಗಿಕ ಬುದ್ಧಿಮತ್ತೆ ಆಧಾರಿತ ಕಲಿಕಾ ರೋಗನಿರ್ಣಯ ವೇದಿಕೆ ಪ್ರಾರಂಭ

ರಗತಿಗಳಾದ್ಯಂತ, ಕಳಪೆ ಕಾರ್ಯಕ್ಷಮತೆ ಹೊಂದಿರುವವರು ಎಂದು ಲೇಬಲ್ ಮಾಡಲಾದ ಅನೇಕ ವಿದ್ಯಾರ್ಥಿಗಳು ಸಾಮಾನ್ಯವಾಗಿ ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಸಾಂಪ್ರದಾಯಿಕ ಮೌಲ್ಯಮಾಪನಗಳು ಫಲಿತಾಂಶ ಗಳನ್ನು ಅಳೆಯಲು ಒಲವು ತೋರುತ್ತವೆ, ಆದರೆ ಅವು ವಿದ್ಯಾರ್ಥಿ ಹೇಗೆ ಕಲಿಯುತ್ತಾನೆ ಎಂಬು ದನ್ನು ವಿರಳವಾಗಿ ವಿವರಿಸುತ್ತವೆ

ಬೆಂಗಳೂರು ವಿಮಾನ ನಿಲ್ದಾಣಗಳ ಸುತ್ತಮುತ್ತಲ ಕಟ್ಟಡಗಳ ಎತ್ತರದ ಮಿತಿ ಮರುಪರಿಶೀಲಿಸಿ: ಕೇಂದ್ರಕ್ಕೆ ಡಿ.ಕೆ. ಶಿವಕುಮಾರ್ ಮನವಿ

ಕಟ್ಟಡಗಳ ಎತ್ತರದ ಮಿತಿ ಮರುಪರಿಶೀಲಿಸಲು ಡಿಕೆಶಿ ಮನವಿ

DK Shivakumar: ಬೆಂಗಳೂರಿನಲ್ಲಿರುವ ಎಚ್ಎಎಲ್, ಜಕ್ಕೂರು, ವಾಯುನೆಲೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಕಟ್ಟಡ ಎತ್ತರದ ಮಿತಿಯಿಂದ ಅಭಿವೃದ್ಧಿ ಕಾಮಗಾರಿಗೆ ತೊಡಕಾಗಿದ್ದು, ಈ ಮಿತಿಯ ಬಗ್ಗೆ ಪರಿಶೀಲನೆ ನಡೆಸುವಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

Book Release: ಡಾ. ಶಾರದಾ ಚೈತ್ರ ಅವರ ‘ನಿಗಳ’ ಕಾದಂಬರಿ ಮಾರ್ಚ್‌ 21ಕ್ಕೆ ಲೋಕಾರ್ಪಣೆ

ಮಾರ್ಚ್‌ 21ರಂದು ಬೆಂಗಳೂರಿನಲ್ಲಿ ʼನಿಗಳʼ ಕಾದಂಬರಿ ಲೋಕಾರ್ಪಣೆ

ಡಾ. ಶಾರದಾ ಚೈತ್ರ ಅವರ ಕಾದಂಬರಿ ‘ನಿಗಳ’ ಪುಸ್ತಕದ ಲೋಕಾರ್ಪಣೆ ಸಮಾರಂಭವು ಮಾ. 21ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರು ನಗರದ ಬಸವನಗುಡಿಯ ಎನ್‌.ಆರ್‌. ಕಾಲೋನಿಯಲ್ಲಿರುವ ಬಿ.ಎಂ.ಶ್ರೀ. ಕಲಾಭವನದಲ್ಲಿ ಜರುಗಲಿದೆ. ಶತಾವಧಾನಿ ಡಾ.ಆರ್‌. ಗಣೇಶ್‌ ಪುಸ್ತಕ ಲೋಕಾರ್ಪಣೆಗೊಳಿಸಲಿದ್ದಾರೆ.

ನವರಾತ್ರಿ, ಯುಗಾದಿ ಮತ್ತು ಈದ್ ಸಂಭ್ರಮಕ್ಕಾಗಿ Amazon.in ಇಂದ AI ಆಧಾರಿತ ಹಬ್ಬದ ಶಾಪಿಂಗ್‌

Amazon.in ಇಂದ AI ಆಧಾರಿತ ಹಬ್ಬದ ಶಾಪಿಂಗ್‌

ಸಾಂಪ್ರದಾಯಿಕ ಉಪವಾಸದ ಪದಾರ್ಥಗಳು ಮತ್ತು ಪ್ರೀಮಿಯಂ ಒಣ ಹಣ್ಣುಗಳಿಂದ ಹಿಡಿದು, ಸಾಂಪ್ರದಾಯಿಕ ಸಿಹಿತಿಂಡಿಗಳು ಮತ್ತು ಪಾನೀಯಗಳವರೆಗೆ ಎಲ್ಲವನ್ನೂ ಅಮೆಜಾನ್ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಗ್ರಾಹಕರು ಟಾಟಾ ಸಂಪನ್ನ, ಫಾರ್ಮ್ಲಿ, ಗೋ ದೇಸಿ, ಸ್ಟೋರಿಯಾ, ನಟ್ರಾಜ್ ನಂತಹ ಪ್ರಸಿದ್ಧ ಬ್ರಾಂಡ್‌ಗಳ ಹಬ್ಬದ ವಿಶೇಷ ಉತ್ಪನ್ನಗಳನ್ನು ಖರೀದಿಸಬಹುದು.

DJ ban: ಧಾರ್ಮಿಕ ಕಾರ್ಯಕ್ರಮ, ಮೆರವಣಿಗೆಳಲ್ಲಿ ಡಿಜೆ, ಐಟಂ ಸಾಂಗ್‌ಗಳಿಗೆ ಬ್ರೇಕ್‌ ಹಾಕಲು ಮುಂದಾದ ರಾಜ್ಯ ಸರ್ಕಾರ

ಮೆರವಣಿಗೆಳಲ್ಲಿ ಡಿಜೆ, ಐಟಂ ಸಾಂಗ್‌ಗಳಿಗೆ ಬ್ರೇಕ್‌ ಹಾಕಲು ಮುಂದಾದ ಸರ್ಕಾರ

ರಾಜ್ಯದಲ್ಲಿ ಡಿಜೆ ಬಳಕೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಸದನದಲ್ಲಿ ಪ್ರಸ್ತಾಪಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ ಅವರು, ನಾವು ಶೀಘ್ರದಲ್ಲೇ ಆದೇಶವೊಂದನ್ನು ಹೊರಡಿಸುತ್ತೇವೆ ಎಂದು ತಿಳಿಸಿದ್ದಾರೆ.

ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ವಿಮಾನ ನಿಲ್ದಾಣದ ಸಂಪೂರ್ಣ ಕಾರ್ಯಾಚರಣೆ ನಡೆಸಿಕೊಟ್ಟ ಬಿಐಎಎಲ್‌ಆರ್‌ ಮಹಿಳಾ ತಂಡ

ಕಾರ್ಯಾಚರಣೆ ನಡೆಸಿಕೊಟ್ಟ ಬಿಐಎಎಲ್‌ಆರ್‌ ಮಹಿಳಾ ತಂಡ

ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದು ದಿನದ ಮಟ್ಟಿಗೆ ಇಡೀ ಟರ್ಮಿನಲ್‌ 1 ಹಾಗೂ ಟರ್ಮಿನಲ್‌ 2 ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಮಹಿಳಾ ತಂಡವೇ ನಿರ್ವಹಿಸುವ ಮೂಲಕ, ಮಹಿಳಾ ಶಕ್ತಿಯನ್ನು ಪ್ರದರ್ಶಿಸ ಲಾಯಿತು.

ಜಿಬಿಎ ಚುನಾವಣೆಯಲ್ಲೂ ವಿಜಯಪತಾಕೆ ಹಾರಿಸಲು ಶ್ರಮಿಸೋಣ: ಬಿಜೆಪಿ ಕಾರ್ಯಕರ್ತರಿಗೆ ವಿಜಯೇಂದ್ರ ಕರೆ

ಜಿಬಿಎ ಚುನಾವಣೆಯಲ್ಲೂ ಗೆಲುವಿಗಾಗಿ ಶ್ರಮಿಸೋಣ: ವಿಜಯೇಂದ್ರ

BY Vijayendra: ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದಗೌಡ ಅವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಬುಧವಾರ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ, ರಾಜ್ಯ ಬಿಜೆಪಿ, ರಾಜ್ಯದ ಜನತೆಯ ಪರವಾಗಿ ಶುಭ ಕೋರಿದರು. ಈ ವೇಳೆ ಜಿಬಿಎ ಚುನಾವಣೆ ಬಗ್ಗೆ ಅವರು ಮಾತನಾಡಿದ್ದಾರೆ.

ರಾಜ್ಯಕ್ಕೆ ದಿಸೆ ತೋರದ ಬಜೆಟ್‌ ಕನ್ನಡಿಗರ ಪಾಲಿನ ಆರ್ಥಿಕ ಮರಣ ಶಾಸನ: ಅರವಿಂದ ಬೆಲ್ಲದ್‌ ಟೀಕೆ

ಯೋಜನೆಗಳಿಲ್ಲದ ಅಂಕಿ-ಅಂಶ ತುಂಬಿರುವ ಬಜೆಟ್‌: ಅರವಿಂದ ಬೆಲ್ಲದ್‌

ಇದೊಂದು ಬಜೆಟ್‌ ಅಲ್ಲ, ಸಾಲದ ಹೇಳಿಕೆ. ಇದು ಕರ್ನಾಟಕವನ್ನು ಎತ್ತ ಕೊಂಡೊಯ್ಯುತ್ತಿದೆ? ಅಭಿವೃದ್ಧಿ ಕಡೆಗಾ ಅಥವಾ ಸಾಲದ ಕೂಪಕ್ಕೋ? ಎಂದು ಪ್ರಶ್ನಿಸಿದ ವಿಧಾನಸಭೆ ವಿಪಕ್ಷ ಉಪ ನಾಯಕ ಹಾಗೂ ಹು-ಧಾ ಪಶ್ಚಿಮ ವಿಧಾನಸಭೆ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ, ಈ ಬಜೆಟ್‌ ಕಾಂಗ್ರೆಸ್ಸಿಗರ ಪಾಲಿನ ಅಕ್ಷಯ ಪಾತ್ರೆಯಾಗಿದ್ದರೆ, ಕನ್ನಡಿಗರ ಪಾಲಿನ ಖಾಲಿ ಚೊಂಬು ಎಂದು ಟೀಕಿಸಿದ್ದಾರೆ.

ST Internal Reservation: ಪರಿಶಿಷ್ಟ ಪಂಗಡಗಳಲ್ಲೂ ಒಳ ಮೀಸಲಾತಿ ಜಾರಿಗೊಳಿಸಿ: ಸದನದಲ್ಲಿ ಎಂಎಲ್‌ಸಿ ಶಾಂತಾರಾಮ್‌ ಸಿದ್ದಿ ಆಗ್ರಹ

ಎಸ್‌ಟಿ ಒಳ ಮೀಸಲಾತಿ ಜಾರಿಗೆ ಸದನದಲ್ಲಿ ಶಾಂತಾರಾಮ್‌ ಸಿದ್ದಿ ಆಗ್ರಹ

Karnataka Assembly Session 2026: ಸದನದ ಶೂನ್ಯವೇಳೆಯಲ್ಲಿ ಮಾತನಾಡಿರುವ ಎಂಎಲ್‌ಸಿ ಶಾಂತಾರಾಮ್‌ ಸಿದ್ದಿ ಅವರು, ಪರಿಶಿಷ್ಟ ಪಂಗಡಗಳಲ್ಲೂ ಒಳ ಮೀಸಲಾತಿ ಜಾರಿ ಮಾಡಲು, ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಆಯೋಗ ರಚಿಸಿ, ಸೂಕ್ತ ಪರಿಹಾರ ಒದಗಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

Loading...